ಶಾಲಾ-ಕಾಲೇಜು ಪ್ರವೇಶ ಶುಲ್ಕ ಇಳಿಸಿ ಎಂಬ ಕೂಗಿಗೆ ಧ್ವನಿಯಾದ ಕಿರಣ್ ರಾಜ್; ಸಿಎಂ ಯಡಿಯೂರಪ್ಪಗೆ ಪತ್ರ
Kiran Raj: ಮಕ್ಕಳು ಆನ್ಲೈನ್ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಕಲಿಕೆ ಎಲ್ಲವೂ ಆನ್ಲೈನ್ನಲ್ಲೇ ಆಗುವಾಗ ಶಾಲೆಯ ಆಡಳಿತ ಮಂಡಳಿ ಸಂಪೂರ್ಣ ಫೀ ನೀಡುವಂತೆ ಕೇಳುತ್ತಿರುವುದು ಏಕೆ ಎಂಬುದು ಕೆಲವರ ಪ್ರಶ್ನೆಯಾಗಿತ್ತು.
ಕೊವಿಡ್ ಮೊದಲನೇ ಅಲೆ ತಣ್ಣಗಾಯಿತು ಎನ್ನುವಾಗಲೇ ಎರಡನೇ ಅಲೆ ಕಾಣಿಸಿಕೊಂಡಿದೆ. ಹೀಗಾಗಿ, ಶಾಲಾ-ಕಾಲೇಜುಗಳನ್ನು ಮತ್ತೆ ಮುಚ್ಚಲಾಗಿದ್ದು, ಆನ್ಲೈನ್ ಮೂಲಕ ತರಗತಿ ನಡೆಸಲಾಗುತ್ತಿದೆ. ಆದರೆ, ಅನೇಕ ಶಾಲೆಗಳಲ್ಲಿ ಮಕ್ಕಳ ಪ್ರವೇಶ ಶುಲ್ಕ ಮಾತ್ರ ಕಡಿಮೆ ಮಾಡಿಲ್ಲ. ಇದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ಪಾಲಕರು ರಸ್ತೆಗೆ ಇಳಿದು ಇದನ್ನು ವಿರೋಧಿಸಿದ್ದಾರೆ. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶ ಹೊರ ಹಾಕಿದ್ದರು. ಈಗ ಇದಕ್ಕೆ ಕಿರುತೆರೆ ನಟ ಕಿರಣ್ ರಾಜ್ ಕೂಡ ಧ್ವನಿಗೂಡಿಸಿದ್ದಾರೆ.
ಮಕ್ಕಳು ಆನ್ಲೈನ್ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಕಲಿಕೆ ಎಲ್ಲವೂ ಆನ್ಲೈನ್ನಲ್ಲೇ ಆಗುವಾಗ ಶಾಲೆಯ ಆಡಳಿತ ಮಂಡಳಿ ಸಂಪೂರ್ಣ ಫೀ ನೀಡುವಂತೆ ಕೇಳುತ್ತಿರುವುದು ಏಕೆ ಎಂಬುದು ಕೆಲವರ ಪ್ರಶ್ನೆಯಾಗಿತ್ತು. ಇನ್ನು, ಈ ಸಂಕಷ್ಟದ ಸಮಯದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ, ಮಕ್ಕಳ ಶಾಲಾ ಫೀಸ್ ಕಟ್ಟಲು ಆಗುತ್ತಿಲ್ಲ. ಈ ಕಷ್ಟದ ಪರಿಸ್ಥಿತಿಯಲ್ಲಿ ಕಿರಣ್ ರಾಜ್ ಕೂಡ ಈ ಬಗ್ಗೆ ಧ್ವನಿ ಎತ್ತುವ ಕೆಲಸ ಮಾಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರೂಪ್ಪ ಹಾಗೂ ಶಿಕ್ಷಣ ಸಚಿವರಿಗೆ ಓಪನ್ ಲೆಟರ್ ಬರೆದಿರುವ ಅವರು, ಜಗತ್ತಿನೆಲ್ಲೆಡೆ ಕೊವಿಡ್ 19 ವ್ಯಾಪಕವಾಗಿ ಹರಡುತ್ತಿದ್ದು, ಸಾಮಾನ್ಯ ಜನರ ಬದುಕು ಅಲ್ಲೋಲ ಕಲ್ಲೋಲವಾಗಿದೆ. ಇನ್ನು, ಮಕ್ಕಳು ಶಾಲಾ ಕಾಲೇಜು ಇಲ್ಲದೆ ಆನ್ಲೈನ್ ಶಿಕ್ಷಣಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಶಾಲಾ-ಕಾಲೇಜು ಶುಲ್ಕ ಸ್ವಲ್ಪವೂ ಇಳಿದಿಲ್ಲ. ದಯವಿಟ್ಟು ಶಾಲಾ ಕಾಲೇಜುಗಳ ಶುಲ್ಕದಲ್ಲಿ ರಿಯಾಯಿತಿ ನೀಡಬೇಕೆಂದು ಈ ಮೂಲಕ ನಿಮ್ಮಲ್ಲಿ ಎಲ್ಲಾ ಪೋಷಕರ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ. ನಮ್ಮ ಈ ವಿನಂತಿ ಪರಿಗಣಿಸಿ ಪರಿಶೀಲಿಸಿ ಜನರ ಬೆನ್ನೆಲುವಾಗಿ ನಿಲ್ಲುವಿರೆನ್ನುವ ವಿಶ್ವಾಸವಿದೆ ಎಂದು ಕಿರಣ್ ರಾಜ್ ಬರೆದುಕೊಂಡಿದ್ದಾರೆ.
View this post on Instagram
ಕೊವಿಡ್ ಸಂಕಷ್ಟದ ಸಮಯದಲ್ಲಿ ಕಿರಣ್ ರಾಜ್ ಸುಮ್ಮನೆ ಕೂತಿಲ್ಲ. ಸಂಕಷ್ಟದಲ್ಲಿರುವ ಸಾಕಷ್ಟು ಜನರಿಗೆ ಊಟ ಹಂಚುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ನಿತ್ಯ ಸುಮಾರು ಒಂದು ಸಾವಿರ ಜನರಿಗೆ ಅವರು ಊಟ ನೀಡುತ್ತಿದ್ದಾರೆ. ಇದಲ್ಲದೆ ದಿನಸಿ ಕಿಟ್ಗಳನ್ನು ಕೂಡ ವಿತರಿಸುತ್ತಿದ್ದಾರೆ. ಕಿರಣ್ ರಾಜ್ ಫೌಂಡೇಷನ್ ಅಡಿಯಲ್ಲಿ ಅವರು ಮಾಡುತ್ತಿರುವ ಕಾರ್ಯಕ್ಕೆ ಎಲ್ಲಾ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಅನೇಕರು ಕಿರಣ್ ರಾಜ್ಗೆ ಬೆಂಬಲವಾಗಿ ನಿಂತಿದ್ದಾರೆ.
ಇದನ್ನೂ ಓದಿ: Kiran Raj: ಕೊರೊನಾ ಸಂಕಷ್ಟದಲ್ಲಿ ಪ್ರತಿದಿನ ಸಾವಿರ ಜನರಿಗೆ ಊಟ ಹಾಕುತ್ತಿರುವ ‘ಕನ್ನಡತಿ’ ಕಿರಣ್ ರಾಜ್
‘ಕನ್ನಡತಿ’ ಹೀರೋ ಕಿರಣ್ ರಾಜ್ ದುಡಿಮೆಯ ಶೇ.40ರಷ್ಟು ಹಣ ಬಡವರಿಗೆ ಮೀಸಲು
Published On - 7:55 pm, Fri, 21 May 21