ತೆರೆಮೇಲೆ ಒಂದಾಗುತ್ತಿದ್ದಾರೆ ಗಂಡ-ಹೆಂಡತಿ; ಶೀಘ್ರವೇ ಸೆಟ್ಟೇರಲಿದೆ ನಾಗಚೈತನ್ಯ-ಸಮಂತಾ ಸಿನಿಮಾ?

‘ಬಂಗಾರ್​ ರಾಜು’ ಸಿನಿಮಾದಲ್ಲಿ ಸಮಂತಾ ಮತ್ತು ನಾಗ ಚೈತನ್ಯ ಒಟ್ಟಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಇಬ್ಬರೂ ಕತೆ ಕೇಳಿದ್ದು, ಸಿನಿಮಾ ಇಷ್ಟಪಟ್ಟಿದ್ದಾರೆ.

ತೆರೆಮೇಲೆ ಒಂದಾಗುತ್ತಿದ್ದಾರೆ ಗಂಡ-ಹೆಂಡತಿ; ಶೀಘ್ರವೇ ಸೆಟ್ಟೇರಲಿದೆ ನಾಗಚೈತನ್ಯ-ಸಮಂತಾ ಸಿನಿಮಾ?
ನಾಗ ಚೈತ್ರನ್ಯ - ಸಮಂತಾ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: May 21, 2021 | 5:05 PM

ನಾಗ ಚೈತನ್ಯ ಮತ್ತು ಸಮಂತಾ ಅಕ್ಕಿನೇನಿ ನಿಜ ಜೀವನದಲ್ಲಿ ಪತಿ-ಪತ್ನಿಯರು. ಇವರು ಮದುವೆ ಆಗುವುದಕ್ಕೂ ಮೊದಲು ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಅವರ ನಡುವೆ ಪ್ರೀತಿ ಹುಟ್ಟಿಕೊಂಡಿದ್ದು ಶೂಟಿಂಗ್​ ಸೆಟ್​ನಲ್ಲೇ ಅನ್ನೋದು ವಿಶೇಷ. ಮದುವೆ ನಂತರದಲ್ಲಿ ಈ ಜೋಡಿ ‘ಮಜಿಲಿ’ ಸಿನಿಮಾದಲ್ಲಿ ಒಟ್ಟಾಗಿ ಕಾಣಿಸಿಕೊಂಡಿತ್ತು. ಈಗ ಈ ಜೋಡಿ ಮತ್ತೆ ತೆರೆಮೇಲೆ ಒಂದಾಗುತ್ತಿದೆಯಂತೆ. ಸದ್ಯ, ಈ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಬಂಗಾರ್​ ರಾಜು’ ಸಿನಿಮಾದಲ್ಲಿ ಸಮಂತಾ ಮತ್ತು ನಾಗ ಚೈತನ್ಯ ಒಟ್ಟಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಇಬ್ಬರೂ ಕತೆ ಕೇಳಿದ್ದು, ಸಿನಿಮಾ ಇಷ್ಟಪಟ್ಟಿದ್ದಾರೆ. ಈ ಕಾರಣಕ್ಕೆ ಅವರು ಸಿನಿಮಾದಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರ ಕೇಳಿದ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದಾರೆ. ಅಷ್ಟೇ ಅಲ್ಲ, ಈ ಜೋಡಿಯನ್ನು ಕಣ್ತುಂಬಿಕೊಳ್ಳೋಕೆ ಕಾಯುತ್ತಿದ್ದಾರೆ.

ಕಲ್ಯಾಣ್​ ಕೃಷ್ಣ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಾಗಾರ್ಜುನ ಮತ್ತು ರಮ್ಯಾ ಕೃಷ್ಣ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. 2016ರಲ್ಲಿ ತೆರೆಗೆ ಬಂದ ಸೂಪರ್​ ಹಿಟ್​ ಸಿನಿಮಾ ಸೊಗ್ಗಾಡೆ ಚಿನ್ನಿ ನಯನಾ ಸಿನಿಮಾದ ಸೀಕ್ವೆಲ್​ ಇದಾಗಿದೆ. ಇದರಲ್ಲಿ ನಾಗ ಚೈತನ್ಯ-ಸಮಂತಾ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಾಗ ಚೈತನ್ಯ ‘ಥ್ಯಾಂಕ್ಯ್​​ ಯೂ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ, ವಿಕ್ರಮ್​ ಕುಮಾರ್​ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಲವ್​ ಸ್ಟೋರಿ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಆಮೀರ್​ ಖಾನ್​ ನಟನೆಯ ಲಾಲ್​ ಸಿಂಗ್​ ಚಡ್ಡಾ ಸಿನಿಮಾದಲ್ಲಿ ಅವರು ಮುಖ್ಯ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇನ್ನು, ಸಮಂತಾ, ದಿ ಫ್ಯಾಮಿಲಿ ಮ್ಯಾನ್- 2 ವೆಬ್​ ಸೀರಿಸ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ವೆಬ್​ ಸೀರಿಸ್​ ಟ್ರೈಲರ್​ ರಿಲೀಸ್​ ಆಗಿತ್ತು. ಇದರಲ್ಲಿ ತಮಿಳು ಜನರನ್ನು ಟೆರರಿಸ್ಟ್​ಗಳ ರೀತಿಯಲ್ಲಿ ತೋರಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಹೀಗಾಗಿ, ಇದರ ಟ್ರೇಲರ್​ ಎಡಿಟ್​ ಮಾಡಲಾಗಿದೆ.

ಇದನ್ನೂ ಓದಿ: ತಮಿಳರ ಕೋಪಕ್ಕೆ ಕಾರಣವಾದ ಸಮಂತಾ; ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​​ನಲ್ಲಿ ಅವರು ಮಾಡಿದ ತಪ್ಪೇನು?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ