Sign In

By signing in or creating an account, you agree with Associated Broadcasting Company's Terms & Conditions and Privacy Policy.

Lunar eclipse impact: ದ್ವಾದಶ ರಾಶಿಗಳ ಮೇಲೆ ಚಂದ್ರಗ್ರಹಣದ ಪ್ರಭಾವ ಏನು?

Chandra Grahan Effect: ಮೇ 26, 2021ರ ಚಂದ್ರ ಗ್ರಹಣವು ಭಾರತದ ಎಲ್ಲ ಕಡೆ ಗೋಚರ ಆಗುತ್ತಿಲ್ಲ. ಆದ್ದರಿಂದ ಆಚರಣೆ ಇಲ್ಲ. ಆದರೆ ದ್ವಾದಶ ರಾಶಿಗಳ ಮೇಲೆ ಪ್ರಭಾವ ಇರುತ್ತದೆ.

Lunar eclipse impact: ದ್ವಾದಶ ರಾಶಿಗಳ ಮೇಲೆ ಚಂದ್ರಗ್ರಹಣದ ಪ್ರಭಾವ ಏನು?
ರಾಶಿ ಚಕ್ರ
Follow us
Srinivas Mata
| Updated By: ಆಯೇಷಾ ಬಾನು

Updated on: May 26, 2021 | 6:54 AM

ಮೇ 26, 2021ರ ಬುಧವಾರ ಪೂರ್ಣಚಂದ್ರಗ್ರಹಣ ಇದೆ. ಆದರೆ ಈಶಾನ್ಯ ಭಾರತದ ಕೆಲವು ಭಾಗದಲ್ಲಿ ಮಾತ್ರ ಕಾಣಿಸಲಿದೆ. ಉಳಿದಂತೆ ವಿವಿಧ ದೇಶಗಳಲ್ಲಿ ಈ ಗ್ರಹಣವು ಕಂಡುಬರಲಿದೆ. ಈಗ ನಡೆಯಲಿರುವುದು ಕೇತುಗ್ರಸ್ತ ಚಂದ್ರಗ್ರಹಣ. ಇದು ವೃಶ್ಚಿಕ ರಾಶಿಯಲ್ಲಿ ಸಂಭವಿಸಲಿದೆ. ಚಂದ್ರಗ್ರಹಣದ ಪರಿಣಾಮ ಎಲ್ಲ ರಾಶಿಗಳ ಮೇಲೂ ಇದ್ದೇ ಇರುತ್ತದೆ. ಯಾವ ರಾಶಿಯವರು ಹೆಚ್ಚಾಗಿಯೇ ಎಚ್ಚರಿಕೆಯಿಂದ ಇರಬೇಕು ಮತ್ತು ಯಾವ್ಯಾವ ರಾಶಿಯವರು ಉತ್ತಮ ಫಲಗಳನ್ನು ಪಡೆಯಲಿದ್ದಾರೆ ಎಂಬುದರ ವಿವರಣೆ ಇಲ್ಲಿದೆ. ಮುಖ್ಯವಾಗಿ ವೃಶ್ಚಿಕ, ಧನುಸ್ಸು, ಮೇಷ, ಸಿಂಹ ಈ ನಾಲ್ಕು ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು. ವೃಷಭ, ಕರ್ಕಾಟಕ, ಮೀನ, ತುಲಾ ಈ ನಾಲ್ಕು ರಾಶಿಯವರು ಮಿಶ್ರ ಫಲವನ್ನು ಕಾಣಲಿದ್ದಾರೆ. ಕನ್ಯಾ, ಮಿಥುನ, ಮಕರ, ಕುಂಭ ಈ ನಾಲ್ಕು ರಾಶಿಯವರು ಉತ್ತಮ ಫಲವನ್ನು ಪಡೆಯಲಿದ್ದಾರೆ.

ಯಾರಿಗೆ ಅಶುಭ ಅಶುಭ ಫಲ ಇದೆಯೋ ಅಂಥವರು ಅಕ್ಕಿ ಅಥವಾ ಭತ್ತವನ್ನು ದಾನ, ದಕ್ಷಿಣ, ವೀಳ್ಯದೆಲೆ, ಅಡಿಕೆ, ಬಾಳೆಹಣ್ಣಿನ ಸಹಿತ ದಾನ ನೀಡಬೇಕು. ಅದಕ್ಕೂ ಮುನ್ನ ದೇವರ ಮುಂದೆ ಇಟ್ಟು ಪೂಜೆ ಸಲ್ಲಿಸಬೇಕು. ಚಂದ್ರ ಗ್ರಹ ಸ್ತೋತ್ರವನ್ನು ಪಠಿಸಬೇಕು. ಈ ಗ್ರಹಣವು ಭಾರತದ ಎಲ್ಲ ಭಾಗದಲ್ಲಿ ಕಾಣಿಸುವುದಿಲ್ಲವಾದ್ದರಿಂದ ಸ್ಪರ್ಶ, ಮೋಕ್ಷ ಕಾಲದಲ್ಲಿ ಸ್ನಾನ ಮಾಡಬೇಕು ಎಂದೇನಿಲ್ಲ. ಅದೇ ರೀತಿ ಈ ಗ್ರಹಣ ಸಂದರ್ಭದಲ್ಲೇ ಸ್ತೋತ್ರ ಪಠಣ ಮಾಡಬೇಕು ಎಂದೇನೂ ಇಲ್ಲ. ಬೆಳಗ್ಗೆ ಸ್ನಾನ ಮಾಡಿದ ನಂತರದಲ್ಲಿ ಹೇಳಿಕೊಂಡರೆ ಆಯಿತು.

ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹಣದ ಪರಿಣಾಮ ಏನು ಎಂಬುದರ ವಿವರ ಇಲ್ಲಿದೆ: ಮೇಷ: ವಾಹನಗಳಲ್ಲಿ ಪ್ರಯಾಣಿಸುವಾಗ ಎಚ್ಚರಿಕೆಯಿಂದ ಇರಬೇಕು. ಹಣಕಾಸು ಸಾಲ ನೀಡುವುದು, ಪಡೆಯುವುದು ಬೇಡ. ಸಣ್ಣ-ಪುಟ್ಟ ಅನಾರೋಗ್ಯ ವಿಚಾರವನ್ನು ನಿರ್ಲಕ್ಷಿಸಬೇಡಿ.

ವೃಷಭ: ಪಾರ್ಟನರ್​ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಉತ್ತಮ ಲಾಭ ಗಳಿಸುವ ಅವಕಾಶ ಇದೆ. ಆದರೆ ಸಾಂಸಾರಿಕವಾಗಿ ಸಾಮರಸ್ಯ ಕಾಪಾಡಿಕೊಳ್ಳುವ ಬಗ್ಗೆ ಗಮನ ನೀಡಿ.

ಮಿಥುನ: ಆದಾಯ ಮೂಲ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಅವಕಾಶ ಸಿಗಲಿದೆ. ಶತ್ರುನಾಶ ಆಗಲಿದೆ. ಆರೋಗ್ಯದ ಬಗ್ಗೆ ಸ್ವಲ್ಪ ಮಟ್ಟಿಗೆ ಎಚ್ಚರಿಕೆ ವಹಿಸಿದರೆ ಅದರಿಂದ ಎಚ್ಚರಿಕೆಯಿಂದ ಇರಬಹುದು.

ಕರ್ಕಾಟಕ: ನಿಮಗೆ ಬರಬೇಕಾದ ಹಣ, ಗೌರವ, ಶ್ರಮದ ಗುರುತಿಸುವಿಕೆ ಈ ಸಂದರ್ಭದಲ್ಲಿ ಆಗುವ ಸಾಧ್ಯತೆ ಇದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ.

ಸಿಂಹ: ದುಬಾರಿ ಅಥವಾ ವಿಲಾಸಿ ವಸ್ತುಗಳನ್ನು ಖರೀದಿಸುವಂಥ ಸಾಧ್ಯತೆ ಇದೆ. ನಿಮ್ಮಲ್ಲಿ ಕೆಲವರಿಗೆ ಪರಸ್ಥಳ ವಾಸ ಮಾಡುವಂಥ ಯೋಗ ಕೂಡ ಇದೆ. ತಾಯಿಯ ಆರೋಗ್ಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಕನ್ಯಾ: ಸೋದರ- ಸೋದರಿಯರಿಂದ ಅನುಕೂಲ ಒದಗಿಬರಲಿದೆ. ನಿಮಗೆ ಇರುವ ಹಣಕಾಸು ಸಮಸ್ಯೆಗಳನ್ನು ನಿವಾರಿಸಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ. ಸಾಲ ಮಾಡಿ.

ತುಲಾ: ಮಾತಿನ ಮೇಲೆ ಹಿಡಿತ ಇರಲಿ. ಉಳಿತಾಯದ ಹಣವನ್ನು ಹೇಗೆ ಉಳಿಸಿಕೊಳ್ಳಲಿದ್ದೀರಿ ಎಂಬುದು ಬಹಳ ಮುಖ್ಯವಾಗುತ್ತದೆ. ಖರ್ಚು ಮಾಡುವಾಗ ವಿವೇಚನೆ ಬಳಸಿ.

ವೃಶ್ಚಿಕ: ಯಾವುದೇ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಪ್ರಯಾಣ ಸೇರಿದಂತೆ ಅಪಾಯ ತಂದೊಡ್ಡಬಹುದಾದ ಯಾವ ಕೆಲಸವನ್ನೂ ಮಾಡಬಾರದು. ಸಾಧ್ಯವಾದಲ್ಲಿ ಚಂದ್ರನಿಗೆ ಸಂಬಂಧಿಸಿದ ಸ್ತೋತ್ರ ಪಠಿಸಿ.

ಧನುಸ್ಸು: ಖರ್ಚಿನ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಶತ್ರುಗಳು ನಿಮ್ಮ ಹೆಸರನ್ನು ಹಾಳು ಮಾಡುವುದಕ್ಕೆ ಪ್ರಯತ್ನಿಸುತ್ತಾರೆ. ಮಾತ್ರೆ, ಔಷಧಗಳನ್ನು ತೆಗೆದುಕೊಳ್ಳುವಾಗ ಒಂದಕ್ಕೆ ಎರಡು ಬಾರಿ ಪರೀಕ್ಷಿಸಿ.

ಮಕರ: ಯಾವುದಾದರೂ ಮೂಲಕ ಲಾಭವನ್ನು ಪಡೆಯುವ ಸಾಧ್ಯತೆ ಇದೆ. ಮುಖ್ಯವಾಗಿ ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ, ಅದರಲ್ಲೂ ಔಷಧ ವ್ಯಾಪಾರಗಳಿಗೆ ಅನುಕೂಲ ಇದೆ. ಆರೋಗ್ಯ ಸುಧಾರಿಸಲಿದೆ.

ಕುಂಭ: ಇಷ್ಟು ಸಮುಯದಿಂದ ಕಾಯುತ್ತಿದ್ದ ಬಡ್ತಿ ಅಥವಾ ವೇತನ ಹೆಚ್ಚಳ ದೊರೆಯಲಿದೆ. ಆದರೆ ಹೆಚ್ಚಿನ ಪರಿಶ್ರಮವನ್ನು ಹಾಕಬೇಕಾಗುತ್ತದೆ. ಸವಾಲುಗಳನ್ನು ಮೀರಬೇಕಾಗುತ್ತದೆ.

ಮೀನ: ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಅನುಕೂಲಗಳು ಒದಗಿ ಬರಲಿದೆ. ಆದರೆ ತಂದೆಯ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಆಸ್ಪತ್ರೆ ಖರ್ಚುಗಳು ಹೆಚ್ಚಾಗಲಿದೆ.

ಇದನ್ನೂ ಓದಿ: Lunar Eclipse 2021: ಮೇ 26ರ ಸೂಪರ್ ಬ್ಲಡ್ ಮೂನ್- ಪೂರ್ಣ ಚಂದ್ರಗ್ರಹಣದ ಬಗ್ಗೆ ನಿಮಗೆ ಗೊತ್ತಿರಬೇಕಾದ ಮಾಹಿತಿಗಳಿವು

ಇದನ್ನೂ ಓದಿ: Lunar Eclipse 2021: ನಾಳೆಯೇ ಚಂದ್ರಗ್ರಹಣ; ರಕ್ತಚಂದ್ರನನ್ನು ನೋಡಲು ಕಾತುರರಾಗಿರಿ

(Lunar eclipse impact on zodiac signs from Aries to Pisces. Here is the details)