AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Ozone Day 2021: ವಿಶ್ವ ಓಜೋನ್ ದಿನ: ಇತಿಹಾಸ, ಮಹತ್ವದ ಜತೆಗೆ ಈ ವರ್ಷ ಥೀಮ್ ಏನು ಗೊತ್ತಾ?

International Day for the Preservation of the Ozone Layer 2021: ಓಜೋನ್ ಪದರ ಕ್ಷೀಣಿಸುತ್ತಿದೆ. ಇದರ ಸಂರಕ್ಷಣೆಗಾಗಿ ಜನರಿಗೆ ಜಾಗೃತಿ ಮೂಡಿಸು ದೃಷ್ಟಿಯಿಂದ ಈ ದಿನವನ್ನು ಆಚರಿಸಲಾಗುತ್ತದೆ.

World Ozone Day 2021: ವಿಶ್ವ ಓಜೋನ್ ದಿನ: ಇತಿಹಾಸ, ಮಹತ್ವದ ಜತೆಗೆ ಈ ವರ್ಷ ಥೀಮ್ ಏನು ಗೊತ್ತಾ?
ಸಂಗ್ರಹ ಚಿತ್ರ
TV9 Web
| Updated By: shruti hegde|

Updated on:Sep 16, 2021 | 11:32 AM

Share

ಪ್ರತೀ ವರ್ಷ ಸೆಪ್ಟೆಂಬರ್ ತಿಂಗಳ 16ನೇ ತಾರೀಕಿಂದು ವಿಶ್ವ ಓಜೋನ್ ಪದರ ಸಂರಕ್ಷಣೆ ದಿನವನ್ನು ಆಚರಿಸಲಾಗುತ್ತದೆ. ಓಜೋನ್ ಪದರದ ಮಹತ್ವ ನಮಗೆಷ್ಟು ಗೊತ್ತಿದೆ ಹಾಗೂ ಅದರ ಸವಕಳಿಯಿಂದ ಏನೆಲ್ಲಾ ಆಗಬಹುದು ಎಂಬುದರ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ದಿನವನ್ನು ಆಚರಿಸಲಾಗುತ್ತದೆ.

1994 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸೆಪ್ಟೆಂಬರ್ 16ನೇ ತಾರೀಕಿನಂದು ಓಜೋನ್ ಪದರ ಸಂರಕ್ಷಣೆಗಾಗಿ ವಿಶ್ವ ಜೊಜೋನ್ ಪದರ ಸಂರಕ್ಷಣೆ ದಿನವನ್ನಾಗಿ ಘೋಷಿಸಿತು. 1987ರಲ್ಲಿ ಓಜೋನ್ ಪದರವನ್ನು ಖಾಲಿ ಮಾಡುವ ವಸ್ತುಗಳ ಮೇಲಿನ ಮಾಂಟ್ರಿಯಾಲ್ ಪ್ರೋಟೋಕಾಲ್​ಗೆ ಸಹಿ ಹಾಕಲಾಯಿತು. ಪ್ರತೀ ವರ್ಷ ಓಜೋನ್ ಪದರದ ಸಂರಕ್ಷಣೆಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಈ ವರ್ಷದ ಥೀಮ್ ಭಾತರದಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವಾಯಲವು 2019ರಲ್ಲಿ ಭಾರತ ಕೂಲಿಂಗ್​ ಆ್ಯಕ್ಷನ್​ ಪ್ಲ್ಯಾನ್​ಅನ್ನು (ಐಸಿಎಪಿ) ರೂಪಿಸಿತು. ಇದು ಶೈತ್ಯೀಕರಣದ ಪರಿವರ್ತನೆಯನ್ನು ಕಡಿಮೆ ಮಾಡುವ, ಶಕ್ತಿಯ ದಕ್ಷತೆಯನ್ನು ಹೆಚ್ಚಿಸುವ ಮತ್ತು ತಂಪಾಗಿಸುವ ಪ್ರಯತ್ನದ ಗುರಿಯನ್ನು ಹೊಂದಿದೆ. 36 ವರ್ಷಗಳ ಓಜೋನ್ ಲೇಯರ್ ಭದ್ರತೆಯ ದೃಷ್ಟಿಯಿಂದ ಓಜೋನ್ ಫಾರ್ ಲೈಫ್ ಥೀಮ್​ನೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ.

ಓಜೋನ್ ಪದರ ಸೂರ್ಯನ ಹೆಚ್ಚಿನ ಕಿರಣಗಳನ್ನು ಹೀರಿಕೊಳ್ಳುತ್ತದೆ. ಈ ಕಿರಣಗಳು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು. ಆದರೆ ನಾವು ಪ್ರತಿನಿತ್ಯ ಬಳಸುವಂತಹ ರಾಸಾಯನಿಕಗಳು ಓಜೋನ್ ಪರದವನ್ನು ಹಾನಿಗೊಳಗಾಗಿಸುವ ಸಾಧ್ಯತೆಗಳು ಹೆಚ್ಚಿವೆ.

ಓಜೋನ್ ಪದರ ಕ್ಷೀಣಿಸುತ್ತಿದೆ. ಇದರ ಸಂರಕ್ಷಣೆಗಾಗಿ ಜನರಿಗೆ ಜಾಗೃತಿ ಮೂಡಿಸು ದೃಷ್ಟಿಯಿಂದ ಈ ದಿನವನ್ನು ಆಚರಿಸಲಾಗುತ್ತದೆ. ಈ ಪದರದಿಂದ ಭೂಮಿ ಮತ್ತು ಭೂಮಿಯ ಮೇಲೆ ಜೀವಿಸುತ್ತಿರುವ ಜೀವಿಗಳು ಸುರಕ್ಷಿತವಾಗಿವೆ. ಮುಂದಿನ ಪೀಳಿಗೆಯೂ ಸಹ ಸುರಕ್ಷಿತವಾಗಿರುವ ದೃಷ್ಟಿಯಿಂದ ಇದರ ಓಜೋನ್ ಪದರ ಸಂರಕ್ಷಣೆಯ ಬಗ್ಗೆ ಅರಿಯಲೇಬೇಕಿದೆ.

ಇದನ್ನೂ ಓದಿ:

ಗದಗ: ಭಾರಿ ಶಬ್ದದ ಜೊತೆಗೆ ಭೂಮಿ ನಡುಗಿದ ಅನುಭವ! ಬೆಚ್ಚಿಬಿದ್ದ ಗ್ರಾಮಸ್ಥರು

ವಿಜಯಪುರದಲ್ಲಿ ಮತ್ತೆ ನಡುಗಿದ ಭೂಮಿ; ಒಂದು ವಾರದಲ್ಲಿ ಎರಡನೇ ಬಾರಿಗೆ ಭೂಕಂಪನದ ಅನುಭವ

(International Day for the Preservation of the Ozone Layer 2021 know about history and significance)

Published On - 11:28 am, Thu, 16 September 21