ಗದಗ: ಭಾರಿ ಶಬ್ದದ ಜೊತೆಗೆ ಭೂಮಿ ನಡುಗಿದ ಅನುಭವ! ಬೆಚ್ಚಿಬಿದ್ದ ಗ್ರಾಮಸ್ಥರು

TV9 Digital Desk

| Edited By: sandhya thejappa

Updated on: Sep 15, 2021 | 5:27 PM

ಕಲಕೇರಿ ಗ್ರಾಮದಲ್ಲಿ ನಿನ್ನೆ ರಾತ್ರಿ 8.15ರ ಸುಮಾರಿಗೆ ಕೆಲವು ಕ್ಷಣ ಭೂಮಿ ನಡುಕಿದ ಅನುಭವಾಗಿದೆ. ಏಕಾಏಕಿ ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.

ಗದಗ: ಭಾರಿ ಶಬ್ದದ ಜೊತೆಗೆ ಭೂಮಿ ನಡುಗಿದ ಅನುಭವ! ಬೆಚ್ಚಿಬಿದ್ದ ಗ್ರಾಮಸ್ಥರು
ಅತಂಕಗೊಂಡ ಗ್ರಾಮಸ್ಥರು, ಗ್ರಾಮಕ್ಕೆ ಅಧಿಕಾರಿಗಳ ಭೇಟಿ
Follow us

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮ ಸಸ್ಯಕಾಶಿ ಕಪ್ಪತ್ತಗುಡ್ಡದ ಅಂಚಿನಲ್ಲಿದೆ. ಈ ಗ್ರಾಮದ ಬಹುತೇಕ ಜನರು ಕೃಷಿಯನ್ನೆ ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ ನಿನ್ನೆ (ಸೆ.14) ಕೃಷಿ ಕೆಲಸಗಳನ್ನು ಮುಗಿಸಿಕೊಂಡು ಬಂದ ಗ್ರಾಮಸ್ಥರಿಗೆ ಅಘಾತವಾಗಿತ್ತು. ಏಕಾಏಕಿ ಭಾರಿ ಶಬ್ದದ ಜೊತೆಗೆ ಭೂಮಿ ನಡುಗಿದ ಅನುಭವವಾಗಿದ್ದು, ಇಡೀ ಗ್ರಾಮದ ಜನರು ಬಿಚ್ಚಿ ಬಿದ್ದಿದ್ದಾರೆ. ಭೂಕಂಪನದ ಅನುಭವವಾಗಿದ್ದರಿಂದ ಗ್ರಾಮದ ಜನರು ಕ್ಷಣ ಕ್ಷಣಕ್ಕೂ ಆತಂಕ ಎದುರಿಸುತ್ತಿದ್ದಾರೆ. ಸದ್ಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಲಕೇರಿ ಗ್ರಾಮದಲ್ಲಿ ನಿನ್ನೆ ರಾತ್ರಿ 8.15ರ ಸುಮಾರಿಗೆ ಕೆಲವು ಕ್ಷಣ ಭೂಮಿ ನಡುಕಿದ ಅನುಭವಾಗಿದೆ. ಏಕಾಏಕಿ ಮನೆಯಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಹಳೆ ಮನೆಗಳ ಗೋಡೆಗಳಿಂದ ಸ್ವಲ್ಪ ಪ್ರಮಾಣದಲ್ಲಿ ಮಣ್ಣು ಉದುರಿದೆ. ಹೀಗಾಗಿ ಗ್ರಾಮದ ಜನರು ಏನಾಯಿತು ಎಂದು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಸ್ವಲ್ಪ ಪ್ರಮಾಣದಲ್ಲಿ ಭೂಕಂಪವಾಗಿದೆ ಎಂದು ಗ್ರಾಮಸ್ಥರು ಆತಂಕದಲ್ಲಿ ರಾತ್ರಿ ಕಳೆದಿದ್ದಾರೆ. ಮುಂಜಾನೆ ಮುಂಡರಗಿ ತಹಶೀಲ್ದಾರ್ ಆಶಪ್ಪ ಪೂಜಾರಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರಿಂದ ರಾತ್ರಿ ನಡೆದ ಕುರಿತು ಮಾಹಿತಿಯನ್ನು ಪಡೆದರು.

ಗ್ರಾಮಸ್ಥರು ಮಾತ್ರ ಆತಂಕದಲ್ಲಿ ಜೀವನ ನಡೆಸುವಂತಾಗಿದೆ. ಇದು ಭೂಕಂಪನ ಅಥವಾ ಕಪ್ಪತ್ತಗುಡ್ಡದಲ್ಲಿ ಏನಾದರೂ ಸ್ಫೋಟವಾಗಿದೆ ಎನ್ನುವ ಕುರಿತು ಪರಿಶೀಲನೆ ಮಾಡಬೇಕು ಎಂದು ಗ್ರಾಮಸ್ಥರಾದ ವಿರೇಶ ಪತ್ತೇಪೂರ ಮತ್ತು ಮೀರಾಸಾಬ್ ಒತ್ತಾಯಿಸಿದ್ದಾರೆ.

ಸಸ್ಯಕಾಶಿ ಕಪ್ಪತ್ತಗುಡ್ಡದ ಅಂಚಿನಲ್ಲಿರುವ ಕಲಕೇರಿ ಗ್ರಾಮದಲ್ಲಿ ಮಾತ್ರ ಲಘು ಭೂಕಂಪನದ ಅನುಭವಾಗಿದೆ. ಅಕ್ಕಪಕ್ಕದ ಗ್ರಾಮಗಳಾದ ವಿರಾಪುರ ಹಾಗೂ ಮುಷ್ಟಿಕೊಪ್ಪ ಗ್ರಾಮದ ಜನರಿಗೂ ಅನುಭವವಾಗಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಎಷ್ಟು ಪ್ರಮಾಣದಲ್ಲಿ ಭೂಕಂಪನಾಗಿದೆ ಎನ್ನುವ ಕುರಿತು ಭೂವಿಜ್ಞಾನ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ತಜ್ಞರ ವರದಿ ಬಂದ ನಂತರ ಎಷ್ಟು ಪ್ರಮಾಣದಲ್ಲಿ ಭೂಕಂಪನವಾಗಿದೆ ಎಂದು ತಿಳಿಯಲಿದೆ ಎಂದು ಮುಂಡರಗಿ ತಹಶೀಲ್ದಾರ್ ಆಶಪ್ಪ ಪೂಜಾರಿ ತಿಳಿಸಿದ್ದಾರೆ.

ಇದನ್ನೂ ಓದಿ

Big Breaking: ಸೋನು ಸೂದ್​ಗೆ ಸಂಕಷ್ಟ?; ನಟನಿಗೆ ಸೇರಿದ ಆರು ಜಾಗಗಳಲ್ಲಿ ಐಟಿ ಅಧಿಕಾರಿಗಳ ಸರ್ವೇ

ಅಫ್ಘಾನ್ ಆರ್ಥಿಕತೆಗೆ ತೀವ್ರ ಹೊಡೆತ; ಅಮರುಲ್ಲಾ ಸಲೇಹ್ ನಿವಾಸದಿಂದ ಹಣ, ಚಿನ್ನ ವಶಪಡಿಸಿಲ್ಲ ಎಂದ ತಾಲಿಬಾನ್

(Earthquake experience for the villagers along with a loud noise in gadag)

ತಾಜಾ ಸುದ್ದಿ

Related Stories

Click on your DTH Provider to Add TV9 Kannada