ಅಫ್ಘಾನ್ ಆರ್ಥಿಕತೆಗೆ ತೀವ್ರ ಹೊಡೆತ; ಅಮರುಲ್ಲಾ ಸಲೇಹ್ ನಿವಾಸದಿಂದ ಹಣ, ಚಿನ್ನ ವಶಪಡಿಸಿಲ್ಲ ಎಂದ ತಾಲಿಬಾನ್

Afghanistan Updates: ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರ ನಿವಾಸದಲ್ಲಿ 6.5 ಮಿಲಿಯನ್ ಡಾಲರ್ ಹಣ ಹಾಗೂ 18 ಚಿನ್ನದ ಇಟ್ಟಿಗೆಗಳು ಸಿಕ್ಕಿದೆ ಎಂಬ ಸುದ್ದಿಯನ್ನು ತಾಲಿಬಾನ್ ಅಲ್ಲಗಳೆದಿದೆ.

ಅಫ್ಘಾನ್ ಆರ್ಥಿಕತೆಗೆ ತೀವ್ರ ಹೊಡೆತ; ಅಮರುಲ್ಲಾ ಸಲೇಹ್ ನಿವಾಸದಿಂದ ಹಣ, ಚಿನ್ನ ವಶಪಡಿಸಿಲ್ಲ ಎಂದ ತಾಲಿಬಾನ್
ಪ್ರಾತಿನಿಧಿಕ ಚಿತ್ರ
Follow us
| Updated By: ganapathi bhat

Updated on: Sep 15, 2021 | 4:44 PM

ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಆರ್ಥಿಕ ಸಂಕಷ್ಟವನ್ನು ತಾಲಿಬಾನ್ ಎದುರಿಸುತ್ತಿದೆ. ವಿಶ್ವದ ಹಲವು ದೇಶಗಳು ಅಫ್ಘಾನ್​ಗೆ ಸಹಾಯ ಮಾಡುವುದನ್ನು ಸಂಪೂರ್ಣ ಸ್ಥಗಿತಗೊಳಿಸಿದೆ. ಹಾಗಾಗಿ ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಳ್ಳಲು ಮಿತಿಯನ್ನು ಕೂಡ ಹೇರಲಾಗಿದೆ. ಈಗ ನ್ಯೂಯಾರ್ಕ್ ಪೋಸ್ಟ್​ನ ವರದಿಯೊಂದರ ಪ್ರಕಾರ ಬಹುತೇಕ ತಾಲಿಬಾನ್ ಹೋರಾಟಗಾರರು ತಿಂಗಳಿನ ವೇತನ ಪಡೆದಿಲ್ಲ. ತಾಲಿಬಾನ್ ಆಳ್ವಿಕೆಯನ್ನು ಅಫ್ಘಾನ್ ಒಪ್ಪಿಕೊಳ್ಳುತ್ತಿಲ್ಲ ಅಥವಾ ಆಕ್ಷೇಪಿಸುತ್ತಿವೆ. ಹೀಗಾಗಿ, ಅಫ್ಘಾನ್ ಆರ್ಥಿಕ ಹೊಡೆತ ಪಡೆದುಕೊಂಡಿದೆ.

ವಿಶ್ವಬ್ಯಾಂಕ್ (World Bank) ಕೂಡಾ ಹಣ ನೀಡುವುದಿಲ್ಲ ಎಂದು ಈ ಮೊದಲು ಸ್ಪಷ್ಟಪಡಿಸಿದೆ. ಐಎಂಎಫ್​ ಹಣಕಾಸು ನೆರವು ನಿಲ್ಲಿಸಿದೆ. ಇನ್ನೊಂದೆಡೆ ಅಮೆರಿಕಾದ ಬ್ಯಾಂಕ್​ಗಳಲ್ಲಿರುವ ಅಫ್ಘಾನಿಸ್ತಾನದ (Afghanistan) ಹಣವೂ ಜಪ್ತಿಯಾಗಿದೆ. ಹೀಗಾಗಿ ಸದ್ಯ ಅಫ್ಘಾನಿಸ್ತಾನದಲ್ಲಿ ಹಣಕ್ಕೆ ಹಾಹಾಕಾರ ಆರಂಭವಾದಂತಾಗಿದೆ. ಆರ್ಥಿಕತೆ ಸೊರಗಿದೆ.

ಮತ್ತೊಂದೆಡೆ, ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಅವರ ನಿವಾಸದಲ್ಲಿ 6.5 ಮಿಲಿಯನ್ ಡಾಲರ್ ಹಣ ಹಾಗೂ 18 ಚಿನ್ನದ ಇಟ್ಟಿಗೆಗಳು ಸಿಕ್ಕಿದೆ ಎಂಬ ಸುದ್ದಿಯನ್ನು ತಾಲಿಬಾನ್ ಅಲ್ಲಗಳೆದಿದೆ. ಈ ಮೊದಲು ಇಬ್ಬರು ಅಪರಿಚಿತರು ಎರಡು ಸೂಟ್​ಕೇಸ್​ನಲ್ಲಿ ಹಣ ಮತ್ತು ಚಿನ್ನದ ಗಟ್ಟಿಗಳನ್ನು ಸಾಗಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಆ ಬಳಿಕ, ಅದು ಅಮರುಲ್ಲಾ ಸಲೇಹ್ ನಿವಾಸದಿಂದ ತೆಗೆದುಕೊಂಡು ಹೋಗುತ್ತಿರುವ ಸಂಪತ್ತು ಎನ್ನಲಾಗಿತ್ತು.

ವಿರೋಧಿಗಳ ಜೊತೆಗಿನ ಶೂಟೌಟ್​ನಲ್ಲಿ ತಾಲಿಬಾನ್ ಪ್ರಮುಖ ನಾಯಕನೊಬ್ಬ ಸಾವನ್ನಪ್ಪಿದ್ದಾನೆ ಎಂಬ ಸುದ್ದಿಯನ್ನು ನಿನ್ನೆಯಷ್ಟೇ ತಾಲಿಬಾನ್ ಅಲ್ಲಗಳೆದಿತ್ತು. ಅಫ್ಘಾನಿಸ್ತಾನದ ಕಾಬೂಲ್​ನಿಂದ ಅಮೆರಿಕಾ ಹಿಂತೆರಳಿದ ಬಳಿಕ, ಒಂದು ತಿಂಗಳ ಅವಧಿಯಲ್ಲಿ ತಾಲಿಬಾನ್​ನಲ್ಲಿ ಆಂತರಿಕ ಬಿರುಕು ಮೂಡಿದೆ ಎಂಬ ವದಂತಿಗಳು ಕೇಳಿಬಂದಿತ್ತು. ಈ ಬಗ್ಗೆ ತಾಲಿಬಾನ್ ವಕ್ತಾರ ಸುಲೈಲ್ ಶಹೀನ್ ಸ್ಪಷ್ಟೀಕರಣ ನೀಡಿದ್ದ. ತಾಲಿಬಾನ್​ನ ಮಾಜಿ ರಾಜಕೀಯ ಮುಖ್ಯಸ್ಥ ಹಾಗೂ ಕಳೆದ ವಾರ ತಾಲಿಬಾನ್ ಸರ್ಕಾರದ ಉಪ ಪ್ರಧಾನಿ ಎಂದು ನೇಮಕ ಆಗಿರುವ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಸಾವನ್ನಪ್ಪಿದ್ದಾನೆ ಎಂಬ ಸುದ್ದಿಯನ್ನು ಸುಲೈಲ್ ಶಹೀನ್ ತಳ್ಳಿ ಹಾಕಿದ್ದ. ಘನಿ ಬರಾದಾರ್ ವಾಯ್ಸ್ ಮೆಸೇಜ್ ಒಂದನ್ನು ಇದಕ್ಕೆ ಪುರಾವೆ ಎಂಬಂತೆ ನೀಡಿದ್ದ.

ಇದನ್ನೂ ಓದಿ: Afghanistan: ಅಫ್ಘಾನಿಸ್ತಾನದಲ್ಲಿ ಹೆಚ್ಚಿದ ತಾಲಿಬಾನ್ ಕ್ರೌರ್ಯ; ಪಾಕ್ ವಿರುದ್ಧ ತಿರುಗಿಬಿದ್ದ ಅಮೆರಿಕಾ: ಸಂಪೂರ್ಣ ವಿವರ ಇಲ್ಲಿದೆ

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಕಳ್ಳರ ಕೈ ಕಟ್, ಕಾನೂನು ಬಾಹಿರ ಸಂಭೋಗ ಮಾಡಿದವರ ಮೇಲೆ ಕಲ್ಲೆಸೆತ: ಶಿಕ್ಷೆ ರೂಪಿಸಲೆಂದೇ ಸಚಿವಾಲಯ

ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಚನ್ನಪಟ್ಟಣ ಟಿಕೆಟ್ ತಪ್ಪಿತು ಯಾಕೆ ಅನ್ನೋದನ್ನು ವಿವರಿಸಿದ ರಘುನಂದನ್ ರಾಮಣ್ಣ
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಹಾಸನಾಂಬೆಯ ದರ್ಶನಕ್ಕೆ ಪ್ರತಿದಿನ ಆಗಮಿಸುತ್ತಿರುವ ರಾಜ್ಯದ ಗಣ್ಯರ ದಂಡು
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಪ್ರಿಯಾಂಕಾ ವಯನಾಡ್​ನಿಂದ ಸ್ಪರ್ಧಿಸುವುದು ಕಾಂಗ್ರೆಸ್​ಗೆ ಸರಿ: ಕುಮಾರಸ್ವಾಮಿ
ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಾಮೆಂಟ್ ಮಾಡಲ್ಲ: ಡಿಕೆ ಶಿವಕುಮಾರ್
ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಕಾಮೆಂಟ್ ಮಾಡಲ್ಲ: ಡಿಕೆ ಶಿವಕುಮಾರ್
ರೈತರ ಜಮೀನು ಯಾವ ಕಾರಣಕ್ಕೂ ವಕ್ಫ್ ಬೋರ್ಡ್​ಗೆ ಹೋಗಲ್ಲ: ಸಿದ್ದರಾಮಯ್ಯ
ರೈತರ ಜಮೀನು ಯಾವ ಕಾರಣಕ್ಕೂ ವಕ್ಫ್ ಬೋರ್ಡ್​ಗೆ ಹೋಗಲ್ಲ: ಸಿದ್ದರಾಮಯ್ಯ