ಅಫ್ಘಾನಿಸ್ತಾನದಲ್ಲಿ ಕಳ್ಳರ ಕೈ ಕಟ್, ಕಾನೂನು ಬಾಹಿರ ಸಂಭೋಗ ಮಾಡಿದವರ ಮೇಲೆ ಕಲ್ಲೆಸೆತ: ಶಿಕ್ಷೆ ರೂಪಿಸಲೆಂದೇ ಸಚಿವಾಲಯ

TV9 Digital Desk

| Edited By: guruganesh bhat

Updated on: Sep 14, 2021 | 7:59 PM

Afghanistan Update: ಷರಿಯಾ ಪ್ರಕಾರ ಸದ್ಗುಣಗಳ ಪ್ರಸಾರ ಮತ್ತು ಕೆಟ್ಟ ಕಾರ್ಯಗಳಿಗೆ ನಿರ್ಬಂಧ ಹೇರುವಂತಹ ಪ್ರತ್ಯೇಕ ಸಚಿವಾಲಯವೊಂದನ್ನು ರಚಿಸಲು ತಾಲಿಬಾನ್ ಸರ್ಕಾರ ಮುಂದಾಗಿದೆ.

ಅಫ್ಘಾನಿಸ್ತಾನದಲ್ಲಿ ಕಳ್ಳರ ಕೈ ಕಟ್, ಕಾನೂನು ಬಾಹಿರ ಸಂಭೋಗ ಮಾಡಿದವರ ಮೇಲೆ ಕಲ್ಲೆಸೆತ: ಶಿಕ್ಷೆ ರೂಪಿಸಲೆಂದೇ ಸಚಿವಾಲಯ
ಸಾಂಕೇತಿಕ ಚಿತ್ರ

ಇನ್ಮುಂದೆ ಅಫ್ಘಾನಿಸ್ತಾನದಲ್ಲಿ ಕಳ್ಳರ ಕೈಗಳು ಕಟ್ ಆಗಲಿವೆ. ಕಾನೂನು ಬಾಹಿರ ದೈಹಿಕ ಸಂಭೋಗ ಮಾಡಿದವರಿಗೆ ಕಲ್ಲೆಸೆತವೇ ಮೊದಲಾದ ಕ್ರೂರ ಶಿಕ್ಷೆಗಳನ್ನು ತಾಲಿಬಾನ್ ಜಾರಿಗೊಳಿಸುವ ಸಾಧ್ಯತೆ ದಟ್ಟವಾಗಿದೆ. ತಾಲಿಬಾನ್ ವಕ್ತಾರರು ಈಮುನ್ನವೇ ದೃಢಪಡಿಸದಂತೆ ಇಸ್ಲಾಂಗೆ ಸೇವೆ ಸಲ್ಲಿಸುವುದೇ ಸರ್ಕಾರದ ಕರ್ತವ್ಯವಾಗಲಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಷರಿಯಾ ಕಾನೂನನ್ನು ಉಲ್ಲಂಘಿಸುವವರಿಗೆ ಅತ್ಯಂತ ಕಠಿಣ ಶಿಕ್ಷೆಗಳನ್ನು ತಾಲಿಬಾನ್ ಸರ್ಕಾರ ರೂಪಿಸುತ್ತಿದೆ. ಇಂತಹ ಕಾನೂನುಗಳನ್ನು ರೂಪಿಸಲು ಮತ್ತು ಜವಾಬ್ದಾರಿ ನಿರ್ವಹಿಸಲು ಪ್ರತ್ಯೇಕ ಸಚಿವಾಲಯ ರಚಿಸುವ ಕುರಿತು ಸಹ ತಾಲಿಬಾನ್ ಸರ್ಕಾರ ಚಿಂತಿಸಿದೆ ಎಂದು ವರದಿಯಾಗಿದೆ.

ಕೇಂದ್ರೀಯ ಅಫ್ಘನ್ ಪ್ರಾಂತ್ಯದ ತಾಲಿಬಾನ್ ಅಧಿಕೃತ ವಕ್ತಾರ ಎಂದೇ ತನ್ನನ್ನು ಗುರುತಿಸಿಕೊಂಡಿರುವ ಮೊಹಮದ್ ಯೂಸಫ್ ಎಂಬಾತ ವಿವರಿಸಿದಂತೆ, ಬೇಕು ಬೇಕಂತಲೇ ಮಾಡಿದ ಅಥವಾ ತಿಳಿದೂ ತಿಳಿದೂ ಮಾಡಿದ ಅಪರಾಧಕ್ಕೆ ತಾಲಿಬಾನ್ ಸರ್ಕಾರ ಮೃತ್ಯು ದಂಡನೆಯನ್ನೇ ವಿಧಿಸಲಿದೆ. ಆದರೆ ತಿಳಿಯದೇ ಆದ ತಪ್ಪಿಗೆ ನಿಗದಿತ ಹಣವನ್ನು ದಂಡವನ್ನಾಗಿ ಪಾವತಿಸಿ ಶಿಕ್ಷೆಯಿಂದ ಪಾರಾಗಬಹುದಾಗಿದೆ. 1996ರಿಂದ 2001ರವರಗೆ ಅಫ್ಘಾನಿಸ್ತಾನದಲ್ಲಿ ಅಸ್ತಿತ್ವದಲ್ಲಿದ್ದ ತಾಲಿಬಾನ್ ಸರ್ಕಾರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕಾದ ನೈತಿಕ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಮತ್ತು ಅಪರಾಧ ಮಾಡಿದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಅತ್ಯಂತ ಕ್ರೂರವಾಗಿ ಶಿಕ್ಷೆ ನೀಡಲಾಗುತ್ತಿತ್ತು. ಅಂತಹುದೇ ಕಾನೂನನ್ನು ಈಗಲೂ ಜಾರಿಗೆ ತರಲು ತಾಲಿಬಾನ್ ಸರ್ಕಾರ ಯೋಚಿಸುತ್ತಿದೆ.

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಿದ ಬೆನ್ನಲ್ಲೇ ಷರಿಯಾ ಕಾನೂನನ್ನು ಅನುಷ್ಠಾನಗೊಳಿಸುವತ್ತ ತಾಲಿಬಾನ್ ಒಂದೊಂದೇ ಹೆಜ್ಜೆ ಇಡುತ್ತಿದೆ. ಇದೀಗ ಷರಿಯಾ ಪ್ರಕಾರ ಸದ್ಗುಣಗಳ ಪ್ರಸಾರ ಮತ್ತು ಕೆಟ್ಟ ಕಾರ್ಯಗಳಿಗೆ ನಿರ್ಬಂಧ ಹೇರುವಂತಹ ಪ್ರತ್ಯೇಕ ಸಚಿವಾಲಯವೊಂದನ್ನು ರಚಿಸಲು ತಾಲಿಬಾನ್ ಸರ್ಕಾರ ಮುಂದಾಗಿದೆ. ಮಹಿಳೆಯರು ಪುರುಷ ಸಂಗಾತಿ ಇಲ್ಲದೇ ಮನೆಯಿಂದ ಹೊರಗೆ ಹೋಗುವಂತಿಲ್ಲ, ಸಂಗೀತ ಮತ್ತು ಇತರ ಮನರಂಜನಾ ಕಲೆಗಳ ಮೇಲೆ ನಿಷೇಧ ಹೇರುವಂತಹ ಜವಾಬ್ದಾರಿಯನ್ನು ಈ ಸಚಿವಾಲಯ ನಿರ್ವಹಿಸಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 

Afghanistan: ಅಫ್ಘಾನಿಸ್ತಾನದಲ್ಲಿ ಹೆಚ್ಚಿದ ತಾಲಿಬಾನ್ ಕ್ರೌರ್ಯ; ಪಾಕ್ ವಿರುದ್ಧ ತಿರುಗಿಬಿದ್ದ ಅಮೆರಿಕಾ: ಸಂಪೂರ್ಣ ವಿವರ ಇಲ್ಲಿದೆ

Afghan Women: ನನ್ನ ಬಟ್ಟೆ ನನ್ನ ಇಷ್ಟ: ತಾಲಿಬಾನ್ ಹೇರಿದ ವಸ್ತ್ರಸಂಹಿತೆಗೆ ಸೆಡ್ಡು ಹೊಡೆದ ಅಫ್ಘಾನ್ ಮಹಿಳೆಯರು

(Taliban Ministry of Virtue and Vice returned in Afghanistan for Sharia Law)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada