Afghan Women: ನನ್ನ ಬಟ್ಟೆ ನನ್ನ ಇಷ್ಟ: ತಾಲಿಬಾನ್ ಹೇರಿದ ವಸ್ತ್ರಸಂಹಿತೆಗೆ ಸೆಡ್ಡು ಹೊಡೆದ ಅಫ್ಘಾನ್ ಮಹಿಳೆಯರು

TV9 Digital Desk

| Edited By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 13, 2021 | 6:33 PM

ಅಫ್ಘಾನಿಸ್ತಾನದಲ್ಲಿ ಆಡಳಿತ ಹಿಡಿದಿರುವ ಮತಾಂಧ ತಾಲಿಬಾನ್ ಆಡಳಿತಗಾರರು ಹೇರಿರುವ ಕಟ್ಟುನಿಟ್ಟಿನ ವಸ್ತ್ರಸಂಹಿತೆಯನ್ನು ಅಫ್ಘಾನ್ ಮಹಿಳೆಯರು ಧಿಕ್ಕರಿಸಿದ್ದಾರೆ.

Afghan Women: ನನ್ನ ಬಟ್ಟೆ ನನ್ನ ಇಷ್ಟ: ತಾಲಿಬಾನ್ ಹೇರಿದ ವಸ್ತ್ರಸಂಹಿತೆಗೆ ಸೆಡ್ಡು ಹೊಡೆದ ಅಫ್ಘಾನ್ ಮಹಿಳೆಯರು
ಅಫ್ಘಾನಿಸ್ತಾನದ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಮಹಿಳೆಯರು ತಾಲಿಬಾನ್​ಗೆ ಸವಾಲು ಹಾಕಿದ್ದಾರೆ
Follow us


ಅಫ್ಘಾನಿಸ್ತಾನದಲ್ಲಿ ಆಡಳಿತ ಹಿಡಿದಿರುವ ಮತಾಂಧ ತಾಲಿಬಾನ್ ಆಡಳಿತಗಾರರು ಹೇರಿರುವ ಕಟ್ಟುನಿಟ್ಟಿನ ವಸ್ತ್ರಸಂಹಿತೆಯನ್ನು ಅಫ್ಘಾನ್ ಮಹಿಳೆಯರು ಧಿಕ್ಕರಿಸಿದ್ದಾರೆ. ಟ್ವಿಟರ್​ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ #DoNotTouchMyClothes (ನನ್ನ ಬಟ್ಟೆಗಳನ್ನು ಮುಟ್ಟಬೇಡಿ) ಹ್ಯಾಶ್​ಟ್ಯಾಗ್​ನೊಂದಿಗೆ ಸಾಂಪ್ರದಾಯಿಕ ಅಫ್ಘಾನ್ ಉಡುಗೆಗಳನ್ನು ತೊಟ್ಟ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

‘ನಮ್ಮ ಸಂಸ್ಕೃತಿಯ ಮೇಲೆ ದಾಳಿ ನಡೆಯುವುದನ್ನು ನಾವು ಸಹಿಸುವುದಿಲ್ಲ. ನನ್ನ ತಾಯಿ ಹೀಗೆಯೇ ಬಟ್ಟೆ ತೊಡುತ್ತಿದ್ದರು, ಈಗ ನಾನು, ಮುಂದೆ ನನ್ನ ಮಗಳು ಹೀಗೆಯೇ ತೊಡುತ್ತೇವೆ’ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ‘ಇಷ್ಟದ ಬಟ್ಟೆ ತೊಟ್ಟ ಮಹಿಳೆಯರನ್ನು ಬೆತ್ತಲೆ ಮಾಡಿ ಹೊಡೆಯುತ್ತಿದ್ದೀರಿ. ಹತ್ಯಾಕಾಂಡವೇ ನಡೆಯುತ್ತಿದೆ ಇಲ್ಲಿ. ಹೀಗಾದರೆ ನಮ್ಮ ಸಂಪ್ರದಾಯವನ್ನು ಉಳಿಸಿಕೊಳ್ಳುವುದು ಹೇಗೆ’ ಎಂದು ಮತ್ತೊಬ್ಬರು ತಮ್ಮದೇ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ.

ತಾಲಿಬಾನಿಗಳು ಆಡಳಿತ ಚುಕ್ಕಾಣಿ ಹಿಡಿದ ನಂತರ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಕಲಿಯುವ ವಿದ್ಯಾರ್ಥಿನಿಯರು ಮುಖದ ಬಹುಭಾಗ ಆವರಿಸುವ ನಿಖಾಬ್​ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದು ತಾಲಿಬಾನ್ ಆದೇಶ ಹೊರಡಿಸಿದೆ. ತರಗತಿಗಳಲ್ಲಿ ಬಾಲಕ-ಬಾಲಕಿಯರು ಒಟ್ಟಿಗೆ ಕೂರುವಂತಿಲ್ಲ. ಇಬ್ಬರ ನಡುವೆ ಒಂದು ಪರದೆಯಾದರೂ ಇರಬೇಕು. ಬಾಲಕಿಯರಿಗೆ ಮಹಿಳಾ ಸಿಬ್ಬಂದಿಯೇ ಬೋಧಿಸಬೇಕು ಎಂದು ಹೇಳಿದೆ.

ಅಫ್ಘಾನಿಸ್ತಾನದಿಂದ ಅಮೆರಿಕ ಹಿಂದಿರುಗುವ ಪ್ರಕಟಿಸಿದ ದಿನದಿಂದಲೂ ಅಲ್ಲಿ ತಾಲಿಬಾನ್ ಆಡಳಿತಕ್ಕೆ ಮಹಿಳೆಯರಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಹಿಂದೆ ತಾಲಿಬಾನ್ ಆಡಳಿತದಲ್ಲಿ ಅನುಭವಿಸಿದ್ದ ಸಂಕಷ್ಟಗಳನ್ನು ನೆನೆದು ಭೀತರಾಗಿರುವ ಮಹಿಳೆಯರು ಈ ಬಾರಿ ತಮ್ಮ ಹಕ್ಕುಗಳನ್ನು ಕಾಪಾಡಿಕೊಳ್ಳಲು ಹಲವು ರೀತಿಯ ಹೋರಾಟಗಳಿಗೆ ಮುಂದಾಗಿದ್ದಾರೆ.

ಅಫ್ಘಾನ್ ಮಹಿಳೆಯರ ಕೆಲ ಟ್ವೀಟ್​ಗಳು ಇಲ್ಲಿದೆ

(Afghanistan Womens Online Campaign Do Not Touch My Clothes to Protect Their Right to Dress)

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮಂತ್ರಿಗಳಾಗುವಂತಿಲ್ಲ; ಮಕ್ಕಳು ಹೆರುವುದಷ್ಟೇ ಅವರ ಕೆಲಸ: ತಾಲಿಬಾನ್

ಇದನ್ನೂ ಓದಿ: ಪುರುಷರು ಇಲ್ಲದಿರುವ ತರಗತಿಯಲ್ಲಿ ಮಾತ್ರ ಮಹಿಳೆಯರು ಕಲಿಯಬಹುದು, ಇಸ್ಲಾಮಿಕ್ ಉಡುಗೆ ಕಡ್ಡಾಯ ಎಂದ ತಾಲಿಬಾನ್


ತಾಜಾ ಸುದ್ದಿ

Related Stories

Click on your DTH Provider to Add TV9 Kannada