ಪಾಕಿಸ್ತಾನದ ಜೊತೆಗಿನ ಸಂಬಂಧದ ಬಗ್ಗೆ ಮರುಚಿಂತನೆ ಅಗತ್ಯ: ಯುಎಸ್ ನಿಲುವಿನ ಬಗ್ಗೆ ಆ್ಯಂಟನಿ ಬ್ಲಿಂಕನ್ ಮಾಹಿತಿ

Afghanistan: ಯುಎಸ್ ಬೆಂಬಲ ನೀಡಿದ್ದ ಅಫ್ಘಾನಿಸ್ತಾನದ ಪತನದ ಬಳಿಕ ಅಮೆರಿಕ ಮೊದಲ ಬಾರಿಗೆ ತನ್ನ ನಿಲುವಿನ ಬಗ್ಗೆ ಅಧಿಕೃತ ಸಾರ್ವಜನಿಕ ಹೇಳಿಕೆ ನೀಡಿದೆ. ಪಾಕಿಸ್ತಾನ ಹಕ್ಕಾನಿಗಳು ಸೇರಿದಂತೆ ತಾಲಿಬಾನಿಗಳಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನದ ವಿರುದ್ಧ ಅಮೆರಿಕ ಸಿಡಿದೆದ್ದಿದೆ.

ಪಾಕಿಸ್ತಾನದ ಜೊತೆಗಿನ ಸಂಬಂಧದ ಬಗ್ಗೆ ಮರುಚಿಂತನೆ ಅಗತ್ಯ: ಯುಎಸ್ ನಿಲುವಿನ ಬಗ್ಗೆ ಆ್ಯಂಟನಿ ಬ್ಲಿಂಕನ್ ಮಾಹಿತಿ
ಆ್ಯಂಟನಿ ಬ್ಲಿಂಕನ್


ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್ ಪಾಕಿಸ್ತಾನದೊಂದಿಗಿನ ತನ್ನ ಸಂಬಂಧದ ಬಗ್ಗೆ ಮುಂದಿನ ವಾರ ವಿಮರ್ಶೆ ಮಾಡಲಿದೆ ಎಂದು ಯುಎಸ್ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಸೋಮವಾರ ಹೇಳಿದ್ದಾರೆ. ಅಫ್ಘಾನಿಸ್ತಾನ ವಿಚಾರವಾಗಿ ತನ್ನ ಪಾತ್ರವನ್ನು ನಿರ್ಧರಿಸಬೇಕು ಹಾಗೂ ಅಮೆರಿಕವು ಪಾಕಿಸ್ತಾನದ ಜೊತೆಗಿನ ತನ್ನ ಸಂಬಂಧದ ಬಗ್ಗೆ ಮರುಚಿಂತನೆ ಮಾಡಲಿದೆ ಎಂದು ಹೇಳಿದ್ದಾರೆ.

ಯುಎಸ್ ಬೆಂಬಲ ನೀಡಿದ್ದ ಅಫ್ಘಾನಿಸ್ತಾನದ ಪತನದ ಬಳಿಕ ಅಮೆರಿಕ ಮೊದಲ ಬಾರಿಗೆ ತನ್ನ ನಿಲುವಿನ ಬಗ್ಗೆ ಅಧಿಕೃತ ಸಾರ್ವಜನಿಕ ಹೇಳಿಕೆ ನೀಡಿದೆ. ಪಾಕಿಸ್ತಾನ ಹಕ್ಕಾನಿಗಳು ಸೇರಿದಂತೆ ತಾಲಿಬಾನಿಗಳಿಗೆ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನದ ವಿರುದ್ಧ ಅಮೆರಿಕ ಸಿಡಿದೆದ್ದಿದೆ.

ಕಳೆದ ಇಪ್ಪತ್ತು ವರ್ಷಗಳಲ್ಲಿ ಪಾಕಿಸ್ತಾನದ ಪಾತ್ರ ಹಾಗೂ ಮುಂದಿನ ದಿನಗಳಲ್ಲಿ ನಾವು ನೋಡಬೇಕಿರುವಂತೆ ಪಾಕಿಸ್ತಾನದ ನಿಲುವುಗಳು ಹಾಗೂ ಅದಕ್ಕಾಗಿ ಪಾಕಿಸ್ತಾನ ಏನು ನಡೆ ತೆಗೆದುಕೊಳ್ಳುತ್ತದೆ ಇದು ಮುಂದಿನ ದಿನಗಳಲ್ಲಿ ಅಥವಾ ವಾರಗಳಲ್ಲಿ ನಾವು ನಿರೀಕ್ಷಿಸುತ್ತಿರುವ ವಿಚಾರ ಎಂದು ಬ್ಲಿಂಕನ್ ಹೇಳಿದ್ದಾರೆ.

ಪಾಕಿಸ್ತಾನವು ತಾಲಿಬಾನಿಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಹಾಗೂ ತಾಲಿಬಾನಿಗಳಿಗೆ ಪಾಕ್ ಪ್ರೋತ್ಸಾಹ ನೀಡುತ್ತಿದೆ ಎಂಬ ಅಮೆರಿಕಾ ಆರೋಪವನ್ನು ಇಸ್ಲಾಮಾಬಾದ್ ತಳ್ಳಿಹಾಕಿದೆ. 2001 ರಲ್ಲಿ ಅಮೆರಿಕಾವು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಹಿರಿಯ ತಾಲಿಬಾನ್ ನಾಯಕರು ಪಾಕಿಸ್ತಾನಕ್ಕೆ ಕೂಡ ಪಲಾಯನ ಗೈದಿದ್ದಾರೆ ಹಾಗೂ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.

20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಬೀಡು ಬಿಟ್ಟಿದ್ದ ಅಮೆರಿಕ ಸೇನೆ  ಅಫ್ಘಾನಿಸ್ತಾನದಿಂದ ತಾಯ್ನಾಡಿಗೆ ವಾಪಾಸಾಗಿತ್ತು. ಈ ಹಿನ್ನೆಲೆಯಲ್ಲಿ ಕಾಬೂಲ್ ಏರ್​ಪೋರ್ಟ್​ನಲ್ಲಿ ತಾಲಿಬಾನ್ ಸಂಭ್ರಮಾಚರಣೆ ಮಾಡಿತ್ತು. ಹಲವು ತಿಂಗಳಿನಿಂದ ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೈನಿಕರನ್ನು ಸ್ಥಳಾಂತರ ಮಾಡುತ್ತಿತ್ತು. ಕಾಬೂಲನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಆಗಸ್ಟ್ 31ರ ಒಳಗೆ ಅಮೆರಿಕದ ಸೈನಿಕರು ಅಫ್ಘಾನಿಸ್ತಾನವನ್ನು ತೊರೆಯಬೇಕೆಂದು ತಾಲಿಬಾನ್ ಗಡುವು ನೀಡಿತ್ತು.

ಆ ಗಡುವು ಮುಗಿಯುವುದರೊಳಗೆ ಅಮೆರಿಕ ಸೈನಿಕ ಪಡೆ ಅಫ್ಘಾನಿಸ್ತಾನದಿಂದ ಕಾಲ್ಕಿತ್ತಿತ್ತು. ಈ ಹಿನ್ನೆಲೆಯಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ತಾಲಿಬಾನ್ ತನ್ನ ಸಂತೋಷವನ್ನು ಹಂಚಿಕೊಂಡಿತ್ತು. ಅಮೆರಿಕದ ಸೋಲಿನಿಂದ ಬೇರೆ ದೇಶಗಳು ಕೂಡ ಪಾಠ ಕಲಿಯಲಿ. ಇದು ಇಡೀ ಅಫ್ಘಾನಿಸ್ತಾನಕ್ಕೆ ಸಂದ ಗೆಲುವು ಎಂದು ಘೋಷಿಸಿಕೊಂಡಿತ್ತು.

ಇದನ್ನೂ ಓದಿ: Geopolitics: ತಾಲಿಬಾನ್ ಅಧಿಕಾರ ಸ್ವೀಕಾರ ಸಮಾರಂಭಕ್ಕೆ 6 ದೇಶಗಳಿಗೆ ಆಹ್ವಾನ, ಅಫ್ಘಾನಿಸ್ತಾನದ ಭವಿಷ್ಯದ ಮೇಲೆ ಪ್ರಭಾವಿ ದೇಶಗಳ ನೆರಳು

ಇದನ್ನೂ ಓದಿ: ಅಫ್ಘಾನಿಸ್ತಾನ ಅಕ್ಕಪಕ್ಕದ ದೇಶಗಳಿಗೆ ಆತಂಕ ತರಬಾರದು: ಬ್ರಿಕ್ಸ್​ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ

Click on your DTH Provider to Add TV9 Kannada