ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಪರಿಹಾರಕ್ಕಾಗಿ ಇಲ್ಲಿದೆ ಕೆಲವು ಸಲಹೆಗಳು
ಕಿಡ್ನಿ ಸ್ಟೋನ್ ನೋವು ತಡೆಯಲಾರದಷ್ಟು ಭೀಕರವಾಗಿರುತ್ತದೆ. ಔಷಧಿಗಳು ಮತ್ತು ನೈಸರ್ಗಿಕ ವಸ್ತುಗಳ ಸಹಾಯದಿಂದ ಸಣ್ಣ ಮೂತ್ರಪಿಂಡದ ಕಲ್ಲುಗಳನ್ನು ತೆಗೆಯಬಹುದಾಗಿದೆ.
ಜೀವನ ಶೈಲಿಯಲ್ಲಿ ಬದಲಾವಣೆ ಮತ್ತು ಆಹಾರ ಪದ್ಧತಿಯಲ್ಲಿನ ವ್ಯತ್ಯಾಸ ಆರೋಗ್ಯದಲ್ಲಿ ಏರು ಪೇರು ಉಂಟು ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಜನರನ್ನು ಹೆಚ್ಚು ಕಾಡುತ್ತಿದೆ. ಕಲ್ಲು ಪಿತ್ತಕೋಶದಲ್ಲಿದ್ದರೆ ಶಸ್ತ್ರ ಚಿಕಿತ್ಸೆ ಹೊರತುಪಡಿಸಿ ಬೇರೆ ಪರಿಹಾರವಿಲ್ಲ. ಮೂತ್ರಪಿಂಡದಲ್ಲಿ ದೊಡ್ಡ ಗಾತ್ರದ ಕಲ್ಲು ಇದ್ದರೆ, ಆಗಲೂ ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳಬಹುದಾದ ಪರಿಸ್ಥಿತಿ ಬರಬಹುದು. ಕಿಡ್ನಿ ಸ್ಟೋನ್ ನೋವು ತಡೆಯಲಾರದಷ್ಟು ಭೀಕರವಾಗಿರುತ್ತದೆ. ಔಷಧಿಗಳು ಮತ್ತು ನೈಸರ್ಗಿಕ ವಸ್ತುಗಳ ಸಹಾಯದಿಂದ ಸಣ್ಣ ಮೂತ್ರಪಿಂಡದ ಕಲ್ಲುಗಳನ್ನು ತೆಗೆಯಬಹುದಾಗಿದೆ.
ಒಂದು ಲೋಟ ತೆಂಗಿನ ನೀರಿನ ಜತೆಗೆ ಅರ್ಧದಷ್ಟು ಲಿಂಬೆ ಹಣ್ಣನ್ನು ಮಿಶ್ರಣ ಮಾಡಿ ಸೇವಿಸಿದರೆ ಸಣ್ಣ ಕಲ್ಲು ಮೂತ್ರದ ಮೂಲಕ ಹೊರಬರಲು ಸಹಾಯವಾಗುತ್ತದೆ.
ದೊಡ್ಡ ಏಲಕ್ಕಿ ಪುಡಿಯನ್ನು ಚೆನ್ನಾಗಿ ಪುಡಿ ಮಾಡಿ. ನಂತರ ಒಂದು ಲೋಟ ನೀರಿಗೆ 1 ಚಮಚ ಏಲಕ್ಕೆ ಪುಡಿ ಮತ್ತು ಕಲ್ಲಂಗಡಿ ಬೀಜಗಳನ್ನು ಸೇರಿಸಿ ರಾತ್ರಿ ನೆನೆಸಿಡಿ. ಬೆಳಿಗ್ಗೆ ಆ ನೀರನ್ನು ಕುಡಿಯಿರಿ ಮತ್ತು ಕಲ್ಲಂಗಡಿ ಬೀಜವನ್ನೂ ಸಹ ಅಗಿದು ಸೇವಿಸಿ. ಕೆಲವೇ ದಿನಗಳಲ್ಲಿ ಕಲ್ಲು ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂಲಂಗಿಯನ್ನು ತಿನ್ನುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹಗಲಿನಲ್ಲಿ ಸಾಕಷ್ಟು ನೀರು ಕುಡಿಯಿರಿ. ಇದರಿಂದ ಕಿಡ್ನಿ ಸ್ಟೋನ್ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಆ್ಯಪಲ್ ವಿನೆಗರ್ನಲ್ಲಿ ಸಿಟ್ರಿಕ್ ಆಮ್ಲವಿದೆ. ಇದು ಮೂತ್ರಪಿಂಡದಲ್ಲಿರುವ ಕಲ್ಲುಗಳನ್ನು ಸಣ್ಣ ಭಾಗಗಳನ್ನಾಗಿ ತುಂಡು ಮಾಡಲು ಸಹಾಯ ಮಾಡುತ್ತದೆ. ಎರಡು ಚಮಯ ವಿನೆಗರ್ಅನ್ನು ಬೆಚ್ಚಗಿನ ನೀರಿನೊಂದಿಗೆ ಸೇವಿಸುವುದರಿಂದ ಕಲ್ಲಿನ ಸಮಸ್ಯೆಗೆ ಉತ್ತಮ ಪರಿಹಾರ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ:
Bone Health: ಮೂಳೆಗಳ ಕಾಳಜಿಗಾಗಿ ಈ ಹಣ್ಣುಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ
(Home remedies for can get rid of the problem of kidney stones pain)