ಪೊರಕೆ ಸ್ಟಿಕ್ ಲಕ್ಷ್ಮೀ ದೇವಿಗೆ ಸಮಾನ ಎಂಬ ಮಾತಿದೆ. ಮನೆಯನ್ನು ಸ್ವಚ್ಛಗೊಳಿಸುವ ಪೊರಕೆಗೆ ಬಹಳ ಮಹತ್ವವಿದೆ. ಆದರೆ ಇದನ್ನು ಖರೀದಿ ಮಾಡುವುದಕ್ಕೆ ಮತ್ತು ಅದನ್ನು ಇರಿಸುವುದಕ್ಕೆ ಕೆಲವು ನಿಯಮಗಳಿವೆ ಅದನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗುತ್ತದೆ. ಪೊರಕೆಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಪ್ರತಿದಿನ ನಾವು ಮನೆಯ ಮೂಲೆ ಮೂಲೆಯನ್ನು ಸ್ವಚ್ಛಗೊಳಿಸಲು ಪೊರಕೆಯನ್ನು ಬಳಸುತ್ತೇವೆ. ಹಾಗಾಗಿ ದಿನನಿತ್ಯ ನಾವು ಉಪಯೋಗ ಮಾಡುವ ಪೊರಕೆಯ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳಿವೆ. ಪೊರಕೆಯ ವಿಷಯದಲ್ಲಿ ತಿಳಿದೋ ತಿಳಿಯದೆಯೋ ಮಾಡುವ ತಪ್ಪುಗಳು ಮನೆಯಲ್ಲಿ ಹಣದ ನಷ್ಟಕ್ಕೆ ಕಾರಣವಾಗಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಪೊರಕೆಯ ವಿಷಯದಲ್ಲಿ ಅನುಸರಿಸಬೇಕಾದ ಕೆಲವು ನಿಯಮಗಳು ಇಲ್ಲಿವೆ.
ಪೊರಕೆಯನ್ನು ಶನಿವಾರ ಅಥವಾ ಮಂಗಳವಾರ ಖರೀದಿಸಬೇಡಿ. ಈ ತಪ್ಪನ್ನು ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆ ಉಂಟಾಗುತ್ತದೆ. ಹೊಸ ಪೊರಕೆ ಖರೀದಿಸಿ ತಂದ ಮೇಲೆ ಹಳೆಯದನ್ನು ಒಳ್ಳೆಯ ದಿನ ನೋಡದೆಯೇ ಎಸೆಯಬೇಡಿ, ಅದನ್ನು ಎಸೆಯುವಾಗಲೂ ಸರಿಯಾದ ಸಮಯ ಮತ್ತು ಉತ್ತಮ ದಿನವನ್ನು ನೋಡಿ ಮತ್ತು ಅದನ್ನು ಹೊರಹಾಕಿ. ಸರಿಯಾಗಿ ಇರದಂತಹ ಪೊರಕೆಗಳನ್ನು ಇಡುವುದು ಸೂಕ್ತವಲ್ಲ.
ಬುಧವಾರ, ಗುರುವಾರ ಅಥವಾ ಶುಕ್ರವಾರ ಪೊರಕೆ ಖರೀದಿಸಲು ಅನುಕೂಲಕರ ದಿನಗಳಾಗಿವೆ. ಈ ದಿನ ಖರೀದಿ ಮಾಡುವುದರಿಂದ, ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮನೆಯನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಿ ಆಗ ಮಾತ್ರ ಸಕಾರಾತ್ಮಕ ಶಕ್ತಿಯು ಮನೆಗೆ ಬರುತ್ತದೆ. ಲಕ್ಷ್ಮೀ ದೇವಿಯ ಅನುಗ್ರಹವೂ ಆಗುತ್ತದೆ. ಮನೆಯಲ್ಲಿ ಹಳೆಯ ವಸ್ತುಗಳು ಇದ್ದರೆ, ಲಕ್ಷ್ಮೀ ದೇವಿಯು ಕೋಪಗೊಳ್ಳುತ್ತಾಳೆ. ಆದ್ದರಿಂದ ಅವುಗಳನ್ನು ತೆಗೆದುಹಾಕುವುದು ಉತ್ತಮ.
ಇದನ್ನೂ ಓದಿ: ಕೈಗೆ ಹಚ್ಚಿದ ಮೆಹಂದಿಯ ಬಣ್ಣವು ಮಸುಕಾಗಿದೆಯೇ? ಬಣ್ಣ ತೆಗೆದು ಹಾಕಲು ಈ ಟಿಪ್ಸ್ ಪಾಲಿಸಿ
ಪೊರಕೆ ಯನ್ನು ನಿರ್ದಿಷ್ಟವಾಗಿ, ಹಣ ಮತ್ತು ಆಭರಣಗಳನ್ನು ಇಡುವ ಸ್ಥಳಗಳಲ್ಲಿಇಡಬಾರದು. ಜೊತೆಗೆ ಇದನ್ನು ಅಡುಗೆಮನೆಯಿಂದ ದೂರವಿಡಬೇಕು. ಪೊರಕೆಯನ್ನು ಕಾಲುಗಳಿಂದ ತುಳಿಯಬೇಡಿ. ಈ ರೀತಿ ಮಾಡಿದರೆ ಲಕ್ಷ್ಮೀ ದೇವಿಯು ಕೋಪಗೊಳ್ಳುತ್ತಾಳೆ ಎಂದು ಅನೇಕ ಜನರು ನಂಬುತ್ತಾರೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:28 pm, Sat, 19 October 24