AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೈಗೆ ಹಚ್ಚಿದ ಮೆಹಂದಿಯ ಬಣ್ಣವು ಮಸುಕಾಗಿದೆಯೇ? ಬಣ್ಣ ತೆಗೆದು ಹಾಕಲು ಈ ಟಿಪ್ಸ್ ಪಾಲಿಸಿ

ಭಾರತೀಯ ಸಂಸ್ಕೃತಿಯಲ್ಲಿ ಮೆಹಂದಿಗೆ ಬಹಳಷ್ಟು ಪ್ರಾಮುಖ್ಯತೆಯಿದೆ. ಮದುವೆ, ಶುಭ ಕಾರ್ಯ ಹಾಗೂ ಹಬ್ಬಹರಿದಿನಗಳಲ್ಲಿ ಮೆಹಂದಿಯೂ ಹೆಣ್ಣು ಮಕ್ಕಳ ಕೈಯನ್ನು ಅಂದವನ್ನು ಹೆಚ್ಚಿಸುತ್ತದೆ. ಮೆಹಂದಿಯನ್ನು ಹಚ್ಚಿದ ಒಂದೆರಡು ದಿನಗಳ ಆಕರ್ಷಕವಾಗಿ ಕಂಡರೂ ತದನಂತರದಲ್ಲಿ ಮಸುಕಾಗಲು ಪ್ರಾರಂಭಿಸುತ್ತದೆ. ಹೀಗಾದಾಗ ಕೈಗೆ ಹಚ್ಚಿದ ಮೆಹಂದಿಯನ್ನು ಸಂಪೂರ್ಣವಾಗಿ ತೆಗೆದುಹಾಕಲು ಟಿಪ್ಸ್ ಇಲ್ಲಿದೆ.

ಕೈಗೆ ಹಚ್ಚಿದ ಮೆಹಂದಿಯ ಬಣ್ಣವು ಮಸುಕಾಗಿದೆಯೇ? ಬಣ್ಣ ತೆಗೆದು ಹಾಕಲು ಈ ಟಿಪ್ಸ್ ಪಾಲಿಸಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Oct 19, 2024 | 5:12 PM

Share

ಬಹುತೇಕ ಹೆಣ್ಣು ಮಕ್ಕಳಿಗೆ ಕೈಗೆ ಮೆಹಂದಿ ಹಚ್ಚೋದಂದ್ರೆ ತುಂಬಾನೇ ಇಷ್ಟ. ಹೀಗಾಗಿ ಹಬ್ಬಗಳು ಬಂತೆಂದರೆ ಸಾಕು ಕೈ ತುಂಬಾ ಗೋರಂಟಿಯ ರಂಗು ಕೈಯ ಅಂದವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ, ಮದುವೆ ಸೇರಿದಂತೆ ಇನ್ನಿತ್ತರ ಶುಭ ಕಾರ್ಯಗಳಿಗೆ ಮೆಹಂದಿ ಹಚ್ಚಲೇ ಬೇಕು. ಆದರೆ ಇದನ್ನು ಹಚ್ಚಿದ ನಂತರ ನಾಲ್ಕು ದಿನಗಳವರೆಗೆ ಬಣ್ಣವು ಉತ್ತಮವಾಗಿರುತ್ತದೆ. ತದನಂತರದಲ್ಲಿ ಮಸುಕಾಗಲು ಪ್ರಾರಂಭಿಸುತ್ತದೆ. ಆಗ ಕೈ ನೋಡಲು ಅಷ್ಟು ಸುಂದರವಾಗಿ ಕಾಣುವುದಿಲ್ಲ. ಒಂದು ವೇಳೆ ನಿಮ್ಮ ಕೈಗೆ ಹಚ್ಚಿದ ಮೆಹಂದಿ ಬಣ್ಣ ಮಾಸಿದರೆ ಅಥವಾ ಮೆಹಂದಿ ವಿನ್ಯಾಸ ಚೆನ್ನಾಗಿ ಕಾಣುತ್ತಿಲ್ಲ ಎಂದಾದಲ್ಲಿ ಇದನ್ನು ಹೋಗಲಾಡಿಸಲು ಈ ಸಲಹೆಗಳು ಇಲ್ಲಿವೆ.

* ಮೊದಲು ಕೈಗಳಿಗೆ ಟೂತ್ ಪೇಸ್ಟ್ ಹಚ್ಚಿ ಮತ್ತು ಮೇಲೆ ಒಂದು ಚಿಟಿಕೆ ಸಕ್ಕರೆ ಹಾಕಿಕೊಂಡು ಕೈಗಳಿಂದ ಸ್ಕ್ರಬ್ ಮಾಡಿಕೊಳ್ಳಬೇಕು. ಈ ಟೂತ್‌ಪೇಸ್ಟ್ ಸಂಪೂರ್ಣವಾಗಿ ಒಣಗಿದ ಬಳಿಕ ಸ್ವಲ್ಪ ನೀರು ಹಾಕಿ ಐದು ನಿಮಿಷಗಳ ಕಾಲ ಉಜ್ಜುವುದರಿಂದ ಬಣ್ಣಗಳು ಹೋಗಿ, ಕೈಗಳು ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.

* ಮೆಹಂದಿಯ ಬಣ್ಣವನ್ನು ತೆಗೆದುಹಾಕಲು, ನಿಂಬೆ ರಸದೊಂದಿಗೆ ಬೇಕಿಂಗ್ ಸೋಡಾವನ್ನು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಅಂಗೈಗೆ ಹಚ್ಚಿ ಐದು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರದಲ್ಲಿ ಕೈಯನ್ನು ಉಜ್ಜಿಕೊಂಡರೆ ಮೆಹಂದಿ ವಿನ್ಯಾಸ ಅಥವಾ ಮೆಹಂದಿ ಬಣ್ಣವು ಇಲ್ಲದಂತಾಗುತ್ತದೆ.

ಮೆಹಂದಿ ಕೈಗೆ ಹಚ್ಚುವ ಮುನ್ನ ಈ ವಿಷಯ ತಿಳಿದಿರಲಿ

ಕಳಪೆ ಗುಣಮಟ್ಟದ ಮೆಹಂದಿಯನ್ನು ತರಬೇಡಿ. ಪ್ಯಾಕ್‌ ಮಾಡಿದ ದಿನಾಂಕವನ್ನು ಪರಿಶೀಲಿಸಿಕೊಳ್ಳಿ. ಸಾಧ್ಯವಾದಲ್ಲಿ ಮನೆಯಲ್ಲಿಯೇ ತಯಾರು ಮಾಡಿರುವ ಮೆಹಂದಿ ಆಯ್ಕೆ ಮಾಡಿಕೊಂಡರೆ ಉತ್ತಮ. ಮಾರುಕಟ್ಟೆಯಲ್ಲಿ ಸಿಗುವ ಕೋನ್ ಗಳಲ್ಲಿ ರಾಸಾಯನಿಕಗಳ ಬಳಕೆ ಮಾಡಿರುವುದರಿಂದ ಚರ್ಮಕ್ಕೆ ಹಾನಿಕಾರಕವಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ