Chanakya Niti : ಹೆಂಡತಿ ಮಕ್ಕಳೊಂದಿಗೆ ಅಪ್ಪಿ ತಪ್ಪಿಯಯೂ ಈ ರೀತಿ ನಡೆದುಕೊಳ್ಳಲೇಬಾರದಂತೆ
ಮನೆಯಲ್ಲಿ ಸದಾ ಸಂತೋಷವು ಹಾಳಾಗಲು ಪುರುಷನ ಈ ಕೆಲವು ತಪ್ಪುಗಳು ಕೂಡ ಕಾರಣವಾಗುತ್ತದೆ. ಹೀಗಾಗಿ ಚಾಣಕ್ಯ ಮನೆಯಲ್ಲಿರುವ ಗಂಡಸರು ತನ್ನ ಮಕ್ಕಳು ಮತ್ತು ಹೆಂಡತಿಯ ಮುಂದೆ ಮಾಡಬಾರದ ಕೆಲಸಗಳ ಬಗ್ಗೆ ತಿಳಿಸಿದ್ದಾನೆ. ಈ ತಪ್ಪುಗಳು ಕುಟುಂಬದ ನೆಮ್ಮದಿ ಹಾಗೂ ಸಂತೋಷವನ್ನೇ ಹಾಳು ಮಾಡುತ್ತದೆ. ಹೀಗಾಗಿ ಈ ತಪ್ಪುಗಳನ್ನು ಆಗದಂತೆ ನಿಗವಹಿಸುವುದು ಮುಖ್ಯ.
ಪ್ರತಿಯೊಬ್ಬರು ತಮ್ಮ ಕುಟುಂಬದಲ್ಲಿ ಖುಷಿ ಸಂತೋಷವೇ ತುಂಬಿರಬೇಕು ಎಂದು ಬಯಸುತ್ತಾರೆ. ಹೀಗಾಗಿ ಖುಷಿ, ನೆಮ್ಮದಿ ಇದ್ದರೆ, ವ್ಯಕ್ತಿ ತನ್ನ ಬದುಕಿನಲ್ಲಿ ಅರ್ಧ ಯಶಸ್ಸು ಕಂಡಂತೆ. ಹೀಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ಕುಟುಂಬ ಸದಸ್ಯರ ನಗು, ಸಂತೋಷ ಕಾಪಾಡುವುದು ಅತ್ಯವಶ್ಯಕ. ಯೋಚಿಸದೇ ಆಗುವ ಕೆಲವು ಕೆಲಸದಿಂದ ಸಹಜವಾಗಿ ಮನೆಯ ಸದಸ್ಯರ ನೆಮ್ಮದಿಯೇ ಹಾಳಾಗುತ್ತದೆ. ಹೀಗಾಗಿ ಪುರುಷರು ಈ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಎಚ್ಚರಿಕೆಯನ್ನು ಚಾಣಕ್ಯ ನೀಡುತ್ತಾನೆ.
- ಪದ ಬಳಕೆಯ ಮೇಲೆ ಎಚ್ಚರವಿರಲಿ : ಮನೆಯ ಸದಸ್ಯರು, ಪತ್ನಿ ಹಾಗೂ ಮಕ್ಕಳ ಜೊತೆಗೆ ಪುರುಷರು ಸದಾ ಪ್ರೀತಿಯಿಂದ ಸಂವಹನ ನಡೆಸಬೇಕು. ಜೋರಾಗಿ, ಗದರುವ ಮಾತುಗಳು ಮನೆ ಮಂದಿಯ ಮನಸ್ಸನ್ನು ನೋಯಿಸುತ್ತದೆ. ಇತರರ ಮುಂದೆ ಮಾತನಾಡುವಾಗ ಪದ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸುವುದು ಕೂಡ ಅತ್ಯಗತ್ಯ. ಒಂದು ವೇಳೆ ಮಾತು ಮಿತಿ ಮೀರಿದರೆ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಹೀಗಾಗಿ ಮಾತಿನ ಮೇಲೆ ಹಿಡಿತವನ್ನು ಕಳೆದುಕೊಳ್ಳಬಾರದು ಎನ್ನುತ್ತಾನೆ ಚಾಣಕ್ಯ.
- ಯಾರೊಂದಿಗೂ ಅನುಚಿತವಾಗಿ ವರ್ತಿಸಬೇಡಿ : ಆಚಾರ್ಯ ಚಾಣಕ್ಯರು ಹೇಳುವಂತೆ ನಾವು ಏನು ಹೇಳಿದರೂ, ಏನು ಮಾಡಿದರೂ ಅದನ್ನು ಮಕ್ಕಳು ಅನುಸರಿಸುತ್ತಾರೆ. ನಮ್ಮ ನಡೆನುಡಿಯೂ ಕುಟುಂಬದವರ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಯಾರ ಮುಂದೆಯೂ ನಿಂದನೀಯ ಪದಗಳನ್ನು ಬಳಸಬಾರದು. ಅನುಚಿತವಾಗಿ ವರ್ತಿಸುವುದು ಕೂಡ ಸಲ್ಲದು. ಇದು ಪುರುಷರ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರುತ್ತದೆ.
- ನಿಮ್ಮಲ್ಲಿ ಅಶಿಸ್ತು ಇರಬಾರದು: ನಿಮ್ಮ ಮನೆಯ ವಾತಾವರಣವನ್ನು ನೀವು ಆಹ್ಲಾದಕರವಾಗಿಡಲು ಬಯಸಿದರೆ, ನೀವೇ ಶಿಸ್ತನ್ನು ಅನುಸರಿಸಬೇಕು ಎನ್ನುತ್ತಾನೆಚಾಣಕ್ಯ. ಆಗ ಮಾತ್ರ ನಿಮ್ಮ ಹೆಂಡತಿ ಮತ್ತು ಮಕ್ಕಳು ಮನೆಯ ಯಜಮಾನನ್ನು ಅನುಸರಿಸುತ್ತಾರೆ. ಹ ಮನೆಯವರೊಂದಿಗೆ ಸೌಜನ್ಯದಿಂದ ಮಾತನಾಡಿದರೆ ಸಂತೋಷವು ತುಂಬಿರುತ್ತದೆ.
- ಸುಳ್ಳು ಹೇಳಬೇಡಿ : ಪ್ರತಿಯೊಬ್ಬ ಗಂಡಸರು ಈ ತಪ್ಪನ್ನು ಮಾಡಬಾರದು. ನೀವು ಹೇಳುವ ಸುಳ್ಳು ನಿಮ್ಮನ್ನು ಆ ತಕ್ಷಣಕ್ಕೆ ಆ ಸನ್ನಿವೇಶದಿಂದ ಪಾರು ಮಾಡಬಹುದು. ಹೇಳುವ ಸುಳ್ಳು ಹೆಂಡತಿ ಮಕ್ಕಳಿಗೆ ನೋವುಂಟು ಮಾಡುತ್ತದೆ. ಏಕೆಂದರೆ ತೀಕ್ಷ್ಣವಾದ, ಕೆಟ್ಟ ಮಾತುಗಳು ಮಕ್ಕಳ ಮತ್ತು ಪ್ರೀತಿಪಾತ್ರರ ಆತ್ಮ ವಿಶ್ವಾಸವನ್ನು ಕಡಿಮೆ ಮಾಡುತ್ತದೆ. ಅದಲ್ಲದೇ ಎಷ್ಟೋ ಸಂಬಂಧಗಳು ಮುರಿದು ಬೀಳಲು ಈ ಸುಳ್ಳುಗಳೇ ಕಾರಣವಾಗಿರಬಹುದು. ಹೀಗಾಗಿ ಈ ಪುರುಷರು ಆದಷ್ಟು ಈ ಬಗ್ಗೆ ಗಮನ ಕೊಡುವುದು ಬಹಳ ಮುಖ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ