ಕುಟುಂಬ ಸದಸ್ಯರಲ್ಲಿ ಯಾವುದೇ ವಾಗ್ವಾದಗಳಿಲ್ಲದೆ ಸದಾ ಸಂತೋಷವಾಗಿರಬೇಕು ಅಂದರೆ ಮನೆಯಲ್ಲಿನ ವಸ್ತುಗಳು ಸರಿಯಾಗಿರಬೇಕು ಎಂದು ವಾಸ್ತು ಪಂಡಿತರು ಹೇಳುತ್ತಾರೆ. ಮನೆಯಲ್ಲಿ ಕೇವಲ ವಾಸ್ತು ದೋಷಗಳಿದ್ದರೆ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದರಿಂದಾಗಿ ಕುಟುಂಬ ಸದಸ್ಯರ ನಡುವೆ ನಿತ್ಯ ಜಗಳ ನಡೆಯುತ್ತಲೇ ಇರುತ್ತದೆ. ವಿಶೇಷವಾಗಿ ಮನೆಯ ಸ್ನಾನಗೃಹದಲ್ಲಿಯೂ (Bathroom) ವಾಸ್ತುವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಪಂಡಿತರು ಹೇಳುತ್ತಾರೆ. ಸ್ನಾನಗೃಹದಲ್ಲಿನ ವಾಸ್ತು ದೋಷಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗುತ್ತದೆ. ಆದರೆ, ವಾಶ್ ರೂಮ್ (Washroom) ನಲ್ಲಿರುವ ಸಣ್ಣಪುಟ್ಟ ನಕಾರಾತ್ಮಕ ದೋಷಗಳನ್ನು ಕೆಲವು ಸರಳ ಸಲಹೆಗಳನ್ನು (Vastu Tips) ಅನುಸರಿಸಿ ಸರಿಪಡಿಸಬಹುದು ಎನ್ನುತ್ತಾರೆ ತಜ್ಞರು. ಬಾತ್ರೂಮ್ನಲ್ಲಿನ ವಿವಿಧ ವಾಸ್ತು ದೋಷಗಳನ್ನು ಹೇಗೆ ಪರಿಶೀಲಿಸುವುದು ಎಂದು ಈಗ ಕಂಡುಹಿಡಿಯೋಣ.
* ವಾಸ್ತು ಶಾಸ್ತ್ರದ ಪ್ರಕಾರ ಬಾತ್ ರೂಂನಲ್ಲಿ ಉಪ್ಪನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ನಿಮ್ಮ ಬಾತ್ ರೂಮಿನ ಒಂದು ಮೂಲೆಯಲ್ಲಿ ಉಪ್ಪಿನ ಬಟ್ಟಲನ್ನು ಇರಿಸಿ, ಪ್ರತಿ ತಿಂಗಳೂ ಅದನ್ನು ಬದಲಿಸುತ್ತಿರಿ. ಹೀಗೆ ಮಾಡುವುದರಿಂದ, ಯಾವುದೇ ದೋಷಗಳನ್ನು ತೊಡೆದುಹಾಕಬಹುದು
* ಬಾತ್ ರೂಮ್ ನಲ್ಲಿ ಅಳವಡಿಸಿರುವ ಬಕೆಟ್ ಗಳ ಬಗ್ಗೆಯೂ ಎಚ್ಚರಿಕೆ ವಹಿಸುವಂತೆ ತಜ್ಞರು ಹೇಳುತ್ತಾರೆ. ವಾಸ್ತು ದೋಷಗಳು ದೂರವಾಗಬೇಕು ಅಂದರೆ.. ನೀಲಿ ಬಣ್ಣದ ಬಕೆಟ್ ಇಡುವಂತೆ ಸೂಚಿಸಲಾಗಿದೆ. ಸ್ನಾನಗೃಹದಲ್ಲಿ ನೀಲಿ ಬಣ್ಣದ ಬಕೆಟ್ ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
Also Read: ವಿವಿಧ ರಾಶಿಯವರಿಗೆ ಸರಿಹೊಂದುವ ಉದ್ಯೋಗಾವಕಾಶಗಳು ಹೀಗಿವೆ ನೋಡಿ
* ಬಾತ್ ರೂಂನಲ್ಲಿ ಗಾಢ ಬಣ್ಣದ ಟೈಲ್ಸ್ ಇರಬಾರದು. ಬಾತ್ರೂಮ್ನಲ್ಲಿ ತಿಳಿ ಬಣ್ಣದ ಟೈಲ್ಸ್ ಅನ್ನು ಹಾಕಿಸಲು ಯಾವಾಗಲೂ ಸಲಹೆ ನೀಡಲಾಗುತ್ತದೆ.
* ಹಾಗೆಯೇ ಬಾತ್ ರೂಂನಲ್ಲಿರುವ ಟಬ್ ಅಥವಾ ಬಕೆಟ್ ನಲ್ಲಿ ನೀರು ಇರುವಂತೆ ಯಾವಾಗಲೂ ನೋಡಿಕೊಳ್ಳಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಅವುಗಳನ್ನು ಖಾಲಿ ಇಡುವುದು ವಾಸ್ತು ದೋಷಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
* ಸ್ನಾನಗೃಹದ ದಿಕ್ಕನ್ನು ಉತ್ತರ ಅಥವಾ ಪೂರ್ವಕ್ಕೆ ಮಾತ್ರ ಇಡಬೇಕು ಎನ್ನುತ್ತಾರೆ ವಾಸ್ತು ತಜ್ಞರು.
* ಅಗತ್ಯವಿಲ್ಲದಿದ್ದಾಗ ಸ್ನಾನದ ಟ್ಯಾಪ್ ತೆರೆಯಬಾರದು. ವಾಸ್ತು ಪ್ರಕಾರ ಉತ್ತರ ದಿಕ್ಕಿಗೆ ಸ್ನಾನ ಮಾಡಬೇಕು. ಬಾತ್ ರೂಂನಲ್ಲಿರುವ ನಲ್ಲಿಯಿಂದ ನೀರು ಸೋರದಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ವಾಸ್ತುತಜ್ಞರು.