Success Story: ಹಳೇ ಶೂಸ್ ಮಾರಿ ಕೋಟಿ-ಕೋಟಿ ಗಳಿಸಿದ 23 ವರ್ಷದ ಯುವಕ!

ವೇದಾಂತ ಲಂಬಾ ಅವರ ಕಂಪನಿಯು ಈಗ ಸ್ನೀಕರ್ಸ್, ಟಿ-ಶರ್ಟ್‌ಗಳು ಮತ್ತು ಹೂಡೀಸ್ ಸೇರಿದಂತೆ 3000 ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಮುಂಬೈ ಮೂಲದ ಈ ಸ್ಟಾರ್ಟಪ್‌ನ ಮಾಸಿಕ ಆದಾಯ 5 ಕೋಟಿ ರೂ. ದಾಟಿದೆ.

Success Story: ಹಳೇ ಶೂಸ್ ಮಾರಿ ಕೋಟಿ-ಕೋಟಿ ಗಳಿಸಿದ 23 ವರ್ಷದ ಯುವಕ!
ವೇದಾಂತ ಲಂಬಾ

Updated on: Sep 01, 2023 | 6:57 PM

‘ಮನಸ್ಸಿದ್ದರೆ ಮಾರ್ಗ’ ಎಂಬ ಮಾತು ಸುಳ್ಳಲ್ಲ. ವೇದಾಂತ ಲಂಬಾ (Vedanta Lamba) ಎಂಬ ಯುವಕನೊಬ್ಬ ಓದಲು ಇಷ್ಟವಿಲ್ಲದೆ ಅರ್ಧದಲ್ಲೇ ಕಾಲೇಜು ಬಿಟ್ಟಿದ್ದರು. ಆ ಬಳಿಕ 2017ರಲ್ಲಿ ಲೈಫ್​ಸ್ಟೈಲ್​ನ ಯೂಟ್ಯೂಬ್ ಚಾನೆಲ್ ಒಂದನ್ನು ಪ್ರಾರಂಭಿಸಿದರು. ಸುಮ್ಮನೆ ಟೈಂಪಾಸ್​ಗೆಂದು ಯೂಟ್ಯೂಬ್ ಚಾನೆಲ್ ಮಾಡಿದ್ದ ಅವರು ನಂತರ ಆನ್​ಲೈನಲ್ಲೇ ಸ್ನೀಕರ್ಸ್ ಮರುಮಾರಾಟ ಮಾಡುವ ಕೆಲಸ ಶುರು ಮಾಡಿದರು. 23 ವರ್ಷದ ಈ ಯುವಕ 100 ಕೋಟಿ ರೂ. ಮೌಲ್ಯದ ಸ್ನೀಕರ್ಸ್​ ಮಾರಿ 24 ಕೋಟಿ ರೂ. ಹಣ ಸಂಪಾದನೆ ಮಾಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.

ಮೇನ್‌ಸ್ಟ್ರೀಟ್ ಮಾರ್ಕೆಟ್‌ಪ್ಲೇಸ್ (Mainstreet Marketplace) ಎಂಬ ಆನ್‌ಲೈನ್ ಸ್ನೀಕರ್ ಶಾಪ್ ಆರಂಭಿಸಿದ ವೇದಾಂತ ಇದೀಗ ಕೋಟ್ಯಧಿಪತಿಯಾಗಿದ್ದಾರೆ. ಕೇವಲ 23 ವರ್ಷದಲ್ಲೇ ಯಶಸ್ವಿ ಉದ್ಯಮಿಯಾಗಿರುವ ವೇದಾಂತ ಅವರಿಗೆ ರಣಬೀರ್ ಕಪೂರ್, ಕರಣ್ ಜೋಹರ್ ಸೇರಿದಂತೆ ಅನೇಕ ಸೆಲೆಬ್ರಿಟಿ ಗ್ರಾಹಕರಿದ್ದಾರೆ.

ಇದನ್ನೂ ಓದಿ: Soros Successor: ಅಪ್ಪನನ್ನು ಮೀರಿಸುವ ಮಗ; ಉದಾರ ದಾನಿ ಜಾರ್ಜ್ ಸೋರೋಸ್ ಸಾಮ್ರಾಜ್ಯ ಮಗನ ಕೈಗೆ; ಅಪ್ಪನಿಗಿಂತ ಹೆಚ್ಚು ರಾಜಕೀಯ ಗುರಿಕಾರ ಮಗ

ವೇದಾಂತ ಲಂಬಾ ಅವರ ಕಂಪನಿಯು ಈಗ ಸ್ನೀಕರ್ಸ್, ಟಿ-ಶರ್ಟ್‌ಗಳು ಮತ್ತು ಹೂಡೀಸ್ ಸೇರಿದಂತೆ 3000 ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಮುಂಬೈ ಮೂಲದ ಈ ಸ್ಟಾರ್ಟಪ್‌ನ ಮಾಸಿಕ ಆದಾಯ 5 ಕೋಟಿ ರೂ. ದಾಟಿದೆ. ರಣಬೀರ್ ಕಪೂರ್, ರಣವೀರ್ ಸಿಂಗ್ ಮತ್ತು ಕರಣ್ ಜೋಹರ್ ಅವರಂತಹ ಸೆಲೆಬ್ರಿಟಿಗಳು ತಮ್ಮ ಗ್ರಾಹಕರಾಗಿದ್ದರು ಎಂದು ವೇದಾಂತ ಲಂಬಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Post Office: ಭಾರತದ ಅಂಚೆ ಕಚೇರಿ ಮತ್ತು ಯುಪಿಐ ವ್ಯವಸ್ಥೆ ವಿಶ್ವಕ್ಕೆ ಮಾದರಿ ಎಂದ ಯೂನಿವರ್ಸಲ್ ಪೋಸ್ಟಲ್ ಯೂನಿಯನ್​ನ ಮಸಾಹಿಕೋ ಮೆಟೋಕಿ

ಈ ಕಂಪನಿಯು ಮುಂಬೈ, ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್ ಸೇರಿದಂತೆ ಇಲ್ಲಿಯವರೆಗೆ 50,000 ಸ್ನೀಕರ್‌ಗಳನ್ನು ಮಾರಾಟ ಮಾಡಿದೆ. ಈ ಕಂಪನಿಯು ಮುಂಬೈನಲ್ಲಿ ಎರಡು ಅಂಗಡಿಗಳನ್ನು ಹೊಂದಿದೆ. ಹಾಗೇ, ದೆಹಲಿಯಲ್ಲೂ ಒಂದು ಮಳಿಗೆಯನ್ನು ಹೊಂದಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:55 pm, Fri, 1 September 23

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us