Best Hindu Boy Baby names starting with O: “ಓ” ಅಕ್ಷರದಲ್ಲಿ ಮಗುವಿಗೆ ಹೆಸರಿಡಲು ಬಯಸಿದ್ದೀರಾ? ಇಲ್ಲಿದೆ ನೋಡಿ ಅರ್ಥಪೂರ್ಣ ಹೆಸರು

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 23, 2023 | 4:15 PM

ನಾವು ಯಾರೆಂಬುವುದನ್ನು ವ್ಯಾಖ್ಯಾನಿಸುವಲ್ಲಿ ನಮ್ಮ ಹೆಸರು ಪ್ರಮುಖ ಪಾತ್ರ ವಹಿಸುತ್ತದೆ. ಜನನದ ನಂತರ ಅಧೀಕೃತವಾಗಿ ಹೆಸರಿಸುವ ಹೆಸರುಗಳೇ ನಮ್ಮ ಮೂಲ ಗುರುತಾಗಿರುತ್ತದೆ. ಪೋಷಕರು ಯಾವಾಗಲೂ ತಮ್ಮ ಮಗುವಿಗೆ ವಿಶಿಷ್ಟವಾದ ಹಾಗೂ ಅರ್ಥರ್ಪೂವಾದ ಹೆಸರನ್ನಿಡಲು ಬಯಸುತ್ತಾರೆ. ಅರ್ಥಪೂರ್ಣವಾದ ಅದೆಷ್ಟೋ ಹೆಸರುಗಳಿವೆ. ಆದರೆ ಓ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳು ಅಷ್ಟಾಗಿ ಇಲ್ಲ. ಇನ್ನೂ ಮಗುವಿನ ರಾಶಿ, ನಕ್ಷತ್ರಗಳಿಗೆ ಅನುಗುಣವಾಗಿ ಓ ಅಕ್ಷರದ ಅರ್ಥಪೂರ್ಣವಾದ ಹೆಸರಿಡಲು ಬಯಸುತ್ತೀರಾ? ಇಲ್ಲಿವೆ ಕೆಲವು ಓ ಅಕ್ಷರದಿಂದ ಪ್ರಾರಂಭವಾಗುವ ಗಂಡು ಮಗುವಿನ ಅರ್ಥಪೂರ್ಣವಾದ ಹೆಸರುಗಳು.

Best Hindu Boy Baby names starting with O: ಓ ಅಕ್ಷರದಲ್ಲಿ ಮಗುವಿಗೆ ಹೆಸರಿಡಲು ಬಯಸಿದ್ದೀರಾ? ಇಲ್ಲಿದೆ ನೋಡಿ ಅರ್ಥಪೂರ್ಣ ಹೆಸರು
ಸಾಂದರ್ಭಿಕ ಚಿತ್ರ
Follow us on

ಪ್ರತಿಯೊಬ್ಬರೂ ತಮ್ಮ ಮಗುವಿಗೆ ವಿಶಿಷ್ಟವಾದ ಹಾಗೂ ಸುಂದರವಾದ ಹೆಸರನ್ನು ಇಡಲು ಬಯಸುತ್ತಾರೆ. ಮಗುವಿನ ನಾಮಕರಣದ ದಿನ ಅಧೀಕೃತವಾಗಿ ಹೆಸರಿಡುವ ಹೆಸರುಗಳೇ ಆ ಮಗುವಿನ ಮೂಲ ಗುರುತಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಮತ್ತು ವೇದ ಪುರಾಣಗಳಲ್ಲಿನ ವಿಶಿಷ್ಟ ಹೆಸರುಗಳನ್ನಿಡುವುದು ಜನಪ್ರಿಯವಾಗಿದೆ. ಇನ್ನೂ ಹಿಂದೂ ಸಂಪ್ರದಾಯದಲ್ಲಿ ಮಕ್ಕಳಿಗೆ ಹೆಸರಿಡುವ ಮೊದಲು ಜ್ಯೋತಿಷ್ಯಿಗಳ ಬಳಿ ಸಲಹೆ ತೆಗೆದುಕೊಂಡು ಮಗುವಿನ ರಾಶಿ, ನಕ್ಷತ್ರಗಳಿಗೆ ಅನುಗುಣವಾಗಿ ಯಾವ ಅಕ್ಷರ ಸೂಕ್ತ ಎಂದೆನಿಸುತ್ತದೆಯೋ ಆ ಅಕ್ಷರದ ಹೆಸರುಗಳನ್ನು ಮಗುವಿಗೆ ಹೆಸರನ್ನಿಡಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ರೋಹಿನಿ ನಕ್ಷತ್ರ ಹಾಗೂ ವೃಷಭ ರಾಶಿಯಲ್ಲಿ ಜನಿಸಿದಂತಹ ಮಗುವಿಗೆ “ಓ, ವ, ವಿ” ಅಕ್ಷರಗಳಿಂದ ಹೆಸರನ್ನಿಡಲು ಸೂಚಿಸಲಾಗುತ್ತದೆ. ಆದರೆ ವಿಶೇಷವಾಗಿ ಒ ಅಕ್ಷರದಲ್ಲಿ ಮಗುವಿಗೆ ಅಷ್ಟಾಗಿ ಯಾರು ಹೆಸರಿಡುವುದಿಲ್ಲ, ಯಾಕೆಂದರೆ ಓ ಅಕ್ಷದಲ್ಲಿನ ಹೆಸರುಗಳ ಬಗ್ಗೆ ಅನೇಕರಿಗೆ ಅಷ್ಟಾಗಿ ತಿಳಿದಿಲ್ಲ. ನಿಮ್ಮ ಅಥವಾ ನಿಮ್ಮ ಕುಟುಂಬದಲ್ಲಿ ಜನಿಸಿದ ಗಂಡು ಮಗುವಿಗೆ ಓ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನಿಡಲು ಬಯಸಿದರೆ ಇಲ್ಲಿವೆ ಕೆಲವು ಅರ್ಥಪೂರ್ಣವಾದ ಹೆಸರುಗಳು.

ಇದನ್ನೂ ಓದಿ: ಗಂಡು ಮಗುವಿಗಾಗಿ ಸಾಂಪ್ರದಾಯಿಕ ಸ್ಟೈಲಿಶ್ ಹೆಸರುಗಳು ಇಲ್ಲಿವೆ

ಓ ಅಕ್ಷರದಿಂದ ಪ್ರಾರಂಭವಾಗುವ ಅರ್ಥಪೂರ್ಣವಾದ ಗಂಡು ಮಗುವಿನ ಹೆಸರುಗಳು:

ಓಂ: ಈ ಹೆಸರಿನ ಅರ್ಥ ಸೃಷ್ಟಿ ಮತ್ತು ಯೋಗ

ಓಂಕಾರ್: ಪವಿತ್ರ ಮೂಲ ಮಂತ್ರ

ಓಜಸ್ : ಈ ಹೆಸರು ದೇಹದ ಶಕ್ತಿ, ಬೆಳಕು, ಚೈತನ್ಯ ಎಂಬ ಅರ್ಥವನ್ನು ನೀಡುತ್ತದೆ.

ಓಜಸ್ಯ: ಈ ಹೆಸರು ಬಲವಾದ, ಶಕ್ತಿಯುತ ಎಂಬ ಅರ್ಥವನ್ನು ನಿಡುತ್ತದೆ.

ಓಜೈತ್ : ಎಂದರೆ ಧೈರ್ಯಶಾಲಿ ಎಂದರ್ಥ

ಓಮಲ್: ಈ ಹೆಸರು ಮೃದು ಸ್ವಭಾವದ ಎಂಬ ಅರ್ಥವನ್ನು ಸೂಚಿಸುತ್ತದೆ.

ಓಜಸ್ವಿನ್ : ಹೊಳಪುಳ್ಳ ಅಥವಾ ಹೊಳೆಯುವ ಎಂಬ ಅರ್ಥವನ್ನು ಸೂಚಿಸುತ್ತದೆ.

ಓನಿಶ್: ಶ್ರೀಕೃಷ್ಣ ದೇವರ ಹೆಸರಾಗಿದೆ.

ಓಂದೇವ್ : ಈ ಹೆಸರು ಶಿವ ದೇವರ ನಾಮಧೇಯವಾಗಿದೆ.

ಓವಿಯನ್ : ಕಲಾವಿದ ಎಂಬ ಅರ್ಥವನ್ನು ಸೂಚಿಸುತ್ತದೆ.

ಓಂಸ್ವರೂಪ್ : ದೈವತ್ವದ ಅಭಿವ್ಯಕ್ತಿ, ದೈವತ್ವ ಸ್ವರೂಪದ ಅರ್ಥವನ್ನು ಈ ಹೆಸರು ಸೂಚಿಸುತ್ತದೆ.

ಓಮಾದಿತ್ಯ : ಎಂದರೆ ಸೂರ್ಯನ ಅಧಿಪತಿ

ಓನಿಲ್ : ಈ ಹೆಸರು ಗಾಳಿ ಎಂಬ ಅರ್ಥವನ್ನು ಸೂಚಿಸುತ್ತದೆ.

ಓಹಾಸ್ : ಎಂದರೆ ಪ್ರಶಂಸೆ ಎಂದರ್ಥ

ಓಹಿತ್ : ಈ ಹೆಸರು ಬುದ್ಧಿವಂತ ಎಂಬ ಅರ್ಥವನ್ನು ಸೂಚಿಸುತ್ತದೆ.

ಓಜಸ್ವತ್ : ಎಂದರೆ ಶಕ್ತಿಯುತ ಎಂದರ್ಥ

ಓಜೈತ್ : ಧೈರ್ಯಶಾಲಿ ಎಂಬ ಅರ್ಥವನ್ನು ಸೂಚಿಸುತ್ತದೆ.

ಓವಿನ್ : ಈ ಹೆಸರು ಬುಧ್ಧಿವಂತ ಎಂಬ ಅರ್ಥವನ್ನು ಸೂಚಿಸುತ್ತದೆ.

ಓಜಾಲ್ : ಎಂದರೆ ದೃಷ್ಟಿ

ಓಮ್ರಾವ್ : ಈ ಹೆಸರು ರಾಜ ಎಂಬ ಅರ್ಥವನ್ನು ಸೂಚಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 4:14 pm, Fri, 23 June 23