ಮನೆಗೆ ಬಣ್ಣ ಬಣ್ಣದ ಪೈಂಟ್ ಬಳಿಯುವ ಮೊದಲು, ವಿಷಕಾರಿ ಬಣ್ಣಗಳ ಹಾನಿಕಾರಕ ಪರಿಣಾಮಗಳನ್ನು ತಿಳಿದುಕೊಳ್ಳಿ
ಮನೆಯ ಅಂದವನ್ನು ಹೆಚ್ಚಿಸಲು ಬಣ್ಣ ಬಣ್ಣದ ಪೈಂಟ್ಗಳನ್ನು ಬಳಿಯಲಾಗುತ್ತದೆ. ಆದರೆ ಈ ಕೆಮಿಕಲ್ಯುಕ್ತ ಬಣ್ಣಗಳನ್ನು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮವನ್ನುಂಟು ಮಾಡುತ್ತದೆ ಎಂಬುದು ಈ ಲೇಖನದಲ್ಲಿ ತಿಳಿದುಕೊಳ್ಳಿ.
ಪತ್ರಿಯೊಬ್ಬರಿಗೂ ನಮ್ಮ ಮನೆ ಸುಂದವಾಗಿ ಕಾಣಬೇಕು ಎಂಬ ಕನಸಿರುತ್ತದೆ. ಅದರಂತೆಯೇ ಪಿಠೋಪಕರಣದಿಂದ ಹಿಡಿದು ಗೋಡೆಯ ಬಣ್ಣದ ವರೆಗೂ ವಿಭಿನ್ನವಾಗಿ ಅಲಂಕಾರವನ್ನು ಮಾಡಲಾಗುತ್ತದೆ. ಸಾಮಾನ್ಯವಾಗಿ ಮನೆಯ ಅಂದವನ್ನು ಹೆಚ್ಚಿಸಲು ಬಣ್ಣ ಬಣ್ಣದ ಪೈಂಟ್ಗಳನ್ನು ಬಳಿಯಲಾಗುತ್ತದೆ. ಆದರೆ ಈ ಕೆಮಿಕಲ್ಯುಕ್ತ ಬಣ್ಣಗಳು(Toxic Paints) ಗಳನ್ನು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ ಎಂದು ಡಾ. ಬಾಲಸುಬ್ರಮಣಿಯನ್ ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಇನ್ನು ಮುಂದೆ ಬಣ್ಣಗಳನ್ನು ಆಯ್ಕೆ ಮಾಡುವ ಮುನ್ನ ತಜ್ಞರು ನೀಡಿರುವ ಸಲಹೆಗಳನ್ನು ಪಾಲಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಿ.
ಬಣ್ಣವು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ನೀವು ಬಣ್ಣಕ್ಕೆ ಒಡ್ಡಿಕೊಂಡಾಗ, ಅದು ನಿಮ್ಮ ಕಣ್ಣು, ಮೂಗು ಅಥವಾ ಗಂಟಲಿನ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು. ಬಣ್ಣದ ಹೊಗೆ ಹಾಗೂ ಸುವಾಸನೆ ಉಸಿರಾಟದ ಸಮಸ್ಯೆಗೆ ಕಾರಣವಾಗಬಹುದು. ಇದು ಕೆಮ್ಮು, ಉಬ್ಬಸ, ಉಸಿರಾಟದ ತೊಂದರೆ ಮತ್ತು ಎದೆಯ ಬಿಗಿತದಂತಹ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ. ಕೆಲವು ರಾಸಾಯನಿಕಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶ, ಯಕೃತ್ತು ಮತ್ತು ಮೂತ್ರಪಿಂಡಗಳಿಗೆ ಹಾನಿಯಾಗಬಹುದು ಎಂದು ಡಾ. ಬಾಲಸುಬ್ರಮಣಿಯನ್ ಫೈನಾಶಿಯಲ್ ಎಕ್ಸ್ ಪ್ರೆಸ್ನ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Kempe Gowda Jayanti 2023: ರಾಜ್ಯಾದ್ಯಂತ ಜೂ.27ರಂದು ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ
ಬಣ್ಣ ಅಥವಾ ರಾಸಾಯನಿಕಗಳಿಗೆ ಒಡ್ಡಿಕೊಳ್ಳುವುದರಿಂದ ಚರ್ಮದ ಕಿರಿಕಿರಿ,ತುರಿಕೆ ಮತ್ತು ದದ್ದುಗಳಿಗೆ ಕಾರಣವಾಗುವುದರ ಜೊತೆಗೆ ಕಣ್ಣಿನ ಅಲರ್ಜಿ ಅಥವಾ ದೃಷ್ಟಿ ನಷ್ಟಕ್ಕೆ ಕಾರಣವಾಗಬಹುದು ಎಂದು ಎಚ್ಚರ ನೀಡಿದ್ದಾರೆ. ಪೇಂಟ್‌ಗಳಲ್ಲಿ ಕಂಡುಬರುವ ಕೆಲವು ವಿಷಕಾರಿ ರಾಸಾಯನಿಕಗಳು, ಉದಾಹರಣೆಗೆ ಸೀಸ, ಪಾದರಸ, ಕ್ಸೈಲೀನ್‌ನಂತಹ ದ್ರಾವಕಗಳು ನರಮಂಡಲದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಇದು ತಲೆನೋವು, ತಲೆತಿರುಗುವಿಕೆ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳಂತಹ ರೋಗಲಕ್ಷಣಗಳನ್ನು ಉಂಟುಮಾಡಬಹುದು ಎಂದು ಅವರು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: