ಬೆಳಗ್ಗೆ ಎದ್ದ ಬಳಿಕ ಈ ಕೆಲಸ ಮಾಡಿದ್ರೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು ಖಂಡಿತ

ದಿನದ ಆರಂಭ ಚೆನ್ನಾಗಿದ್ದರೆ, ಆ ಸಂಪೂರ್ಣ ದಿನವೇ ಸಕಾರಾತ್ಮಕವಾಗಿರುತ್ತದೆ. ಬೆಳಗ್ಗೆ ಬೆಳಗ್ಗೆ ಜಡತ್ವ ಇದ್ದರೆ ದಿನ ಪೂರ್ತಿ ನಿರುತ್ಸಾಹವೇ ತುಂಬಿರುತ್ತದೆ. ಹಾಗಾಗಿ ಬೆಳಗ್ಗೆ ಎದ್ದ ಬಳಿಕ ಮೊಬೈಲ್‌ ನೋಡುತ್ತಾ ಟೈಮ್‌ ವೇಸ್ಟ್‌ ಮಾಡುವ ಬದಲು ಈ ಒಂದಷ್ಟು ಕೆಲಸಗಳನ್ನು ಮಾಡಿ. ಇದು ನಿಮ್ಮ ದಿನವನ್ನು ಸಕಾರಾತ್ಮಕವಾಗಿರಿಸುವುದು ಮಾತ್ರವಲ್ಲದೆ ಈ ಆಭ್ಯಾಸದಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ವೃದ್ಧಿಸುತ್ತದೆ.

ಬೆಳಗ್ಗೆ ಎದ್ದ ಬಳಿಕ ಈ ಕೆಲಸ ಮಾಡಿದ್ರೆ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಾಗುವುದು ಖಂಡಿತ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Aug 16, 2025 | 9:25 AM

ಬೆಳಗ್ಗಿನ ವಾತಾವರಣವೇ (Morning Environrment) ಒಂದು ರೀತಿ ಚೆನ್ನಾಗಿರುತ್ತದೆ. ಸೂರ್ಯನ ಕಿರಣ, ತಂಪಾಗಿ ಬೀಸುವ ಗಾಳಿ, ಹಕ್ಕಿಗಳ ಚಿಲಿಪಿಲಿ, ಪ್ರಶಾಂತವಾದ ವಾತಾವರಣ ಇವೆಲ್ಲದರ ಕಾರಣ ಬೆಳಗ್ಗಿನ ಸಮಯ ತುಂಬಾನೇ ಸಕಾರಾತ್ಮಕತೆಯಿಂದ (Positivity) ಕೂಡಿರುತ್ತದೆ. ಹೀಗಿರುವಾಗ ಬೆಳಗ್ಗೆ ನೀವು ದಿನವನ್ನು ಪ್ರಾರಂಭಿಸುವ ವಿಧಾನವು ನಿಮ್ಮ ಇಡೀ ದಿನದ ದಿಕ್ಕನ್ನು ನಿರ್ಧರಿಸುತ್ತದೆ. ಹೌದು ಸಕಾರಾತ್ಮಕವಾಗಿ ದಿನವನ್ನು ಆರಂಭಿಸಿದರೆ ದಿನವಿಡೀ ಉತ್ಸಾಹದಿಂದ ಇರುತ್ತೀರಿ. ಅದೇ ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ನೋಡುತ್ತಾ ಜಡತ್ವದಿಂದ ದಿನ ಪ್ರಾರಂಭಿಸಿದರೆ, ಆ ಸಂಪೂರ್ಣ ದಿನವೇ ನಿರುತ್ಸಾಹದಿಂದ ಕೂಡಿರುತ್ತದೆ. ಹಾಗಾಗಿ ಬೆಳಗ್ಗೆ ಬೇಗ ಏಳುವುದರ ಜೊತೆಗೆ ಈ ಕೆಲವೊಂದಿಷ್ಟು ಅಭ್ಯಾಸಗಳನ್ನು ರೂಢಿಸಿಕೊಳ್ಳಿ. ಇದು ನಿಮ್ಮ ದಿನವನ್ನು ಸಕಾರಾತ್ಮಕವಾಗಿ ಇರಿಸುವುದು ಮಾತ್ರವಲ್ಲದೆ, ಇದರಿಂದ ನಿಮ್ಮ ದೈಹಿಕ, ಮಾನಸಿಕ ಆರೋಗ್ಯವೂ ವೃದ್ಧಿಸುತ್ತದೆ.

ಬೆಳಗ್ಗೆ ಈ ಕೆಲಸ ಮಾಡಿದರೆ ದಿನವಿಡೀ ಸಕಾರಾತ್ಮಕವಾಗಿರುತ್ತದೆ:

ಈ ಮಂತ್ರವನ್ನು ಪಠಿಸಿ: ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಅಂಗೈಯನ್ನು ನೋಡುತ್ತಾ ‘ಕರಾಗ್ರೇ ವಾಸತೇ ಲಕ್ಷ್ಮಿ, ಕರಮಧ್ಯೇ  ಸರಸ್ವತಿ, ಕರಮೂಲೇ ಸ್ಥಿತೇ ಬ್ರಹ್ಮ ಪ್ರಭಾತೇ ಕರದರ್ಶನಂ’ ಎಂಬ ಮಂತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ ನಿಮ್ಮ ದಿನ ಸಕಾರಾತ್ಮಕತೆಯೊಂದಿಗೆ ಆರಂಭವಾಗುತ್ತದೆ.

ದೇವರ ಪೂಜೆ ಮಾಡಿ: ಬೆಳಗ್ಗೆ ಬೇಗನೆ ಎದ್ದು, ಫ್ರೆಶ್‌ ಆದ ಬಳಿಕ ದೇವರನ್ನು ಪೂಜಿಸಿ. ಹೀಗೆ ಬೆಳಗ್ಗೆ ಬೇಗ ಏಳುವುದರಿಂದ ದಿನವಿಡೀ ತಾಜಾತನದಿಂದ ಕೂಡಿರುತ್ತದೆ. ಅದೇ ರೀತಿ ನಿಮ್ಮ ಮಾನಸಿಕ ಶಾಂತಿ ವೃದ್ಧಿಸುತ್ತದೆ. ಜೊತೆಗೆ ಧ್ಯಾನ ಮಾಡಿ.  ಇದನ್ನು ಮಾಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ, ಏಕಾಗ್ರತೆ ಹೆಚ್ಚಾಗುತ್ತದೆ ಮಾನಸಿಕ ಶಾಂತಿ ಲಭಿಸುತ್ತದೆ.

ಇದನ್ನೂ ಓದಿ
ಬೆಳಗ್ಗೆ, ಸಂಜೆ; ಯಾವ ಸಮಯದಲ್ಲಿ ವಾಕಿಂಗ್‌ ಮಾಡಿದರೆ ಉತ್ತಮ?
ಬೆಳಗ್ಗಿನ ಉಪಹಾರದ ಸಮಯದಲ್ಲಿ ಈ ಕೆಲವು ಆಹಾರಗಳನ್ನು ತಿನ್ನಲೇಬೇಡಿ
ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳುವುದರಿಂದ ಏನಾಗುತ್ತೆ ಗೊತ್ತಾ?
ಸ್ನಾನ ಮಾಡುವಾಗ ದೇಹದ ಈ ಭಾಗಗಳನ್ನು ಸ್ವಚ್ಛಗೊಳಿಸಲು ಮರೆಯದಿರಿ

ನೈಸರ್ಗಿಕ ಬೆಳಕು ಪಡೆಯಿರಿ:  ಬೆಳಗ್ಗೆ ಎದ್ದ ತಕ್ಷಣ ಕೋಣೆಯ ಕಿಟಕಿ ತೆರೆಯಿರಿ. ಇಲ್ಲವೇ ನೀವೇ ಹೊರಗೆ ಹೋಗಿ ಪ್ರಕೃತಿಯೊಂದಿಗೆ ಸಮಯ ಕಳೆಯಿರಿ. ಹೀಗೆ ಸೂರ್ಯನ ಬೆಳಕು ಮೈ ಮೇಲೆ ಬೀಳುವುದರಿಂದ ದೇಹಕ್ಕೆ ಶಕ್ತಿ ತುಂಬುತ್ತದೆ. ಜೊತೆಗೆ ಇದರಿಂದ ಆಲಸ್ಯವೂ ಹೋಗಿ, ದಿನವಿಡೀ ನೀವು ಚೈತನ್ಯಶೀಲರಾಗಿ ಇರುತ್ತೀರಿ.

ಇದನ್ನೂ ಓದಿ: ಬೆಳಗ್ಗೆ, ಸಂಜೆ; ಯಾವ ಸಮಯದಲ್ಲಿ ವಾಕಿಂಗ್‌ ಮಾಡಿದರೆ ಉತ್ತಮ?

ನೀರು ಕುಡಿಯಿರಿ: ರಾತ್ರಿ ಮಲಗಿದ ನಂತರ ದೇಹವು ಸ್ವಲ್ಪ ನಿರ್ಜಲೀಕರಣಗೊಳ್ಳುತ್ತದೆ, ಇದರಿಂದಾಗಿ ಕೆಲವೊಮ್ಮೆ ಬೆಳಿಗ್ಗೆ ಆಯಾಸದ ಅನುಭವವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಇದನ್ನು ನಿವಾರಿಸಲು, ನೀವು ಎದ್ದ ತಕ್ಷಣ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ದೇಹದ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಮೆದುಳನ್ನು ಸಕ್ರಿಯಗೊಳಿಸುತ್ತದೆ.

ವ್ಯಾಯಾಮ ಮಾಡಿ: ನೀವು ಎದ್ದ ಬಳಿಕ ಕೆಲವು ನಿಮಿಷಗಳ ಕಾಲ ಲಘು ಸ್ಟ್ರೆಚಿಂಗ್, ಯೋಗ ಅಥವಾ ವ್ಯಾಯಾಮ ಮಾಡುವುದರಿಂದ ಆಲಸ್ಯ ದೂರವಾಗುತ್ತದೆ. ಇದು ಸ್ನಾಯುಗಳಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ, ಇದು ನಿಮ್ಮ ಆಲಸ್ಯವನ್ನು ಹೋಗಲಾಡಿಸಿ, ನೀವು ದಿನವಿಡೀ ಉತ್ಸಾಹಭರಿತರಾಗಿ ಇರುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ