Republic Day 2024: ಗಣರಾಜ್ಯೋತ್ಸವದಂದು ಧ್ವಜ ಅರಳಿಸುವಿಕೆ ಮತ್ತು ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ, ಈ ಎರಡು ಪದದ ಒಳಾರ್ಥವೇನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 26, 2024 | 11:47 AM

ದೇಶಾದ್ಯಂತ 75ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಧ್ವಜಾರೋಹಣ ನೆರವೇರಿದೆ. ಆದರೆ ಗಣರಾಜ್ಯೋತ್ಸವದಂದು, ರಾಷ್ಟ್ರಪತಿಗಳು ತ್ರಿವರ್ಣ ಧ್ವಜವನ್ನು ಅರಳಿಸುತ್ತಾರೆ. ಆದರೆ ದೇಶವು ಸ್ವಾತಂತ್ರ್ಯ ಪಡೆದಿರುವ ದಿನವಾದ ಆಗಸ್ಟ್ 15 ರಂದು ಪ್ರಧಾನ ಮಂತ್ರಿಗಳು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. ಈ ಎರಡು ದಿನವನ್ನು ರಾಷ್ಟ್ರೀಯ ದಿನವಾಗಿ ಆಚರಿಸಲಾಗುತ್ತಿದ್ದು, ಆದರೆ ಎರಡು ಪದಗಳ ಅರ್ಥವು ಭಿನ್ನವಾಗಿದ್ದು, ಒಳಅರ್ಥವನ್ನು ಹೊಂದಿದೆ.

Republic Day 2024: ಗಣರಾಜ್ಯೋತ್ಸವದಂದು ಧ್ವಜ ಅರಳಿಸುವಿಕೆ ಮತ್ತು ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ, ಈ ಎರಡು ಪದದ ಒಳಾರ್ಥವೇನು?
Follow us on

ಗಣರಾಜ್ಯೋತ್ಸವ ಎನ್ನುವುದು ಭಾರತೀಯರು ಹೆಮ್ಮೆ ಪಡುವ ದಿನ. 1950ರ ಜನವರಿ 26ರಂದು ಭಾರತದ ಸಂವಿಧಾನ ಜಾರಿಗೆ ಬಂದು ಭಾರತ ದೇಶವು ಗಣರಾಜ್ಯವಾದ ದಿನವಾಗಿದ್ದು, ಈ ದಿನವನ್ನು ಭಾರತೀಯರು ಬಹಳ ಸಂಭ್ರಮದಿಂದಲೇ ಆಚರಿಸುತ್ತಾರೆ. ಆದರೆ ಗಣರಾಜ್ಯೋತ್ಸವ ದಿನ ಧ್ವಜ ಅರಳಿಸುವುದು ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜವನ್ನು ಆರೋಹಣ ಮಾಡುವುದು. ಈ ಎರಡೂ ದಿನದಲ್ಲಿಯೂ ತ್ರಿವರ್ಣ ಧ್ವಜವನ್ನು ಇರಿಸುವ ರೀತಿ ಬೇರೆ ಬೇರೆಯಾಗಿದೆ.

ಭಾರತವು ಗಣರಾಜ್ಯವಾದ ದಿನ ಜನವರಿ 26ರಂದು, ತ್ರಿವರ್ಣ ಧ್ವಜವನ್ನು ಮಡಚಿ ಅಥವಾ ಸುತ್ತಿ ಕಂಬದ ಮೇಲ್ಭಾಗದಲ್ಲಿ ಜೋಡಿಸಲಾಗುತ್ತದೆ. ಕಂಬಕ್ಕೆ ಕಟ್ಟಿದ ದಾರ ಎಳೆದಾಗ ಧ್ವಜವು ಬಿಡಿಸಿಕೊಳ್ಳುತ್ತದೆ. ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳು ದಾರ ಎಳೆದು, ಧ್ವಜವನ್ನು ಅನಾವರಣಗೊಳಿಸುತ್ತಾರೆ. ಗಣರಾಜ್ಯೋತ್ಸವದಂದು ಧ್ವಜ ಅರಳಿಸುವುದು ಎನ್ನುವ ಪದವನ್ನು ಬಳಸಲಾಗುತ್ತದೆ. ʼಧ್ವಜ ಅರಳಿಸುವಿಕೆʼ ಎನ್ನುವ ಪದವು ಭಾರತವು ಬ್ರಿಟಿಷ್ ವಸಾಹತುಶಾಹಿಯಿಂದ ಹೊರ ಬಂದು, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಬದಲಾದ ದಿನ ಎನ್ನುವುದನ್ನು ಸೂಚಿಸುತ್ತದೆ.

ಇದನ್ನೂ ಓದಿ: 75ನೇ ಗಣರಾಜ್ಯೋತ್ಸವದಲ್ಲಿ ಹಲವು ವಿಶೇಷ! ಇಲ್ಲಿದೆ ವಿವರ

ಭಾರತವು ಬ್ರಿಟಿಷರ ದಾಸ್ಯದಿಂದ ಆಗಸ್ಟ್ 15ರಂದು ಸಂಪೂರ್ಣ ಮುಕ್ತವಾಗಿದ್ದು, ಈ ದಿನದಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನದಂದು ಧ್ವಜಸ್ತಂಭದ ಕೆಳಭಾಗದಲ್ಲಿ ಇರಿಸಲಾದ ತ್ರಿವರ್ಣ ಧ್ವಜವನ್ನು ಪ್ರಧಾನ ಮಂತ್ರಿಯವರು ಕೆಳಗಿನಿಂದ ಮೇಲಕ್ಕೆ ಏರಿಸುವ ಮೂಲಕ ಧ್ವಜಾರೋಹಣವನ್ನು ಮಾಡುತ್ತಾರೆ. ಸ್ವಾತಂತ್ರ್ಯ ದಿನದ ‘ಧ್ವಜಾರೋಹಣʼವು ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದಿರುವುದನ್ನು ಸೂಚಿಸುತ್ತದೆ. ಇದು ಹೊಸ ರಾಷ್ಟ್ರದ ಉದಯ ಎನ್ನುವ ಅರ್ಥವನ್ನು ನೀಡುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ