75ನೇ ಗಣರಾಜ್ಯೋತ್ಸವದಲ್ಲಿ ಹಲವು ವಿಶೇಷ! ಇಲ್ಲಿದೆ ವಿವರ
ಗಣತಂತ್ರದ ಪರೇಡ್ ಚಲನದ ಇತಿಹಾಸದಲ್ಲಿ ಮೊದಲ ಬಾರಿಗೆ ದೆಹಲಿ ಮಹಿಳಾ ಪೊಲೀಸರು ಭಾಗಿಯಾಗಲಿದ್ದಾರೆ. ಈ ತುಕಡಿಯಲ್ಲಿ ಸಂಪೂರ್ಣ ಮಹಿಳಾ ಪೊಲೀಸರು ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಲಿದ್ದಾರೆ. ಇದರೊಂದಿಗೆ ಇನ್ನಷ್ಟು ವಿಶೇಷಗಳಿಗೆ ಈ ಬಾರಿಯ ಗಣರಾಜ್ಯೋತ್ಸವ ಸಾಕ್ಷಿಯಾಗಲಿದೆ. ಅವುಗಳ ವಿವರ ಇಲ್ಲಿದೆ.
ನವದೆಹಲಿ, ಜನವರಿ 26: ದೇಶದಲ್ಲಿ 75ನೇ ಗಣರಾಜ್ಯೋತ್ಸವ (Republic Day 2024) ಸಂಭ್ರಮ ಮನೆ ಮಾಡಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ಪರೇಡ್ಗೆ ಕ್ಷಣಗಣನೆ ಶುರುವಾಗಿದೆ. ಕಳೆದ ಬಾರಿಯಂತೆ ಇಂದು ಕೂಡ ಗಣರಾಜ್ಯೋತ್ಸವ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ. ದೇಶದ ಮೂಲೆ ಮೂಲೆಯಲ್ಲಿಂದ ಗಣತಂತ್ರ ಸಂಭ್ರಮ ಮನೆ ಮಾಡಿದೆ. ಎಲ್ಲೆಲ್ಲೂ ಜನಗಣಮನ ಗುನುಗುತ್ತಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಂತೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸಂಸತ್ ಭವನ ಸೇರಿದಂತೆ ಸರ್ಕಾರಿ ಕಟ್ಟಡಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.
ಗಣತಂತ್ರ ಪರೇಡ್‌ನಲ್ಲಿ ನಾರಿಯರ ರಂಗು!
ಗಣತಂತ್ರದ ಪರೇಡ್ ಚಲನದ ಇತಿಹಾಸದಲ್ಲಿ ಮೊದಲ ಬಾರಿಗೆ ದೆಹಲಿ ಮಹಿಳಾ ಪೊಲೀಸರು ಭಾಗಿಯಾಗಲಿದ್ದಾರೆ. ಈ ತುಕಡಿಯಲ್ಲಿ ಸಂಪೂರ್ಣ ಮಹಿಳಾ ಪೊಲೀಸರು ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಲಿದ್ದಾರೆ. ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಥೀಮ್ ಅಡಿ 194 ಮಹಿಳಾ ಪೊಲೀಸರು ಪರೇಡ್ ಮಾಡಲಿದ್ದು, ಐಪಿಎಸ್ ಅಧಿಕಾರಿ ಶ್ವೇತಾ ಕೆ. ಸುಗತನ್ ಅವರು ಈ ಪಡೆಯನ್ನ ಮುನ್ನಡೆಸಲಿದ್ದಾರೆ.
75ನೇ ಗಣರಾಜ್ಯೋತ್ಸವವೂ ರಾಷ್ಟ್ರಪತಿ ಹಾಗೂ ಅವರ ಅಂಗರಕ್ಷಕರಿಗೆ ಮಹತ್ವದ ದಿನವಾಗಿದೆ.
ಅಂಗರಕ್ಷಕರಿಗೆ 250 ವರ್ಷ
250 ವರ್ಷಗಳ ಸೇವೆ ಪೂರೈಸಿರುವ ‘ಅಂಗರಕ್ಷಕರು’ 1773ರಲ್ಲಿ ಆರಂಭವಾದ ರಾಷ್ಟ್ರಪತಿ ಅಂಗರಕ್ಷಕ ದಳ ಇದೇ ಮೊದಲ ಬಾರಿ ರಾಷ್ಟ್ರಧ್ವಜ ಹಿಡಿದು ಸಾಗಲಿದ್ದಾರೆ. ರಾಷ್ಟ್ರಪತಿ ಭವನದಿಂದ ರಾಷ್ಟ್ರಪತಿಯವರನ್ನು ಅಂಗರಕ್ಷಕರು ಕರೆತರಲಿರಲಿದ್ದಾರೆ.
ದೇಶದಲ್ಲೇ ಅತ್ಯುತ್ತಮ ಅಶ್ವಾರೋಹಿಗಳು ಈ ಅಂಗರಕ್ಷಕರಾಗಿದ್ದಾರೆ.
ಸಾರೋಟಿನಲ್ಲಿ ರಾಷ್ಟ್ರಪತಿ ಆಗಮನ!
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಪ್ರಮುಖ ದಿನವಾಗಿದೆ. 40 ವರ್ಷದ ಬಳಿಕ ರಾಷ್ಟ್ರಪತಿಗಳು ಸಮಾರಂಭಕ್ಕೆ ಸಾರೋಟಿನಲ್ಲಿ ಬರಲಿದ್ದಾರೆ. ಅವರು ಕರ್ತವ್ಯ ಪಥದಲ್ಲಿ ಸಾರೋಟಿನಲ್ಲಿ ಸಾಗಲಿದ್ದಾರೆ. ಮಾಮೂಲಿಯಾಗಿ ಗಣರಾಜ್ಯೋತ್ಸವಕ್ಕೆ ವಿಶೇಷ ಕಾರಿನಲ್ಲಿ ರಾಷ್ಟ್ರಪತಿ ಆಗಮಿಸ್ತಿದ್ದರು.
ಇದನ್ನೂ ಓದಿ: ದೇಶವು ಅಮೃತ ಕಾಲದ ಆರಂಭಿಕ ವರ್ಷಗಳಲ್ಲಿದೆ, ಇದು ಪರಿವರ್ತನೆಯ ಸಮಯ: ದ್ರೌಪದಿ ಮುರ್ಮು
‘ಫ್ರೆಂಚ್ ವಿದೇಶಿ ಪಡೆ’ ಪಥಸಂಚಲನ
ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಫ್ರೆಂಚ್ ವಿದೇಶಿ ಪಡೆ ಭಾಗಿಯಾಗಲಿರುವುದು ಮತ್ತೊಂದು ವಿಶೇಷವಾಗಿದೆ. ಕ್ಯಾಪ್ಟನ್ ಖೌರ್ಡಾ ನೇತೃತ್ವದಲ್ಲಿ ಫ್ರೆಂಚ್ ಸೇನಾ ಬ್ಯಾಂಡ್ ಭಾಗಿಯಾಗಲಿದೆ. 30 ಮಂದಿ ಸಂಗೀತಗಾರರಿಂದ ರೆಜಿಮೆಂಟ್ ಗೀತೆ ಗಾಯನ ನಡೆಯಲಿದೆ. ಫ್ರಾನ್ಸ್ ಸೇನೆಯ ‘2ನೇ ಇನ್‌ಫ್ಯಾಂಟ್ರಿ’ ತುಕಡಿ ಪಥಸಂಚಲನ ನಡೆಸಲಿದ್ದು, ಕ್ಯಾಪ್ಟನ್ ನೋಯೆಲ್ ನೇತೃತ್ವದಲ್ಲಿ 90 ಮಂದಿ ಯೋಧರು ಭಾಗಿಯಾಗಲಿದ್ದಾರೆ.
ಕರ್ನಾಟಕ ಸೇರಿ ವಿವಿಧೆಡೆಯ ಜಾನಪದ ಕಲಾವಿದರು ಪರೇಡ್‌ನಲ್ಲಿ ಪ್ರದರ್ಶನ ನೀಡಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:01 am, Fri, 26 January 24