ಪ್ರೀತಿಯಲ್ಲಿ ಬೀಳುವ ಮೊದಲು ಜನರು ವಯಸ್ಸು ಮತ್ತು ಇತರ ವಿಯಗಳ ಬಗ್ಗೆ ಗಮನಹರಿಸುವುದಿಲ್ಲ. ಆದರೆ ಮದುವೆಯ ವಿಷಯಕ್ಕೆ ಬಂದಾಗ, ಪ್ರತಿಯೊಬ್ಬರೂ ತಮ್ಮ ಸಂಗಾತಿಯನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದರಿಂದ ಮದುವೆಯ ನಂತರದ ಜೀವನವು ಸುಖಮಯವಾಗಿರುತ್ತದೆ ಎಂಬ ಭಾವನೆಯಿದೆ. ಅದರಂತೆ ಮದುವೆಗೆ ಹುಡುಗ ಮತ್ತು ಹುಡುಗಿ ನಡುವಿನ ವಯಸ್ಸಿನ ಅಂತರವನ್ನು ಕೂಡಾ ಪ್ರಮುಖ ಅಂಶವೆಂದು ಪರಿಗಣಿಸಲಾಗುತ್ತದೆ. ದಂಪತಿಗಳ ನಡುವಿನ ಸರಿಯಾದ ವಯಸ್ಸಿನ ಅಂತರವು ಅವರ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ. ಹಾಗಾದರೆ ದಂಪತಿಗಳ ನಡುವಿನ ಪರಿಪೂರ್ಣ ವಯಸ್ಸಿನ ಅಂತರ ಎಷ್ಟಿರಬೇಕು ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತದೆ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ನೋಡೋಣ.
ಬಲವಾದ ಸಂಬಂಧಕ್ಕೆ ವಯಸ್ಸು ಮುಖ್ಯವಲ್ಲ ಪ್ರೀತಿ ಮತ್ತು ನಂಬಿಕೆ ಮುಖ್ಯವೆಂದು ಹೇಳಲಾಗುತ್ತದೆ. ಅಧುನಿಕತೆ ಮತ್ತು ಮುಕ್ತ ಮನಸ್ಸಿನ ಈ ಯುಗದಲ್ಲಿ ಸಂಬಂಧದಲ್ಲಿನ ವಯಸ್ಸಿನ ಅಂತರವು ಅಷ್ಟೇನೂ ಸಮಸ್ಯೆಯಾವುದಿಲ್ಲವಾದರೂ ವಿಜ್ಞಾನ ಮತ್ತು ತಜ್ಞರ ದೃಷ್ಟಿಕೋನದಿಂದ ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇರಬೇಕಾದರೆ ವಯಸ್ಸಿನ ಅಂತರವು ತುಂಬಾ ಮುಖ್ಯವಾಗುತ್ತದೆ. ಅದು ಹೇಗೆ ಎಂಬುದನ್ನು ನೋಡೋಣ.
ಇದನ್ನೂ ಓದಿ: ಸಂಸ್ಕೃತಿಯೇ ಗೊತ್ತಿಲ್ಲ!; ಮಗುವಿಗೆ ಜೇನುತುಪ್ಪ ಕೊಡಲ್ಲ ಎಂದಿದ್ದಕ್ಕೆ ಟ್ರೋಲ್ ಆದ ಸೋನಂ ಕಪೂರ್
ಅಟ್ಲಾಂಟಾದ ಎಮೋರಿ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಗಂಡ ಮತ್ತು ಹೆಂಡತಿಯ ನಡುವಿನ ಆದರ್ಶ ವಯಸ್ಸಿನ ಅಂತರವನ್ನು 3 ರಿಂದ 5 ವರ್ಷಗಳು ಎಂದು ಪರಿಗಣಿಸಲಾಗಿದೆ. ಈ ಸಂಶೋಧನೆಯ ಪ್ರಕಾರ, ಐದು ವರ್ಷ ವಯಸ್ಸಿನ ವ್ಯತ್ಯಾಸವಿರುವ ದಂಪತಿಗಳ ವಿಚ್ಛೇದನ ಸಾಧ್ಯತೆ ಶೇಕಡಾ 18 ಮಾತ್ರ.
ಗಂಡ ಮತ್ತು ಹೆಂಡತಿಯ ನಡುವೆ 10 ವರ್ಷ ವಯಸ್ಸಿನ ಅಂತರವಿದ್ದರೆ, ವಿಚ್ಛೇದನದ ಸಾಧ್ಯತೆಯು ಶೇಕಡಾ 39 ವರೆಗೆ ಇರುತ್ತದೆ. ದಂಪತಿಗಳ ನಡುವೆ 20 ವರ್ಷಗಳ ವಯಸ್ಸಿನ ಅಂತರವಿದ್ದರೆ, ವಿಚ್ಛೇದನದ ಸಾಧ್ಯತೆಯು ಶೇಕಡಾ 95 ಕ್ಕಿಂತ ಹೆಚ್ಚಿರುತ್ತದೆ. ಹಾಗಾಗಿ ಯಶಸ್ವಿ ದಾಂಪತ್ಯಕ್ಕೆ ಪತಿ ಮತ್ತು ಪತ್ನಿಯ ನಡುವೆ ಸರಿಯಾದ ವಯಸ್ಸಿನ ಅಂತರವಿರಬೇಕು. ವಯಸ್ಸಿನ ಅಂತರ ಹೆಚ್ಚಾದರೆ, ಇಬ್ಬರ ನಡುವಿನ ಮನಸ್ಥಿತಿಯ ಹೊಂದಾಣಿಕೆಯ ಕೊರತೆಯಿಂದಾಗಿ ಸಂಬಂಧ ಮುರಿಯುವ ಅಪಾಯ ಹೆಚ್ಚಿರುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: