
ಆಹಾರವು ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕೇಬೇಕು. ನೀರಿನಂತೆ ಆಹಾರವು ನಮ್ಮ ದೇಹಕ್ಕೆ ಮೂಲಭೂತ ಅವಶ್ಯಕತೆಯಾಗಿದೆ. ಇದು ನಮ್ಮ ಸಕ್ರಿಯರಾಗಿಲು, ಚೈತನ್ಯಶೀಲರಾಗಿರಲು ಸಹಾಯ ಮಾಡುತ್ತದೆ. ಅದೇ ಹೊಟ್ಟೆಗೆ ಸರಿಯಾಗಿ ಊಟ ಬೀಳದಿದ್ದರೆ ಅಥವಾ ಸಿಕ್ಕಾಪಟ್ಟೆ ಹಸಿದಾಗ (hungry) ಹೆಚ್ಚಿನವರಿಗೆ ಕಿರಿಕಿರಿ ಉಂಟಾಗುತ್ತದೆ, ಸಣ್ಣಪುಟ್ಟ ವಿಚಾರಗಳಿಗೂ ಕೋಪ ಬರುತ್ತದೆ. ಇದೇ ರೀತಿ ನಿಮಗೂ ಹಸಿವಾದಾಗ ಜಾಸ್ತಿ ಕೋಪ ಬರುತ್ತಾ? ಹಸಿದಾಗ ಕೋಪ ಬರೋದೇಕೆ, ಇದರ ಹಿಂದಿನ ವೈಜ್ಞಾನಿಕ ಕಾರಣವೇನು ಎಂಬುದರ ಸಂಪೂರ್ಣ ವಿವರವನ್ನು ತಿಳಿಯಿರಿ.
ನಾವು ಊಟ ಮಾಡದಿದ್ದಾಗ, ನಮ್ಮ ರಕ್ತದಲ್ಲಿನ ಸಕ್ಕರೆ ಕಡಿಮೆಯಾಗುತ್ತದೆ, ಇದು ನಮ್ಮನ್ನು ಕಿರಿಕಿರಿಗೊಳಿಸುತ್ತದೆ. ರಕ್ತದಲ್ಲಿನ ಸಕ್ಕರೆ ಕಡಿಮೆಯಾದಾಗ, ದೇಹವು ಗ್ಲೂಕೋಸ್ ಮಟ್ಟವನ್ನು ಸಾಮಾನ್ಯಗೊಳಿಸಲು ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮತ್ತು ಅಡ್ರಿನಾಲಿನ್ (ಅಪಾಯದ ಸಂದರ್ಭಗಳಲ್ಲಿ ಸಕ್ರಿಯಗೊಳ್ಳುವ ಹಾರ್ಮೋನ್) ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಈ ಎರಡೂ ವ್ಯಕ್ತಿಯ ಹೋರಾಟ ಅಥವಾ ಒತ್ತಡ, ಕೋಪದ ಸ್ಥಿತಿಯನ್ನು ಪ್ರಚೋದಿಸುವ ಹಾರ್ಮೋನುಗಳಾಗಿವೆ. ಈ ಹಾರ್ಮೋನ್ ಬಿಡುಗಡೆ ಕಾರಣದಿಂದಲೇ ಹೆಚ್ಚಿನವರು ಹಸಿವಾದಾಗ ಕೋಪಗೊಳ್ಳುವುದು. ಅಲ್ಲದೆ ದೇಹದಲ್ಲಿ ಗ್ಲೂಕೋಸ್ ಮಟ್ಟ ಕಡಿಮೆಯಾದ ತಕ್ಷಣ, ಮೆದುಳು ಒತ್ತಡಕ್ಕೊಳಗಾಗುತ್ತದೆ ಮತ್ತು ಮನಸ್ಥಿತಿ ಕಿರಿಕಿರಿಗೊಳ್ಳುತ್ತದೆ. ಇದೇ ಕಾರಣದಿಂದಲೇ ನಾವು ಹಸಿದಾಗ ಸುಲಭವಾಗಿ ಕೋಪಗೊಳ್ಳುವುದು.
ಹಸಿವಿನ ನಂತರ, ಕಿರಿಕಿರಿ ಹೆಚ್ಚಾಗುತ್ತದೆ, ಗಮನಹರಿಸಲು ಕಷ್ಟವಾಗುತ್ತದೆ. ತಲೆನೋವು ಅಥವಾ ಆಯಾಸ, ಹೆಚ್ಚಿದ ಹೃದಯ ಬಡಿತ, ನಿದ್ರೆ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಈ ಎಲ್ಲಾ ಸಂಕೇತಗಳು ನಿಮ್ಮ ದೇಹಕ್ಕೆ ಈಗ ಆಹಾರದ ಅಗತ್ಯವಿದೆ ಎಂದು ಸೂಚಿಸುತ್ತವೆ. ಆದರೆ ನೀವು ಅದನ್ನು ನಿರ್ಲಕ್ಷಿಸಿದರೆ, ನಿಮ್ಮ ಅಭ್ಯಾಸ ಕ್ರಮೇಣ ನಿಮ್ಮ ಮನಸ್ಥಿತಿ ಹದಗೆಡಲು ಕಾರಣವಾಗುತ್ತದೆ.
ಇದನ್ನೂ ಓದಿ: ಮೊಬೈಲ್ ಇಂಟರ್ನೆಟ್ ವ್ಯವಸ್ಥೆಯೇ ಇಲ್ಲದ ಜಗತ್ತಿನ ಏಕೈಕ ದೇಶವಿದು
ಹಸಿವಾಗಲು ಪ್ರಾರಂಭಿಸಿದಾಗ ಅದು ನಮ್ಮ ಭಾವನೆಗಳನ್ನು ಇನ್ನಷ್ಟು ಹದಗೆಡಿಸಬಹುದು. ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಸಿವಾದಾಗ ಗ್ಲೂಕೋಸ್ ಮಟ್ಟ ಕಡಿಮೆಯಾಗುತ್ತದೆ. ಗ್ಲೂಕೋಸ್ ಕೊರತೆಯು ನಮ್ಮ ಭಾವನೆಗಳು ಮತ್ತು ನಡವಳಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುವ ಮೆದುಳಿನ ಭಾಗದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಹಸಿದಾಗ ನಮ್ಮ ಭಾವನೆ ಹದಗೆಡುತ್ತವೆ. ಭಾವನೆಗಳನ್ನು ನಿರ್ವಹಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ, ಇದು ಸಣ್ಣ ವಿಷಯಗಳ ಮೇಲೂ ನಿಯಂತ್ರಣ ಕಳೆದುಕೊಳ್ಳಲು ಕಾರಣವಾಗುತ್ತದೆ.
ಹಾಗಾಗಿ ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ಸಣ್ಣ ಭಾಗಗಳಲ್ಲಿ ಊಟ ಮಾಡಬೇಕು, ಹಸಿವಾದ ತಕ್ಷಣ ಆರೋಗ್ಯಕ ಆಹಾರವನ್ನು ಸೇವಿಸಿ. ಆರೋಗ್ಯಕರ ಆಹಾರವು ನಿಮಿಷಗಳಲ್ಲಿ ನಿಮ್ಮನ್ನು ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ಹಸಿವನ್ನು ನಿಯಂತ್ರಿಸಲು ನೀವು ಹಣ್ಣುಗಳು ಅಥವಾ ಒಣಗಿದ ಹಣ್ಣುಗಳಂತಹ ಆರೋಗ್ಯಕರ ತಿನಿಸುಗಳನ್ನು ಸೇವಿಸಿ. ಪ್ರತಿ ಗಂಟೆಗೊಮ್ಮೆ ನೀರನ್ನು ಕುಡಿಯಿರಿ. ಇದು ದೇಹವನ್ನು ಹೈಡ್ರೇಟ್ ಆಗಿಡಲು ಕೂಡ ಸಹಾಯ ಮಾಡುತ್ತದೆ. ಯಾವುದೇ ಕಾರಣಕ್ಕೂ ಜಂಕ್ ಫುಡ್ ತಿನ್ನಲು ಹೋಗಬೇಡಿ, ಇವು ಆರೋಗ್ಯಕ್ಕೆ ಮತ್ತಷ್ಟು ಹಾನಿ ಮಾಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:11 pm, Mon, 8 June 26