ಆಕಳಿಕೆ ಏಕೆ ಉಂಟಾಗುತ್ತದೆ ಮತ್ತು ಅದು ಸಾಂಕ್ರಾಮಿಕವೇ?: ಆರೋಗ್ಯ ತಜ್ಞರು ಈ ಕುರಿತು ಏನು ಹೇಳುತ್ತಾರೆ

| Updated By: ಅಕ್ಷತಾ ವರ್ಕಾಡಿ

Updated on: Apr 30, 2023 | 1:10 PM

ಆಕಳಿಕೆಯನ್ನು ಸಾಮಾನ್ಯವಾಗಿ ದಣಿದ ಅಥವಾ ಪ್ರತಿಕ್ರಿಯೆ ಅಂತ ಹೇಳಲಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಈ ಚಟುವಟಿಕೆಯು ಮೆದುಳು ನಿಧಾನಗೊಂಡಾಗ ಮತ್ತು ದೇಹಕ್ಕೆ ಆಮ್ಲಜನಕ ಅಗತ್ಯವಿದೆ ಎಂದು ಸೂಚಿಸುವ ಪ್ರತಿಕ್ರಿಯೆಯಾಗಿದೆ. ಆಕಳಿಕೆ ಏಕೆ ಸಾಂಕ್ರಾಮಿಕವಾಗುತ್ತದೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮುಜುಗರವನ್ನು ತಪ್ಪಿಸಲು ನೀವು ಆಕಳಿಕೆ ಬಾರದಂತೆ ಹೇಗೆ ನೋಡಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.

ಆಕಳಿಕೆ ಏಕೆ ಉಂಟಾಗುತ್ತದೆ ಮತ್ತು ಅದು ಸಾಂಕ್ರಾಮಿಕವೇ?: ಆರೋಗ್ಯ ತಜ್ಞರು ಈ ಕುರಿತು ಏನು ಹೇಳುತ್ತಾರೆ
ಆಕಳಿಕೆ ಏಕೆ ಉಂಟಾಗುತ್ತದೆ?
Image Credit source: Quora
Follow us on

ಆಕಳಿಕೆಯು ನಿದ್ರೆಯ ಪೂರ್ವಭಾವಿಯಾಗಿದ್ದು, ಸಾಮಾನ್ಯವಾಗಿ ಜನರು ದಣಿದಾಗ ಅಥವಾ ಬೇಸರಗೊಂಡಾಗ ಆಕಳಿಸುತ್ತಾರೆ. ಇದು ಸಾಂಕ್ರಾಮಿಕವಾದದ್ದು ಎಂಬುದು ಜನಪ್ರಿಯ ಪರಿಕಲ್ಪನೆಯಾಗಿದೆ. ಒಬ್ಬ ವ್ಯಕ್ತಿ ಆಕಳಿಸುವುದನ್ನು ನೋಡಿದ ಮತ್ತೊಬ್ಬ ವ್ಯಕ್ತಿಯೂ ಹಾಗೆಯೇ ಆಕಳಿಸುತ್ತಾನೆ. ತಜ್ಞರ ಪ್ರಕಾರ ಆಕಳಿಕೆಯು ಮೆದುಳು ನಿಧಾನವಾಗುವುದಕ್ಕೆ ನಿಮ್ಮ ದೇಹದ ಪ್ರತಿಕ್ರಿಯೆಯಾಗಿದೆ. ಸಂಶೋಧನೆಯ ಪ್ರಕಾರ ಮೆದುಳಿನಿಂದ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಆಕಳಿಕೆ ಉಂಟಾಗುತ್ತದೆ. ಫಿಸಿಯಾಲಜಿ ಆಂಡ್ ಬಿಹೇವಿಯರ್ ಜರ್ನಲ್ ನಲ್ಲಿ ಪ್ರಕಟವಾದ ಅದ್ಯಯನವೊಂದರಲ್ಲಿ, 120 ಜನರ ಆಕಳಿಕೆ ಅಭ್ಯಾಸವನ್ನು ಅಧ್ಯಯನ ಮಾಡಲಾಯಿತು ಮತ್ತು ಈ ಆಕಳಿಕೆ ಚಳಿಗಾಲದಲ್ಲಿ ಕಡಿಮೆ ಸಂಭವಿಸುತ್ತದೆ ಎಂದು ಆ ಅಧ್ಯಯನ ಕಂಡುಹಿಡಿದಿದೆ. ಅಲ್ಲದೆ ಜನರು ಆಕಳಿಸಲು ಮತ್ತೊಂದು ಕಾರಣವೆಂದರೆ ದೇಹವು ಸ್ವತಃ ಎಚ್ಚರಗೊಳ್ಳಲು ಬಯಸುತ್ತದೆ ಆದ್ದರಿಂದ ಶ್ವಾಸಕೋಶಗಳು ಮತ್ತು ಅವುಗಳ ಅಂಗಾಶವನ್ನು ವಿಸ್ತರಿಸಲು ಆಕಳಿಕೆಯು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಆಕಳಿಕೆ ಸಾಂಕ್ರಾಮಿಕವೇ?

ಅಧ್ಯಯನಗಳ ಪ್ರಕಾರ, ಆಕಳಿಕೆಯು ಸಾಂಕ್ರಾಮಿಕವಾಗಿದೆ. ತಜ್ಞರು ಆಕಳಿಕೆಯನ್ನು ಎರಡು ವಿಧವಾಗಿ ವರ್ಗೀಕರಿಸುತ್ತಾರೆ. ಸ್ವತಃ ಸಂಭವಿಸುವ ಆಕಳಿಕೆ- ಇದನ್ನು ಸ್ವಯಂ ಪ್ರೇರಿತ ಆಕಳಿಕೆ ಎಂದು ಕರೆಯುತ್ತಾರೆ. ಇನ್ನೊಂದು ಬೆರೊಬ್ಬ ವ್ಯಕ್ತಿ ಆಕಳಿಸುವುದನ್ನು ನೋಡಿದ ನಂತರ ಉಂಟಾಗುವ ಆಕಳಿಕೆ- ತಜ್ಞರು ಇದನ್ನು ಸಾಂಕ್ರಾಮಿಕ ಆಕಳಿಕೆ ಎಂದು ಕರೆಯುತ್ತಾರೆ.
ಯಾರಾದರೂ ಆಕಳಿಸುವುದನ್ನು ಕಂಡು ನೀವು ಕೂಡಾ ಆಕಳಿಸಲು ಪ್ರಾರಂಭಿಸುತ್ತೀರಿ. ಇದನ್ನೇ ಸಾಂಕ್ರಾಮಿಕ ಆಕಳಿಕೆ ಎಂದು ಕರೆಯುತ್ತಾರೆ. ಒಂದು ಸಂಶೋಧನೆಯ ಪ್ರಕಾರ ಮೆದುಳಿನ ತಾಪಮಾನವನ್ನು ನಿಯಂತ್ರಿಸುವಲ್ಲಿ ಆಧಾರವಾಗಿರುವ ಕಾರ್ಯವಿಧಾನದಿಂದ ಸ್ವಾಭಾವಿಕ ಮತ್ತು ಸಾಂಕ್ರಾಮಿಕ ಆಕಳಿಕೆಗಳು ಉದ್ಭವಿಸುತ್ತದೆ. ಆದ್ದರಿಂದ ಅನೇಕ ಸಂಶೋದಕರು ಸಾಂಕ್ರಾಮಿಕ ಆಕಳಿಕೆಯು ಸರಳವಾದ ಒಂದು ಪ್ರಕ್ರಿಯೆಯಾಗಿದೆ ಎಂದು ಹೇಳುತ್ತಾರೆ. ಬೇರೊಬ್ಬರು ಆಕಳಿಸುವುದನ್ನು ನೋಡಿದ ನಂತರ ನೀವು ಆಕಳಿಸಿದರೆ, ನೀವಿಬ್ಬರೂ ಒಂದೇ ರೀತಿಯ ಹವಾಮಾನದೊಂದಿಗೆ ಒಂದೇ ಪ್ರದೇಶದಲ್ಲಿರುವ ಸಾಧ್ಯತೆ ಇರುತ್ತದೆ. ಪ್ರತಿಯಾಗಿ ನಿಮ್ಮ ಎರಡೂ ಮೆದುಳುಗಳು ತಾಪಮಾನದ ಹೊಂದಾಣಿಕೆಗೆ ಪ್ರತಿಕ್ರಿಯಿಸುತ್ತದೆ.

ಆಕಳಿಕೆ ಬರದಂತೆ ನೋಡಿಕೊಳ್ಳುವುದು ಹೇಗೆ:

ಆಕಳಿಸುವುದು ಕೆಟ್ಟ ಅಭ್ಯಾಸವಲ್ಲವಾದ್ದರೂ ಸಾರ್ವಜನಿಕ ಸ್ಥಳಗಳಲ್ಲಿ ನೀವು ನಿರಂತರವಾಗಿ ಆಕಳಿಸಿದರೆ ಅದು ಸ್ವಲ್ಪ ಮುಜುಗರವನ್ನು ಉಂಟುಮಾಡಬಹುದು. ಆದ್ದರಿಂದ ಅದನ್ನು ನಿಲ್ಲಿಸಲು ಕೆಲವು ಮಾರ್ಗಗಳಿವೆ:

ಆಳವಾದ ಉಸಿರಾಟವನ್ನು ತೆಗೆದುಕೊಳ್ಳಿ:

ನೀವು ಅತಿಯಾದ ದಣಿವು ಮತ್ತು ನಿದ್ರಾಹೀನತೆಯನ್ನು ಅನುಭವಿಸಿದರೆ, ಆಳವಾದ, ದೀರ್ಘವಾದ ಉಸಿರನ್ನು ತೆಗೆದುಕೊಳ್ಲಲು ಮತ್ತು ನಿಮ್ಮ ಮೂಗಿನ ಮೂಲಕ ವ್ಯಾಯಾಮ ಮಾಡಲು ಪ್ರಯತ್ನಿಸಿ. ಆರೋಗ್ಯ ತಜ್ಞರ ಪ್ರಕಾರ ನಿರಂತರ ಆಕಳಿಕೆಯು ನಿಮ್ಮ ದೇಹಕ್ಕೆ ಆಮ್ಲಜನಕದ ಅಗತ್ಯವಿದೆ ಎಂಬುದರ ಸೂಚನೆಯಾಗಿದೆ.

ಹೆಚ್ಚು ಸಕ್ರಿಯವಾಗಿರಿ:

ತಜ್ಞರ ಪ್ರಕಾರ ಸೋಮಾರಿತನದ ವಿಶ್ರಾಂತಿ ಜೀವನಶೈಲಿಯನ್ನು ಹೊಂದಿರುವ ಜನರು ಹೆಚ್ಚು ಆಕಳಿಸುತ್ತಾರೆ. ಆದ್ದರಿಂದ ಯಾವಾಗಲು ಸಕ್ರಿಯವಾಗಿರಿ. ಏನನ್ನಾದರೂ ಮಾಡಲು ನಿಮ್ಮ ಮೆದುಳನ್ನು ಉತ್ತೇಜಿಸುವುದು ಮುಖ್ಯವಾಗಿದೆ. ನಿಮ್ಮ ದೇಹ ಆಕಳಿಕೆಗೆ ಒಳಗಾದಾಗಲೆಲ್ಲಾ, ನಿಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸಲು 5 ರಿಂದ 10 ನಿಮಿಷಗಳ ಕಾಲ ಒಂದು ಸಣ್ಣ ನಡಿಗೆ ಅಥವಾ ಜಾಗಿಂಗ್ ಮಾಡಿ.

ಇದನ್ನೂ ಓದಿ: ಬೇಸಿಗೆಯಲ್ಲಿ ಕೂದಲು ಉದುರುವಿಕೆಯನ್ನು ತಡೆಯಲು ಈ ಸಲಹೆಗಳನ್ನು ಪಾಲಿಸಿ

ಕೂಲ್ ಕಂಪ್ರೆಸ್:

ನಿಮ್ಮ ಮೆದುಳು ಹೆಚ್ಚು ಬಿಸಿಯಾದಾಗ ನೀವು ಆಕಳಿಸುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ಆದ್ದರಿಂದ ನೀವು ದಣಿದಿರುವಾಗ ಐಸ್ ಪ್ಯಾಕ್ ತೆಗೆದುಕೊಂಡು ಅದನ್ನು ನಿಮ್ಮ ತಲೆಯ ಮೇಲೆ ಒಂದು ನಿಮಿಷಗಳ ಕಾಲ ಇರಿಸಿ. ಇದು ನಿಮ್ಮ ತಲೆಯನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ ಮತ್ತು ನಿಮಗೆ ಉಲ್ಲಾಸವನ್ನು ನೀಡುತ್ತದೆ.

ಶೀತಾಹಾರಗಳನ್ನು ಸೇವಿಸಿ:

ನೀವು ಆಕಳಿಸಲು ಪ್ರಾರಂಭಿಸಿದ ತಕ್ಷಣ ರೆಫ್ರಿಜರೇಟರ್ ನಲ್ಲಿರುವ ಹಣ್ಣುಗಳು ಅಥವಾ ಇತರ ಶೀತವಾಗಿರುವ ತಿಂಡಿಗಳನ್ನು ಸೇವಿಸಿ.

ತೇವಾಂಶ ಅಗತ್ಯ:

ವೈದ್ಯರ ಪ್ರಕಾರ, ನಿರ್ಜಲೀಕರಣ ಮತ್ತು ನಿಶ್ಯಕ್ತಿಯು ಸುಸ್ತು ಅಥವಾ ಆಕಳಿಕೆಗೆ ಕಾರಣವಾಗಬಹುದು. ಆದ್ದರಿಂದ ದಿನವಿಡೀ ಸಾಕಷ್ಟು ನೀರು ಅಥವಾ ದ್ರವ ಪದಾರ್ಥಗಳನ್ನು ಸೇವಿಸಲು ಮರೆಯದಿರಿ. ಏಕೆಂದರೆ ಜಲಸಂಚಯನವು ಆಕಳಿಕೆಯನ್ನು ಬಾರದಂತೆ ತಡೆಗಟ್ಟಲು ಸಹಾಯ ಮಾಡುತ್ತದೆ.

ಸರಿಯಾಗಿ ನಿದ್ರೆಯನ್ನು ಮಾಡಿ:

ಪ್ರತಿದಿನ ಕನಿಷ್ಟ 7 ರಿಂದ 9 ಗಂಟೆಗಳ ಕಾಲ ಚೆನ್ನಾಗಿ ನಿದ್ರೆಯನ್ನು ಮಾಡುವುದು ಆರೋಗ್ಯದ ದೃಷ್ಟಿಯಿಂದ ಮುಖ್ಯವಾಗಿದೆ. ಇದು ದಣಿವನ್ನು ತಪ್ಪಿಸಿ ಆಕಳಿಕೆ ಬರದಂತೆ ಮಾಡಲು ಸಹಾಯಕವಾಗಿದೆ. ನಿದ್ರೆಯ ಕೊರತೆ ಅನೇಕ ಅಪಾಯಕಾರಿ ಮತ್ತು ಮಾರಣಾಂತಿಕ ಅಡ್ಡ ಪರಿಣಾಮಗಳನ್ನು ಬೀರಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 1:09 pm, Sun, 30 April 23