Diabetic diet: ರಕ್ತದಲ್ಲಿನ ಸಕ್ಕರೆ ಮಟ್ಟದ ನಿಯಂತ್ರಣಕ್ಕೆ ಓಟ್ಸ್ ಖಿಚಡಿ ಉತ್ತಮ
ಖಿಚಡಿಯು ಕಡಿಮೆ ಗ್ಲೆಸೆಮಿಕ್ ಅಂಶವನ್ನು ಹೊಂದಿರುವಿದರಿಂದ ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಇದು ಸೂಕ್ತವೆಂದು ಪರಿಗಣಿಸಲಾಗಿದೆ. ನಿಮಗೆ ರುಚಿಕರವಾದ ಓಟ್ಸ್ ಖಿಚಡಿಯನ್ನು ತಯಾರಿಸುವ ವಿಧಾನ ಇಲ್ಲಿದೆ.
ಖಿಚಡಿ ಭಾರತೀಯರ ಸಾಮಾನ್ಯ ಆಹಾರಗಳಲ್ಲಿ ಒಂದಾಗಿದೆ. ಸುದೀರ್ಘ ಕೆಲಸದ ನಂತರ ದಣಿದಾಗ, ಹೊಟ್ಟೆ ಕೆಟ್ಟಾಗ, ಅಥವಾ ಲಘುವಾಗಿ ಆರೋಗ್ಯಕರವಾದೂದನ್ನು ಏನಾದರೂ ತಿನ್ನಬೇಕೆಂದೆನಿಸಿದಾಗ ಉತ್ತಮ ಮಾರ್ಗ ಖಿಚಡಿ. ಇದನ್ನು ಮಾಡುವುದು ಸುಲಭವಾದ ಕೆಲಸವಲ್ಲದಿದ್ದರೂ, ಇದು ಅನೇಕ ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ಖಿಚಡಿಯಲ್ಲಿರುವ ಅಕ್ಕಿ, ಉದ್ದಿನ ಬೇಳೆ, ತುಪ್ಪದ ಮಿಶ್ರಣವು ನಿಮಗೆ ಕಾರ್ಬೋಹೈಡ್ರೇಟ್‌ಗಳು ಹಾಗೂ ಪ್ರೋಟಿನ್‌ಗಳನ್ನು ಒದಗಿಸುತ್ತದೆ. ಇದು ದೀರ್ಘ ಸಮಯದವರೆಗೆ ಹಸಿವಾಗದೆ, ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಮಾತ್ರವಲ್ಲದೆ ಖಿಚಡಿಯು ಕಡಿಮೆ ಗ್ಲೆಸೆಮಿಕ್ ಅಂಶವನ್ನು ಹೊಂದಿರುವಿದರಿಂದ ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಇದು ಸೂಕ್ತವೆಂದು ಪರಿಗಣಿಸಲಾಗಿದೆ. ನಿಮಗೆ ರುಚಿಕರವಾದ ಓಟ್ಸ್ ಖಿಚಡಿಯನ್ನು ತಯಾರಿಸುವ ವಿಧಾನ ಇಲ್ಲಿದೆ.
ಓಟ್ಸ್ ಈ ಪಾಕ ವಿಧಾನದ ಪ್ರಮುಖ ಪದಾರ್ಥವಾಗಿದೆ. ಇದು ಹೆಚ್ಚಿನ ನೀರು ಹಾಗೂ ಫೈಬರ್ ಅಂಶವನ್ನು ಹೊಂದಿರುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ಸಹಾಯ ಮಾಡುತ್ತದೆ. ಈ ಓಟ್ಸ್ ಮೀಲ್ ಹೇರಳವಾದ ಪೌಷ್ಟಿಕಾಂಶವನ್ನು ನೀಡುವುದರ ಜೊತೆಗೆ ಧೀರ್ಘ ಸಮಯದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇಂತಹ ಆರೋಗ್ಯಕರ ಹಾಗೇನೆ ರುಚಿಕರವಾದ ಓಟ್ಸ್ ಖಿಚಡಿ ಮಾಡಲು ಬೇಕಾಗಿರುವ ಪದಾರ್ಥಗಳು ಯಾವುದೆಂದರೆ- ಓಟ್ಸ್, ಮೂಂಗ್ ದಾಲ್, ಟೊಮೆಟೊ, ಈರುಳ್ಳಿ, ಹಸಿ ತರಕಾರಿ.
ಇದನ್ನು ಓದಿ:Diabetic Diet: ಮಧುಮೇಹಿಗಳಿಗೆ ಈ ಹಣ್ಣು ರಾಮಬಾಣ! ಇಲ್ಲಿದೆ ಮಾಹಿತಿ
ಓಟ್ಸ್ ಖಿಚಡಿ ಮಾಡುವ ವಿಧಾನ:
ಮೊದಲು ಒಂದು ಕುಕ್ಕರ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಜೀರಿಗೆಯನ್ನು ಸೇರಿಸಿ ಅದು ಸಿಡಿಯುವವರೆಗೆ ಹುರಿಯಿರಿ. ನಂತರ ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ನಸು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ, ಬಳಿಕ ಶುಂಠಿ ಮತ್ತು ಹಸಿ ಮೆಣಸಿನಕಾಯಿಯನ್ನು ಸೇರಿಸಿ ಕೆಲವು ಸೆಕೆಂಡುಗಳವರೆಗೆ ಫ್ರೈ ಮಾಡಿ, ನಂತರ ಚಿಟಿಕೆ ಅರಶಿನ ಪುಡಿ ಹಾಗೂ ಖಾರಕ್ಕೆ ಅನುಗುಣವಾಗಿ ಅಚ್ಚಖಾರದ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದಾದ ಬಳಿಕ ಟೊಮೆಟೊ ಹಾಕಿ ಸ್ವಲ್ಪ ಹೊತ್ತು ಬೇಯಲು ಬಿಡಿ. ಇವೆಲ್ಲ ಬೆಂದ ಬಳಿಕ ಕ್ಯಾರೆಟ್, ಬೀನ್ಸ್, ಹಸಿ ಬಟಾಣಿಯಂತಹ ತರಕಾರಿಗಳನ್ನು ಸೇರಿಸಿ ಜೊತೆಗೆ ಓಟ್ಸ್ ಹಾಗೂ ತೊಳೆದಿಟ್ಟಿರುವಂತಹ ಮೂಂಗ್ ದಾಲ್ ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಲು ಮರೆಯದಿರಿ. ನಂತರ ಸ್ವಲ್ಪ ನೀರು ಸೇರಿಸಿ ಸುಮಾರು 8 ರಿಂದ 10 ನಿಮಿಷಗಳ ಕಾಲ ಬೇಯಲು ಬಿಡಿ. ಸಂಪೂರ್ಣವಾಗಿ ಬೆಂದ ಬಳಿಕ ಬಿಸಿಯಾದ ರುಚಿಕರವಾದ ಹಾಗೇನೆ ಪೌಷ್ಟಿದಾಯಕವಾದ ಖಿಚಡಿ ಸವಿಯಲು ಸಿದ್ಧವಾಗಿರುತ್ತದೆ.
ಮನೆಯಲ್ಲಿಯೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಈ ಸರಳ ಪಾಕ ವಿಧಾನವನ್ನು ಪ್ರಯತ್ನಿಸಿ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಪಾಲಿಸುವ ಮೂಲಕ ನಿಮ್ಮ ಆರೋಗ್ಯವನ್ನು ಕೂಡಾ ಕಾಪಡಿಕೊಳ್ಳಿ.
ಜೀವನಶೈಲಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ