Kannada News Lifestyle Winter Makeup Tips : Simple tips for applying foundation on dry skin for a natural look Kannada News
Winter Makeup Tips: ಒಣತ್ವಚೆಯಿಂದ ಮೇಕಪ್ ಪರ್ಫೆಕ್ಟ್ ಆಗಿ ಬರ್ತಿಲ್ವಾ? ಹಾಗಾದ್ರೆ ಫೌಂಡೇಶನ್ ಹೀಗೆ ಹಚ್ಚಿಸಿ
ಮೇಕಪ್ ಮಾಡಿಕೊಳ್ಳುವುದೆಂದರೆ ಹೆಣ್ಣು ಮಕ್ಕಳಿಗೆ ತುಂಬಾನೇ ಇಷ್ಟ. ಆದರೆ ಚಳಿಗಾಲದಲ್ಲಿ ಮೇಕಪ್ ಮಾಡುವುದು ಕಷ್ಟದ ಕೆಲಸವೇ ಸರಿ. ಮೇಕಪ್ ಮಾಡುವಾಗ ಫೌಂಡೇಶನ್ ಹಚ್ಚುವುದು ಬಹಳ ಮುಖ್ಯ. ಈ ವೇಳೆಯಲ್ಲಿ ಸ್ವಲ್ಪ ಹೆಚ್ಚಾದರೂ ಕೂಡ ಮುಖದ ಅಂದವೇ ಹಾಳಾಗುತ್ತದೆ. ಹೀಗಾಗಿ ಈ ಋತುವಿನಲ್ಲಿ ಮೇಕಪ್ ಮಾಡಿಕೊಳ್ಳುವ ಮೊದಲು ಫೌಂಡೇಶನ್ ಹೇಗೆ ಹಚ್ಚಿಕೊಳ್ಳಬೇಕೆಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಈ ಕೆಲವು ಟಿಪ್ಸ್ ತಿಳಿದಿದ್ದರೆ ಮೇಕಪ್ ಪರ್ಫೆಕ್ಟ್ ಆಗಿರ ಬರಲು ಸಾಧ್ಯ.
ಸಾಂದರ್ಭಿಕ ಚಿತ್ರ
Follow us on
ಚಳಿಗಾಲ ಬಂತೆಂದರೆ ಸೌಂದರ್ಯವನ್ನು ಕಾಪಾಡಿಕೊಳ್ಳುವುದೇ ದೊಡ್ಡ ಕೆಲಸ. ಈ ಋತುವಿನಲ್ಲಿ ತ್ವಚೆಯ ಅಂದವು ಸಹಜವಾಗಿಯೇ ಹಾಳಾಗುತ್ತದೆ. ಶೀತಗಾಳಿ ಮತ್ತು ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ನಾನಾ ರೀತಿಯ ತ್ವಚೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಋತುವಿನಲ್ಲಿ ಹೆಚ್ಚಿನವರಲ್ಲಿ ಒಣಚರ್ಮದ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ. ಈ ವೇಳೆಯಲ್ಲಿ ಮುಖಕ್ಕೆ ಮೇಕಪ್ ಮಾಡಿದ್ರೆ ಮುಖದ ಅಂದವೇ ಹಾಳಾಗುವುದು ಪಕ್ಕಾ. ಹೀಗಾಗಿ ಮೇಕಪ್ ಮಾಡಿಕೊಳ್ಳುವ ಮುನ್ನ ಫೌಂಡೇಶನ್ ಹೇಗೆ ಹಚ್ಚಿಕೊಳ್ಳುತ್ತೀರಿ ಎನ್ನುವುದರ ಮೇಲೆ ನಿಮ್ಮ ಮೇಕಪ್ ಅವಲಂಬಿತವಾಗಿರುತ್ತದೆ.
ತ್ವಚೆಗೆ ಪ್ರೈಮರ್ ಬಳಸುವುದನ್ನು ಮರೆಯದಿರಿ: ಚಳಿಗಾಲದಲ್ಲಿ ತ್ವಚೆಯ ಮೇಲೆ ಫೌಂಡೇಷನ್ ಹಚ್ಚುವ ಮೊದಲು, ಪ್ರೈಮರ್ ಹಚ್ಚಲು ಮರೆಯದಿರಿ. ಇದು ಚಳಿಗಾಲದಲ್ಲಿ ದೀರ್ಘಕಾಲದವರೆಗೆ ಚರ್ಮವನ್ನು ತೇವಾಂಶದಿಂದ ಇಡುವುದಲ್ಲದೇ ಚರ್ಮದ ಶುಷ್ಕತೆ ತೆಗೆದು ಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಮಾಯಿಶ್ಚರೈಸರ್ ಬಳಕೆಯಿರಲಿ : ತ್ವಚೆಯು ಒಣಗಿದ್ದರೆ ಅಥವಾ ಶುಷ್ಕವಾಗಿದ್ದರೆ, ಫೌಂಡೇಷನ್ ಹಚ್ಚುವ ಮೊದಲು ನಿಮ್ಮ ಮುಖದ ಮೇಲೆ ಮಾಯಿಶ್ಚರೈಸರ್ ಹಚ್ಚುವುದು ಉತ್ತಮ. ಇದು ಚರ್ಮದ ಶುಷ್ಕತೆಯನ್ನು ಹೋಗಲಾಡಿಸುತ್ತದೆ. ಆ ಬಳಿಕ ತ್ವಚೆಗೆ ಫೌಂಡೇಶನ್ ಹಚ್ಚಿದರೆ ಮುಖವು ಮೃದುವಾಗಿ ಕಾಣುತ್ತದೆ.
ಚಳಿಗಾಲಕ್ಕೆ ಸೂಕ್ತ ಫೌಂಡೇಷನ್ ಆಯ್ಕೆ ಮಾಡಿಕೊಳ್ಳಿ : ಚಳಿಗಾಲದಲ್ಲಿ ತಂಪಾದ ವಾತಾವರಣದಿಂದಾಗಿ ಚರ್ಮವು ಶುಷ್ಕವಾಗಿರುತ್ತದೆ. ಹೀಗಾಗಿ ತ್ವಚೆಗೆ ಹಚ್ಚುವ ಫೌಂಡೇಶನ್ ಆಯ್ಕೆಯು ಸರಿಯಾಗಿರಬೇಕು. ಪೌಡರ್ ಆಧಾರಿತ ಫೌಂಡೇಶನ್ ಬಳಕೆಯನ್ನು ಆದಷ್ಟು ತಪ್ಪಿಸಿ. ಇದನ್ನು ಹಚ್ಚುವುದರಿಂದ ತ್ವಚೆಯಲ್ಲಿನ ಎಣ್ಣೆಯನ್ನು ಹೀರಿಕೊಂಡು ಚರ್ಮವು ಒಣಗಿಹೋಗುತ್ತದೆ. ಹೀಗಾಗಿ ಈ ಋತುವಿನಲ್ಲಿ ಮೇಕಪ್ ಮಾಡಿಕೊಳ್ಳುತ್ತೀರಿಯಾದರೆ ಕ್ರೀಮ್ ಅಥವಾ ಎಣ್ಣೆಯುಕ್ತ ಫೌಂಡೇಷನ್ ಆಯ್ಕೆ ಮಾಡಿಕೊಳ್ಳಿ. ಇದು ನಿಮ್ಮ ತ್ವಚೆಯು ಡ್ರೈ ಆಗಿ ಕಾಣುವುದನ್ನು ತಪ್ಪಿಸುತ್ತದೆ.
ಬ್ಯೂಟಿ ಬ್ಲೆಂಡರ್ ನಿಂದ ಫೌಂಡೇಶನ್ ಹಚ್ಚಿ : ಮೇಕಪ್ ಮಾಡಿಕೊಳ್ಳುವಾಗ ಕೈ ಬೆರಳಿನಿಂದಲೇ ಫೌಂಡೇಶನ್ ಹಚ್ಚುವುದನ್ನು ನೋಡಿರಬಹುದು. ಆದರೆ ಫೌಂಡೇಶನ್ ಹಚ್ಚಲು ಬ್ಯೂಟಿ ಬ್ಲೆಂಡರ್ ಬಳಸಿ.ಮೊದಲಿಗೆ ಒದ್ದೆ ಮಾಡಿಕೊಂಡು ನೀರನ್ನು ಹಿಂಡಿಕೊಳ್ಳಿ. ತದನಂತರದಲ್ಲಿ ಬ್ಯೂಟಿ ಬ್ಲೆಂಡರ್‌ನ ಸಹಾಯದಿಂದ ಮುಖದ ಮೇಲೆ ಫೌಂಡೇಶನ್ ಹಚ್ಚಿದರೆ ಇದು ಮುಖವನ್ನು ಮೃದುವಾಗಿಸಿ ಪರ್ಫೆಕ್ಟ್ ಮೇಕಪ್ ಲುಕ್ ನೀಡುತ್ತದೆ.