ಚಿಸಾ ಮೇರಿ ಎಂಬಾಕೆ ನದಿಯ ಮೇಲಿನ ಮರದ ದಿಮ್ಮಿಯ ಮೇಲೆ ಯೋಗಾಸನ ಭಂಗಿ ಮಾಡಲು ಹೋಗಿ ನೀರಿಗೆ ಬಿದ್ದಿರುವ ವಿಡಿಯೋ ಇಲ್ಲಿದೆ ನೋಡಿ. ಆದ್ರೆ ನೀವು ಯಾವತ್ತೂ ಈ ರೀತಿ ಸಾಹಸಕ್ಕೆ ಹೋಗದಿರಿ. 2017ರಲ್ಲಿ ನಡೆದ ಘಟನೆ ಈಗ ಮತ್ತೇ ಸಕ್ಕತ್ತಾಗಿ ವೈರಲ್ ಆಗಿದೆ. ಅಷ್ಟಕ್ಕೂ ಏನಿದು ಸ್ಟೋರಿ, ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್. ಸುಂದರವಾದ ಪರಿಸರ, ಜುಳು ಜುಳು ಹರಿಯುತ್ತಿರುವ ನದಿ. ನದಿಯ ಮೇಲೆ ಸೇತುವೆಯ ರೀತಿಯಲ್ಲಿ ಮರದ ದಿಂಬಿಯನ್ನು ಕಾಣಬಹುದು. ಈ ದಿಂಬಿಯ ಮೇಲೆ ಮಹಿಳೆಯೊಬ್ಬಳು ಯೋಗ ಭಂಗಿಯಲ್ಲಿ ಮಾಡಲು ಪ್ರಯತ್ನಿಸಿದ್ದಾಳೆ. ಜೊತೆಗೆ ತನ್ನ ಈ ಸಾಹಸವನ್ನು ವಿಡಿಯೋ ಮಾಡಿಸಿಕೊಂಡಿದ್ದಾಳೆ. ಆದರೆ ಅಲ್ಲಿ ಆಗಿದ್ದೇ ಬೇರೆ. ಯೋಗ ಭಂಗಿ ಪ್ರಯತ್ನಿಸಿದ ಆಕೆ ಕಾಲು ಜಾರಿ ಹರಿಯುವ ನದಿಗೆ ಬಿದ್ದಿದ್ದಾಳೆ. ಈ ವಿಡಿಯೋ 4 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು . ಆದರೆ ಇತ್ತೀಚೆಗೆ (ಫೆ.24)ರಂದು ಮತ್ತೇ ಟ್ವಿಟರ್‌ನಲ್ಲಿ ಮತ್ತೇ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಕೇವಲ ಎರಡೇ ದಿನಗಳಲ್ಲಿ 1.4 ಮಿಲಿಯನ್ ವೀಕ್ಷಣೆ ಪಡೆದಿದೆ.
Go with the flow ? pic.twitter.com/BGZ120HZYL
— Wtf Scene (@wtf_scene) February 24, 2023
ಇದನ್ನೂ ಓದಿ: ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಐದು ಯೋಗಾಸನಗಳು
ಇತ್ತೀಚಿಗಷ್ಟೇ ಈ ಪೋಸ್ಟ್ ಹಂಚಿಕೊಂಡಿರುವ ಟೀನ್ ವ್ಲಾಗ್ ಟ್ವೀಟ್ ಖಾತೆಯ ಪ್ರಕಾರ ಮಿಸ್ ಮೇರಿ ಯಾವುದೇ ದೊಡ್ಡ ಮಟ್ಟದಲ್ಲಿ ಗಾಯಗಳಾದೇ ಆರಾಮವಾಗಿ ಇದ್ದರೆ ಹಾಗೂ ಜೊತೆಗೆ ಆಕೆಯ ಈ ಸಾಹಸ ಹಾಸ್ಯಸ್ಪದವಾಗಿಯೇ ತೆಗೆದುಕೊಂಡಿದ್ದಾರೆ.ಈ ವಿಡಿಯೋ ಟ್ವಿಟರ್‌ನಲ್ಲಿ 1 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇಂತಹ ಸಾಹಸಗಳಿಗೆ ಎಂದಿಗೂ ಕೈ ಹಾಕದಿರಿ ಎಂದು ಸಾಕಷ್ಟು ಜನರು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಇಲ್ಲಿಯ ವರೆಗೆ ಈ ಪೋಸ್ಟ್ 2194 ರೀ ಟ್ವಿಟ್ ಆಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:00 pm, Sun, 26 February 23