ಅಂತರಾಷ್ಟ್ರೀಯ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸಿ ಇನ್ನೂ ಮುಂದಕ್ಕೆ ಅವರ ಗುರಿಯತ್ತ ಬೆಂಬಲಿಸುವುದು ಈ ದಿನದ ಮುಖ್ಯ ಉದ್ದೇಶ. ಇಂದು ನಿಮ್ಮ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸಿರುವ ಮಹಿಳೆಗೆ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿದೆ. ಈ ದಿನವನ್ನು ನೀವು ಅರ್ಥಪೂರ್ಣವಾಗಿ ಆಚರಿಸಲು ಬಯಸಿದರೆ ಅವರ ಮುಖದಲ್ಲೊಂದು ನಗು ಮೂಡಿಸಲು ವಿಶೇಷ ಉಡುಗೊರೆಯನ್ನು ಅವರಿಗೆ ನೀಡಿ.
ಆಭರಣವು ಎಂದಿಗೂ ವಿಸೇಷವಾಗಿ ಮಹಿಳೆಯರಿಗೆ ಯಾವಾಗಲೂ ಅಚ್ಚುಮೆಚ್ಚು. ಕಿವಿಯೋಲೆಗಳು, ನೆಕ್ಲೇಸ್‌ಗಳು, ಕಡಗಗಳು ಅಥವಾ ಉಂಗುರಗಳು ಸೇರಿದಂತೆ ವಿವಿಧ ಆಯ್ಕೆಗಳಿಂದ ನೀವು ಆಯ್ಕೆ ಮಾಡಬಹುದು. ನೀವು ಮೊದಲಕ್ಷರಗಳು ಅಥವಾ ಜನ್ಮಗಲ್ಲುಗಳೊಂದಿಗೆ ಕಸ್ಟಮೈಸ್ ಮಾಡಿದ ಆಭರಣಗಳನ್ನು ಸಹ ಆಯ್ಕೆ ಮಾಡಬಹುದು .
ಓದಲು ಇಷ್ಟಪಡುವ ಮಹಿಳೆಯರಿಗೆ ಪುಸ್ತಕಗಳು ಅದ್ಭುತ ಕೊಡುಗೆಯಾಗಿದೆ. ನೀವು ಕಾಲ್ಪನಿಕ, ಕಾಲ್ಪನಿಕವಲ್ಲದ, ಅಥವಾ ಜೀವನಚರಿತ್ರೆ ಸೇರಿದಂತೆ ವಿವಿಧ ಪ್ರಕಾರಗಳಿಂದ ಆಯ್ಕೆ ಮಾಡಬಹುದು. ಮಹಿಳೆಯರು ಮತ್ತು ಮಹಿಳೆಯರ ಸಮಸ್ಯೆಗಳ ಬಗ್ಗೆ ಬರೆದ ಪುಸ್ತಕಗಳನ್ನು ಸಹ ನೀವು ಆಯ್ಕೆ ಮಾಡಬಹುದು.
ಇದನ್ನೂ ಓದಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಇತಿಹಾಸ, ಮಹತ್ವ ಹಾಗೂ ಧ್ಯೇಯದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ
ಗುಲಾಬಿ, ಮಲ್ಲಿಗೆ ವಿವಿಧ ಹೂವುಗಳು ಅಥವಾ ಹೂವಿನ ಗುಚ್ಛವು ಉತ್ತಮ ಆಯ್ಕೆಯಾಗಿದೆ. ಹೂವು ಮುಡಿದುಕೊಳ್ಳುವ ಅಭ್ಯಾಸವಿದ್ದರೇ ಅದು ನಿಮ್ಮ ಪ್ರೀತಿಯ ಜೊತೆಗೆ ಅವರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಪ್ರತೀ ಹೆಣ್ಣಿಗೂ ಆಕೆಯ ಸೌಂದರ್ಯದ ಕರಿತು ಅತಿಯಾದ ಕಾಳಜಿ ಇರುತ್ತದೆ. ಆದ್ದರಿಂದ ಈ ವಿಶೇಷ ದಿನದಂದು ಅವರಿಗಾಗಿ ಸ್ಕಿನ್ ಕೇರ್ ಕಿಟ್ ಉಡುಗೊರೆಯಾಗಿ ನೀಡಿ. ಇಂತಹ ಉಡುಗೊರೆಯೂ ಪ್ರತಿಯೊಂದು ಹೆಣ್ಣಿಗೂ ಇಷ್ಟವಾಗುತ್ತದೆ.
ಅವರಿಗಾಗಿ ನೀವೇ ತಯಾರಿಸಿ ಉಡುಗೊರೆ ನೀಡಿದರೆ ಅದು ಅವರಿಗೆ ತುಂಬಾ ವಿಶೇಷವಾಗಿರುತ್ತದೆ. ಎಷ್ಟೇ ಬೆಲೆ ಬಾಳುವ ಉಡುಗೊರೆಗಿಂತ ನೀವು ವಿಶೇಷವಾಗಿ ತಯಾರಿಸಿರುವ ಉಡುಗೊರೆ ಅವರಿಗೆ ಸಾಕಷ್ಟು ಖುಷಿಯನ್ನು ನೀಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: