AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health: ಬಂಜೆತನಕ್ಕೆ ಕಾರಣವಾಗುವ ಎಂಡ್ರೋಮೆಟ್ರಿಯೊಸಿಸ್‌ನ ರೋಗಲಕ್ಷಣಗಳ ಕುರಿತು ಮಾಹಿತಿ ಇಲ್ಲಿದೆ

ಈ ಕಾಯಿಲೆ ಅತಿಸಾರ, ಮಲಬದ್ಧತೆ ಮತ್ತು ಕಿಬ್ಬೊಟ್ಟೆಯ ಸೆಳೆತಕ್ಕೆ ಕಾರಣವಾಗುತ್ತದೆ. ನೀವು ಎಂಡೊಮೆಟ್ರಿಯೊಸಿಸ್‌ನ ಯಾವುದೇ ರೋಗಲಕ್ಷಣವನ್ನು ಹೊಂದಿದ್ದರೆ, ದಯವಿಟ್ಟು ಸರಿಯಾದ ಫಲವತ್ತತೆಯ ಚಿಕಿತ್ಸೆಯ ಮಾರ್ಗದರ್ಶನ ನೀಡುವ ಫಲವತ್ತತೆಯ ತಜ್ಞರನ್ನು ಸಂಪರ್ಕಿಸಿ ಎಂದು ಡಾ. ಸುಲ್ಭಾ ಅರೋರಾ ಅವರು ಹೇಳುತ್ತಾರೆ.

Women Health: ಬಂಜೆತನಕ್ಕೆ ಕಾರಣವಾಗುವ ಎಂಡ್ರೋಮೆಟ್ರಿಯೊಸಿಸ್‌ನ ರೋಗಲಕ್ಷಣಗಳ ಕುರಿತು ಮಾಹಿತಿ ಇಲ್ಲಿದೆ
ಅಕ್ಷತಾ ವರ್ಕಾಡಿ
|

Updated on:Feb 03, 2023 | 7:10 PM

Share

ಎಂಡೊಮೆಟ್ರಿಯೊಸಿಸ್‌ನಲ್ಲಿ ಎಂಡೊಮೆಟ್ರಿಯಮ್ ಎಂಬ ಒಳಪದರವು ಗರ್ಭಾಶಯದ ಹೊರಗಿನ ಪ್ರದೇಶದಲ್ಲಿ, ಅಂಡಾಶಯದ ಒಳಗೆ,  ಬೆಳೆಯಲು ಪ್ರಾರಂಭಿಸುತ್ತದೆ.  ಎಂಡೊಮೆಟ್ರಿಯೋಸಿಸ್ ಒಂದು ಸ್ಥಿತಿಯಾಗಿದ್ದು, ಅದು ಆಗಾಗ್ಗೆ ನೋವಿನ ಅವಧಿಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಗರ್ಭಾಶಯದ ಒಳಪದರವಾಗಿರುವ ಎಂಡೊಮೆಟ್ರಿಯಮ್‌ನೊಂದಿಗೆ ಹೆಚ್ಚಾಗಿ ಸಂಬಂಧಿಸಿದ ಎಂಡೊಮೆಟ್ರಿಯೊಸಿಸ್ ಸ್ಥಿತಿಯು ಮುಟ್ಟಿನ ಆರಂಭದಲ್ಲಿ ರೂಪುಗೊಳ್ಳಲು ಪ್ರಾರಂಭಿಸುತ್ತದೆ ಮತ್ತು ಗರ್ಭಾವಸ್ಥೆಯು ಸಂಭವಿಸದಿದ್ದರೆ ಹಾಗೂ ಗರ್ಭಾಶಯದ ಒಳಗೆ ಎಂಡೊಮೆಟ್ರಿಯಮ್‌ಗೆ ಸರಿಯಾದ ಸ್ಥಳವಿಲ್ಲದಿದ್ದರೆ ಮುಂದಿನ ಅವಧಿಯಲ್ಲಿ ಅದು ಕಳಚಿ ಹೋಗುತ್ತದೆ. ಎಂಡೊಮೆಟ್ರಿಯೋಸಿಸ್‌ನಲ್ಲಿ ಅದೇ ಒಳಪದರವು ಗರ್ಭಾಶಯದ ಹೊರಗಿನ ಪ್ರದೇಶದಲ್ಲಿ ಅಂದರೆ ಟ್ಯೂಬ್‌ಗಳು ಮತ್ತು ಅಂಡಾಶಯದ ಒಳಗೆ, ಗರ್ಭಾಶಯದ ಹೊರ ಮೇಲ್ಮೈಯಲ್ಲಿ ಹಾಗೂ ಶ್ರೋಣಿಯ ಗೋಡೆಗಳ ಮೇಲೆ ಬೆಳೆಯಲು ಪ್ರಾರಂಭಿಸುತ್ತದೆ.

ಮುಟ್ಟಿನ ಆರಂಭದಲ್ಲಿ ರೂಪುಗೊಳ್ಳಲು ಪ್ರಾರಂಭಿಸುತ್ತದೆ ಮತ್ತು ಗರ್ಭಾವಸ್ಥೆಯು ಸಂಭವಿಸದಿದ್ದರೆ ಮುಂದಿನ ಅವಧಿಯಲ್ಲಿ ಅದು ಕಳಚಿ ಹೋಗುತ್ತದೆ. ಇದು ಸೊಂಟದ ಹೊರಗೆ ಅಪರೂಪವಾಗಿ ಕಂಡುಬರುತ್ತದೆ ಮತ್ತು ಗರ್ಭಾಶಯದ ಹೊರಗಿನ ಪ್ರದೇಶದಲ್ಲಿ ಈ ಎಂಡೊಮೆಟ್ರಿಯಮ್ ಬೆಳೆದಾಗ ಅದು ಉರಿಯೂತದ ಪ್ರಕ್ರಿಯೆಗೂ ಕಾರಣವಾಗುತ್ತದೆ. ಈ ಪ್ರಕ್ರಿಯೆಯು ದೇಹದ ಇತರ ಅಂಗಗಳಿಗೆ ಕಿರಿಕಿರಿಯನ್ನುಂಟುಮಾಡುತ್ತದೆ.

ಇದನ್ನೂ ಓದಿ: ಕಿಡ್ನಿಯ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುವ ಪರಿಣಾಮಕಾರಿ ಮನೆಮದ್ದು ಇಲ್ಲಿದೆ

ಮುಂಬೈನ ನೋವಾ ಐವಿಎಫ್ ಫರ್ಟಿಲಿಟಿಯ ಕ್ಲಿನಿಕಲ್ ಡೈರೆಕ್ಟರ್ ಡಾ. ಸುಲ್ಭಾ ಅರೋರಾ ಪ್ರಕಾರ ‘ಮುಟ್ಟಿನ ಅವಧಿಯಲ್ಲಿ ಎಂಡೊಮೆಟ್ರಿಯಮ್ ರಕ್ತಸ್ರಾವದ ರೂಪದಲ್ಲಿ ಸುರಿಯುತ್ತದೆ. ಎಂಡೊಮೆಟ್ರಿಯಮ್ ಹೊರಹೋಗಲು ಪ್ರಕೃತಿಯು ಯೋನಿಯ ರೂಪದಲ್ಲಿ ಒಂದು ಮಾರ್ಗವನ್ನು ನೀಡಿದೆ, ಆದರೆ ಇತರ ಪ್ರದೇಶಗಳಲ್ಲಿ ಅಂತಹ ಯಾವುದೇ ಮಾರ್ಗಗಳು ಲಭ್ಯವಿಲ್ಲ. ಆದ್ದರಿಂದ ಅಲ್ಲಿ ಸುರಿಯುವ ರಕ್ತವು ಸಂಗ್ರಹಗೊಳ್ಳುತ್ತದೆ. ಇದು ಒಬ್ಬರ ಅಂಡಾಶಯದೊಳಗೆ ಸಂಭವಿಸಿದಾಗ ಒಂದು ಚೀಲವನ್ನು ರೂಪಿಸುತ್ತದೆ. ಕಾಲನಂತರದಲ್ಲಿ ಈ ಅಂಡಾಂಶಯದ ಚೀಲದಲ್ಲಿನ ರಕ್ತದ ಬಣ್ಣವು ಬದಲಾಗುತ್ತದೆ. ಇದು ಕೆಂಪು ಬಣ್ಣದಿಂದ ಚಾಕೊಲೇಟ್ ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ ಎಂಡೊಮೆಟ್ರಿಯೊಟಿಕ್ ಚೀಲಗಳನ್ನು ಚಾಕೊಲೇಟ್ ಚೀಲಗಳು ಎಂದು ಕೂಡ ಕರೆಯಲಾಗುತ್ತದೆ. ಈ ಅಂಟಿಕೊಳ್ಳುವಿಕೆಗಳು ಮತ್ತು ಚೀಲದ ಕಾರಣದಿಂದಾಗಿ, ಎಂಡೊಮೆಟ್ರಿಯೊಸಿಸ್ ಸಾಮಾನ್ಯವಾಗಿ ಮುಟ್ಟಿನ ತೀವ್ರವಾದ ನೋವು ಮತ್ತು ಬಂಜೆತನಕ್ಕೆ ಸಂಬಂದಧಿಸಿದೆ. ಅದೃಷ್ಟವಶಾತ್ ಇದಕ್ಕೆ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿದೆ ಎಂದು ಸುಲ್ಭಾ ಸಲಹೆ ನೀಡಿದ್ದಾರೆ.

ಎಂಡೊಮೆಟ್ರಿಯೊಸಿಸ್‌ನ ಲಕ್ಷಣಗಳು:

  • ತೀವ್ರವಾದ ಮುಟ್ಟಿನ ನೋವು: ಶ್ರೋಣಿಯ ನೋವು ಮತ್ತು ಸೆಳೆತವು ಸಾಮಾನ್ಯವಾಗಿ ಮುಟ್ಟಿನ ಮೊದಲು ಅಥವಾ ಮುಟ್ಟಿನ ಸಮಯದಲ್ಲಿ ಕಂಡುಬರುತ್ತದೆ. ಕೆಳಬೆನ್ನು ಮತ್ತು ಕಿಬ್ಬೊಟ್ಟೆಯ ನೋವು ಕೂಡಾ ಕಾನಿಸಿಕೊಳ್ಳಬಹುದು.
  • ನೋವಿನಿಂದ ಕೂಡಿದ ಲೈಂಗಿಕ ಸಂಭೋಗ: ಎಂಡೊಮೆಟ್ರಿಯೊಸಿಸ್‌ ಸ್ಥಿತಿಯಿಂದಾಗಿ ಲೈಂಗಿಕ ಸಮಯದಲ್ಲಿ ಅಥವಾ ನಂತರ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
  • ಮೂರ್ತವಿಸರ್ಜನೆ ಸಮಯದಲ್ಲಿ ನೋವು: ವಿಶೇಷವಾಗಿ ಋತುಚಕ್ರದ ಸಮಯದಲ್ಲಿ ಕರುಳಿನ ಚಲನೆ ಮತ್ತು ಮೂರ್ತವಿಸರ್ಜನೆ ಸಮಯದಲ್ಲಿ ನೋವಿನ ಅನುಭವ ಉಂಟಾಗುತ್ತದೆ.
  • ಬಂಜೆತನ: ಎಂಡೋಮೆಟ್ರಿಯೊಸಿಸ್‌ನ್ನು ಸಾಮಾನ್ಯವಾಗಿ ದಂಪತಿಗಳು ಬಂಜೆತನದ ಪರೀಕ್ಷೆಗೆ ಒಳಗಾದಾಗ ಮಾತ್ರ ರೋಗನಿರ್ಣಯವನ್ನು ಮಾಡಲಾಗುತ್ತದೆ. ಏಕೆಂದರೆ ಕೆಲವೊಮ್ಮೆ ಇತರ ಯಾವುದೇ ರೋಗಲಕ್ಷಣಗಳಿರುವುದಿಲ್ಲ.

ಅಲ್ಪವಾದ ಎಂಡೊಮೆಟ್ರಿಯೊಸಿಸ್ ಹೊಂದಿರುವ ಮಹಿಳೆಯರು ತೀವ್ರವಾದ ನೋವನ್ನು ಹೊಂದಬಹುದು ಮತ್ತು ಈ ಕಾಯಿಲೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಜನರು ಯಾವುದೇ ರೋಗಲಕ್ಷಣವನ್ನು ಹೊಂದಿರುವುದಿಲ್ಲ. ಈ ಕಾಯಿಲೆ ಅತಿಸಾರ, ಮಲಬದ್ಧತೆ ಮತ್ತು ಕಿಬ್ಬೊಟ್ಟೆಯ ಸೆಳೆತಕ್ಕೆ ಕಾರಣವಾಗುತ್ತದೆ. ನೀವು ಎಂಡೊಮೆಟ್ರಿಯೊಸಿಸ್‌ನ ಯಾವುದೇ ರೋಗಲಕ್ಷಣವನ್ನು ಹೊಂದಿದ್ದರೆ, ದಯವಿಟ್ಟು ಸರಿಯಾದ ಫಲವತ್ತತೆಯ ಚಿಕಿತ್ಸೆಯ ಮಾರ್ಗದರ್ಶನ ನೀಡುವ ಫಲವತ್ತತೆಯ ತಜ್ಞರನ್ನು ಸಂಪರ್ಕಿಸಿ ಎಂದು ಡಾ. ಸುಲ್ಭಾ ಅರೋರಾ ಅವರು ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 7:10 pm, Fri, 3 February 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ