Health Tips: ಹೆಚ್ಚು ಉಪ್ಪು ಸೇವಿಸುವುದರಿಂದ ಆರೋಗ್ಯದ ಮೇಲಾಗುವ 7 ದುಷ್ಪರಿಣಾಮಗಳು ಇಲ್ಲಿವೆ

Salt Side Effects: ನೀವು ಮಲಗುವ ಮುನ್ನ ಸೋಡಿಯಂ ಅಧಿಕವಾಗಿರುವ ಆಹಾರವನ್ನು ಸೇವಿಸುತ್ತಿದ್ದರೆ, ಆದಷ್ಟು ಬೇಗ ಹಾಗೆ ಮಾಡುವುದನ್ನು ನಿಲ್ಲಿಸಿ. ಮಲಗುವ ಮೊದಲು ಹೆಚ್ಚು ಉಪ್ಪು ಸೇವಿಸಿದರೆ ನಿದ್ರೆಗೆ ತೊಂದರೆಯಾಗಬಹುದು.

Health Tips: ಹೆಚ್ಚು ಉಪ್ಪು ಸೇವಿಸುವುದರಿಂದ ಆರೋಗ್ಯದ ಮೇಲಾಗುವ 7 ದುಷ್ಪರಿಣಾಮಗಳು ಇಲ್ಲಿವೆ
ಉಪ್ಪು
Follow us
ಸುಷ್ಮಾ ಚಕ್ರೆ
|

Updated on: Feb 03, 2023 | 5:32 PM

‘ಉಪ್ಪಿಗಿಂತ ರುಚಿ ಬೇರೆ ಇಲ್ಲ’ ಎಂಬ ಗಾದೆಯೇ ಇದೆ. ಉಪ್ಪು ಇಲ್ಲದಿದ್ದರೆ ತಿನ್ನುವ ಆಹಾರಕ್ಕೆ ಯಾವುದೇ ರುಚಿ ಇರುವುದಿಲ್ಲ. ಹಾಗಂತ ಉಪ್ಪನ್ನು ಹೆಚ್ಚಾಗಿ ಸೇವಿಸಿದರೂ ಆರೋಗ್ಯಕ್ಕೆ ಅಪಾಯ ತಪ್ಪಿದ್ದಲ್ಲ. ನಾವು ನಮ್ಮ ಆಹಾರದಲ್ಲಿ ಬಹಳಷ್ಟು ಉಪ್ಪನ್ನು ಸೇವಿಸುತ್ತೇವೆ. ಉಪ್ಪು (Salt) ವಿಷಕಾರಿಯಲ್ಲ. ಆದರೂ ಇದರಿಂದ ಕೆಲವೊಮ್ಮೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ. ಹೆಚ್ಚು ಉಪ್ಪು ಸೇವಿಸುವುದರಿಂದ ಉಂಟಾಗುವ ದುಷ್ಪರಿಣಾಮಗಳು ಹೀಗಿವೆ…

– ಉಪ್ಪು ನಿಮ್ಮ ದೇಹವನ್ನು ಉಬ್ಬುವಂತೆ ಮಾಡುತ್ತದೆ. ಊಟದ ನಂತರ ಕೆಲವೊಮ್ಮೆ ನಿಮ್ಮ ದೇಹ ಉಬ್ಬಿದಂತೆ ಭಾಸವಾಗುವುದು ಅಥವಾ ಭಾರವಾಗುವುದನ್ನು ಗಮನಿಸಬಹುದು. ಇದಕ್ಕೆ ನಿಮ್ಮ ಆಹಾರದಲ್ಲಿರುವ ಉಪ್ಪು ಕಾರಣ.

– ನಿಮ್ಮ ಮೂತ್ರಪಿಂಡಗಳು ನಿಮ್ಮ ದೇಹದಲ್ಲಿನ ನೀರಿನ ಮಟ್ಟಕ್ಕೆ ಕೆಲವು ಸೋಡಿಯಂ ಅನ್ನು ನಿರ್ವಹಿಸಲು ಬಯಸುವುದರಿಂದ ದೇಹ ಉಬ್ಬಿದಂತೆ ಭಾಸವಾಗುತ್ತದೆ. ನೀವು ಹೆಚ್ಚು ಸೋಡಿಯಂ ಅನ್ನು ಸೇವಿಸಿದಾಗ ಮೂತ್ರಪಿಂಡಗಳು ಸರಿದೂಗಿಸಲು ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳಬೇಕು. ಅದರ ಪರಿಣಾಮವಾಗಿ, ಈ ನೀರಿನ ಧಾರಣವು ಊತಕ್ಕೆ ಕಾರಣವಾಗುತ್ತದೆ. ಇದು ದೇಹದಲ್ಲಿ ಹೆಚ್ಚು ತೂಕವನ್ನು ಉಂಟುಮಾಡಬಹುದು.

ಇದನ್ನೂ ಓದಿ: Salt Coffee: ನೀವು ಎಂದಾದರೂ ಉಪ್ಪು ಕಾಫಿ ಸೇವಿಸಿದ್ದೀರಾ? ಪ್ರಯೋಜನಗಳೇನು ತಿಳಿಯಿರಿ

– ಊಟದ ನಂತರ ಬಾಯಾರಿಕೆ ಹೆಚ್ಚಾಗುತ್ತದೆ. ಸೋಡಿಯಂ ಹೆಚ್ಚಿರುವ ಊಟವನ್ನು ತಿನ್ನುವುದರಿಂದ ಬಾಯಿ ಒಣಗಬಹುದು. ಅದರಿಂದ ನೀವು ತುಂಬಾ ಬಾಯಾರಿಕೆಯನ್ನು ಅನುಭವಿಸಬಹುದು.

– ನೀವು ಮಲಗುವ ಮುನ್ನ ಸೋಡಿಯಂ ಅಧಿಕವಾಗಿರುವ ಆಹಾರವನ್ನು ಸೇವಿಸುತ್ತಿದ್ದರೆ, ಆದಷ್ಟು ಬೇಗ ಹಾಗೆ ಮಾಡುವುದನ್ನು ನಿಲ್ಲಿಸಿ. ಮಲಗುವ ಮೊದಲು ಹೆಚ್ಚು ಉಪ್ಪು ಸೇವಿಸಿದರೆ ನಿದ್ರೆಗೆ ತೊಂದರೆಯಾಗಬಹುದು. ಇದರಿಂದ ರಾತ್ರಿಯಲ್ಲಿ ಹಲವಾರು ಬಾರಿ ಎಚ್ಚರಗೊಳ್ಳುವುದು ಅಥವಾ ಬೆಳಿಗ್ಗೆ ದಣಿದ ಭಾವನೆಯನ್ನು ಅನುಭವಿಸಬೇಕಾಗುತ್ತದೆ.

– ನಿಮ್ಮ ಆಹಾರದಲ್ಲಿ ಹೆಚ್ಚು ಉಪ್ಪು ನಿಮ್ಮ ಹೊಟ್ಟೆಯಲ್ಲಿ ಅಸಮತೋಲನವನ್ನು ಉಂಟುಮಾಡಬಹುದು. ನಿಮಗೆ ವಾಕರಿಕೆ ಉಂಟಾಗುತ್ತದೆ. ಕೆಲವೊಮ್ಮೆ ಇದು ಅತಿಸಾರಕ್ಕೂ ಕಾರಣವಾಗಬಹುದು. ನೀವು ದಿನಗಟ್ಟಲೆ ಹೊಟ್ಟೆನೋವು ಅಥವಾ ಸೆಳೆತವನ್ನು ಎದುರಿಸುತ್ತಿದ್ದರೆ ನಿಮ್ಮ ಆಹಾರದಲ್ಲಿ ಉಪ್ಪನ್ನು ಕಡಿಮೆ ಮಾಡುವುದು ಉತ್ತಮ. ಹೆಚ್ಚು ನೀರು/ ದ್ರವ ಪದಾರ್ಥ ಸೇವಿಸುವುದು ನಿಮ್ಮ ದೇಹವನ್ನು ಹೈಡ್ರೇಟ್ ಮಾಡಲು ಉತ್ತಮ ಮಾರ್ಗವಾಗಿದೆ.

ಇದನ್ನೂ ಓದಿ: Sea Salt Vs Table Salt: ಸಮುದ್ರದ ಉಪ್ಪು ಅಥವಾ ಪುಡಿ ಉಪ್ಪು ಯಾವುದು ಆರೋಗ್ಯಕ್ಕೆ ಒಳ್ಳೆಯದು?

– ನೀವು ನಿಯಮಿತವಾಗಿ ತಲೆನೋವು ಅನುಭವಿಸುತ್ತಿದ್ದರೆ ನಿಮ್ಮ ಊಟದಲ್ಲಿರುವ ಸೋಡಿಯಂ ಇದಕ್ಕೆ ಕಾರಣವಾಗಿರಬಹುದು. ಉಪ್ಪನ್ನು ತಿನ್ನುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ತಲೆನೋವು ಕೂಡ ಹೆಚ್ಚಾಗುತ್ತದೆ.

– ಉಪ್ಪು ನಿಮಗೆ ಬಾಯಾರಿಕೆಯನ್ನು ಉಂಟುಮಾಡುತ್ತದೆ. ಇದು ನಿಮಗೆ ಹೆಚ್ಚು ವಾಶ್‌ರೂಮ್‌ಗೆ ಹೋಗುವಂತೆ ಮಾಡುತ್ತದೆ. ನೀವು ಹಲವು ವರ್ಷಗಳಿಂದ ಸೋಡಿಯಂ ಭರಿತ ಆಹಾರವನ್ನು ಸೇವಿಸುತ್ತಿದ್ದರೆ, ನಿಮ್ಮ ರಕ್ತದೊತ್ತಡದಲ್ಲಿ ಗಮನಾರ್ಹ ಹೆಚ್ಚಳವನ್ನು ಅನುಭವಿಸುತ್ತಿದ್ದರೆ, ನೀವು ಸ್ವಲ್ಪ ಸಮಯದವರೆಗೆ ಉಪ್ಪಿನಿಂದ ದೂರವಿರುವುದು ಉತ್ತಮ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?