Sea Salt Vs Table Salt: ಸಮುದ್ರದ ಉಪ್ಪು ಅಥವಾ ಪುಡಿ ಉಪ್ಪು ಯಾವುದು ಆರೋಗ್ಯಕ್ಕೆ ಒಳ್ಳೆಯದು?

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಹಾಗೆ ಉಪ್ಪಿಲ್ಲದೆ ಯಾವ ಆಹಾರ(Food) ರುಚಿಸದು, ಹಾಗೆಯೇ ಅಡುಗೆಯಲ್ಲಿ ಯಾವ ಉಪ್ಪನ್ನು ಹಾಕಿದರೆ ಉತ್ತಮ ಎಂಬುದರ ಕುರಿತ ಮಾಹಿತಿ ಇಲ್ಲಿದೆ.

Sea Salt Vs Table Salt: ಸಮುದ್ರದ ಉಪ್ಪು ಅಥವಾ ಪುಡಿ ಉಪ್ಪು  ಯಾವುದು ಆರೋಗ್ಯಕ್ಕೆ ಒಳ್ಳೆಯದು?
Salt
Follow us
| Updated By: ನಯನಾ ರಾಜೀವ್

Updated on: Dec 12, 2022 | 3:30 PM

ಉಪ್ಪಿಗಿಂತ ರುಚಿ ಬೇರೆ ಇಲ್ಲ ಎನ್ನುವ ಹಾಗೆ ಉಪ್ಪಿಲ್ಲದೆ ಯಾವ ಆಹಾರ(Food) ರುಚಿಸದು, ಹಾಗೆಯೇ ಅಡುಗೆಯಲ್ಲಿ ಯಾವ ಉಪ್ಪನ್ನು ಹಾಕಿದರೆ ಉತ್ತಮ ಎಂಬುದರ ಕುರಿತ ಮಾಹಿತಿ ಇಲ್ಲಿದೆ. ಮಸಾಲೆಯಂತೆಯೇ ಉಪ್ಪು ಕೂಡ ಅಡುಗೆಯ ರುಚಿಯನ್ನು ಇಮ್ಮಡಿಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಸಮುದ್ರದ ಉಪ್ಪು ಅಥವಾ ಟೇಬಲ್ ಸಾಲ್ಟ್​ ಯಾವುದು ಆರೋಗ್ಯ ಉತ್ತಮ. ಸಮುದ್ರದ ಉಪ್ಪು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಆರೋಗ್ಯಕರ ಮತ್ತು ತೂಕ ನಷ್ಟಕ್ಕಾಗಿ ಬಿಳಿ ಉಪ್ಪನ್ನು ಬದಲಿಸಲು ಸಲಹೆ ನೀಡಲಾಗುತ್ತದೆ.

ಅದನ್ನು ಸಾವಯವ, ನೈಸರ್ಗಿಕ ಮತ್ತು ಶುದ್ಧ ಎಂದು ಕರೆಯಲಾಗುತ್ತದೆ, ಇದು ಟೇಬಲ್ ಸಾಲ್ಟ್‌ಗಿಂತ ಉತ್ತಮವಾಗಿದೆ ಎಂದು ಹೇಳಲಾಗುತ್ತದೆ.

ಹೃದಯದ ಆರೋಗ್ಯ: ನಿಮ್ಮ ಆಹಾರದಲ್ಲಿ ಹೆಚ್ಚು ಉಪ್ಪು ಅಥವಾ ಸೋಡಿಯಂ ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಇದು ಕ್ಯಾಲ್ಸಿಯಂ ನಷ್ಟವನ್ನು ಉಂಟುಮಾಡಬಹುದು, ಮೂಳೆಗೆ ಸಂಬಂಧಿಸಿದ ಸಮಸ್ಯೆಯೂ ನಿಮ್ಮನ್ನು ಕಾಡಬಹುದು. ಉಪ್ಪು(Salt) ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಅನೇಕ ರೀತಿಯಲ್ಲಿ ಆರೋಗ್ಯಕರ. ಆದರೆ ಉಪ್ಪು ಅಶುದ್ಧವಾಗಿದ್ದರೆ, ಅದು ಅನೇಕ ರೀತಿಯ ಹಾನಿಯನ್ನು ಉಂಟುಮಾಡಬಹುದು. ಹಾಗಾಗಿ, ಅದು ಆರೋಗ್ಯಕ್ಕೆ ಹಾನಿಕಾರಕವಾಗುತ್ತೆ.

ಮತ್ತಷ್ಟು ಓದಿ: ಶರೀರದಲ್ಲಿ ಇಂತಹ ಲಕ್ಷಣಗಳು ಕಾಣಿಸುತ್ತಿವೆಯೇ? ಹೆಚ್ಚಿನ ಪ್ರಮಾಣದ ಉಪ್ಪು ಸೇವನೆಯೇ ಕಾರಣ

ಉಪ್ಪು ದೇಹದಲ್ಲಿ ಅಯೋಡಿನ್(Iodine) ಕೊರತೆಯನ್ನು ಪೂರೈಸುತ್ತೆ ಮತ್ತು ಹೈಪೋಥೈರಾಯ್ಡಿಸಂನಂತಹ ರೋಗಗಳಿಂದ ರಕ್ಷಿಸುತ್ತೆ. ಆದುದರಿಂದ ಉಪ್ಪನ್ನು ನಿಯಮಿತವಾಗಿ ಸೇವಿಸಲೇಬೇಕು. ಗರ್ಭಿಣಿಯರಿಗೆ ಉಪ್ಪಿನ ಸೇವನೆ ಬಹಳ ಮುಖ್ಯ. ಉಪ್ಪು ತಾಯಿ ಮತ್ತು ಮಗುವನ್ನು ಅಯೋಡಿನ್ ಕೊರತೆಯಿಂದ ರಕ್ಷಿಸುತ್ತದೆ.

ಕೈ ಅಥವಾ ಕಾಲುಗಳಲ್ಲಿ ಊತವಿದ್ದರೆ, ನೀವು ಬಿಸಿ ನೀರು ಮತ್ತು ಉಪ್ಪನ್ನು ಬೆರೆಸಿ ಮುಳುಗಿಸಬಹುದು. ಇದು ಸಾಕಷ್ಟು ಆರಾಮ ನೀಡುತ್ತೆ. ಇಲ್ಲವಾದರೆ ಊತವಿರುವ ಜಾಗಕ್ಕೆ ಉಪ್ಪಿನ್ನು ಬಟ್ಟೆಯಲ್ಲಿ ಕಟ್ಟಿ ಬಿಸಿ ಮಾಡಿ ಇಟ್ಟರೆ ಅದರಿಂದ ಸಮಸ್ಯೆ ನಿವಾರಣೆಯಾಗುತ್ತೆ. ನಿಮಗೆ ತಕ್ಷಣ ಆರಾಮ ಸಿಗುತ್ತದೆ. ‘ನಿಮ್ಮ ದೇಹವು ಉತ್ತಮವಾಗಿ ಹೈಡ್ರೇಟ್ ಆಗಿರಲು ಸೋಡಿಯಂ ಮತ್ತು ಪೊಟ್ಯಾಸಿಯಮ್ ನ ಸೂಕ್ಷ್ಮ ಸಮತೋಲನದ ಅಗತ್ಯವಿದೆ. ಏಕೆಂದರೆ ನಿಮ್ಮ ದೇಹದಲ್ಲಿನ ನೀರು ಸೋಡಿಯಂ ಅನ್ನು ಅನುಸರಿಸುತ್ತದೆ, ಆದ್ದರಿಂದ ನೀವು ಹೆಚ್ಚು ಸೋಡಿಯಂ ಹೊಂದಿದ್ದರೆ ನಿಮ್ಮ ದೇಹವು ನೀರನ್ನು ಉಳಿಸಿಕೊಳ್ಳುತ್ತದೆ. ಪೊಟ್ಯಾಸಿಯಮ್ ಇದನ್ನು ಸಮತೋಲನಗೊಳಿಸಲು ಕೆಲಸ ಮಾಡುತ್ತದೆ, ಅದಕ್ಕಾಗಿಯೇ ಸಮುದ್ರದ ಉಪ್ಪು ಸೋಡಿಯಂ ಕ್ಲೋರೈಡ್ ಅಥವಾ ಟೇಬಲ್ ಸಾಲ್ಟ್ ಗಿಂತ ಉತ್ತಮವಾಗಿದೆ.

ಮತ್ತಷ್ಟು ಓದಿ: Kidney Failure: ಕಿಡ್ನಿಗೆ ಹಾನಿಯುಂಟು ಮಾಡುವ ಈ ಅಭ್ಯಾಸಗಳಿಂದ ದೂರವಿರಿ

ಅಂಕಿ ಅಂಶಗಳ ಪ್ರಕಾರ, ಹೆಚ್ಚಿನ ಅಮೆರಿಕನ್ನರು ದಿನಕ್ಕೆ ಕನಿಷ್ಠ 1.5 ಟೀ ಚಮಚ ಉಪ್ಪನ್ನು ಅಥವಾ ಸುಮಾರು 3400 ಮಿಗ್ರಾಂ ಸೋಡಿಯಂ ಅನ್ನು ಸೇವಿಸುತ್ತಾರೆ, ಇದು ನಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನದನ್ನು ಹೊಂದಿರುತ್ತದೆ.

ಪುಡಿಉಪ್ಪನ್ನು ಸೋಡಿಯಂ ಕ್ಲೋರೈಡ್‌ನಿಂದ ತಯಾರಿಸುತ್ತಾರೆ. ಈ ಉಪ್ಪು ನೈಸರ್ಗಿಕವಾಗಿ ಸಿಗುವ ಸಮುದ್ರದ ಉಪ್ಪು, ಕಲ್ಲು ಉಪ್ಪು ಮತ್ತು ಸ್ಫಟಿಕ ಉಪ್ಪಿನಂತೆಯೇ ಕಂಡರೂ, ಪುಡಿ ಉಪ್ಪು ಇದರ ನೈಸರ್ಗಿಕವಾದ ಯಾವುದೇ ಅಂಶವನ್ನು ಹೊಂದಿಲ್ಲ, ಬದಲಾಗಿ ಕೇವಲ ಅದರ ರುಚಿಯನ್ನು ಮಾತ್ರ ಅನುಕರಿಸುತ್ತದೆ.

ನಾವು ಮಾರುಕಟ್ಟೆಯಿಂದ ಖರೀದಿಸುವ, ರೆಸ್ಟೋರೆಂಟ್ ಗಳಲ್ಲಿ ಕಾಣಸಿಗುವ ಅಥವಾ ಹೊಟೇಲ್‌ ಸೇರಿದಂತೆ ಎಲ್ಲೆಡೆ ಬಳಸುವ ಪುಡಿ ಉಪ್ಪಿನಲ್ಲಿ ಸಂಶ್ಲೇಷಿತ ರಾಸಾಯನಿಕ ಗಳಿವೆ. ಈ ವಿಷಯ ನಿಮಗೆ ಆಘಾತವನ್ನುಂಟು ಮಾಡಿದರ, ಪುಡಿಉಪ್ಪು ಕೇವಲ ಅನಾರೋಗ್ಯಕರವಲ್ಲ, ಅವು ವಿಷಕಾರಿ ಎಂದೇ ಹೇಳಲಾಗುತ್ತದೆ.

ನೈಸರ್ಗಿಕ ಉಪ್ಪು ಅಥವಾ ಪುಡಿ ಉಪ್ಪಿನಲ್ಲಿರುವ ನೈಸರ್ಗಿಕ ಅಯೋಡಿನ್ ಅಂಶ ಈ ಪುಡಿಉಪ್ಪಿನಲ್ಲಿ ಖಂಡಿತವಾಗಿಯೂ ಇರುವುದಿಲ್ಲ. ಪುಡಿಉಪ್ಪಿನಲ್ಲಿ ನೈಸರ್ಗಿಕ ಅಯೋಡಿನ್ ಅಂಶ ಇಲ್ಲದೇ ಇರುವುದೇ ನಿಮ್ಮ ಥೈರಾಯ್ಡ್ ಗ್ರಂಥಿಗಳನ್ನು ತೀವ್ರವಾಗಿ ಹಾನಿಗೊಳಿಸುತ್ತದೆ ಅಲ್ಲದೇ, ಚಯಾಪಚಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಬಹುತೇಕರು ಪುಡಿಉಪ್ಪ (ಸಿಂಥೆಟಿಕ್)ನ್ನು ಇಂದಿಗೂ ನೈಸರ್ಗಿಕ ಉಪ್ಪು ಎಂದೇ ಪರಿಗಣಿಸುತ್ತಾರೆ.

ಪುಡಿಉಪ್ಪನ್ನು ಕಚ್ಚಾ ತೈಲದ ಸಾರದಿಂದ ತಯಾರಿಸುತ್ತಾರೆ. ಚ್ಚಾ ತೈಲವನ್ನು 1200 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ ಬಿಸಿ ಮಾಡುವ ಮೂಲಕ ಪುಡಿಉಪ್ಪು ತಯಾರಾಗುತ್ತದೆ. ಈ ತಾಪಮಾನದಲ್ಲಿ ಉಪ್ಪನ್ನು ಬಿಸಿ ಮಾಡಿದಾಗ ಅದರಲ್ಲಿರುವ ಸುಮಾರು 80ರಷ್ಟು ಪ್ರಮುಖ ಖನಿಜಾಂಶಗಳು ತನ್ನ ಸತ್ವವನ್ನೇ ಕಳೆದುಕೊಳ್ಳುತ್ತದೆ ಎಂದರೆ ಅಚ್ಚರಿಯಲ್ಲ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ