Kidney Disease: ಕಿಡ್ನಿಯ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುವ ಪರಿಣಾಮಕಾರಿ ಮನೆಮದ್ದು ಇಲ್ಲಿದೆ

ಪೌಷ್ಟಿಕತಜ್ಞೆ ಭಕ್ತಿ ಕಪೂರ್ ತನ್ನ ಇತ್ತೀಚಿನ ಇನ್ಟಾಗ್ರಾಮ್ ಪೋಸ್ಟ್​​​ನಲ್ಲಿ ಅನಾರೋಗ್ಯಕರ ಮೂತ್ರಕೋಶದ ಬಗ್ಗೆ ಹಾಗೂ ಕೆಲವು ಪೌಷ್ಟಿಕ ಸಲಹೆಯನ್ನು ಅನುಸರಿಸುವ ಮೂಲಕ ಕಿಡ್ನಿಯ ಕಾರ್ಯವನ್ನು ಹೇಗೆ ಸುಧಾರಿಸಬಹುದು ಎಂಬುದರ ಬಗ್ಗೆ ಹಂಚಿಕೊಂಡಿದ್ದಾರೆ.

Kidney Disease: ಕಿಡ್ನಿಯ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುವ ಪರಿಣಾಮಕಾರಿ ಮನೆಮದ್ದು ಇಲ್ಲಿದೆ
Follow us
ಅಕ್ಷತಾ ವರ್ಕಾಡಿ
|

Updated on: Feb 02, 2023 | 7:30 AM

ದುರ್ಬಲ ಮೂತ್ರಕೋಶವು ರೋಗ ಅಥವಾ ಗಾಯದಿಂದಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವುದಿಲ್ಲ. ನಿಮ್ಮ ಮೂತ್ರಪಿಂಡಗಳು ದೇಹದಿಂದ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವಗಳನ್ನು ತೆಗೆದುಹಾಕುತ್ತವೆ ಮತ್ತು ನೀರು, ಲವಣ ಮತ್ತು ಖನಿಜಗಳ ಆರೋಗ್ಯಕರ ಸಮತೋಲನವನ್ನು ಕಾಪಾಡಿಕೊಳ್ಳುತ್ತವೆ. ಮೂತ್ರಪಿಂಡದ ಕಾಯಿಲೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಉಂಟಾಗಬಹುದು. ದೀರ್ಘಕಾಲದ ಮೂತ್ರಪಿಂಡದ ಕಾಯಿಲೆಯ ಸಂದರ್ಭದಲ್ಲಿ, ಮೂತ್ರಪಿಂಡಗಳು ಕ್ರಮೇಣ ತಮ್ಮ ಕಾರ್ಯವನ್ನು ಕಳೆದುಕೊಳ್ಳುತ್ತವೆ. ದುರ್ಬಲ ಮೂತ್ರಪಿಂಡದ ರೋಗಲಕ್ಷಣವು ಮೂತ್ರವಿಸರ್ಜನೆಯ ಹೆಚ್ಚಿದ ಪ್ರಚೋದನೆ, ಹಲವು ಬಾರಿ ಹಸಿವಾಗದಿರುವುದು, ಕಣ್ಣುಗಳ ಊದುವಿಕೆ, ದುರ್ವಾಸನೆ, ಸ್ನಾಯುಗಳ ಸೆಳೆತವನ್ನು ಒಳಗೊಂಡಿರುತ್ತದೆ.

ಪೌಷ್ಟಿಕತಜ್ಞೆ ಭಕ್ತ ಕಪೂರ್ ತನ್ನ ಇತ್ತೀಚಿನ ಇನ್ಟಾಗ್ರಾಮ್ ಪೋಸ್ಟ್​​ನಲ್ಲಿ ದುರ್ಬಲ ಮೂತ್ರಪಿಂಡದ ಲಕ್ಷಣಗಳು ಮತ್ತು ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಪರಿಣಾಮಕಾರಿ ಮನೆಮದ್ದುಗಳ ಬಗ್ಗೆ ಮಾತನಾಡಿದ್ದಾರೆ. ಮೂತ್ರಪಿಂಡಗಳು ನಿಮ್ಮ ದೇಹದ ವೈಯಕ್ತಿಕ ಕಸ ಸಂಗ್ರಹಗಳಂತೆ ಕಾರ್ಯನಿರ್ವಹಿಸುತ್ತವೆ. ಮೂತ್ರಪಿಂಡಗಳು ದೇಹದಲ್ಲಿ ತ್ಯಾಜ್ಯ ಮತ್ತು ಹೆಚ್ಚುವರಿ ದ್ರವ ಸಂಗ್ರಹವನ್ನು ತಡೆಯುತ್ತದೆ. ಎಲೆಕ್ಟ್ರೊಲೈಟ್ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಕೆಂಪು ರಕ್ತಕಣಗಳನ್ನು ಸೃಷ್ಟಿಸುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಬಲವಾದ ಮೂಳೆಗಳನ್ನು ನಿರ್ಮಿಸುತ್ತದೆ. ಕಿಡ್ನಿ ರೋಗವು ಬಹಳ ಮುಂದುವರೆಯುವವರೆಗೆ ಪತ್ತೆಯಾಗುವುದಿಲ್ಲ, ದುರಾದೃಷ್ಟವಶಾತ್ ಯಾರಿಗಾದರೂ ಕಿಡ್ನಿ ರೋಗ ಕಾಣಿಸಿಕೊಂಡರೆ ಡಯಾಲಿಸಿಸ್ ಅಥವಾ ಕಸಿ ಅಗತ್ಯವಿರುತ್ತದೆ ಎಂದು ಭಕ್ತಿ ಕಪೂರ್ ಹೇಳಿದ್ದಾರೆ.

ಅನಾರೋಗ್ಯ ಮೂತ್ರಪಿಂಡಗಳ ಲಕ್ಷಣಗಳು:

  • ಉಬ್ಬಿದ ಕಣ್ಣುಗಳು: ಇದು ಪ್ರೋಟೀನ್‌ನ ಅತಿಯಾದ ಸೇವನೆಯ ಕಾರಣದಿಂದಾಗಿರಬಹುದು.
  • ನೋಕ್ಟುರಿಯಾ: ಇದು ರಾತ್ರಿಯಲ್ಲಿ ನಿರಂತರವಾಗಿ ಮೂತ್ರವಿಸರ್ಜನೆಗಾಗಿ ಎಚ್ಚರಗೊಳ್ಳುವ ಸ್ಥಿತಿಯಾಗಿದೆ.
  • ಊದಿಕೊಂಡ ಮುಖ ಅಥವಾ ನೊರೆ ಮೂತ್ರ: ಇದು ನಿರ್ಜಲೀಕರಣದ ಕಾರಣದಿಂದಾಗಿರಬಹುದು. ನಿಮ್ಮ ವಿಷಯದಲ್ಲಿ ಹೀಗಾಗಿದ್ದರೆ, ನೀವು ಹೆಚ್ಚಾಗಿ ನೀರು ಕುಡಿಯಬೇಕಾಗುತ್ತದೆ.
  • ಕೆಟ್ಟ ಉಸಿರಾಟ ಅಥವಾ ನಿಮ್ಮ ಬಾಯಿಯಲ್ಲಿ ಲೋಹದಂತ ರುಚಿಯು ಅನಾರೋಗ್ಯಕರ ಮೂತ್ರಪಿಂಡದ ಸೂಚನೆಯಾಗಿರಬಹುದು.

ಇದನ್ನೂ ಓದಿ: ವಿವಿಧ ರೀತಿಯ ಸಂಧಿವಾತದ ಲಕ್ಷಣ ಹಾಗೂ ಚಿಕಿತ್ಸೆಯ ಕುರಿತು ತಜ್ಞರು ನೀಡಿದ ಸಲಹೆ ಇಲ್ಲಿದೆ

ಕಿಡ್ನಿಯ ಕಾರ್ಯವನ್ನು ಸುಧಾರಿಸಲು ಮನೆಮದ್ದು:

ನಿಂಬೆ ರಸವನ್ನು ಬಳಸಿ ಮತ್ತು ವಿಟಮಿನ್ ಸಿ ಅಧಿಕವಾಗಿರುವ ಆಹಾರವನ್ನು ಸೇವಿಸಿ:

ನಿಮ್ಮ ಪಾನೀಯಯಗಳಿಗೆ ನೀವು ನಿಯಮಿತವಾಗಿ ತಾಜಾ ಹಿಂಡಿದ ನಿಂಬೆಹಣ್ಣಿನ ರಸವನ್ನು ಸೇರಿಸಬಹುದು. ಸಿಟ್ರಸ್ ಹಣ್ಣುಗಳು, ಬ್ರೋಕೊಲಿ, ಸೌತೆಕಾಯಿ, ಹಸಿರು ಎಲೆ ತರಕಾರಿಗಳನ್ನು ಒಳಗೊಂಡಂತೆ ನಿಂಬೆ ಮತ್ತು ವಿಟಮಿನ್ ಸಿ ಭರಿತ ಆಹಾರಗಳು ಕಿಡ್ನಿಯ ಕಾರ್ಯವನ್ನು ನಿರ್ವಹಿಸಲು ಉಪಯುಕ್ತವಾಗಿದೆ. ಇದು ಕಿಡ್ನಿಯಲ್ಲಿ ಕಲ್ಲುಗಳ ಬೆಳವಣಿಗೆಯನ್ನು ತಡೆಯುತ್ತದೆ.

ಕಡಿಮೆ ಪೊಟ್ಯಾಸಿಯಮ್ ಹೊಂದಿರುವ ಆಹಾರವನ್ನು ಆಯ್ಕೆಮಾಡಿ:

ಬಾಳೆಹಣ್ಣು, ಕಿತ್ತಳೆ, ಆಲೂಗಡ್ಡೆ, ಪಾಲಕ್, ಟೊಮೆಟೊಗಳು ಹೆಚ್ಚಿನ ಪೊಟ್ಯಾಸಿಯಮ್ ಅಂಶಗಳನ್ನು ಹೊಂದಿದೆ. ಸೇಬು, ಎಲೆಕೋಸು, ಕ್ಯಾರೆಟ್, ಹಸಿರು ಬೀನ್ಸ್, ದ್ರಾಕ್ಷಿ, ಸ್ಟ್ರಾಬೆರಿಗಳು ಕಡಿಮೆ ಪೊಟ್ಯಾಸಿಯಮ್ ಅಂಶವನ್ನು ಹೊಂದಿದೆ. ಸೆಲರಿ(ಓಮ ಎಲೆ) ಜ್ಯೂಸ್: ಮೂತ್ರಪಿಂಡದ ಕಾರ್ಯವನ್ನು ಸುಧಾರಿಸಲು ಸೆಲರಿ ಜ್ಯೂಸ್ ಸಹಾಯ ಮಾಡುತ್ತದೆ. ಸೆಲರಿ ರಸವು ಖನಿಜ ಮತ್ತು ಲವಣಗಳನ್ನು ಒಳಗೊಂಡಿರುತ್ತದೆ. ಊಟಕ್ಕೆ ೩೦ ನಿಮಿಷಗಳ ಮುಂಚಿತವಾಗಿ ಪ್ರತಿದಿನ 1 ರಿಂದ 2 ಗ್ಲಾಸ್ ಸೆಲರಿ ಜ್ಯೂಸ್ ಸೇವಿಸಲು ಭಕ್ತಿ ಕಪೂರ್ ಸಲಹೆ ನೀಡಿದ್ದಾರೆ.

ದಂಡೇಲಿಯನ್(ಕಾಡು ಸೇವಂತಿಗೆ) ಬೇರು:

ದಂಡೇಲಿಯನ್ ಹೂವುಗಳಲ್ಲಿ ಉತ್ಕರ್ಷಣ ನಿರೋಧಕ ಗುಣಗಳನ್ನು ಕಾಣಬಹುದು. ಹೆಚ್ಚುವರಿಯಾಗಿ ದಂಡೇಲಿಯನ್ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಕಿಡ್ನಿಗಳು, ಪಿತ್ತಕೋಶ ಮತ್ತು ಯಕೃತ್ತನ್ನು ಶುದ್ಧೀಕರಿಸಲು ದಂಡೇಲಿಯನ್ ಗಿಡಮೂಲಿಕೆಯನ್ನು ತಜ್ಞರು ಬಳಸುತ್ತಾರೆ. ಉಪ್ಪು ಸೇರಿಸದ ಆಹಾರ ಉತ್ಪನ್ನಗಳಿಂದ ದೂರವಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ