RA Awareness Day 2023: ವಿವಿಧ ರೀತಿಯ ಸಂಧಿವಾತದ ಲಕ್ಷಣ ಹಾಗೂ ಚಿಕಿತ್ಸೆಯ ಕುರಿತು ತಜ್ಞರು ನೀಡಿದ ಸಲಹೆ ಇಲ್ಲಿದೆ

ಫೆಬ್ರವರಿ 2, 2022 ರಂದು, ಸಂಧಿವಾತ ಕಾಯಿಲೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಿಂದ ರುಮಟಾಯ್ಡ್ ಸಂಧಿವಾತ ಜಾಗೃತಿ ದಿನ(Rheumatoid Arthritis Awareness Day) ಆಚರಿಸಲಾಗುತ್ತದೆ.

RA Awareness Day 2023: ವಿವಿಧ ರೀತಿಯ ಸಂಧಿವಾತದ ಲಕ್ಷಣ ಹಾಗೂ ಚಿಕಿತ್ಸೆಯ ಕುರಿತು ತಜ್ಞರು ನೀಡಿದ ಸಲಹೆ ಇಲ್ಲಿದೆ
Follow us
ಅಕ್ಷತಾ ವರ್ಕಾಡಿ
|

Updated on:Feb 02, 2023 | 10:01 AM

ಸಂಧಿವಾತವು(Arthritis) ಕೀಲುಗಳ ಸಾಮಾನ್ಯ ದೀರ್ಘಕಾಲದ ರೋಗಲಕ್ಷಣವಾಗಿದೆ. ಅದು ನೋವು, ಕೀಲುಗಳ ಬಿಗಿತ ಮತ್ತು ಸೀಮಿತ ವ್ಯಾಪ್ತಿಯ ಚಲನೆಯಿಂದ ರೋಗಲಕ್ಷಣವನ್ನು ಉಂಟುಮಾಡುತ್ತದೆ. ಸಂಧಿವಾತದಲ್ಲಿ 100ಕ್ಕೂ ಹೆಚ್ಚು ಪ್ರಕಾರಗಳಿವೆ ಮತ್ತು ಅವುಗಳ ರೋಗಲಕ್ಷಣಗಳು ಆಯಾಯಾ ಪ್ರಕಾರಗಳನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ ರುಮಟಾಯ್ಡ್ ಸಂಧಿವಾತ, ಅಸ್ಥಿ ಸಂಧಿವಾತ ಮತ್ತು ಸೋರಿಯಾಟಿಕ್ ಸಂಧಿವಾತಗಳು ಮೂರು ವಿಭಿನ್ನ ರೀತಿಯ ಸಂಧಿವಾತಗಳಾಗಿವೆ. ಇವೆಲ್ಲವೂ ಉರಿಯೂತ ಕೀಲುನೋವನ್ನು ಉಂಟು ಮಾಡುತ್ತದೆ. ವ್ಯಕ್ತಿಯ ಚಲನಶೀಲತೆಯ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ರೋಗಲಕ್ಷಣಗಳು ಪರಸ್ಪರ ಭಿನ್ನವಾಗಿರುತ್ತದೆ.

ಅಸ್ಥಿಸಂಧಿವಾತವನ್ನು ಸಂಧಿವಾತದ ಅತ್ಯಂತ ಸಾಮಾನ್ಯ ರೂಪವೆಂದು ಹೇಳಲಾಗುತ್ತದೆ. ರುಮಟಾಯ್ಡ್ ಸಂಧಿವಾತವು ಎಲ್ಲಕ್ಕಿಂತ ಹೆಚ್ಚು ನೋವಿನಿಂದ ಕೂಡಿದೆ. ಅಸ್ಥಿಸಂಧಿವಾತವು ಹೆಚ್ಚಾಗಿ ಕೀಲುಗಳ ಸವೆತದಿಂದ ಉಂಟಾಗುತ್ತದೆ. ಇದರ ರೋಗಲಕ್ಷಣವು ಕೀಲುನೋವು ಮತ್ತು ಬಿಗಿತದಿಂದ ಕೂಡಿರುತ್ತದೆ. ರುಮಟಾಯ್ಡ್ ಸಂಧಿವಾತವು ಸ್ವಯಂ ನಿರೋಧಕ ಅಸ್ವಸ್ಥತೆಯಾಗಿದ್ದು, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಆರೋಗ್ಯಕರ ಕೋಶಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತದೆ ಮತ್ತು ಇದು ಕೀಲುಗಳಲ್ಲಿ ಉರಿಯೂತ, ನೋವು, ಊತ ಮತ್ತು ಬಿಗಿತವನ್ನು ಉಂಟುಮಾಡುತ್ತದೆ. ಮತ್ತೊಂದೆಡೆ ಸೋರಿಯಾಟಿಕ್ ಸಂಧಿವಾತವು ಸೋರಿಯಾಸಿಸ್ ಹೊಂದಿರುವ ಜನರ ಮೇಲೆ ಪರಿಣಾಮ ಬೀರುತ್ತದೆ.

ಸಂಧಿವಾತದಲ್ಲಿ ಉರಿಯೂತ ಮತ್ತು ಉರಿಯೂತವಿಲ್ಲದ ಎರಡು ವಿಧಗಳಿವೆ. ರುಮಟಾಯ್ಡ್ ಮತ್ತು ಸೋರಿಯಾಟಿಕ್ ಸಂಧಿವಾತವು ಉರಿಯೂತದ ಲಕ್ಷಣಗಳನ್ನು ಹೊಂದಿರುತ್ತದೆ. ಉರಿಯೂತದ ಸಂಧಿವಾತ ಹೊಂದಿರುವ ರೋಗಿಗಳು ಕೀಲುಗಳ ಒಳಪದರದ ಉರಿಯೂತವನ್ನು ಹೊಂದಿರುತ್ತಾರೆ . ಅಸ್ಥಿಸಂಧಿವಾತವನ್ನು ಕ್ಷೀಣಗೊಳ್ಳುವ ಜಂಟಿ ಕಾಯಿಲೆ ಎಂದು ಕರೆಯಲಾಗುತ್ತದೆ. ಇದು ಉರಿಯೂತದ ಸಂಧಿವಾತದ ಅತ್ಯಂತ ಸಾಮಾನ್ಯ ರೂಪವಾಗಿದೆ ಎಂದು ಭುವನೇಶ್ವರದ ಕಿಮ್ಸ್ನ ಸಹಾಯಕ ಪ್ರಾಧ್ಯಾಪಕ ಡಾ. ದೇಬಾಶಿಸ್ ಮೈಕಾಪ್ ಹೇಳುತ್ತಾರೆ.

ಇದನ್ನೂ ಓದಿ: ಪಾಪ್ ಕಾರ್ನ್ ತಿನ್ನುವುದರಿಂದ ತೂಕ ಕಳೆದುಕೊಳ್ಳಲು ಸಾಧ್ಯವೇ? ತಜ್ಞರ ಸಲಹೆ ಇಲ್ಲಿದೆ

ಡಾ. ಮೈಕಲ್ ವಿವಿಧ ರೀತಿಯ ಸಂಧಿವಾತದ ಲಕ್ಷಣಗಳು ಹೇಗೆ ಭಿನ್ನವಾಗಿದೆ ಎಂಬುದನ್ನು ವಿವರಿಸಿದ್ದಾರೆ:

ಅಸ್ಥಿ ಸಂಧಿವಾತ:

ಕೀಲುಗಳ ನಡುವಿನ ಕಾರ್ಟಿಲೆಜ್(ಮೃದು ಅಸ್ಥಿ) ಕ್ಷೀಣಿಸಿದಾಗ ಮತ್ತು ಮೂಳೆಗಳು ಪರಸ್ಪರ ಉಜ್ಜಲ್ಪಟ್ಟಾಗ ಅದನ್ನು ಅಸ್ಥಿಸಂಧಿವಾತ ಎಂದು ಕರೆಯಲಾಗುತ್ತದೆ. ಇದು ನಡೆಯುವಾಗ ಅಥವಾ ಮೆಟ್ಟಿಲುಗಳನ್ನು ಹತ್ತುವುದು ಮುಂತಾದ ಚಟುವಟಿಕೆಗಳಲ್ಲಿ ಕೀಲುನೋವನ್ನು ಉಂಟುಮಾಡುತ್ತದೆ. ಇದು ಸಂಧಿವಾತದ ಸಾಮಾನ್ಯ ರೂಪಗಳಲ್ಲಿ ಒಂದಾಗಿದೆ. ಇದರಲ್ಲಿ ಕೀಲುಗಳ ಸವೆತ ಮತ್ತು ಕೀಲು ಗಂಟಿನಲ್ಲಿ ನೀರು ಕಾಣಿಸಿಕೊಳ್ಳುತ್ತದೆ. ಈ ಸ್ಥಿತಿಯು ಕೀಲುಗಳ ಕ್ಷೀಣತೆಗೆ ಸಂಬಂಧಿಸಿರುವುದರಿಂದ, ಇದು ಸಾಮಾನ್ಯವಾಗಿ ಮಧ್ಯವಯಸ್ಕ ಅಥವಾ ವಯಸ್ಸಾದವರ ಮೇಲೆ ಪರಿಣಾಮ ಬೀರುತ್ತದೆ.

ರುವಟಾಯ್ಡ್ ಸಂಧಿವಾತ:

ರುಮಟಾಯ್ಡ್ ಸಂಧಿವಾತವು ಸ್ವಯಂ ನಿರೋಧಕ ಉರಿಯೂತ ಸಂಧಿವಾತದ ಅತ್ಯಂತ ಸಾಮಾನ್ಯ ರೂಪವಾಗಿದೆ. ಸ್ಥೂಲಕಾಯತೆ, ಧೂಮಪಾನ, ಸಂಧಿವಾತ ರೋಗದ ಇತಿಹಾಸವನ್ನು ಹೊಂದಿರುವ ಕುಟುಂಬದಿಂದ ಅಂದರೆ ಪಾರಂಪರಿಕವಾಗಿ ರುಮಟಾಯ್ಡ್ ಸಂದಿವಾತವು ಕಾಣಿಸಿಕೊಳ್ಳುತ್ತದೆ. ಇದು ಸ್ವಯಂ ನಿರೋಧಕ ಕಾಯಿಲೆಯಾಗಿದ್ದು, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಕೀಲುಗಳನ್ನು ಸುತ್ತುವರೆದಿರುವ ಪೊರೆಗಳ ಒಳಪದರವನ್ನು ಆಕ್ರಮಿಸುತ್ತದೆ. ಇದು ದೀರ್ಘಕಾಲದ ಉರಿಯೂತವನ್ನು ಉಂಟುಮಾಡುತ್ತದೆ. ಇದು ಕೀಲು ನೋವು, ಊತ ಮತ್ತು ಬಿಗಿತಕ್ಕೆ ಕಾರಣವಾಗುತ್ತದೆ. ರಮಟಾಯ್ಡ್ ಸಂಧಿವಾತವು ಆಂತರಿಕ ಅಂಗಗಳು, ರಕ್ತನಾಳಗಳು, ನರಗಳು ಮತ್ತು ಚರ್ಮದಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಇದಕ್ಕೆ ಚಿಕಿತ್ಸೆ ಪಡೆಯದ ರೋಗಿಗಳು ಕಡಿಮೆ ಜೀವಿತಾವಧಿಯನ್ನು ಹೊಂದಿರುತ್ತಾರೆ. ಹೃದಯರಕ್ತನಾಳದ ಕಾಯಿಲೆ ಮತ್ತು ಲಿಂಫೋಮಾದ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

ಸೋರಿಯಾಟಿಕ್ ಸಂಧಿವಾತ:

ಸೋರಿಯಾಟಿಕ್ ಸಂಧಿವಾತವು ಶೇಕಡಾ 1ರಿಂದ 2ರಷ್ಟು ಜನಸಂಖ್ಯೆಯ ಮೇಲೆ ಬೀರುವ ಸ್ವಯಂ ನಿರೋಧಕ ಉರಿಯೂತದ ಒಂದು ರೂಪವಾಗಿದೆ. ಇದು ಸೋರಿಯಾಸಿಸ್ ರೋಗಗಳಲ್ಲಿ ಅಥವಾ ಕೆಲವು ಸಂದರ್ಭಗಳಲ್ಲಿ ಸೋರಿಯಾಸಿಸ್ ಇಲ್ಲದೆ ಸಂಭವಿಸಬಹುದು. ಸೋರಿಯಾಟಿಕ್ ಸಂಧಿವಾತದ ಹರಡುವಿಕೆಯು ಪುರುಷರು ಮತ್ತು ಮಹಿಳೆಯರಲ್ಲಿ ಒಂದೇ ಆಗಿರುತ್ತದೆ. ಇದು ಉರಿಯೂತದ ಬೆನ್ನುನೋವಿಗೂ ಕಾರಣವಾಗಬಹುದು. ಜೊತೆಗೆ ಬೆರಳುಗಳು ಅಥವಾ ಕಾಲ್ಬೆರಳುಗಳ ಮೃದು ಅಂಗಾಂಶದಲ್ಲಿ ಊತವು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: ಕ್ಯಾನ್ಸರ್​​​ ಮೊದಲ ಹಂತದ ಲಕ್ಷಣ, ಬದುಕುಳಿಯುವ ಸಾಧ್ಯತೆ ಮತ್ತು ಚಿಕಿತ್ಸೆಯ ಕುರಿತು ತಜ್ಞರು ನೀಡಿದ ಮಾಹಿತಿ ಇಲ್ಲಿದೆ

ವಿವಿಧ ರೀತಿಯ ಸಂಧಿವಾತದ ಚಿಕಿತ್ಸೆ:

ಹೈದರಾಬಾದ್‌ನ ಕಿಮ್ಸ್ ಆಸ್ಪತ್ರೆಯ ಸಂಧಿವಾತ ವಿಭಾಗದ ಕ್ಲಿನಿಕಲ್ ಡೈರೆಕ್ಟರ್ ಡಾ. ಶರತ್ ಚಂದ್ರಮೌಳಿ ಅವರು ವಿವಿಧ ರೀತಿಯ ಸಂಧಿವಾತಕ್ಕೆ ಹೇಗೆ ಚಿಕಿತ್ಸೆ ನೀಡಬಹುದು ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಅಸ್ಥಿಸಂಧಿವಾತ:

ಅಸ್ಥಿಸಂಧಿವಾತದ ನಿರ್ವಹಣೆಯು ಫಿಸಿಯೋಥೆರಪಿ, ತೂಕನಷ್ಟ ಮತ್ತು ಕಾರ್ಟಿಲೆಜ್ ರೂಪಿಸುವ ಡೈಸೆರೀನ್ ಮತ್ತು ಗ್ಲೂಕೋಸ್‌ಅಮೈನ್ ಮತ್ತು ತಾತ್ಕಾಲಿಕ ನೋವು ನಿವಾರಕಗಳನ್ನು ಒಳಗೊಂಡಿರುತ್ತದೆ. ತೀವ್ರವಾಗಿ ಹಾನಿಗೊಳಗಾದ ಕೀಲುಗಳಿಗೆ ಅನುಭವಿ ಮೂಳೆಚಿಕಿತ್ಸಕರಿಂದ ಮೂಲೆ ಬದಲಿ ಚಿಕಿತ್ಸೆ ಅಗತ್ಯವಿರುತ್ತದೆ.

ರಮಟಾಯ್ಡ್ ಮತ್ತು ಸೋರಿಯಾಟಿಕ್ ಸಂಧಿವಾತ:

ಮೆಥೋಟ್ರೆಕ್ಸೇಟ್, ಸಲ್ಪಾಸಲಾಜಿನ್ ಮತ್ತು ಲೆಫ್ಲುನೊಮೈಡ್ ನಂತಹ ಔಷಧಿಗಳು ಚಿಕಿತ್ಸೆಗೆ ಸಹಾಯ ಮಾಡುತ್ತದೆ. ಟೊಫಾನಿಟಿನಿಬ್‌ನಂತಹ ಹೊಸ ಔಷಧಿಗಳು ಸಹ ರೋಗವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಸಂಧಿವಾತದ ಲಕ್ಷಣಗಳು ತುಂಬಾ ಹೆಚ್ಚಾಗಿದ್ದಾಗ ನೋವುನಿವಾರಕಗಳಾದ ಪ್ರೆಡ್ನಿಸೋಲೋನ್‌ನಂತಹ ಸ್ಟೆರಾಯ್ಡ್ ಔಷಧಿಗಳನ್ನು ತಾತ್ಕಾಲಿಕವಾಗಿ ಬಳಸಲಾಗುತ್ತದೆ. ಚಿಕಿತ್ಸೆ ಪಡೆಯುವಲ್ಲಿ ವಿಳಂಬವಾದ ಸಂದರ್ಭದಲ್ಲಿ ನೋವು ತೀರಾ ತೀವ್ರವಾಗಿದ್ದಾಗ ಮೂಳೆ ಬದಲಿ ಶಸ್ತ್ರ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. ನಿಯಮಿತ ಫಿಸಿಯೋಥೆರಪಿ, ಧ್ಯಾನ ಮತ್ತು ಸಮತೋಲಿತ ಆಹಾರವು ಸಂಧಿವಾತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆರಂಭಿಕ ಹಂತದಲ್ಲೇ ಸರಿಯಾದ ಚಿಕಿತ್ಸೆ ಮತ್ತು ಜೀವನಶೈಲಿಯ ಮಾರ್ಪಾಡುಗಳೊಂದಿಗೆ ಸಂಧಿವಾತವನ್ನು ಗುಣಪಡಿಸಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 6:26 pm, Wed, 1 February 23

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ