World Cancer Day 2023: ಕ್ಯಾನ್ಸರ್​​​ ಮೊದಲ ಹಂತದ ಲಕ್ಷಣ, ಬದುಕುಳಿಯುವ ಸಾಧ್ಯತೆ ಮತ್ತು ಚಿಕಿತ್ಸೆಯ ಕುರಿತು ತಜ್ಞರು ನೀಡಿದ ಮಾಹಿತಿ ಇಲ್ಲಿದೆ

ಪ್ರತಿ ವರ್ಷ ಫೆಬ್ರವರಿ 4ರಂದು ವಿಶ್ವ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಮತ್ತು ಗುಣಮಟ್ಟದ ಆರೈಕೆ, ತಪಾಸಣೆ, ಆರಂಭಿಕ ಹಂತದ ಪತ್ತೆ, ಚಿಕಿತ್ಸೆಯ ಕುರಿತು ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಗುರಿ.

World Cancer Day 2023: ಕ್ಯಾನ್ಸರ್​​​ ಮೊದಲ ಹಂತದ ಲಕ್ಷಣ, ಬದುಕುಳಿಯುವ ಸಾಧ್ಯತೆ ಮತ್ತು ಚಿಕಿತ್ಸೆಯ ಕುರಿತು ತಜ್ಞರು ನೀಡಿದ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರImage Credit source: Republic World
Follow us
ಅಕ್ಷತಾ ವರ್ಕಾಡಿ
|

Updated on:Feb 03, 2023 | 9:56 AM

ಕ್ಯಾನ್ಸರ್‌ನಲ್ಲಿ ವಿವಿಧ ಹಂತಗಳಿವೆ  ಮತ್ತು ಪ್ರತಿ ಹಂತವು ಕ್ಯಾನ್ಸರ್ ಎಷ್ಟು ಬೆಳೆದಿದೆ ಅಥವಾ ಅಂಗಾಂಶವನ್ನು ಸುತ್ತುವರಿದಿದೆ ಎಂಬುದನ್ನು ಸೂಚಿಸುತ್ತದೆ. ಕ್ಯಾನ್ಸರ್ ಮಾರಣಾಂತಿಕ ಕಾಯಿಲೆಯಾಗಿದೆ. ಈ ಕಾಯಿಲೆಯನ್ನು ಮೊದಲೇ ಗುರುತಿಸಿ ಸರಿಯಾದ ಚಿಕಿತ್ಸೆ ಪಡೆದರೆ ಬದುಕುಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೂ ಉತ್ತಮ ಗುಣಮಟ್ಟದ ಜೀವನವನ್ನು ನಡೆಸಬಹುದು. ಕ್ಯಾನ್ಸರ್‌ನಲ್ಲಿ ವಿವಿಧ ಹಂತಗಳಿವೆ. ಪ್ರತಿ ಹಂತವು ಎಷ್ಟು ಬೆಳೆದಿದೆ ಅಥವಾ ಯಾವೆಲ್ಲಾ ಅಂಗಾಂಶವನ್ನು ಸುತ್ತುವರೆದಿದೆ ಎಂಬುದನ್ನು ಸೂಚಿಸುತ್ತದೆ. ಕ್ಯಾನ್ಸರ್‌ನ ಮೊದಲ ಹಂತವು ವಾಸ್ತವವಾಗಿ ಕ್ಯಾನ್ಸರ್‌ನ ಪೂರ್ವ ಹಂತವಾಗಿದ್ದು, ಕ್ಯಾನ್ಸರ್‌ನಂತೆ ಕಾಣುವ ಅಸಹಜ ಕೋಶಗಳ ಮೂಲಗಳ ಸ್ಥಳದಲ್ಲಿ ಕಂಡುಬರುತ್ತದೆ. ಇದು ಮಾರಣಾಂತಿಕವಾಗಿರಬಹುದು ಅಥವಾ ಇಲ್ಲದೆಯೂ ಇರಬಹುದು. ಮೊದಲ ಹಂತದಲ್ಲೇ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡುವ ಮೂಲಕ ಕ್ಯಾನ್ಸರ್ ರೋಗವನ್ನು ಗುಣಮುಖ ಮಾಡಬಹುದು.

ಕ್ಯಾನ್ಸರ್‌ನ ಆರಂಭಿಕ ರೂಪ ಎಂದದೇನು?

ಹಂತ ೦ ಕ್ಯಾನ್ಸರ್‌ನ್ನು ಕಾರ್ಸಿನೋಮ ಇನ್ ಸಿಟು ಎಂದು ಕರೆಯುತ್ತಾರೆ. ಇದು ಒಂದೇ ಪ್ರದೇಶಕ್ಕೆ ಸೀಮಿತವಾಗಿರುವ ಮತ್ತು ದೇಹದ ಇತರ ಭಾಗಗಳಿಗೆ ಹರಡದ ಕ್ಯಾನ್ಸರ್ ಆಗಿದೆ. ಇದು ಕ್ಯಾನ್ಸರ್‌ನ ಆರಂಭಿಕ ರೂಪವಾಗಿದ್ದು, ಆರಂಭಿಕ ಹಂತದಲ್ಲಿ ಪತ್ತೆಯಾದರೆ, ಕನಿಷ್ಠ ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದು. ಇದನ್ನು ಕ್ಯಾನ್ಸರ್ ಎಂದು ಕರೆಯಲಾಗಿದ್ದರೂ ಸಹ, ಇದು ಮಾರಣಾಂತಿಕ ಗಡ್ಡೆಯನ್ನು ಒಳಗೊಂಡಿರುವುದಿಲ್ಲ. ಇದು ಕ್ಯಾನ್ಸರ್‌ನ ಪೂರ್ವ ಸ್ಥಿತಿಯಾಗಿದೆ. ಅಂದರೆ ಕ್ಯಾನ್ಸರ್ ಆಗುವ ಸಾಮರ್ಥ್ಯವಿರುವ ಅಸಹಜ ಜೀವಕೋಶಗಳಾಗಿವೆ. ಈ ಕೋಶಗಳು ಕ್ಯಾನ್ಸರ್ ಆಗಿ ಬೆಳೆಯುವ ಮೊದಲು ದೇಹದಲ್ಲಿ ಸ್ವಲ್ಪ ಸಮಯದವರೆಗೆ ಉಳಿಯುವ ಸಾಧ್ಯತೆ ಇದೆ ಎಂದು ಮುಂಬೈನ ಅಪೊಲೋ ಕ್ಯಾನ್ಸರ್ ಕೇಂದ್ರದ ವೈದ್ಯಕೀಯ ಆಂಕೊಲಾಜಿ ಸಲಹೆಗಾರ ಡಾ. ತೇಜಿಂದರ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಪಾಪ್ ಕಾರ್ನ್ ತಿನ್ನುವುದರಿಂದ ತೂಕ ಕಳೆದುಕೊಳ್ಳಲು ಸಾಧ್ಯವೇ? ತಜ್ಞರ ಸಲಹೆ ಇಲ್ಲಿದೆ

ಕ್ಯಾನ್ಸರ್‌ನ ಆರಂಭಿಕ ರೂಪದ ಪ್ರಮುಖ ಲಕ್ಷಣಗಳು:

  • ಚರ್ಮದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ಉದಾಹರಣೆಗೆ ಹುಣ್ಣುಗಳು ಉಂಟಾದರೆ ವಾಸಿಯಾಗದೇ ಇರುವುದು.
  • ಅಸಹಜವಾಗಿ ಯೋನಿಯಲ್ಲಿ ರಕ್ತಸ್ರಾವ ಉಂಟಾಗುವುದು.
  • ಮೊಲೆತೊಟ್ಟುಗಳಲ್ಲಿ  ಬದಲಾವಣೆಗಳು ಕಂಡುಬುರುವುದು.
  • ಆಹಾರ ನುಂಗಲು ಗಂಟಲಲ್ಲಿ ಕಷ್ಟವಾಗುವುದು ಅಥವಾ ಗಂಟಲಲ್ಲಿ ನೋವು ಕಾಣಿಸಿಕೊಳ್ಳುವುದು.
  • ಮೂತ್ರಕೋಶ ಮತ್ತು ಕರುಳಿನ ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆಗಳು.

ಕ್ಯಾನ್ಸರ್‌ನ ಆರಂಭಿಕ ಹಂತದಲ್ಲಿನ ಬದುಕುಳಿಯುವ ಸಾಧ್ಯತೆಗಳು:

ಕ್ಯಾನ್ಸರ್‌ಗೆ ಆರಂಭಿಕ ಹಂತದಲ್ಲೇ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ನೀಡುವುದರಿಂದ ರೋಗಿಯು ಬದುಕುಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಪ್ರಕಾರ ಆರಂಭಿಕ ಹಂತದ ಕ್ಯಾನ್ಸರ್ ಹೊಂದಿರುವವರು ಚಿಕಿತ್ಸೆ ಪಡೆದ ಬಳಿಕ ಐದು ವರ್ಷಗಳ ಕಾಲ ಬದುಕುಳಿಯುವ ಸಾಧ್ಯತೆ ಸುಮಾರು ಶೇಕಡಾ 99ರಷ್ಟಿದೆ. ಇದರರ್ಥ ಮೊದಲ ಹಂತದಲ್ಲಿಯೇ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದ ರೋಗಿಗಳು ಐದು ವರ್ಷಗಳ ನಂತರವೂ ಜೀವಂತವಾಗಿದ್ದಾರೆ ಎಂದು ಡಾ. ಸಿಂಗ್ ಹೇಳುತ್ತಾರೆ.

ಕ್ಯಾನ್ಸರ್‌ನ ಆರಂಭಿಕ ಹಂತದ ಚಿಕಿತ್ಸೆ:

ಆರಂಭಿಕ ಹಂತದಲ್ಲಿ ಕ್ಯಾನ್ಸರ್‌ಗೆ ಅತ್ಯಂತ ಸಾಮಾನ್ಯವಾದ ಚಿಕಿತ್ಸೆ ಶಸ್ತ್ರ ಚಿಕಿತ್ಸೆಯಾಗಿದೆ. ಇದು ಪೀಡಿದ ದೇಹದ ಭಾಗದಿಂದ ಕ್ಯಾನ್ಸರ್ ಕೋಶವನ್ನು ತೆಗೆದು ಹಾಕುವ ಪ್ರಕ್ರಿಯೆಯಾಗಿದೆ. ಕೆಲವು ಸಂದರ್ಭಗಳಲ್ಲಿ ಉಳಿದಿರುವ ಯಾವುದೇ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಲು ಹಾರ್ಮೋನ್ ಚಿಕಿತ್ಸೆ ಅಥವಾ ವಿಕಿರಣ ಚಿಕಿತ್ಸೆಯನ್ನು ಶಿಫಾರಸ್ಸು ಮಾಡಬಹುದು ಎಂದು ಡಾ. ಸಿಂಗ್ ಹೇಳಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 2:00 pm, Wed, 1 February 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ