Women Health: ಮಹಿಳೆಯರಲ್ಲಿ ಅಂಡಾಶಯದ ಚೀಲಗಳು ಬೆಳೆಯಲು ಕಾರಣ ಹಾಗೂ ರೋಗಲಕ್ಷಣಗಳು

ಮಹಿಳೆಯರಲ್ಲಿ ಅಂಡಾಶಯದ ಚೀಲಗಳು ಸಾಮಾನ್ಯವಾಗಿ ಇರುತ್ತದೆ. ಇದು ವಿವಿಧ ಕಾರಣಗಳಿಂದ ಬೆಳೆಯಬಹುದು. ಭಾರತದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಸುಮಾರು ಶೇಕಡಾ ಮಹಿಳೆಯರಲ್ಲಿ ಕಂಡುಬರುತ್ತವೆ.

Women Health: ಮಹಿಳೆಯರಲ್ಲಿ ಅಂಡಾಶಯದ ಚೀಲಗಳು ಬೆಳೆಯಲು ಕಾರಣ ಹಾಗೂ ರೋಗಲಕ್ಷಣಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Jan 18, 2023 | 7:29 PM

ಮಹಿಳೆಯರಲ್ಲಿ ಅಂಡಾಶಯದ ಚೀಲಗಳು ಸಾಮಾನ್ಯವಾಗಿ ಇರುತ್ತದೆ. ಇದು ವಿವಿಧ ಕಾರಣಗಳಿಂದ ಬೆಳೆಯಬಹುದು. ಭಾರತದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಸುಮಾರು ಶೇಕಡಾ ಮಹಿಳೆಯರಲ್ಲಿ ಕಂಡುಬರುತ್ತವೆ. ಅಂಡಾಶಯದ ಚೀಲವು ದ್ರವ ಅಥವಾ ಅರೆ ಘನ ವಸ್ತುಗಳಿಂದ ತುಂಬಿದ ಚೀಲವಾಗಿದ್ದು, ಇದು ಒಂದು ಅಥವಾ ಎರಡು ಅಂಡಾಶದದೊಳಗೂ ರೂಪುಗೊಳ್ಳಬಹುದು. ಅಂಡಾಶಯಗಳು ಮಟ್ಟೆಯ ಕೋಶಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಮತ್ತು ಹಾರ್ಮೋನುಗಳನ್ನು ರಚಿಸುವಲ್ಲಿ ಮುಖ್ಯ ಪಾತ್ರವಹಿಸುವ ಅಂಗವಾಗಿದೆ.

ದೊಡ್ಡ ಅಂಡಾಶಯದ ಚೀಲಗಳು ಹಠಾತ್ ಮತ್ತು ತೀವ್ರವಾದ ಶ್ರೋಣಿಯ ನೋವು, ವಾಕರಿಕೆ ಮತ್ತು ವಾಂತಿಯಂತಹ ರೋಗ ಲಕ್ಷಣಗಳನ್ನು ಉಂಟು ಮಾಡಬಹುದು. ಅವು ಛಿದ್ರವಾಗಬಹುದು ಹಾಗೂ ಸೊಂಟದೊಳಗೆ ತೀವ್ರವಾದ ನೋವು ಮತ್ತು ರಕ್ತಸ್ರಾವವನ್ನು ಉಂಟುಮಾಡಬಹುದು. ಬಹಳ ಅಪರೂಪದ ಸಂದರ್ಭಗಳಲ್ಲಿ ಅಂಡಾಶಯದ ಚೀಲವು ಸೋಂಕಿಗೆ ಒಳಗಾಗಬಹುದು ಅಥವಾ ಕ್ಯಾನ್ಸರ್‌ಗೆ ಒಳಗಾಗಬಹುದು. ಅಂಡಾಶಯದ ಚೀಲವು ಗಾತ್ರದಲ್ಲಿ ಚಿಕ್ಕದಾಗಿದ್ದರೆ ಕೆಲವೊಮ್ಮೆ ಅದು ರೋಗಲಕ್ಷಣಗಳನ್ನು ಉಂಟು ಮಾಡುವುದಿಲ್ಲ. ಹಾರ್ಮೋನುಗಳ ಸಮಸ್ಯೆ, ಪಿಸಿಓಎಸ್, ಎಂಡೊಮೆಟ್ರಿಯೋಸಿಸ್ ಹೊಂದಿರುವ ಮಹಿಳೆಯರು ಅಂಡಾಶಯದ ಚೀಲವನ್ನು ಅಭಿವೃದ್ದಿ ಪಡಿಸುವ ಹೆಚ್ಚಿನ ಅವಕಾಶಗಳನ್ನು ಹೊಂದಿರುತ್ತಾರೆ.

ಮಹಿಳೆಯರಲ್ಲಿ ಅಂಡಾಶಯದ ಚೀಲಗಳು ಅಭಿವೃದ್ಧಿಯಾಗಲು ಕಾರಣ:

ಪೆಲ್ವಿಕ್ ಸೋಂಕುಗಳು, ಹಾರ್ಮೋನು ಸಮಸ್ಯೆಗಳು ಗರ್ಭಾವಸ್ಥೆಯ ತೊಡಕುಗಳು ಅಂಡಾಶಯದ ಚೀಲದ ಬೆಳವಣಿಗೆಗೆ ಕಾರಣವಾಗಬಹುದು. ನೀವು ಅಂಡಾನೋತ್ಪತ್ತಿಗೆ ಕಾರಣವಾಗುವ ಫಲವತ್ತತೆಯ ಔಷಧವನ್ನು ತೆಗೆದುಕೊಳ್ಳುವುದರಿಂದ ಅಂಡಾಶಯದ ಚೀಲವನ್ನು ಹೊಂದುವ ಅಪಾಯವು ಹಾರ್ಮೋನ್ ಸಮಸ್ಯೆಗಳೊಂದಗೆ ಹೆಚ್ಚಾಗಿರುತ್ತವೆ ಎಂದು ಮರೆಂಗೋ ಕ್ಯೂ.ಆರ್.ಜಿ ಆಸ್ಪತ್ರೆಯ ಪ್ರಸೂತಿ ಸ್ತ್ರಿ ರೋಗ ಮತ್ತು ಸ್ತ್ರಿ ರೋಗ ಲ್ಯಾಪರೋಸ್ಕೋಪಿಕ್ ವಿಭಾಗದ ನಿರ್ದೇಶಕಿ ಮತ್ತು ಹೆಚ್.ಓ.ಡಿ ಆಗಿರುವ ಡಾ. ನಿಶಾ ಕಪೂರ್ ಹೇಳುತ್ತಾರೆ.

ಅಂಡಾಶಯದ ಚೀಲವು ದ್ರವ ಅಥವಾ ಅರೆ ಘನ ವಸ್ತುಗಳಿಂದ ತುಂಬಿದ ಚೀಲವಾಗಿದ್ದು, ಅದು ಒಂದು ಅಥವಾ ಎರಡೂ ಅಂಡಾಶಯಗಳ ಮೇಲೆ ಅತವಾ ಅದರೊಳಗೆ ರೂಪುಗೊಳ್ಳುತ್ತದೆ. ಭಾರತದಲ್ಲಿ ಪ್ರತಿ 4 ರಿಂದ 5 ಮಹಿಳೆಯರಲ್ಲಿ ಒಬ್ಬರು ವಿವಿಧ ರೀತಿಯ ಅಂಡಾಶಯ ಚೀಲದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಾರ್ಮೋನುಗಳ ಅಸಮತೋಲನ, ಗರ್ಭಾವಸ್ಥೆ, ಎಂಡೊಮೆಟ್ರಿಯೊಸಿಸ್, ತೀವ್ರವಾದ ಶ್ರೋಣಿ ಸೋಂಕು, ಜನನಾಂಗದ ಕ್ಷಯರೋಗದಿಂದ ಅಂಡಾಶಯದ ಚೀಲ ಉಂಟಾಗುತ್ತದೆ ಎಂದು ಜೈಪುರದ ಆರ್ಟೆಮಿಸ್ ಡಾಫೋಡಿಲ್ಸ್ನ ಪ್ರಸೂತಿ ಮತ್ತು ಸ್ತ್ರಿರೋಗ ತಜ್ಞೆ ಡಾ. ಬೃಂದಾ ಪಟೇಲ್ ಅವರು ಅಂಡಾಶಯದ ಚೀಲದ ಹಿಂದಿನ ಸಂಭವನೀಯ ಕಾರಣಗಳನ್ನು ವಿವರಿಸುತ್ತಾರೆ.

ಇದನ್ನೂ ಓದಿ: ಕ್ಯಾನ್ಸರ್​ನ ಲಕ್ಷಣಗಳು ಒಮ್ಮೆಲೆ ಕಾಣಿಸಿಕೊಳ್ಳುತ್ತಾ ಅಥವಾ ಹಂತ ಹಂತವಾಗಿ ತಿಳಿಯುವುದೇ, ಇಲ್ಲಿದೆ ಮಾಹಿತಿ

ಅಂಡಾಶಯದ ಚೀಲ ಮಹಿಳೆಯರ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ:

ಕೊಚ್ಚಿಯ ಅಮೃತ ಆಸ್ಪತ್ರೆಯ ಕ್ಲಿನಿಕಲ್ ಪ್ರೊಫೆಸರ್ ಹಾಗೂ ಪ್ರಸೂತಿ ಮತ್ತು ಸ್ತ್ರಿ ರೋಗಶಾಸ್ತ್ರದ ಮುಖ್ಯಸ್ಥರಾದ ಡಾ. ರಾಧಾಮಣಿ. ಕೆ ಅಂಡಾಶಯದ ಚೀಲದ ಎಚ್ಚರಿಕೆಯ ಲಕ್ಷಣಗಳ ಬಗ್ಗೆ ಮಾತನಾಡುತ್ತಾರೆ. ಇದು ಸಾಮಾನ್ಯವಾಗಿ ಯುವ ಅಥವಾ ಸಂತಾನೋತ್ಪತ್ತಿ ಮಯಸ್ಸಿನ ಗುಂಪಿನಲ್ಲಿ ಕಂಡುಬರುತ್ತದೆ. ಕೆಲವರಲ್ಲಿ ಇದು ಮಂದ ನೋವು ಮತ್ತು ಕಿಬ್ಬೊಟ್ಟೆಯ ದ್ರವ್ಯರಾಶಿಗೆ ಕಾರಣವಾಗಬಹುದು. ಅಂಡಾಶಯದ ಚೀಲದ ತಿರುಚುವಿಕೆ, ಛಿದ್ರ, ರಕ್ತಸ್ರಾವ ಅಥವಾ ತೀವ್ರವಾದ ಸೋಂಕು ತೀವ್ರವಾದ ನೋವಿಗೆ ಕಾರಣವಾಗುತ್ತದೆ. ಇದು ಮುಟ್ಟಿನ ವಿಳಂಬ, ಮುಟ್ಟಿನ ಅನುಪಸ್ಥಿಗೆ ಕಾರರಣವಾಗಬಹುದು. ಮುಟ್ಟಾದಾಗ ನೋವು ಹಾಗೂ ಲೈಂಗಿಕ ಸಂಪರ್ಕದ ಸಮಯದಲ್ಲೂ ನೋವು ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ಕೆಲಹೊಟ್ಟೆಯ ಊತ, ಸಂಭೋಗದಲ್ಲಿ ನೋವು, ವಾಕರಿಕೆ, ಕರುಳಿನ ನೋವು ಮತ್ತು ಅಸ್ವಸ್ಥತೆ. ಮೂರ್ತ ವಿಸರ್ಜಿಸುವಾಗ ನೋವು, ಬಂಜೆತನ ಇವೆಲ್ಲವೂ ಅಂಡಾಶಯದ ಚೀಲದ ಉಪಸ್ಥಿತಿಯನ್ನು ಸೂಚಿವುವ ರೋಗಲಕ್ಷಣಗಳು ಎಂದು ಡಾ. ಬೃಂಧಾ ಹೇಳಿದ್ದಾರೆ.

ಅಂಡಾಶಯದ ಚೀಲದಿಂದ ಸಂಭವಿಸಬಹುದಾದ ತೊಡಕುಗಳು:

ದೊಡ್ಡದಾದ ಚೀಲಗಳು ಅಂಡಾಶಯದ ತಿರುಚುವಿಕೆಗೆ ಕಾರಣವಾಗಬಹುದು. ಇದು ಹಠಾತ್ ಶ್ರೋಣಿ ಕುಹರದ ನೋವು ಮತ್ತು ವಾಂತಿಗೆ ಕಾರಣವಾಗಬಹುದು.ಅಂಡಾಶಯದ ತಿರುಚುವಿಕೆ ಅಂಡಾಶಯಕ್ಕೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಅಥವಾ ನಿಲ್ಲಿಸುತ್ತದೆ. ಅಲ್ಲದೆ ದೊಡ್ಡ ಅಂಡಾಶಯದ ಚೀಲಗಳು ಛಿದ್ರವಾಗಬಹುದು ಮತ್ತು ಸೊಂಟದೊಳಗೆ ತೀವ್ರವಾದ ನೋವು ಮತ್ತು ರಕ್ತಸ್ರಾವವನ್ನು ಉಂಟುಮಾಡಬಹುದು. ಮತ್ತು ಕ್ಯಾನ್ಸರ್‌ಗೂ ಕಾರಣವಾಗಬಹುದು ಎಂದು ಡಾ. ನಿಶಾ ಕಪೂರ್ ಹೇಳುತ್ತಾರೆ.

ಅಂಡಾಶಯದ ಚೀಲಗಳ ರೋಗನಿರ್ಣಯ ಮತ್ತು ಚಿಕಿತ್ಸೆ:

ಅಂಡಾಶಯದ ಚೀಲವನ್ನು ಅಲ್ಟ್ರಾ ಸೌಂಡ್ ಇಮೇಂಜಿಂಗ್ ಬಳಸಿ ರೋಗನಿರ್ಣಯ ಮಾಡಲಾಗುತ್ತದೆ. ಇದು ಹಾನಿಕರಕವಲ್ಲದ ಮತ್ತು ಮಾರಣಾಂತಿಕ ಅಂಡಾಶಯದ ಚೀಲವನ್ನು ಪ್ರತ್ಯೇಕಿಸುತ್ತದೆ. ಸರಿಯಾದ ಚಿಕಿತ್ಸೆಯನ್ನು ಪಡೆದ ಬಳಿಕ ಅಂಡಾಶಯದ ಚೀಲವು ಹೋಗಿದೆಯೇ ಎಂಬುವುದನ್ನು ಕೆಲವು ತಿಂಗಳಿಗೊಮ್ಮೆ ಸ್ಕ್ಯನ್ ಮಾಡಿ ಪರಿಶೀಲಿಸಿಕೊಳ್ಳಿ. ಚೀಲಗಳು ಕ್ಣಣ್ಮರೆಯಾಗಿದೆ ಎಂದು ಸ್ಕಾಣ್ಯನ್‌ಗಳು ತೋರಿಸಿದರೆ ಹೆಚ್ಚಿನ ಪರೀಕ್ಷೆಗಳು ಮತ್ತು ಚಿಕಿತ್ಸೆಯು ಸಾಮಾನ್ಯವಾಗಿ ಅಗತ್ಯವಿಲ್ಲ. ಚೀಲ ಇನ್ನೂ ಇದ್ದರೆ ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ತೆಗೆದು ಹಾಕಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 7:27 pm, Wed, 18 January 23

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ