Winter Skincare: ಚಳಿಗಾಲದಲ್ಲಿ ತೇವಾಂಶ ಕಳೆದುಕೊಳ್ಳದಿರಲು ಈ ಟಿಪ್ಸ್ ಫಾಲೋ ಮಾಡಿ
ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವ ಅಭ್ಯಾಸ ನಿಮಗಿದೆಯಾ? ಇದು ನಿಮ್ಮ ದೇಹದ ತೇವಾಂಶ ಕಳೆದುಕೊಳ್ಳಲು ಕಾರಣವಾಗಬಹುದು.
ಬೇಸಿಗೆ ಕಾಲಕ್ಕೆ ಹೋಲಿಸಿದರೆ ಚಳಿಗಾಲ(Winter) ದಲ್ಲಿ ಬಾಯಾರಿಕೆ ಕಡಿಮೆ ಆಗುವುದರಿಂದ, ನೀರು ಕುಡಿಯುವುದನ್ನೇ ಮರೆತು ಬಿಡುತ್ತಾರೆ. ಇದರ ಪರಿಣಾಮವಾಗಿ ದೇಹವು ನಿರ್ಜಲೀಕರಣಗೊಳ್ಳುತ್ತದೆ. ನಿರ್ಜಲೀಕರಣವು ಚಯಾಪಚಯ, ಆಲಸ್ಯ, ತಲೆನೋವು ಮುಂತಾದ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದು ಅತ್ಯಗತ್ಯ. ನಿಮಗೆ ನೀರು ಕುಡಿಯಲು ಕಷ್ಟವಾದರೆ ನೀರಿನಾಂಶವಿರುವ ಹಣ್ಣಿನ ರಸವನ್ನು ಕುಡಿಯಿರಿ. ಇದು ನಿಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ನಿಮ್ಮ ತ್ವಚೆಗೆ ಕಾಂತಿ ನೀಡುತ್ತದೆ ಎಂದು ಆರೋಗ್ಯ ತಜ್ಞರಾದ ಪ್ರಾಚಿ ಷಾ ಸಲಹೆ ನೀಡಿದ್ದಾರೆ.
ಚಳಿಗಾಲದಲ್ಲಿ ದೇಹಕ್ಕೆ ತೇವಾಂಶವನ್ನು ನೀಡುವ ಆರೋಗ್ಯಕರಬ ಪಾನೀಯ ಇಲ್ಲಿವೆ
ಗಿಡಮೂಲಿಕೆ ಚಹಾ:
ಗಿಡಮೂಲಿಕೆ ಚಹಾವು ಜಲಸಂಚಯನಕ್ಕೆ ಉತ್ತಮವಾಗಿದೆ. ಹರ್ಬಲ್ ಟೀಯು ಅದರ ಹೆಸರಿನ ಹೊರತಾಗಿ ಅದು ಚಹಾ ಅಲ್ಲ. ಅದು ಯಾವುದೇ ರೀತಿಯ ಚಹಾದ ಎಲೆಗಳನ್ನು ಹೊಂದಿರುವುದಿಲ್ಲ. ಗಿಡಮೂಲಿಕೆ ಚಹಾವನ್ನು ಒಣಗಿಸಿದ ಹಣ್ಣು, ಹೂವುಗಳು, ಮಸಾಲೆ ಪದಾರ್ಥಗಳು, ಗಿಡಮೂಲಿಕೆಳಿಂದ ತಯಾರಿಸಲಾಗುತ್ತದೆ. ಇದು ಆರಾಮದಾಯಕ ಮತ್ತು ಪುನರ್ಜಲೀಕರಣಕ್ಕೆ ಸಹಾಯ ಮಾಡುತ್ತದೆ. ಇದು ನಿಮ್ಮ ದೇಹವನ್ನು ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ.
ಸೂಪ್‌ಗಳು:
ಚಳಿಗಾಲದಲ್ಲಿ ಚೆಚ್ಚಗಾಗಿರಲು ಸೂಪ್‌ಗಳು ಉತ್ತಮ ಆಯ್ಕೆ. ತರಕಾರಿಗಳನ್ನು ನೀರಿನಲ್ಲಿ ಬೇಯಿಸುವ ಮೂಲಕ ತಯಾರಿಸಲಾಗುತ್ತದೆ. ಆಲೂಗಡ್ಡೆ, ಕ್ಯಾರೆಟ್, ಬಟಾಣಿ, ಟೊಮ್ಯಾಟೊ ಹಾಗೂ ಇನ್ನಿತರ ತರಕಾರಿಗಳನ್ನು ಬಳಸಿ ಸೂಪ್ ತಯಾರಿಸಲಾಗುತ್ತದೆ. ಈ ಸೂಪ್‌ಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಕ್ಕಳಿಗೆ ಕೂಡಾ ಈ ಸೂಪ್ ಉತ್ತಮವಾಗಿದೆ.
ಹಸಿರು ತರಕಾರಿಗಳ ಜ್ಯೂಸ್:
ಹಸಿರು ತರಕಾರಿಗಳ ಜ್ಯೂಸ್ ಊಟದ ನಂತರ ಉತ್ತಮ ಆಯ್ಕೆಯಾಗಿದೆ ಮತ್ತು ವಿವಿಧ ರೀತಿಯ ಇದನ್ನು ತಯಾರಿಸಬಹುದು. ದೈನಂದಿನವಾಗಿ ತರಕಾರಿಗಳನ್ನು ಸೇವಿಸಲು ಇದು ಉತ್ತಮ ಮಾರ್ಗವಾಗಿದೆ. ಇದು ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಸಿರು ತರಕಾರಿ ಜ್ಯೂಸ್‌ಗಳು ದೇಹಕ್ಕೆ ನೀರಿನ ಅಂಶವನ್ನು ಪೂರೈಸಲು ಸಹಾಯ ಮಾಡುತ್ತವೆ.
ಇದನ್ನೂ ಓದಿ: ನಿಮ್ಮ ದೇಹದಲ್ಲಿ ಕಬ್ಬಿಣದ ಕೊರತೆಯುಂಟಾಗಿದ್ದರೆ, ಈ ಜ್ಯೂಸ್ಗಳನ್ನು ಕುಡಿಯಿರಿ
ಅರಶಿನ ಹಾಲು:
ಅರಶಿನ ಹಾಲು ಮಲಗುವ ಮುಂಚೆ ಕುಡಿಯಲು ತಜ್ಞರು ಸೂಚಿಸುತ್ತಾರೆ. ಇದು ನಿದ್ರಾ ಹೀನತೆ ಸಮಸ್ಯೆಯನ್ನು ತಡೆಯುವಲ್ಲಿ ಸಹಾಯಕವಾಗಿದೆ. ಇದನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ. ಆ್ಯಸಿಡಿಟಿ ಮತ್ತು ಹೊಟ್ಟೆಯುಬ್ಬರವನ್ನು ಕಡಿಮೆ ಮಾಡಲು ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸಲು ಅರಶಿನ ಹಾಲು ಉತ್ತಮ ಆಯ್ಕೆಯಾಗಿದೆ.
ನಿಂಬೆ ಜ್ಯೂಸ್:
ಒಂದು ಗ್ಲಾಸ್ ನೀರಿಗೆ ಚಿಟಿಕೆ ಕಲ್ಲು ಉಪ್ಪು ಹಾಕಿ ಹಾಗೂ ಅದಕ್ಕೆ ನಿಂಬೆ ರಸ ಸೇರಿಸಿ ಕುಡಿಯುವುದರಿಂದ, ಅದು ನಿಮ್ಮ ದೇಹಕ್ಕೆ ಬೇಕಾದ ಜಲಸಂಚಯನ ಮತ್ತು ವಿಟಮಿನ್ ಸಿ ಅಂಶವನ್ನು ಒದಗಿಸುತ್ತದೆ. ನಿಂಬೆ ನೀರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಹಾಗೂ ಇದು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕೂಡಾ ನಿಂಬೆ ರಸ ಸಹಾಯಕವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:53 am, Thu, 19 January 23