Ragi Poha: ರಾಗಿಯಿಂದ ಈ ರೀತಿಯಾಗಿ ಸೂಪರ್ ಫುಡ್ ತಯಾರಿಸಿ
ಶೆಫ್ ಶಿಲಾರ್ನಾ ವಝೆ ಅವರು ರಾಗಿಯಿಂದ ತಯಾರಿಸಿದ ಪೋಹಾದ ಸುಲಭ ಮತ್ತು ಆರೋಗ್ಯಕರ ಪಾಕವಿಧಾನವನ್ನು ಹಂಚಿಕೊಂಡಿದ್ದಾರೆ. ಇದು ಅಂಟು ಮುಕ್ತ ಮತ್ತು ಹೆಚ್ಚು ಪೌಷ್ಠಿದಾಯಕವಾಗಿದೆ.
ನೀವು ಏನಾದರೂ ಲೈಟ್ ಆಗಿ ತಿನ್ನಬೇಕೆಂದರೆ ಪೋಹಾ ಉತ್ತಮ ಆಯ್ಕೆ. ಪೋಹಾ ಲಘು ತಿಂಡಿಯಾಗಿದ್ದರೂ ಹೆಚ್ಚು ಪೌಷ್ಠಿಕಾಂಶವುಳ್ಳ ಆಹಾರವಾಗಿದೆ. ಅದರಲ್ಲೂ ರಾಗಿ ಪೋಹಾ ಅಥವಾ ರಾಗಿ ಅಂಬಲಿ ಇನ್ನೂ ಉತ್ತಮ. ಚೆಫ್ ಶಿಲಾರ್ನಾ ವಝೆ ಅವರು ತಮ್ಮ ಇನ್ಟಾಗ್ರಾಮ್ ಪೋಸ್ಟ್ನಲ್ಲಿ ರಾಗಿ ಪೋಹಾದ ರೆಸಿಪಿಯನ್ನು ಹಂಚಿಕೊಂಡಿದ್ದಾರೆ. ಈ ರುಚಿಕರವಾದ ರಾಗಿ ಪೋಹಾವನ್ನು ತಯಾರಿಸಲು, ನೀವು ಧಾನ್ಯಗಳನ್ನು ರಾತ್ರಿಯಿಡೀ ನೆನೆಸಿಡಬೇಕು ಏಕೆಂದರೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡಲು ರಾಗಿಗಳಿಂದ ಫೈಟಿಕ್ ಆಮ್ಲವನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ರಿಫ್ರೆಶ್ ಸುವಾಸನೆಗಾಗಿ ಇವರು ಪೋಹಾದಲ್ಲಿ ಬಟಾಣಿಗಳನ್ನು ಹಾಕಿದ್ದಾರೆ.
ರಾಗಿ ಪೋಹಾ ಮಾಡಲು ಬೇಕಾಗುವ ಪದಾರ್ಥಗಳು:
ಎಣ್ಣೆ 4 ಚಮಚ, ಸಾಸಿವೆ 4 ಟೀಸ್ಪೂನ್, 1 ಹಸಿ ಮೆಣಸಿನಕಾಯಿ, ಕರಿಬೇವಿನ ಎಲೆ, 1 ಈರುಳ್ಳಿ, ಬಟಾಣಿ 1 ಕಪ್, ಅರ್ಧ ಕಪ್ ನೀರು (ಬಟಾಣಿ ಬೇಯಿಸಲು), 1 ಕಪ್ ನೆನೆಸಿ, ಬೇಯಿಸಿದ ರಾಗಿ, ಉಪ್ಪು ರುಚಿಗೆ ತಕ್ಕಷ್ಟು, 1 ಟೀ ಸ್ಪೂನ್ ಅರಶಿನ, 4 ಟೀಸ್ಪೂನ್ ನಿಂಬೆ ರಸ, ಕೊತ್ತಂಬರಿ ಸೊಪ್ಪು, ನಿಂಬೆ, ತುರಿದ ತೆಂಗಿಬ ಕಾಯಿ, ತುರಿದ ಚೀಸ್
ಇದನ್ನೂ ಓದಿ: ಉಡುಪಿಯ ಸ್ಪೆಷಲ್ ಚಟ್ಟಂಬಡೆ ರೆಸಿಪಿ ಇಲ್ಲಿದೆ
ರಾಗಿ ಪೋಹಾ ಮಾಡವ ವಿಧಾನ:
ರಾಗಿಯನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿ ಮತ್ತು ಅದಕ್ಕೆ 1 ಚಮಚ ಆಪಲ್ ಸೈಡರ್ ವಿನೆಗರ್ ಸೇರಿಸಿ. ಮರುದಿನ ಬೆಳಗ್ಗೆ ನೆನೆಸಿಟ್ಟ ರಾಗಿಯನ್ನು ಬೇಯಿಸಿ ನಂತರ ಒಂದು ಬಾಣಲೆಯಲ್ಲಿ ಎಣ್ಣೆ, ಸಾಸಿವೆ, ಹಸಿಮೆಣಸು ಮತ್ತು ಕರಿಬೇವಿನ ಎಲೆ ಹಾಗೂ ಈರುಳ್ಳಿ ಸೇರಿಸಿ ಕಂದುಬಣ್ಣ ಬರುವವರೆಗೆ ಫ್ರೈ ಮಾಡಿ. ಇದಾದ ಬಳಿಕ ಅದೇ ಪಾತ್ರೆಗೆ ತಾಜಾ ಬಟಾಣಿ ಸೇರಿಸಿ ನಂತರ 4 ಕಪ್ ನೀರನ್ನು ಕೂಡಾ ಸೇರಿಸಿ ಬಟಾಣಿ ಬೇಯಲು ಬಿಡಿ. ಬಟಾಣಿ ಬೆಂದ ಬಳಿಕ ಅದೇ ಪ್ಯಾನ್‌ಗೆ ಆಗಲೇ ಬೇಯಿಸಿಟ್ಟ ರಾಗಿ, ಮಸಾಲೆಗಳು ಹಾಗೂ ಸ್ವಲ್ಪ ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಕೊನೆಯದಾಗಿ ಇದಕ್ಕೆ ಕೊತ್ತಂಬರಿಸೊಪ್ಪು, ತೆಂಗಿನಕಾಯಿ ತುರಿ, ತುರಿದ ಚೀಸ್‌ನ್ನು ಹಾಕಿ ಅಲಂಕರಿಸಿದರೆ ಪೌಷ್ಟಿದಾಯಕ ರಾಗಿ ಪೋಹಾ ಸವಿಯಲು ಸಿದ್ಧ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: