Mental Health: ನಿಮ್ಮ ದೈಹಿಕ ಸಮಸ್ಯೆಗಳು ಮಾನಸಿಕ ಆರೋಗ್ಯವನ್ನೂ ಕುಗ್ಗಿಸುತ್ತೆ, ಕಾಯಿಲೆಗೆ ಔಷಧ ನೀಡಿ, ಕೊರಗಬೇಡಿ
ಕೆಲವೊಮ್ಮ ಗುಣಪಡಿಸುವ ಕಾಯಿಲೆಗಳಿರಬಹುದು, ಇನ್ನೂ ಕೆಲವು ದೀರ್ಘಕಾಲ ನಿಮ್ಮನ್ನು ಕಾಡುವ ಆರೋಗ್ಯ ಸಮಸ್ಯೆಗಳಿರಬಹುದು. ನಿಮ್ಮ ದೈಹಿಕ ಸಮಸ್ಯೆಗಳು ದೀರ್ಘಕಾಲ ಮುಂದುವರೆದರೆ ಅದು ಮಾನಸಿಕವಾಗಿ ನಿಮ್ಮನ್ನು ದುರ್ಬಲವಾಗಿಸುತ್ತದೆ.
ಕೆಲವೊಮ್ಮ ಗುಣಪಡಿಸುವ ಕಾಯಿಲೆಗಳಿರಬಹುದು, ಇನ್ನೂ ಕೆಲವು ದೀರ್ಘಕಾಲ ನಿಮ್ಮನ್ನು ಕಾಡುವ ಆರೋಗ್ಯ ಸಮಸ್ಯೆಗಳಿರಬಹುದು. ನಿಮ್ಮ ದೈಹಿಕ ಸಮಸ್ಯೆಗಳು ದೀರ್ಘಕಾಲ ಮುಂದುವರೆದರೆ ಅದು ಮಾನಸಿಕವಾಗಿ ನಿಮ್ಮನ್ನು ದುರ್ಬಲವಾಗಿಸುತ್ತದೆ. ನಿಮ್ಮ ಕಾಯಿಲೆಗೆ ಔಷಧಿ ನೀಡಬೇಕೇ ವಿನಃ, ಆ ಬಗ್ಗೆ ಕೊರಗುತ್ತಾ ಕುಳಿತರೆ ನಿಮ್ಮ ಒಟ್ಟಾರೆ ಆರೋಗ್ಯವೂ ಕೈಕೊಡುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯವು ಒಂದಕ್ಕೊಂದು ಸಂಬಂಧಿಸಿದೆ, ಮಾನಸಿಕ ಸಮಸ್ಯೆಯು ದೈಹಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ದೈಹಿಕ ಸಮಸ್ಯೆಯು ಮಾನಸಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಲು ನೀವು ಪ್ರಯತ್ನಿಸಿದ್ದೀರಾ.
ಮಾನಸಿಕ ಮತ್ತು ದೈಹಿಕ ಆರೋಗ್ಯವು ಪರಸ್ಪರ ಹೇಗೆ ಪರಿಣಾಮ ಬೀರುತ್ತದೆ 1. ಜೆನೆಟಿಕ್ಸ್ ಅನೇಕ ಜನರಲ್ಲಿ, ಈ ಸಮಸ್ಯೆಯು ಆನುವಂಶಿಕವಾಗಿರುತ್ತದೆ, ನಿಮ್ಮ ಮಾನಸಿಕ ಆರೋಗ್ಯವು ಹದಗೆಟ್ಟಂತೆ, ಅದು ನೇರವಾಗಿ ನಿಮ್ಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೈಹಿಕ ಆರೋಗ್ಯದ ವಿಷಯದಲ್ಲೂ ಅದೇ.
2. ಆಂತರಿಕ ಪ್ರೇರಣೆಯ ಕೊರತೆ ಕೆಲವೊಮ್ಮೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದ ತಕ್ಷಣ ನಾವು ಶಕ್ತಿಯನ್ನು ಕಳೆದುಕೊಳ್ಳುತ್ತೇವೆ. ಇದರಿಂದಾಗಿ ನಮ್ಮ ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
3. ಏನೂ ಆಗಲ್ಲ ಆರಾಮಾಗಿರಿ ಎಂಬ ಸಮಾಧಾನದ ಮಾತುಗಳು ಬೇಕು ಯಾರೇ ಯಾವುದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ, ಏನೂ ಆಗಲ್ಲ, ಸಮಾಧಾನದಿಂದಿರಿ ನಾವಿದ್ದೀವಲ್ಲ ಎಂದು ಹೇಳಿ ಸಂತೈಸುವ ಕೈ ಬೇಕು. ಒಂದೊಮ್ಮೆ ಮಾನಸಿಕವಾಗಿ ವ್ಯಕ್ತಿಯನ್ನು ಗಟ್ಟಿಗೊಳಿಸದಿದ್ದರೆ ದುರ್ಬಲವಾಗುತ್ತಾನೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ