Lumpy Skin Disease: ರಾಸುಗಳನ್ನು ಚರ್ಮಗಂಟು ಕಾಯಿಲೆಯಿಂದ ಈ ಲಸಿಕೆ ಕಾಪಾಡಬಲ್ಲದು

TV9 Digital Desk

| Edited By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 17, 2023 | 3:00 PM

ದೇಶೀಯ ಲಸಿಕೆಗಳ ಬಳಕೆಯಿಂದ ಚರ್ಮಗಂಟು ರೋಗವನ್ನು ನೂರಕ್ಕೆ ನೂರರಷ್ಟು ತಡೆಗಟ್ಟಲು ಸಾಧ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

Lumpy Skin Disease: ರಾಸುಗಳನ್ನು ಚರ್ಮಗಂಟು ಕಾಯಿಲೆಯಿಂದ ಈ ಲಸಿಕೆ ಕಾಪಾಡಬಲ್ಲದು
ಚರ್ಮಗಂಟು ರೋಗ ಬಾಧಿತ ಹಸು (ಸಂಗ್ರಹ ಚಿತ್ರ)
Image Credit source: PTI

ಬೆಂಗಳೂರು: ಚರ್ಮಗಂಟು ಕಾಯಿಲೆಯು ಕರ್ನಾಟಕದಲ್ಲಿಯೂ ರಾಸುಗಳನ್ನು ತೀವ್ರವಾಗಿ ಕಾಡುತ್ತಿದೆ. 2020ರಿಂದೀಚೆಗೆ ಸುಮಾರು 2 ಲಕ್ಷ ರಾಸುಗಳು ಈ ಕಾಯಿಲೆಯಿಂದ ಸಾವನ್ನಪ್ಪಿವೆ. ಈ ಕಾಯಿಲೆಯನ್ನು ಭಾರತೀಯ ಕೃಷಿ ಸಂಶೋಧನಾ ಪ್ರತಿಷ್ಠಾನ (Indian Council for Agricultural Research – ICAR), ಪಶುಆರೋಗ್ಯ ಸಂಶೋಧನಾ ಸಂಸ್ಥೆ (Indian Veterinary Research Institute – IVRI), ಗೊರಸು ಪ್ರಾಣಿಗಳ ಸಂಶೋಧನಾ ಸಂಸ್ಥೆ (National Research Centre on Equines – NRCE) ಅಭಿವೃದ್ಧಿಪಡಿಸಿರುವ ಲಸಿಕೆಯಿಂದ ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಪಶುಸಾಂಕ್ರಾಮಿಕ ರೋಗ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ ಬಿ.ಆರ್.ಗುಲಾಟಿ, ದೇಶೀಯ ಲಸಿಕೆಗಳ ಬಳಕೆಯಿಂದ ಚರ್ಮಗಂಟು ರೋಗವನ್ನು ನೂರಕ್ಕೆ ನೂರರಷ್ಟು ತಡೆಗಟ್ಟಲು ಸಾಧ್ಯವಿದೆ. ಕರ್ನಾಟಕದ ಮಾಲೂರು ಮತ್ತು ಗುಜರಾತ್​ನ ಅಹಮದಾಬಾದ್​ನಲ್ಲಿರುವ ಔಷಧ ತಯಾರಿಕಾ ಕಂಪನಿಗಳು ಈ ಲಸಿಕೆಗಳ ಉತ್ಪಾದನೆಗಾಗಿ ಒಪ್ಪಂದ ಮಾಡಿಕೊಂಡಿವೆ. ಮಾಲೂರಿನ ಬಯೊವೆಟ್ ಕಂಪನಿಯು ಪ್ರಾಯೋಗಿಕ ಲಸಿಕೆಗಳನ್ನೂ ಒದಗಿಸಿದೆ. ಪಶು ಆರೋಗ್ಯ ಕೇಂದ್ರದ ಅನುಮೋದನೆಯ ನಂತರ ಈ ಲಸಿಕೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.

ಕುರಿ ಮತ್ತು ಮೇಕೆಗಳನ್ನು ಬಾಧಿಸುವ ವರ್ಗಕ್ಕೆ ಚರ್ಮಗಂಟು ಹರಡುವ ಎಲ್​ಎಸ್​ಡಿ ವೈರಸ್ ಸಹ ಸೇರುತ್ತದೆ. ಮೇಕೆಗೆ ಕೊಡುವ ಲಸಿಕೆಯನ್ನು ಹಸುಗಳಿಗೂ ಕೊಡುವ ಮೂಲಕ ಚರ್ಮಗಂಟು ರೋಗ ತಡೆಗೆ ಪ್ರಯತ್ನಿಸಲಾಗುತ್ತಿದೆ. ಆದರೆ ಈ ಲಸಿಕೆಯು ರೋಗದ ಸಾಧ್ಯತೆಯನ್ನು ಶೇ 70ರಿಂದ 80ರಷ್ಟು ಮಾತ್ರವೇ ಕಡಿಮೆ ಮಾಡುತ್ತಿತ್ತು. ಇದೀಗ ಹಸುಗಳಿಗೆ ಪ್ರತ್ಯೇಕ ಲಸಿಕೆ ತಯಾರಾಗಿರುವುದು ರೋಗ ನಿಯಂತ್ರಣದ ಅವಕಾಶವನ್ನು ಹೆಚ್ಚಿಸಿದೆ.

ಕರ್ನಾಟಕದಲ್ಲಿ ಈವರೆಗೆ 3 ಲಕ್ಷಕ್ಕೂ ಹೆಚ್ಚು ಚರ್ಮಗಂಟು ಕಾಯಿಲೆ ಪ್ರಕರಣಗಳು ವರದಿಯಾಗಿವೆ. 27,000 ರಾಸುಗಳು ಸಾವನ್ನಪ್ಪಿವೆ. ಈ ಕಾಯಿಲೆ ಮನುಷ್ಯರಿಗೆ ಬರುವುದಿಲ್ಲ. ಆದರೆ ಇಂಥ ಹಸುಗಳಿಂದ ಕರೆದ ಹಾಲನ್ನು ಸೇವಿಸುವ ಮೊದಲು ಚೆನ್ನಾಗಿ ಕುದಿಸಬೇಕು ಎಂದು ಪಶುವೈದ್ಯರು ಸಲಹೆ ಮಾಡುತ್ತಾರೆ.

ಇದನ್ನೂ ಓದಿ: ಚರ್ಮಗಂಟು ರೋಗ: ಹಾಸನದ ಐತಿಹಾಸಿಕ ಬೂಕನಬೆಟ್ಟದ ರಂಗನಾಥ ಸ್ವಾಮಿ ರಾಸುಗಳ ಜಾತ್ರಾ ಮಹೋತ್ಸವ ರದ್ದು

ಚರ್ಮಗಂಟು ಕಾಯಿಲೆಯ ಬಗ್ಗೆ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada