Lyme Disease: ಲೈಮ್ ಕಾಯಿಲೆಯು ಮಾನಸಿಕ ಅಸ್ವಸ್ಥತೆ, ಆತ್ಮಹತ್ಯೆ ಅಪಾಯ ಹೆಚ್ಚಿಸುತ್ತದೆ: ಅಧ್ಯಯನ

ಹೊಸ ಅಧ್ಯಯನದಲ್ಲಿ ಯು.ಎಸ್ ಮತ್ತು ಡ್ಯಾನಿಶ್ ಸಂಶೋಧಕರು ಲೈಮ್ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳು ಶೇಕಡಾ 28ರಷ್ಟು ಹೆಚ್ಚಿನ ಮಾನಸಿಕ ಅಸ್ವಸ್ಥತೆಗಳನ್ನು ಹೊಂದಿದ್ದಾರೆ ಮತ್ತು ರೋಗನಿರ್ಣಯವಿಲ್ಲದ ವ್ಯಕ್ತಿಗಳಿಗೆ ಹೋಲಿಸಿದರೆ ಸೋಂಕಿನ ನಂತರ ಆತ್ಮಹತ್ಯೆಗೆ ಪ್ರಯತ್ನಿಸುವ ಸಾಧ್ಯತೆ ಎರಡು ಪಟ್ಟು ಹೆಚ್ಚಾಗಿದೆ.

Lyme Disease: ಲೈಮ್ ಕಾಯಿಲೆಯು ಮಾನಸಿಕ ಅಸ್ವಸ್ಥತೆ, ಆತ್ಮಹತ್ಯೆ ಅಪಾಯ ಹೆಚ್ಚಿಸುತ್ತದೆ: ಅಧ್ಯಯನ
Lyme diseaseImage Credit source: HT
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 10, 2023 | 10:39 AM

ಪ್ರತಿವರ್ಷ ಅಮೇರಿಕಾದಲ್ಲಿ ಸುಮಾರು ಅರ್ಧ ಮಿನಿಯನ್ ಜನರು ಲೈಮ್ ಕಾಯಿಲೆಗೆ (Lyme disease) ರೋಗನಿರ್ಣಯ ಮಾಡುತ್ತಾರೆ ಮತ್ತು ಚಿಕಿತ್ಸೆ ಪಡೆಯುತ್ತಾರೆ. ಇದನ್ನು ಲೈಮ್ ಬೊರೆಲಿಯೊಸಿಸ್ ಎಂದೂ ಕರೆಯುತ್ತಾರೆ. ಇದು ಜಿಂಕೆ ಉಣ್ಣಿಗಳಿಂದ ಸಾಗಿಸುವು ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಮತ್ತು ಅವುಗಳ ಕಡಿತದ ಮೂಲಕ ಮನುಷ್ಯರಿಗೆ ಹರಡುತ್ತದೆ. ಹೊಸ ಅಧ್ಯಯನದಲ್ಲಿ ಯು.ಎಸ್ ಮತ್ತು ಡ್ಯಾನಿಶ್ ಸಂಶೋಧಕರು ಲೈಮ್ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳು ಶೇಕಡಾ 28ರಷ್ಟು ಹೆಚ್ಚಿನ ಮಾನಸಿಕ ಅಸ್ವಸ್ಥತೆಗಳನ್ನು ಹೊಂದಿದ್ದಾರೆ ಮತ್ತು ರೋಗನಿರ್ಣಯವಿಲ್ಲದ ವ್ಯಕ್ತಿಗಳಿಗೆ ಹೋಲಿಸಿದರೆ ಸೋಂಕಿನ ನಂತರ ಆತ್ಮಹತ್ಯೆಗೆ ಪ್ರಯತ್ನಿಸುವ ಸಾಧ್ಯತೆ ಎರಡು ಪಟ್ಟು ಹೆಚ್ಚಾಗಿದೆ ಎಂದು ವರದಿ ಮಾಡಿದ್ದಾರೆ.

ಲೈಮ್ ಕಾಯಿಲೆಯು ಕೇವಲ ದದ್ದು (rash) ನ್ನು ಉಂಟು ಮಾಡುವ ಸರಳ ಕಾಯಿಲೆಯಲ್ಲ. ಇದು ತೀವ್ರವಾದ ಹೃದಯ, ಸಂಧಿವಾತ ಮತ್ತು ನರವೈಜ್ಞಾನಿಕ ಸಮಸ್ಯೆಗಳ ಅಪಾಯದ ಜೊತೆಗೆ, ಲೈಮ್ ಕಾಯಿಲೆಯು ತೀವ್ರವಾದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಬ್ರಿಯಾನ್ ಫಾಲನ್ MD, MPH, ನ್ಯೂಯಾರ್ಕ್ ಸ್ಟೇಟ್ಸೈಕಿಯಾಟ್ರಿಕ್ ಇನ್ಸ್ಟಿಟ್ಯೂಟ್ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯದ ಮನೋವೈದ್ಯರು ಹೇಳಿದ್ದಾರೆ.

ಇದನ್ನು ಓದಿ:Health Tips: ಚಳಿಗಾಲದಲ್ಲಿ ರಾತ್ರಿ ಸಾಕ್ಸ್​ ಹಾಕಿಕೊಂಡು ಮಲಗುತ್ತೀರಾ?; ಆ ಅಭ್ಯಾಸ ಬಿಟ್ಟುಬಿಡಿ

ಲೈಮ್ ಕಾಯಿಲೆಯ ನ್ಯೂರೋಸೈಕಿಯಾಟ್ರಿಕ್ ಪರಿಣಾಮಗಳ ಅಗ್ರಗಣ್ಯ ಸಂಶೋಧಕರಲ್ಲಿ ಒಬ್ಬರಾದ ಡಾ.ಫಾಲನ್, ಕೊಲಂಬಿಯಾದ ಲೈಮ್ ಮತ್ತು ಟಿಕ್ ಹರಡುವ ರೋಗಗಳ ಸಂಶೋಧನಾ ಕೇಂದ್ರದ ನಿರ್ದೇಶಕ, ಬೆನ್ರೋಸ್ MD, PhD, ತನಿಖಾಧಿಕಾರಿ, ಟ್ರೈನ್ ಮ್ಯಾಡ್ಸೆನ್, ಸಹ ಲೇಖಕ, ಆನೆಟ್ ಎರ್ಲಾಂಗ್ಸೆನ್, ಹಾಗೂ ಮಾನಸಿಕ ಆರೋಗ್ಯ ಸಂಶೋಧನಾ ಕೇಂದ್ರದಲ್ಲಿನ ಎಲ್ಲಾ ಮನೋವೈದ್ಯಕೀಯ ಸೋಂಕುಶಾಸ್ತ್ರಜ್ಞರು ತಮ್ಮ ಅಧ್ಯಯನವನ್ನು ನಡೆಸಲು ಈ ಸಂಶೋಧಕರು 22 ವರ್ಷಗಳ ಅವಧಿಯಲ್ಲಿ ಡೆನ್ಮಾರ್ಕ್‍ನಲ್ಲಿ ವಾಸಿಸುವ ಸುಮಾರು 7 ಮಿಲಿಯನ್ ಜನರ ವೈದ್ಯಕೀಯ ದಾಖಲೆಯ ರೋಗನಿರ್ಣಯವನ್ನು ವೀಶ್ಲೇಷಿಸಿದ್ದಾರೆ.

ಲೈಮ್ ಕಾಯಿಲೆಯ ರೋಗಿಗಳಿಗೆ ಮಾನಸಿಕ ಅಸ್ವಸ್ಥತೆಗಳು ಮತ್ತು ಆತ್ಮಹತ್ಯೆ ಪ್ರಯತ್ನಗಳ ಅಪಾಯದ ಜೊತೆಗೆ ಅವರು ಖಿನ್ನತೆ ಮತ್ತು ಬೈಪೋಪಾರ್ ಡಿಸಾರ್ಡರ್​ನಂತಹ 42 ಪ್ರತಿಶತದಷ್ಟು ಹೆಚ್ಚಿನ ಪರಿಣಾಮಕಾರಿ ಅಸ್ವಸ್ಥತೆಗಳನ್ನು ಹೊಂದಿದ್ದಾರೆ ಮತ್ತು 75 ಪ್ರತಿಶತದಷ್ಟು ಹೆಚ್ಚಿನ ಸಾವಿನ ಪ್ರಮಾಣವನ್ನು ಹೊಂದಿದ್ದಾರೆ ಎಂದು ವಿಶ್ಲೇಷಣೆ ಬಹಿರಂಗ ಪಡಿಸಿದೆ.

ಪ್ರತಿವರ್ಷ ಅಮೇರಿಕಾದಲ್ಲಿ ಸುಮಾರು ಅರ್ಧ ಮಿಲಿಯನ್ ಜನರು ಲೈಮ್ ಕಾಯಿಲೆಗೆ ರೋಗನಿರ್ಣಯ ಮಾಡುತ್ತಾರೆ ಮತ್ತು ಚಿಕಿತ್ಸೆ ನೀಡುತ್ತಾರೆ. ಇದನ್ನು ಲೈಮ್ ಬೊರೆಲಿಯೊಸಿಸ್ ಎಂದೂ ಕರೆಯುತ್ತಾರೆ. ಇದು ಜಿಂಕೆ ಉಣ್ಣಿಗಳಿಂದ ಸಾಗಿಸುವ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಮತ್ತು ಅವುಗಳ ಕಡಿತದ ಮೂಲಕ ಮನುಷ್ಯರಿಗೆ ಹರಡುತ್ತದೆ. ಈಶಾನ್ಯ, ಮಧ್ಯ-ಅಟ್ಲಾಂಟಿಕ್ ಮತ್ತು ಉತ್ತರ ಮಧ್ಯ ರಾಜ್ಯಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.

ಮೌಕಿಕ ಪ್ರತಿಜೀವಕಗಳ ಎರಡರಿಂದ ನಾಲ್ಕು ವಾರಗಳ ಕೋರ್ಸ್‍ನಿಂದ ಹೆಚ್ಚಿನ ಪ್ರಕರಣಗಳನ್ನು ಗುಣಪಡಿಸಬಹುದಾದರೂ, 10-20 ಪ್ರತಿಶತ ರೋಗಿಗಳು ನೋವು, ಆಯಾಸ, ಅಥವಾ ಚಿಕಿತ್ಸೆಯ ನಂತರ ತಿಂಗಳುಗಳಿಂದ ವರ್ಷಗಳ ವರೆಗೆ ಯೋಚಿಸುವ ತೊಂದರೆಯ ಲಕ್ಷಣಗಳಿಂದ ಬಳಲುತ್ತಿದ್ದಾರೆ. ಹಲವಾರು ಅಧ್ಯಯನಗಳು ಲೈಮ್ ಕಾಯಿಲೆ ಮತ್ತು ಅರಿವಿನ ಅಸ್ವಸ್ಥತೆಗಳ ನಡುವಿನ ಸಂಪರ್ಕವನ್ನು ಸೂಚಿಸಿವೆ. ಕೊನೆಯ ಹಂತದ ಲೈಮ್ ಕಾಯಿಲೆ ಹೊಂದಿರುವ ವ್ಯಕ್ತಿಗಳು ದುರ್ಬಲಗೊಂಡ ಏಕಾಗ್ರತೆ, ಕಿರಿಕಿರಿ, ಸ್ಮರಣೆ ಮತ್ತು ನಿದ್ರೆಯ ಅಸ್ವಸ್ಥತೆಗಳು ಮತ್ತು ನೋವಿನ ನರಗಳ ಅಪಸಾಮಾನ್ಯ ಕ್ರಿಯೆಯನ್ನು ಅನುಭವಿಸಬಹುದು.

ಲೈಮ್ ಬೊರೆಲಿಯೊಸಿಸ್ ನಂತರ ಹೆಚ್ಚಿನ ಜನರು ತೀವ್ರವಾದ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಎಂದು ಡಾ. ಮೈಕಲ್ ಬೆನ್ರೋಸ್ ಹೇಳುತ್ತಾರೆ. ಅಧ್ಯಯನದ ಅವಧಿಯಲ್ಲಿ ಲೈಮ್ ಕಾಯಿಲೆಯ ಆಸ್ಪತ್ರೆಯ ರೋಗನಿರ್ಣಯವನ್ನು ಹೊಂದಿರುವ ಸುಮಾರು 13,000 ವ್ಯಕ್ತಿಗಳಲ್ಲಿ ಕೇವಲ 7 ಪ್ರತಿಶತದಷ್ಟು ಜನರು ಮಾತ್ರ ಆಸ್ಪತ್ರೆಯ ವೈದ್ಯರೊಂದಿಗೆ ನಂತರದ ಮಾನಸಿಕ ಅಸ್ವಸ್ಥತೆಗಳೆಂದು ಗುರುತಿಸಲಾದ ರೋಗಲಕ್ಷಣಗಳ ಬಗ್ಗೆ ದೂರು ನೀಡಿದರು.

ಈ ರಾಷ್ಟವ್ಯಾಪಿ ಅಧ್ಯಯನವು ಲೈಮ್ ಕಾಯಿಲೆ ಮತ್ತು ಮನೋವೈದ್ಯಕೀಯ ಅಸ್ವಸ್ಥತೆಗಳ ನಡುವಿನ ಸಂಬಂಧವನ್ನು ದೃಢೀಕರಿಸುತ್ತದೆ ಎಂದು ಡಾ. ಬೆನ್ರೋಸ್ ಹೇಳಿದರು. ‘ಚಿಕಿತ್ಸಕರು ಮತ್ತು ರೋಗಿಗಳು ಮಾನಸಿಕ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುವ ಬಗ್ಗೆ ತಿಳಿದಿರಬೇಕು, ವಿಶೇಷವಾಗಿ ತೀವ್ರವಾದ ಲೈಮ್ ಕಾಯಿಲೆಯ ಸೋಂಕಿನ ನಂತರದ ಮೊದಲ ವರ್ಷದಲ್ಲಿ ಮತ್ತು ಮಾನಸಿಕ ಆರೋಗ್ಯ ಸಮಸ್ಯೆ ಉದ್ಭವಿಸಿದರೆ ರೋಗಿಗಳು ಚಿಕಿತ್ಸೆ ಮತ್ತು ಮಾರ್ಗದರ್ಶನವನ್ನು ಪಡೆಯಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:39 am, Tue, 10 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ