Cold or Warm Bath: ತಣ್ಣನೆಯ ಅಥವಾ ಬೆಚ್ಚಗಿನ ಸ್ನಾನ? ಚಳಿಗಾಲದಲ್ಲಿ ಯಾವುದು ಉತ್ತಮ, ತಜ್ಞರ ಅಭಿಪ್ರಾಯ ಇಲ್ಲಿದೆ

ತಂಪಾದ ಹಾಗೂ ಬೆಚ್ಚಗಿನ ಸ್ನಾನ ಎರಡೂ ತಮ್ಮದೇ ಆದ ಅನುಕೂಲಗಳನ್ನು ಹೊಂದಿವೆ. ಚಳಿಗಾಲದಲ್ಲಿ ನೀರಿನ ತಾಪಮಾನದ ಬಗ್ಗೆ ಆಯುರ್ವೇದವು ಏನು ಹೇಳುತ್ತದೆ ಎಂಬುದು ಇಲ್ಲಿದೆ. ತಣ್ಣನೆಯ ಅಥವಾ ಬೆಚ್ಚಗಿನ ಸ್ನಾನ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ.

Cold or Warm Bath: ತಣ್ಣನೆಯ ಅಥವಾ ಬೆಚ್ಚಗಿನ ಸ್ನಾನ? ಚಳಿಗಾಲದಲ್ಲಿ ಯಾವುದು ಉತ್ತಮ, ತಜ್ಞರ ಅಭಿಪ್ರಾಯ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 17, 2023 | 6:38 PM

ತಂಪಾದ ಹಾಗೂ ಬೆಚ್ಚಗಿನ ಸ್ನಾನ ಎರಡೂ ತಮ್ಮದೇ ಆದ ಅನುಕೂಲಗಳನ್ನು ಹೊಂದಿವೆ. ಚಳಿಗಾಲದಲ್ಲಿ ನೀರಿನ ತಾಪಮಾನದ ಬಗ್ಗೆ ಆಯುರ್ವೇದವು ಏನು ಹೇಳುತ್ತದೆ ಎಂಬುದು ಇಲ್ಲಿದೆ. ತಣ್ಣನೆಯ ಅಥವಾ ಬೆಚ್ಚಗಿನ ಸ್ನಾನ ಮಾಡುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ. ಸ್ನಾನವನ್ನು ಮಾಡುವಾಗ ನೀರಿನ ತಾಪಮಾನದ ಕುರಿತು ತಜ್ಞರು ಹೇಳುತ್ತಾರೆ. ಚಳಿಗಾಲದಲ್ಲಿ ತಣ್ಣನೆಯ ಸ್ನಾನದ ಪ್ರಯೋಜನಗಳನ್ನು ಅಧ್ಯಯನಗಳು ಸಾಬೀತುಪಡಿಸಿವೆ. ತಣ್ಣನೆಯ ಸ್ನಾನವನ್ನು ಮಾಡುವ ಜನರು ಹೆಚ್ಚಿನ ಶೇಕಡಾವಾರು ಬಿಳಿ ರಕ್ತಕಣಗಳನ್ನು ಹೊಂದಿರುತ್ತಾರೆ. ಮತ್ತು ಹೆಚ್ಚಿನ ಚಯಾಪಚಯ ದರವನ್ನು ಹೊಂದಿರುತ್ತಾರೆ. ತಣ್ಣನೆಯ ಸ್ನಾನವು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಹಾಗೂ ನೀವು ಹೆಚ್ಚು ಸಕ್ರಿಯವಾಗಿರುವಂತೆ ಮಾಡುತ್ತದೆ. ನಿಮ್ಮ ಚರ್ಮ ಮತ್ತು ಕೂದಲುಗಳು ಒಣಗುವುದನ್ನು ತಡೆಯುತ್ತದೆ. ಬಿಸಿನೀರಿನ ಸ್ನಾನವು ನಿಮಗೆ ಉತ್ತಮ ನಿದ್ರೆ ಮತ್ತು ಒತ್ತಡವನ್ನು ಶಮನಗೊಳಿಸಲು, ಸ್ನಾಯು ಮತ್ತು ಕೀಲುನೋವುಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.

ಆಯುರ್ವೇದ ತಜ್ಞರು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್​ನಲ್ಲಿ, ಚಳಿಗಾಲದಲ್ಲಿ ತಣ್ಣನೆಯ ಸ್ನಾನವು ಆರೋಗ್ಯಕ್ಕೆ ಒಳ್ಳೆಯದು ಎಂಬ ವಾದವನ್ನು ಒಪ್ಪಲಿಲ್ಲ. ಡಾ. ರೇಖಾ ರಾಧಾಮೋನಿ ಅವರ ಪ್ರಕಾರ, ತಣ್ಣನೆಯ ಸ್ನಾನವು ವಾತವನ್ನು ಹೆಚ್ಚಿಸುತ್ತದೆ ಹಾಗೂ ನೋವನ್ನು ಉಲ್ಬಣಗೊಳಿಸುತ್ತದೆ. ತಣ್ಣನೆಯ ಸ್ನಾನ ಮಾಡಿದರೆ ದೇಹವು ಶಾಖವನ್ನು ಸಂರಕ್ಷಿಸಲು ಹೆಚ್ಚು ಶ್ರಮಿಸಬೇಕಾಗುತ್ತದೆ ಎಂದು ಡಾ. ರೇಖಾ ರಾಧಾಮೋನಿ ಹೇಳುತ್ತಾರೆ.

ಇದನ್ನು ಓದಿ:Hot Bath: ಚಳಿಗಾಲದಲ್ಲಿ ಬಿಸಿ ನೀರಿನಿಂದ ಸ್ನಾನ ಮಾಡುತ್ತಿದ್ದೀರಾ? ಎಚ್ಚರ, ನಿಮ್ಮ ಆರೋಗ್ಯ ಕೆಡಬಹುದು

ಚಳಿಗಾಲದಲ್ಲಿ ತಣ್ಣನೆಯ ಸ್ನಾನದ ಪರಿಣಾಮಗಳೇನು?

ಎಲ್ಲಾ ಶೀತ ಅಭ್ಯಾಸಗಳು ವಾತವನ್ನು ಹೆಚ್ಚಿಸುತ್ತದೆ. ಇದು ನೋವು, ಸ್ನಾಯುಗಳ ಬಿಗಿತ, ಶುಷ್ಕತೆ, ಕಡಿಮೆ ಚಯಾಪಚಯ, ದುರ್ಬಲ ಜೀರ್ಣಕ್ರಿಯೆ ಮತ್ತು ಅಸಮತೋಲನ ಹಾರ್ಮೋನುಗಳಿಗೆ ಕಾರಣವಾಗುತ್ತದೆ. ಬೆಚ್ಚಗಿನ ಸ್ನಾನವು ಇದಕ್ಕೆ ವಿರುದ್ಧವಾಗಿ ವಾತವನ್ನು ಕಡಿಮೆ ಮಾಡುತ್ತದೆ. ಒಂದು ವೇಳೆ ನೀವು ಮುಂಚಿನಿಂದಲೂ ತಣ್ಣೀರಿನ ಸ್ನಾನವನ್ನು ಮಾಡುವ ಅಭ್ಯಾಸವನ್ನು ಹೊಂದಿದ್ದರೆ ನೀವು ಅದನ್ನೇ ಮುಂದುವೆಸಬಹುದು ಏಕೆಂದರೆ ಈ ಅಭ್ಯಾಸವು ನಿಮ್ಮ ದೇಹದಲ್ಲಿ ಯಾವುದೇ ಅಡಚಣೆಗಳನ್ನು ಉಂಟುಮಾಡುವುದಿಲ್ಲ ಎಂದು ಡಾ. ರೇಖಾ ರಾಧಾಮೋನಿ ಹೇಳುತ್ತಾರೆ.

ಸರಿಯಾದ ಆಯುರ್ವೇದ ಅಭ್ಯಾಸ:

ತಣ್ಣನೆಯ ಸ್ನಾನ ಮಾಡುವುದು ಆಯುರ್ವೇದ ಅಭ್ಯಾಸವಲ್ಲ. ನಮ್ಮ ಆಂತರಿಕ ವಾತಾವರಣವು ಬೆಚ್ಚಗಾಗಿರುತ್ತದೆ. ನಮ್ಮ ದೇಹವು ಜೀರ್ಣಕ್ರಿಯೆಗೆ, ಪರಿಚಲನೆಗೆ ಹಾಗೂ ಚಯಾಪಚಯ ಪ್ರಕ್ರಿಯೆಗಳಿಗೆ ಉಷ್ಣತೆಯನ್ನು ಬಯಸುತ್ತದೆ. ನೀವು ತಣ್ಣೀರಿನಲ್ಲಿ ಸ್ನಾನ ಮಾಡಿದರೆ ವಾತವು ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಬಾಹ್ಯ ಪ್ರಪಂಚವು ತಣ್ಣಗಾಗಿರುವುದರಿಂದ ದೇಹವು ಆಂತರಿಕ ವಾತವರಣವನ್ನು ಬೆಚ್ಚಗಾಗಲು ಪ್ರಯತ್ನಿಸುತ್ತದೆ. ಆ ಉಷ್ಣತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು. ನಿಮ್ಮ ದೇಹಕ್ಕೆ ಉಷ್ಣತೆ ಅಗತ್ಯ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ತಣ್ಣನೆಯ ಅಥವಾ ಬೆಚ್ಚಗಿನ ಸ್ನಾನದ ನಂತರ ಯಾವುದೇ ಸಮಸ್ಯೆಯನ್ನು ಎದುರಿಸಿದರೆ ಆರೋಗ್ಯ ತಜ್ಞರನ್ನು ಸಂಪರ್ಕಿಸುವುದು ಉತ್ತಮ ಅಭ್ಯಾಸವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:38 pm, Tue, 17 January 23

ತಾಜಾ ಸುದ್ದಿ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಮುಂಡರಗಿಯ ಸಿಂಗಟಾಲೂರ್ ಬ್ಯಾರೇಜ್ ಭರ್ತಿ, 45,000 ಕ್ಯೂಸೆಕ್ಸ್ ನೀರು ನದಿಗೆ
ಉಡುಪಿಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದ ಕುಂಭದ್ರೋಣ
ಉಡುಪಿಯಲ್ಲಿ ನಿಲ್ಲದ ಮಳೆ ಪ್ರತಾಪ, ನಗರದಲ್ಲಿ ಬೆಳಗ್ಗೆಯಿಂದ ಕುಂಭದ್ರೋಣ
ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ
ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸ್ವಿಮ್ಮಿಂಗ್; ಇಲ್ಲಿದೆ ವಿಡಿಯೋ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಚೆಂಡಿಯಾದಲ್ಲಿ ಮನೆಗಳು ಜಲಾವೃತ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ, ಚೆಂಡಿಯಾದಲ್ಲಿ ಮನೆಗಳು ಜಲಾವೃತ
ಟೀಮ್ ಇಂಡಿಯಾ ವಿಜಯಯಾತ್ರೆ ವೇಳೆ ಪಾಕಿಸ್ತಾನ್ ಘೋಷಣೆ ಕೂಗಿದ ಫ್ಯಾನ್ಸ್..!
ಟೀಮ್ ಇಂಡಿಯಾ ವಿಜಯಯಾತ್ರೆ ವೇಳೆ ಪಾಕಿಸ್ತಾನ್ ಘೋಷಣೆ ಕೂಗಿದ ಫ್ಯಾನ್ಸ್..!