Tea and Food Pairings: ನೀವು ಚಹಾ ಕುಡಿಯುವಾಗ ಈ 5 ಆಹಾರಗಳನ್ನು ಸೇವಿಸಬೇಡಿ
ನೀವು ಚಹಾದೊಂದಿಗೆ ಸೇವಿಸುವ ಕೆಲವೊಂದು ಆಹಾರಗಳು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಚಹಾ ಕುಡಿಯುವಾಗ ಈ 5 ಆಹಾರಗಳಿಂದ ದೂರವಿರಿ.
ಚಳಿಗಾಲದ ಸಮಯದಲ್ಲಿ ಒಂದು ಕಪ್ ಚಹಾದ ಜೊತೆಗೆ ಎನಾದರೂ ತಿಂಡಿನೂ ಬೇಕು ಎಂದು ಅನಿಸುವುದು ಸಹಜ. ಸಾಮಾನ್ಯವಾಗಿ ಹೆಚ್ಚಾಗಿ ಪಕೋಡ, ಸಮೋಸಾ ಮುಂತಾದ ಕರಿದ ಆಹಾರಗಳನ್ನು ತಿನ್ನುತ್ತೀರಿ. ಆದರೆ ನೀವು ಚಹಾದೊಂದಿಗೆ ಸೇವಿಸುವ ಕೆಲವೊಂದು ಆಹಾರಗಳು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಚಹಾ ಕುಡಿಯುವಾಗ ಈ 5 ಆಹಾರಗಳಿಂದ ದೂರವಿರಿ. ಯಾಕೆಂದರೆ ಇದು ನಿಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಚಹಾದ ಜೊತೆಗೆ ಈ 5 ಆಹಾರಗಳನ್ನು ಸೇವಿಸದಿರಿ:
ಮೊಸರು:
ಬಿಸಿ ಚಹಾದೊಂದಿಗೆ ತಣ್ಣಗಿರುವ ಯಾವುದೇ ಆಹಾರವನ್ನು ಸೇವಿಸದಿರಿ. ಜೊತೆಗೆ ನೀವು ಹಾಲಿನ ಚಹಾದ ಕಡಿಯುತ್ತಿದ್ದರೆ, ಆ ಸಮಯದಲ್ಲಿ ಮೊಸರು ತಿನ್ನುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ ಎಂದು ತಜ್ಞರು ಸಲಹೆ ನೀಡುತ್ತಾರೆ.
ಸೊಪ್ಪು ತರಕಾರಿಗಳು:
ದೇಹಕ್ಕೆ ಕಬ್ಬಿಣಾಂಶಗಳನ್ನು ನೀಡುವ ಸೊಪ್ಪು ತರಕಾರಿಗಳನ್ನು ಚಹಾದೊಂದಿಗೆ ಸೇವಿಸದಿರಿ. ಯಾಕೆಂದರೆ ಚಹಾದಲ್ಲಿರುವ ಕೆಫೆನ್ ಮತ್ತು ಆಕ್ಸಲೇಟ್ಗಳು ಕಬ್ಬಿಣದ ಅಂಶ ದೇಹಕ್ಕೆ ತಲುಪದಂತೆ ತಡೆಯುತ್ತದೆ. ಹೀಗಾಗಿ, ಹಸಿರು ತರಕಾರಿಗಳಿಂದ ಕಬ್ಬಿಣದ ಅಂಶವನ್ನು ದೇಹವು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದಲ್ಲದೆ, ಪೋಷಕಾಂಶ ಸಮೃದ್ದವಾಗಿರುವ ಯಾವುದೇ ಬೀಜಗಳನ್ನು ಸಹ ಚಹಾ ಸಮಯದಲ್ಲಿ ಸೇವಿಸಬೇಡಿ.
ಅರಿಶಿನ:
ಭಾರತೀಯ ಪಾಕಪದ್ಧತಿಯಲ್ಲಿ ಪ್ರತಿಯೊಂದು ಆಹಾರಗಳಲ್ಲಿ ಅರಶಿನವನ್ನು ಬಳಸಲಾಗುತ್ತದೆ. ಚಹಾಕ್ಕೆ ಅರಿಶಿನವನ್ನು ಸೇರಿಸುವುದು ಅಥವಾ ಚಹಾದೊಂದಿಗೆ ಅರಿಶಿನ ಭರಿತ ಆಹಾರಗಳನ್ನು ಸೇವಿಸುವುದು ದೇಹಕ್ಕೆ ಹಾನಿಕಾರಕವೆಂದು ಸಾಬೀತಾಗಿದೆ. ಅರಿಶಿನವು ಕರ್ಕ್ಯುಮಿನ್ ಆಂಶ ಹೊಂದಿರುತ್ತದೆ. ಆದರೆ ಚಹಾವು ಟ್ಯಾನಿನ್ ಹೊಂದಿರುತ್ತದೆ ಮತ್ತು ಎರಡರ ಸಂಯೋಜನೆಯು ಆಮ್ಲೀಯತೆ ಅಥವಾ ಮಲಬದ್ಧತೆಯಂತಹ ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ: ತೂಕ ಇಳಿಸುವುದು ನಿಮ್ಮ ಗುರಿಯಾಗಿದ್ದರೆ ಈ ವ್ಯಾಯಾಮಗಳನ್ನು ಮಾಡಬೇಡಿ
ನಿಂಬೆ ರಸ:
ನಿಂಬೆ ರಸವನ್ನು ಸಾಮಾನ್ಯವಾಗಿ ಕಪ್ಪು ಚಹಾಕ್ಕೆ ಸೇರಿಸಲಾಗುತ್ತದೆ ಇದು ತೂಕ ನಷ್ಟ ಪರಿಹಾರವಾಗಿ ಅಥವಾ ಅದರ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ತಜ್ಞರು ಈ ಅಭ್ಯಾಸವನ್ನು ಬಿಟ್ಟು ಬಿಡಿ ಎಂದು ಸಲಹೆ ನೀಡುತ್ತಾರೆ. ನಿಂಬೆ ರಸವು ಆಮ್ಲೀಯ ಸ್ವಭಾವವನ್ನು ಹೊಂದಿದೆ. ಇದರರ್ಥ ನಿಮ್ಮ ಚಹಾಕ್ಕೆ ನಿಂಬೆ ರಸವನ್ನು ಸೇರಿಸುವುದರಿಂದ ಪಾನೀಯದ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾಗಿ ಉಬ್ಬುವುದು ಮುಂತಾದ ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆಗಾಗ್ಗೆ ಆಸಿಡ್ ರಿಫ್ಲಕ್ಸ್ ಅನುಭವಿಸುವ ಜನರಿಗೆ, ನಿಂಬೆ ರಸವನ್ನು ಚಹಾಗೆ ಸೇರಿಸುವುದನ್ನು ತಪ್ಪಿಸುವುದು ಉತ್ತಮ.
ಫ್ರೂಟ್ ಸಲಾಡ್:
ಚಹಾ ಮತ್ತು ಫ್ರೂಟ್ ಸಲಾಡ್ ಎರಡು ಪರಸ್ಪರ ವಿರುದ್ದವಾದ ಆಹಾರವಾಗಿದೆ. ಯಾಕೆಂದರೆ ಚಹಾ ಬಿಸಿಯಾಗಿರುತ್ತದೆ ಮತ್ತು ಸಲಾಡ್ ತಣ್ಣಗಿರುತ್ತದೆ. ಸಲಾಡ್, ಅಥವಾ ಹಣ್ಣಿನ ಕ್ರೀಮ್ನಂತಹ ಯಾವುದೇ ಹಣ್ಣು ಆಧಾರಿತ ಸಿಹಿಭಕ್ಷ್ಯವನ್ನು ತಿನ್ನಲು ಯೋಜಿಸುತ್ತಿದ್ದರೆ, ಸಾಧ್ಯವಾದಷ್ಟು ಅದನ್ನು ತಪ್ಪಿಸಿ ಅಥವಾ ನಿಮ್ಮ ಕಪ್ ಚಹಾ ಮುಗಿಯುವವರೆಗೆ ಕಾಯಿರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:20 pm, Tue, 17 January 23