Make Yourself Happy: ನಿಮ್ಮನ್ನು ನೀವು ಸಂತೋಷದಿಂದಿಡಲು ಈ ನಾಲ್ಕು ಸಿಂಪಲ್ ಟಿಪ್ಸ್ ಪಾಲಿಸಿ

ನ್ಯೂಯಾರ್ಕ್ ಟೈಮ್ಸ್ ಹಾರ್ವರ್ಡ್ ಅಧ್ಯಯನವು ನಿಮ್ಮನ್ನು ನೀವು ಸಂತೋಷವಾಗಿಡಲು ಸಹಾಯಕವಾಗುವ ಪ್ರಮುಖ ನಾಲ್ಕು ಅಂಶವನ್ನು ಕಂಡು ಹಿಡಿದಿದೆ. ನಿಮ್ಮ ಜೀವನದಲ್ಲಿ, ನಿಮ್ಮ ಕೆಲಸದ ಸ್ಥಳಗಳಲ್ಲಿ ಮತ್ತು ಕುಟುಂಬದ ಜನರೊಂದಿಗೆ ನೀವು ರೂಪಿಸುವ ಸಂಬಂಧಗಳು ದೀರ್ಘಾವಧಿಯಲ್ಲಿ ನಿಮಗೆ ಹೆಚ್ಚಿನ ಸಂತೋಷವನ್ನು ತರುತ್ತದೆ ಎಂದು ಈ ಸಂಶೋಧನೆ ತಿಳಿಸಿದೆ.

Make Yourself Happy: ನಿಮ್ಮನ್ನು ನೀವು ಸಂತೋಷದಿಂದಿಡಲು ಈ ನಾಲ್ಕು ಸಿಂಪಲ್ ಟಿಪ್ಸ್ ಪಾಲಿಸಿ
ಸಾಂದರ್ಭಿಕ ಚಿತ್ರImage Credit source: iStock
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Jan 17, 2023 | 2:53 PM

ನಿಮ್ಮನ್ನು ಸಂತೋಷವಾಗಿಡುವುದು ಅದು ನಿಮ್ಮ ಕರ್ತವ್ಯವಾಗಿದೆ. ಆದ್ದರಿಂದ ಪ್ರತಿದಿನ ದಿನಾಂತ್ಯದಲ್ಲಿ ನೀವು ನಿಮಗಾಗಿ ಎನು ಮಾಡಿದ್ದೀರಿ ಎಂದು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಈ ಕುರಿತಾಗಿ ಸಾಕಷ್ಟು ಅಧ್ಯಯನಗಳು ನಡೆದಿದ್ದು, 85 ವರ್ಷಗಳ ದೀರ್ಘವಾದ, ನ್ಯೂಯಾರ್ಕ್ ಟೈಮ್ಸ್ ಹಾರ್ವರ್ಡ್ ಅಧ್ಯಯನವು ನಿಮ್ಮನ್ನು ನೀವು ಸಂತೋಷವಾಗಿಡಲು ಸಹಾಯಕವಾಗುವ ಪ್ರಮುಖ ನಾಲ್ಕು ಅಂಶವನ್ನು ಕಂಡು ಹಿಡಿದಿದೆ. ನಿಮ್ಮ ಜೀವನದಲ್ಲಿ, ನಿಮ್ಮ ಕೆಲಸದ ಸ್ಥಳಗಳಲ್ಲಿ ಮತ್ತು ಕುಟುಂಬದ ಜನರೊಂದಿಗೆ ನೀವು ರೂಪಿಸುವ ಸಂಬಂಧಗಳು ದೀರ್ಘಾವಧಿಯಲ್ಲಿ ನಿಮಗೆ ಹೆಚ್ಚಿನ ಸಂತೋಷವನ್ನು ತರುತ್ತದೆ ಎಂದು ಈ ಸಂಶೋಧನೆ ತಿಳಿಸಿದೆ.

ಹಾರ್ವರ್ಡ್ ಅಧ್ಯಯನ ಕಂಡು ಹಿಡಿದ ಪ್ರಮುಖ ನಾಲ್ಕು ಅಂಶಗಳು ಇಲ್ಲಿವೆ:

ಅಪರಿಚಿತರನ್ನು ಪರಿಚಿತರನ್ನಾಗಿಸಿ:

ಅಪರಿಚಿತರೊಂದಿಗೆ ಸಂವಹನ ನಡೆಸುವುದು ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆ ತೋರಿಸಿದೆ. ಅಪರಿಚಿತರನ್ನು ಪರಿಚಯ ಮಾಡಿಸಿಕೊಳ್ಳುವುದು ನಿಮ್ಮನ್ನು ನೀವು ಸಂತೋಷದಿಂದಿಡಲು ಒಂದು ಉತ್ತಮ ಮಾರ್ಗವಾಗಿದೆ. ನೀವು ಅವರೊಂದಿಗೆ ಸಮಯ ಕಳೆದಂತೆ ಹೊಸ ಹೊಸ ವಿಷಯಗಳು ತಿಳಿಯುತ್ತದೆ. ಜೊತೆಗೆ ಹೊಸ ವ್ಯಕ್ತಿತ್ವದ ಪರಿಚಯವಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಕೃತಜ್ಞತಾ ಭಾವನೆ ಬೆಳೆಸಿಕೊಳ್ಳಿ:

ನೀವು ಯಾರಿಗಾದರೂ ಧನ್ಯವಾದ ಹೇಳಲು ಬಯಸಿದರೆ ಆ ಕೆಲಸ ಮೊದಲು ಮಾಡಿ. ಯಾಕೆಂದರೆ ಇದು ನಿಮಗೆ ಮಾತ್ರ ಖುಷಿ ನೀಡುವ ಹೊರತಾಗಿಯೂ ಕೂಡ ನಿಮ್ಮಿಂದ ಕೃತಜ್ಞತೆಯನ್ನು ಸ್ವೀಕರಿಸಿದವರಿಗೂ ಖುಷಿ ನೀಡುತ್ತದೆ ಎಂದು ಸಂಶೋಧನೆ ತಿಳಿಸಿದೆ. ಸ್ನೇಹಿತರಿಗೆ, ಪ್ರೀತಿಪಾತ್ರರಿಗೆ, ಕುಟುಂಬದ ಸದಸ್ಯರಿಗೆ ಅಥವಾ ನಿಮ್ಮ ವೃತ್ತಿಜೀವನದಲ್ಲಿ ನಿಮಗೆ ಸಹಾಯ ಮಾಡಿದ ಯಾರಿಗಾದರೂ ಧನ್ಯವಾದ ತಿಳಿಸಿ. ನೀವು ಪ್ರತಿ ದಿನ ನೋಡುತ್ತಿರುವ ವ್ಯಕ್ತಿಯಾಗಿರಬಹುದು ಅಥವಾ ನೀವು ವರ್ಷಗಳಿಂದ ಮಾತನಾಡದೇ ಇರುವ ವ್ಯಕ್ತಿಯಾಗಿರಬಹುದು.

ಇದನ್ನೂ ಓದಿ: ವಾರಪೂರ್ತಿ ಕೆಲಸ ಮಾಡಿ ಸುಸ್ತಾಗಿದೆಯೇ, ನಿಮ್ಮ ಮನಸ್ಸು ಹಾಗೂ ದೇಹವನ್ನು ಶಾಂತಗೊಳಿಸಲು ಇಲ್ಲಿವೆ ಸಲಹೆಗಳು

ಕೆಲಸದಲ್ಲಿ ಸ್ಥಳದಲ್ಲಿ ಒಬ್ಬರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳಿ:

ವೃತ್ತಿ ಜೀವನದಲ್ಲಿ ಕೆಲವೊಮ್ಮೆ ನೋವುಗಳು ಬರುವುದು ಸಾಮಾನ್ಯ. ಇಂತಹ ಸನ್ನಿವೇಶಗಳಲ್ಲಿ ನಿಮ್ಮ ನೋವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗದೇ ಇರಬಹುದು. ಆದ್ದರಿಂದ ಒಬ್ಬರೊಂದಿಗಾದರೂ ಆತ್ಮೀಯತೆ ಬೆಳೆಸಿಕೊಳ್ಳಿ. ನೀವು ಪ್ರತಿದಿನ ಉತ್ತಮ ಕ್ಷಣವನ್ನು ಕಲೇಯಬಹುದು ಎಂದು ಈ ಅಧ್ಯಯನದಲ್ಲಿ ತಿಳಿದು ಬಂದಿದೆ.

ಸ್ನೇಹಿತನೊಂದಿಗೆ ಫೋನ್ ಕರೆಮಾಡಿ ಮಾತಾಡಿ:

ಯಾವುದೇ ಕಾರಣಗಳಿಲ್ಲದಿದ್ದರೂ ಬಿಡುವಿನ ಸಮಯದಲ್ಲಿ ಸ್ನೇಹಿತನೊಂದಿಗೆ ಕರೆ ಮಾಡಿ ಸಮಯ ಕಳೆಯಿರಿ. ಇದು ನಿಮ್ಮಿಬ್ಬರ ನಡುವಿನ ಸಾಕಷ್ಟು ನೆನಪುಗಳನ್ನು ಮರುಕಳಿಸುತ್ತದೆ. ಜೊತೆಗೆ ನಿಮಗೆ ಸಂತೋಷವನ್ನು ತಂದು ಕೊಡುತ್ತದೆ ಎಂದು ಅಧ್ಯಯನವು ತಿಳಿಸಿದೆ. ಕೆಲವೇ ನಿಮಿಷಗಳ ಮಾತುಕತೆ ನಿಮ್ಮಿಬ್ಬರ ಮುಖದಲ್ಲಿ ನಗುವನ್ನು ತರುವಂತೆ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 2:53 pm, Tue, 17 January 23

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?