Chattambade Recipe: ಉಡುಪಿಯ ಸ್ಪೆಷಲ್ ಚಟ್ಟಂಬಡೆ ರೆಸಿಪಿ ಇಲ್ಲಿದೆ
ಉಡುಪಿಯು ಆಕರ್ಷಕ ಪ್ರವಾಸಿ ತಾಣದ ಜೊತೆಗೆ ಅಲ್ಲಿನ ಆಹಾರದ ರುಚಿ ಕೂಡ ಅಧ್ಬುತ. ನೀವು ಅಲ್ಲಿಗೆ ಭೇಟಿ ನೀಡಿದಾಗ ಸ್ಪೇಷಲ್ ತಿಂಡಿ ಚಟ್ಟಂಬಡೆ ಸವಿಯುವುದನ್ನು ಮರೆಯದಿರಿ. ನೀವು ಮನೆಯಲ್ಲಿಯೇ ತಯಾರಿಸಲು ಚಟ್ಟಂಬಡೆಯ ಪಾಕ ವಿಧಾನ ಇಲ್ಲಿದೆ.
ಚಳಿಗಾಲದ ಸಮಯದಲ್ಲಿ ಗರಿ ಗರಿಯಾಗಿ ತಿನ್ನಬೇಕೆಂದು ಅನಿಸುವುದು ಸಹಜ. ಆದರೆ ಹೊರಗಡೆ ಹೋಗಿ ತಿಂದು ನಿಮ್ಮ ಆರೋಗ್ಯವನ್ನು ಕೆಡಿಸುವ ಬದಲು ಮನೆಯಲ್ಲಿಯೇ ಹೊಸ ಹೊಸ ಪಾಕ ವಿಧಾನವನ್ನು ಪ್ರಯತ್ನಿಸಿ ಸವಿಯಿರಿ. ಉಡುಪಿಯು ಆಕರ್ಷಕ ಪ್ರವಾಸಿ ತಾಣದ ಜೊತೆಗೆ ಅಲ್ಲಿನ ಆಹಾರದ ರುಚಿ ಕೂಡ ಅಧ್ಬುತ. ನೀವು ಅಲ್ಲಿಗೆ ಭೇಟಿ ನೀಡಿದಾಗ ಸ್ಪೇಷಲ್ ತಿಂಡಿ ಚಟ್ಟಂಬಡೆ ಸವಿಯುವುದನ್ನು ಮರೆಯದಿರಿ. ನೀವು ಮನೆಯಲ್ಲಿಯೇ ತಯಾರಿಸಲು ಚಟ್ಟಂಬಡೆಯ ಪಾಕ ವಿಧಾನ ಇಲ್ಲಿದೆ. ನೀವು ಮನೆಯಲ್ಲಿಯೇ ತಯಾರಿಸಿ ಮತ್ತು ನಿಮ್ಮ ಚಹಾದ ಸಮಯದಲ್ಲಿ ಕುಟುಂಬದವರೊಂದಿಗೆ ಸವಿಯಿರಿ.
ಚಟ್ಟಂಬಡೆ ಮಾಡುವ ವಿಧಾನ:
ಬೇಕಾಗುವ ಪದಾರ್ಥಗಳು:
1 ಕಪ್ ಕಡಲೆ ಬೇಳೆ ಸಣ್ಣದಾಗಿ ಕೊಚ್ಚಿದ ಒಂದು ಇರುಳ್ಳಿ 2 ಹಸಿರು ಮೆಣಸಿನಕಾಯಿ 3-4 ಒಣ ಕೆಂಪು ಮೆಣಸಿನಕಾಯಿ 1 ಚಮಚ ಜೀರಿಗೆ 10-12 ಕರಿಬೇವಿನ ಎಲೆಗಳನ್ನು ಕತ್ತರಿಸಿದ ಕೊತ್ತಂಬರಿ ಸೊಪ್ಪು ಸಣ್ಣದಾಗಿ ಕೊಚ್ಚಿದ 1/2 ಶುಂಠಿ 1 ಚಿಟಿಕೆ ಇಂಗು ರುಚಿಗೆ ಉಪ್ಪು ತೆಂಗಿನ ಎಣ್ಣೆ
ಇದನ್ನೂ ಓದಿ: ನೀವು ಚಹಾ ಕುಡಿಯುವಾಗ ಈ 5 ಆಹಾರಗಳನ್ನು ಸೇವಿಸಬೇಡಿ
ಚಟ್ಟಂಬಡೆ ಮಾಡುವ ವಿಧಾನ:
ತೊಳೆದಿಟ್ಟ ಕಡಲೆ ಬೇಳೆಯನ್ನು 3 – 4 ಗಂಟೆಗಳ ಕಾಲ ನೆನೆಸಿಡಿ. ಇದರ ಜೊತೆಗೆ ಸ್ವಲ್ಪ ಉದ್ದಿನ ಬೇಳೆ ಸೇರಿಸಿ. 3 – 4 ಗಂಟೆಗಳ ನಂತರ ಮಿಕ್ಸಿ ಜಾರ್‌ನಲ್ಲಿ ಹಾಕಿ ಗರಿ ಗರಿಯಾಗಿ ರುಬ್ಬಿ ಕೊಳ್ಳಿ. ಈ ಹಿಟ್ಟನ್ನು ಒಂದು ಅಗಲವಾದ ಪಾತ್ರೆಗೆ ಹಾಕಿ. ಇದಾದ ನಂತರ ಈಗಾಗಲೇ ಕೊಚ್ಚಿ ಇಟ್ಟ ಇರುಳ್ಳಿ, ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಈಗ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ, ಜೀರಿಗೆ ಮತ್ತು ಇಂಗು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ.
ನಂತರ ಅಂಗೈಗೆ ಸ್ವಲ್ಪ ನೀರು ಅಥವಾ ತೆಂಗಿನ ಕಾಯಿ ಎಣ್ಣೆ ಹಾಕಿ ಈಗಾಗಲೇ ಮಾಡಿಟ್ಟ ಉಂಡೆಯನ್ನು ಚಪ್ಪಟೆಯಾಕಾರದಲ್ಲಿ ತಟ್ಟಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಯಾಗಲು ಇಡಿ. ಎಣ್ಣೆ ಸ್ವಲ್ಪ ಬಿಸಿಯಾಗುತ್ತಿದ್ದಂತೆ ಈಗಾಗಲೇ ತಟ್ಟಿಟ್ಟ ಮಿಶ್ರಣ ಹುರಿಯಿರಿ. ಎರಡು ಇದರ ಬಣ್ಣ ಬದಲಾಗುತ್ತಿದ್ದಂತೆ ಎಣ್ಣೆಯಿಂದ ತೆಗೆಯಿರಿ. ಈಗ ಗರಿ ಗರಿಯಾದ ಉಡುಪಿ ಸ್ಪೇಷನ್ ಚಟ್ಟಂಬಡೆ ಸಿದ್ದವಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:10 pm, Wed, 18 January 23