Health Tips: ಧೂಮಪಾನಕ್ಕೂ, ಡಯಾಬಿಟಿಸ್ಗೂ ಏನು ಸಂಬಂಧ?; ಇಲ್ಲಿದೆ ಕುತೂಹಲಕಾರಿ ಮಾಹಿತಿ
Smoking Side Effects: ಧೂಮಪಾನವು ಹೃದಯ, ರಕ್ತನಾಳಗಳು ಮತ್ತು ರಕ್ತದ ಕಣಗಳಿಗೆ ಹಾನಿಯನ್ನು ಉಂಟುಮಾಡುತ್ತದೆ. ಇದು ರಕ್ತನಾಳಗಳಲ್ಲಿ ಪ್ಲೇಕ್ ಸಂಗ್ರಹಕ್ಕೆ ಕಾರಣವಾಗುತ್ತದೆ.
ತಂಬಾಕು (Tobacco) ಸೇವನೆಯಿಂದ ಆರೋಗ್ಯದ ಮೇಲೆ ಬಹಳ ವ್ಯತಿರಿಕ್ತ ಪರಿಣಾಮಗಳಿವೆ. ತಂಬಾಕು ನಿಕೋಟಿನ್ (Nicotine) ಎಂಬ ರಾಸಾಯನಿಕವನ್ನು ಹೊಂದಿರುತ್ತದೆ. ಇದು ವ್ಯಸನಕಾರಿ ವಸ್ತುವಾಗಿದೆ. ಧೂಮಪಾನವು (Smoking) ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇವುಗಳಲ್ಲಿ ಕೆಲವು ಮಾರಣಾಂತಿಕ ತೊಡಕುಗಳಿಗೆ ಕಾರಣವಾಗಬಹುದು. ಧೂಮಪಾನವು ಉಸಿರಾಟದ ವ್ಯವಸ್ಥೆ, ರಕ್ತಪರಿಚಲನೆ, ಸಂತಾನೋತ್ಪತ್ತಿ, ಚರ್ಮ, ಕಣ್ಣುಗಳು ಇತ್ಯಾದಿಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಈ ಕಾರಣದಿಂದಾಗಿ ಧೂಮಪಾನವನ್ನು ಕೆಟ್ಟ ಅಭ್ಯಾಸವೆಂದು ಪರಿಗಣಿಸಲಾಗಿದೆ. ಧೂಮಪಾನವು ಮಧುಮೇಹ (Diabetes) ಅಥವಾ ಡಯಾಬಿಟಿಸ್ ಅನ್ನು ಉಲ್ಬಣಗೊಳಿಸುತ್ತದೆ ಎಂದು ಹೇಳಲಾಗುತ್ತದೆ.
ಹೆಲ್ತ್‌ಲೈನ್ ಪ್ರಕಾರ, ತಂಬಾಕು ಸೇವನೆಯು ಆರೋಗ್ಯಕ್ಕೆ ಹಾನಿಕರ. ಧೂಮಪಾನವು ಈ ಸಮಸ್ಯೆಗಳನ್ನು ಉಂಟುಮಾಡಬಹುದು:
ಶ್ವಾಸಕೋಶದ ಹಾನಿ: ಶ್ವಾಸಕೋಶದ ಮೇಲೆ ಧೂಮಪಾನ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ, ಇದು ಧೂಮಪಾನಿಗಳು ನಿಕೋಟಿನ್ ಅನ್ನು ಉಸಿರಾಡುವಂತೆ ಮಾಡುತ್ತದೆ. ಈ ಕಾರಣದಿಂದಾಗಿ ದೀರ್ಘಕಾಲದ ಶ್ವಾಸಕೋಶದ ಅಸ್ವಸ್ಥತೆ ಹೆಚ್ಚಾಗುತ್ತದೆ.
ಇದನ್ನೂ ಓದಿ: World Youth Day: ಧೂಮಪಾನವು ಯುವಕರ ಮೂಳೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತೆ?
ಹೃದ್ರೋಗ: ಧೂಮಪಾನವು ಹೃದಯ, ರಕ್ತನಾಳಗಳು ಮತ್ತು ರಕ್ತದ ಕಣಗಳಿಗೆ ಹಾನಿಯನ್ನು ಉಂಟುಮಾಡುತ್ತದೆ. ಸಿಗರೇಟ್‌ನಲ್ಲಿರುವ ರಾಸಾಯನಿಕಗಳು ಅಪಾಯವನ್ನು ಹೆಚ್ಚಿಸುತ್ತದೆ. ಇದು ರಕ್ತನಾಳಗಳಲ್ಲಿ ಪ್ಲೇಕ್ ಸಂಗ್ರಹಕ್ಕೆ ಕಾರಣವಾಗುತ್ತದೆ. ಈ ರಚನೆಯು ರಕ್ತದ ಹರಿವನ್ನು ಮಿತಿಗೊಳಿಸುತ್ತದೆ.
ಫರ್ಟಿಲಿಟಿ ಸಮಸ್ಯೆ: ಧೂಮಪಾನವು ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಧೂಮಪಾನ ಮಾಡುವ ಮಹಿಳೆಯರು ಗರ್ಭ ಧರಿಸಲು ತೊಂದರೆಯಾಗುತ್ತದೆ. ಹೀಗಾಗಿ, ಗರ್ಭಿಣಿಯಾಗಲು ಬಯಸುವವರು ಸಿಗರೇಟ್ ಸೇವನೆಯನ್ನು ತ್ಯಜಿಸುವುದು ಉತ್ತಮ. ಸಿಗರೇಟ್‌ಗಳಲ್ಲಿ ಇರುವ ತಂಬಾಕು ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: Smoking Side Effects: ಧೂಮಪಾನದಿಂದ ಚರ್ಮವು ತೆಳುವಾಗುತ್ತೆ, ದೇಹದ ಮೇಲಾಗುವ ಇತರೆ ಪರಿಣಾಮಗಳ ತಿಳಿಯಿರಿ
ರೋಗನಿರೋಧಕ ವ್ಯವಸ್ಥೆ ಮೇಲೆ ಪರಿಣಾಮ: ಧೂಮಪಾನವು ರೋಗನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ಇದು ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದ ದೇಹದಲ್ಲಿ ಉರಿಯೂತವೂ ಹೆಚ್ಚಾಗಬಹುದು.
ಕ್ಯಾನ್ಸರ್: ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್ ಮತ್ತು ಇತರ ಕ್ಯಾನ್ಸರ್ಗಳ ಅಪಾಯವನ್ನು ಹೆಚ್ಚಿಸುತ್ತದೆ. ಧೂಮಪಾನಿಗಳಲ್ಲದವರಿಗೆ ಹೋಲಿಸಿದರೆ ಧೂಮಪಾನಿಗಳಿಗೆ ಮೂತ್ರಕೋಶದ ಕ್ಯಾನ್ಸರ್ ಬರುವ ಅಪಾಯವು 3 ಪಟ್ಟು ಹೆಚ್ಚಾಗಿರುತ್ತದೆ. ಇದರೊಂದಿಗೆ ಬಾಯಿ ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಮೂತ್ರಪಿಂಡದ ಕ್ಯಾನ್ಸರ್, ಯಕೃತ್ತಿನ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಇತ್ಯಾದಿಗಳ ಅಪಾಯವೂ ಅವರಲ್ಲಿ ಹೆಚ್ಚಾಗಿರುತ್ತದೆ.