Uttar Pradesh: ಎದೆ ಹಾಲು ಸೇವಿಸಿ 111 ನವಜಾತ ಶಿಶುಗಳು ಸಾವು! ಇದಕ್ಕೆ ಕಾರಣ ಮಾಂಸಾಹಾರ ಎನ್ನತ್ತಿದ್ದಾರೆ ವೈದ್ಯರು

ಇಂದಿನ ದಿನಗಳಲ್ಲಿ ಎಲ್ಲವೂ ಕಲಬೆರಕೆಯಾಗಿದೆ. ತರಕಾರಿಯಿಂದ ವಿವಿಧ ರೀತಿಯ ವಸ್ತುಗಳಲ್ಲಿ ಕಲಬೆರಕೆ ನಡೆಯುತ್ತಿದೆ. ಅದರಲ್ಲೂ ಹೆಚ್ಚಿನ ಬೆಳೆದ ತರಕಾರಿಗಳಲ್ಲಿ ವಿವಿಧ ಬಗೆಯ ಕೀಟನಾಶಕ ಸಿಂಪಡಿಸಲಾಗುತ್ತದೆ. ಇದನ್ನು ಸೇವಿಸಿದ ನಮ್ಮ ದೇಹದೊಳಗೂ ಮಾರಕ ಕೀಟನಾಶಕಗಳು ಸೇರುತ್ತವೆ.

Uttar Pradesh: ಎದೆ ಹಾಲು ಸೇವಿಸಿ 111 ನವಜಾತ ಶಿಶುಗಳು ಸಾವು! ಇದಕ್ಕೆ ಕಾರಣ ಮಾಂಸಾಹಾರ ಎನ್ನತ್ತಿದ್ದಾರೆ ವೈದ್ಯರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Jan 30, 2023 | 11:07 PM

ಇಂದಿನ ದಿನಗಳಲ್ಲಿ ಎಲ್ಲವೂ ಕಲಬೆರಕೆಯಾಗಿದೆ. ತರಕಾರಿಯಿಂದ ವಿವಿಧ ರೀತಿಯ ವಸ್ತುಗಳಲ್ಲಿ ಕಲಬೆರಕೆ ನಡೆಯುತ್ತಿದೆ. ಅದರಲ್ಲೂ ರೈತರು ಬೆಳೆದ ತರಕಾರಿಗಳಲ್ಲಿ ವಿವಿಧ ಬಗೆಯ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಅಂತಹ ಆಹಾರ ಸೇವಿಸಿದ ನಮ್ಮಲ್ಲಿ ವಿವಿಧ ರೋಗಗಳು ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ. ಅಲ್ಲದೆ ಮಾಂಸದಲ್ಲಿ ಕಲಬೆರಕೆ ನಡೆಯುತ್ತಿದೆ. ಆಡು, ಕೋಳಿಗಳಿಗೂ ಬೇರೆ ಬೇರೆ ರಾಸಾಯನಿಕಗಳನ್ನು ನೀಡಿ ಬೇಗ ಬೆಳೆಯಲು ಔಷಧ ನೀಡಲಾಗುತ್ತದೆ. ಆಘಾತಕಾರಿ ಸಂಗತಿ ಎಂದರೆ, ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ ಸುಮಾರು 111 ನವಜಾತ ಶಿಶುಗಳು ಸಾವನ್ನಪ್ಪಿವೆ (Death of newborns). ಈ ಶಿಶುಗಳ ಸಾವಿಗೆ ತಾಯಿಯ ಎದೆಹಾಲು (Breast Milk) ಕಾರಣ ಎಂದು ವೈದ್ಯರು ಹೇಳುತ್ತಾರೆ.

ಲಕ್ನೋದ ಕ್ವೀನ್ ಮೇರಿ ಆಸ್ಪತ್ರೆಯ ಅಧ್ಯಯನವು ಮಹಾರಾಜ್‌ಗಂಜ್‌ನಲ್ಲಿನ ಈ ಸಾವುಗಳಿಗೆ ಮಹಿಳೆಯರ ಹಾಲಿನಲ್ಲಿ ಕಂಡುಬರುವ ಕೀಟನಾಶಕಗಳು ಕಾರಣವೆಂದು ಹೇಳಿದೆ. ಆದರೆ ಕೀಟನಾಶಕಗಳು ತಾಯಿಯ ಹಾಲಿಗೆ ಹೇಗೆ ಬಂದವು ಎಂದು ಯೋಚಿಸುವುದು ತಪ್ಪು. ಏಕೆಂದರೆ ನಾನ್ ವೆಜ್ ತರಕಾರಿಗಳನ್ನು ಕ್ರಿಮಿನಾಶಕ ಬಳಸಿ ಬೆಳೆದು ಅದರ ಪರಿಣಾಮ ತಾಯಿಯ ಹಾಲಿನ ಮೇಲೆ ಬೀಳುತ್ತದೆ. ಈಗ ವೈದ್ಯರು ಕೀಟನಾಶಕಗಳು ಎದೆ ಹಾಲಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದರ ಕುರಿತು ಸಂಶೋಧನೆ ನಡೆಸಿದ್ದಾರೆ.

ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಆಸ್ಪತ್ರೆ ಕೆಲವು ಗರ್ಭಿಣಿಯರನ್ನು ಪರೀಕ್ಷಿಸಿದೆ. ಈ ಅಧ್ಯಯನದಲ್ಲಿ 130 ಸಸ್ಯಾಹಾರಿ ಮತ್ತು ಮಾಂಸಾಹಾರಿ ಗರ್ಭಿಣಿಯರನ್ನು ಸೇರಿಸಲಾಯಿತು. ಈ ಸಂಶೋಧನೆಯನ್ನು ಪ್ರೊ.ಸುಜಾತಾ ದೇವ್, ಡಾ.ನೈನಾ ದ್ವಿವೇದಿ, ಡಾ.ಅಬ್ಬಾಸ್ ಅಲಿ ಮೆಹಂದಿ ಮಾಡಿದ್ದಾರೆ. ಈ ಅಧ್ಯಯನವನ್ನು ಎನ್ವಿರಾನ್ಮೆಂಟಲ್ ರಿಸರ್ಚ್ ಜನರಲ್​ನಲ್ಲಿ ಪ್ರಕಟಿಸಲಾಗಿದೆ. ಸಂಶೋಧನೆ ಮೂಲಕ ಸಸ್ಯಾಹಾರಿ ಮಹಿಳೆಯರ ಹಾಲಿನಲ್ಲಿ ಮಾಂಸಾಹಾರಿ ಮಹಿಳೆಯರಿಗಿಂತ ಕಡಿಮೆ ಕೀಟನಾಶಕಗಳು ಇರುವುದನ್ನು ಕಂಡುಹಿಡಿಯಲಾಗಿದೆ. ಈ ಕೀಟನಾಶಕದ ಪರಿಣಾಮ ಮಾಂಸ ಮತ್ತು ತರಕಾರಿಗಳಲ್ಲಿಯೂ ಕಂಡುಬಂದಿದೆ.

ಇದನ್ನೂ ಓದಿ: ಋತುಚಕ್ರದ ಸಮಯದಲ್ಲಿ ವ್ಯಾಯಾಮ ಮಾಡಲು ಹಿಂದೇಟು ಹಾಕಬೇಡಿ

ಮಾಂಸಾಹಾರ ತ್ಯಜಿಸುವ ಮಹಿಳೆಯರ ಎದೆಹಾಲು ಕೀಟನಾಶಕಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ ಎಂದು ವೈದ್ಯರು ಕಂಡುಕೊಂಡಿದ್ದಾರೆ. ಹಾಲಿನಲ್ಲಿರುವ ಕೀಟನಾಶಕಗಳಿಗೆ ರಾಸಾಯನಿಕ ಕೃಷಿಯೇ ಕಾರಣ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ವಾಸ್ತವವಾಗಿ ಹಸಿರು ತರಕಾರಿಗಳು ಅಥವಾ ಎಲ್ಲಾ ಬೆಳೆಗಳನ್ನು ಬೆಳೆಯಲು ವಿವಿಧ ರೀತಿಯ ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಪ್ರಾಣಿಗಳಿಗೆ ಪೂರಕ ಮತ್ತು ರಾಸಾಯನಿಕಗಳ ಚುಚ್ಚುಮದ್ದನ್ನು ಸಹ ನೀಡಲಾಗುತ್ತದೆ. ಇದರಿಂದಾಗಿ ಮಾಂಸಾಹಾರಿ ಮಹಿಳೆಯರ ತಾಯಿ ಹಾಲಿನಿಂದ ಮಕ್ಕಳಿಗೂ ತೊಂದರೆಯಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಾಂಸಾಹಾರಿ ಮಹಿಳೆಯರ ಹಾಲಿನಲ್ಲಿ ಕೀಟನಾಶಕಗಳು ಸಸ್ಯಾಹಾರಿ ಮಹಿಳೆಯರಿಗಿಂತ ಮೂರು ಪಟ್ಟು ಹೆಚ್ಚು ಎಂದು ಕಂಡುಬಂದಿದೆ. ರಾಸಾಯನಿಕ ಔಷಧಗಳ ಬಳಕೆಯ ಪರಿಣಾಮ ತಾಯಿಯ ಹಾಲಿನ ಮೂಲಕ ಮಗುವಿನ ಮೇಲಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಈ ಕೀಟನಾಶಕ ಸ್ಪ್ರೇಗಳು ನವಜಾತ ಶಿಶುಗಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತವೆ. ಇದರಿಂದಾಗಿ ಅವರ ಸಾವಿಗೆ ಕಾರಣವಾಗಬಹುದು. ಶಿಶುಮರಣ ಹೆಚ್ಚಳದ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ) ಅಧ್ಯಕ್ಷತೆಯಲ್ಲಿ 3 ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.

ಮತ್ತಷ್ಟು ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:07 pm, Mon, 30 January 23

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ