Tips for Good Sleep: ಒಳ್ಳೆಯ ನಿದ್ರೆಗಾಗಿ ಈ 3 ಅಭ್ಯಾಸಗಳನ್ನು ರೂಢಿಸಿಕೊಳ್ಳಿ
ನಿಮ್ಮ ಮಲಗುವ ಸಮಯವನ್ನು ಸರಿಪಡಿಸುವುದು, ಬೇವಿನ ಎಲೆಗಳು ಮತ್ತು ಜಾಯಿಕಾಯಿಯೊಂದಿಗೆ ಬೆಚ್ಚಗಿನ ನೀರಿನ ಸ್ನಾನ ಮತ್ತು ನಿಮ್ಮ ಪಾದದ ಅಡಿಭಾಗಕ್ಕೆ ತುಪ್ಪವನ್ನು ಉಜ್ಜುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ.
ಪ್ರತಿಯೊಬ್ಬರ ಆರೋಗ್ಯಕ್ಕೂ ನಿದ್ರೆ (Sleep) ಬಹಳ ಮುಖ್ಯ. ನಿದ್ರೆಯೊಂದು ಚೆನ್ನಾಗಿದ್ದರೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಡೆಡ್ಲೈನ್, ಬಿಡುವಿಲ್ಲದ ಕೆಲಸ, ಅನಿಯಮಿತ ಶಿಫ್ಟ್‌ಗಳು ಮತ್ತು ಜಂಕ್ ಫುಡ್‌ಗಳಿಂದ ತುಂಬಿದ ಜೀವನಶೈಲಿಯಿಂದ ನಿದ್ರೆ ಕೂಡ ಆಚೀಚೆ ಆಗುತ್ತದೆ. ಹೀಗಾಗಿ, ನಿದ್ರೆ ಚೆನ್ನಾಗಿ ಆಗಬೇಕಾದರೆ ಈ 3 ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಉತ್ತಮ.
ಪೌಷ್ಟಿಕ ತಜ್ಞೆ ರುಜುತಾ ದಿವೇಕರ್ ಅವರು ಇತ್ತೀಚಿಗೆ ಇನ್ಸ್ಟಾಗ್ರಾಂನಲ್ಲಿ ಒಳ್ಳೆಯ ನಿದ್ರೆ ಪಡೆಯಲು 3 ಅಭ್ಯಾಸಗಳನ್ನು ಹಂಚಿಕೊಂಡಿದ್ದಾರೆ. ತನ್ನ 12 ವಾರಗಳ ಫಿಟ್‌ನೆಸ್ ಪ್ರಾಜೆಕ್ಟ್‌ನ ಭಾಗವಾಗಿ ಅವರು ಸರಿಯಾದ ರಾತ್ರಿಯ ವಿಶ್ರಾಂತಿ ಪಡೆಯಲು ನಿಮಗೆ ಸಹಾಯ ಮಾಡುವ 3 ಪ್ರಮುಖ ಮಾರ್ಗಗಳನ್ನು ಹಂಚಿಕೊಂಡಿದ್ದಾರೆ. ನಿಮ್ಮ ಮಲಗುವ ಸಮಯವನ್ನು ಸರಿಪಡಿಸುವುದು, ಬೇವಿನ ಎಲೆಗಳು ಮತ್ತು ಜಾಯಿಕಾಯಿಯೊಂದಿಗೆ ಬೆಚ್ಚಗಿನ ನೀರಿನ ಸ್ನಾನ ಮತ್ತು ನಿಮ್ಮ ಪಾದದ ಅಡಿಭಾಗಕ್ಕೆ ತುಪ್ಪವನ್ನು ಉಜ್ಜುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ ಎಂದು ಅವರು ಹೇಳಿದ್ದಾರೆ.
View this post on Instagram
ನಿಗದಿತ ಮಲಗುವ ಸಮಯ: ಸ್ಥಿರವಾದ ಮಲಗುವ ಸಮಯದ ದಿನಚರಿಯನ್ನು ಅನುಸರಿಸುವುದರಿಂದ ನಿಮ್ಮ ದೇಹವು ಜೀರ್ಣಕ್ರಿಯೆಯಂತಹ ಇತರ ಕಾರ್ಯಗಳೊಂದಿಗೆ ಸಿಂಕ್ ಆಗಿರುತ್ತದೆ ಎಂದು ರುಜುತಾ ಹಂಚಿಕೊಂಡಿದ್ದಾರೆ. ಇದು ರೋಗಗಳು ಮತ್ತು ಅಕಾಲಿಕ ವಯಸ್ಸನ್ನು ತಡೆಯುತ್ತದೆ.
ಇದನ್ನೂ ಓದಿ: ನಿದ್ರೆ ತೊಂದರೆ ಇದೆಯೇ? ವಿಶ್ರಾಂತಿ ಮತ್ತು ಉತ್ತಮ ನಿದ್ರೆಗೆ ಈ ತಂತ್ರ ಸಹಾಯ
ಆಯುರ್ವೇದವು ದಿನಚರಿ ಅಥವಾ ಜೀವನದಲ್ಲಿ ದಿನಚರಿಯನ್ನು ಅನುಸರಿಸಲು ಸಂಪೂರ್ಣ ಪ್ರಾಮುಖ್ಯತೆಯನ್ನು ನೀಡುತ್ತದೆ. ಅಲ್ಲಿ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಲಾಗುತ್ತದೆ. ದಿನವೂ ಒಂದೇ ಸಮಯದಲ್ಲಿ ಮಲಗುವುದರಿಂದ ನಿಮ್ಮ ದೇಹವು ನೈಸರ್ಗಿಕ ಲಯಗಳೊಂದಿಗೆ ಸಿಂಕ್ ಆಗಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರೋಗಗಳು ಅಥವಾ ವಯಸ್ಸಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಬೇವಿನ ಎಲೆಗಳು/ ಜಾಯಿಕಾಯಿಯೊಂದಿಗೆ ಬೆಚ್ಚಗಿನ ನೀರಿನ ಸ್ನಾನ: ಬೇವಿನ ಎಲೆಗಳು ಅಥವಾ ಜಾಯಿಕಾಯಿಯೊಂದಿಗೆ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದರಿಂದ ಉತ್ತಮ ನಿದ್ರೆ ಬರುತ್ತದೆ. ಸೋಂಕುಗಳ ವಿರುದ್ಧ ಹೋರಾಡುವ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯಕ್ಕಾಗಿ ಭಾರತದಲ್ಲಿ ಬೇವನ್ನು ಬಳಸಲಾಗುತ್ತದೆ. ಜಾಯಿಕಾಯಿ ಕೂಡ ಅದರ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇವುಗಳಲ್ಲಿ ಯಾವುದಾದರೂ ಒಂದನ್ನು ನೀರಿನಲ್ಲಿ ಹಾಕಿ, ರಾತ್ರಿಯಲ್ಲಿ ಬೆಚ್ಚಗಿನ ಸ್ನಾನ ಮಾಡುವುದರಿಂದ ಉತ್ತಮ ನಿದ್ರೆ ಬರುತ್ತದೆ.
ಇದನ್ನೂ ಓದಿ: ನಿದ್ರೆಯಲ್ಲಿ ಕನವರಿಸುವ, ಓಡಾಡುವ ಅಭ್ಯಾಸ ಇದೆಯಾ, ಇದು ಯಾವುದಾದರೂ ರೋಗದ ಲಕ್ಷಣವೇ?
ನಿಮ್ಮ ಪಾದದ ಅಡಿಭಾಗಕ್ಕೆ ತುಪ್ಪ ಸವರಿ: ನಿಮ್ಮ ಪಾದದ ಅಡಿಭಾಗಕ್ಕೆ ತುಪ್ಪವನ್ನು ಹಚ್ಚುವುದರಿಂದ ರಾತ್ರಿಯಲ್ಲಿ ಕಾಲು ಉಬ್ಬುವುದು ಕಡಿಮೆಯಾಗುತ್ತದೆ. ಅಲ್ಲದೆ, ಕಾಲು ನೋವಿನಿಂದಲೂ ಪರಿಹಾರ ಪಡೆಯಬಹುದು. ಇದರಿಂದ ನಿದ್ರೆಯೂ ಚೆನ್ನಾಗಿ ಬರುತ್ತದೆ.
ಇದರ ಜೊತೆಗೆ, ರಾತ್ರಿಯ ಊಟ ಮತ್ತು ಮಲಗುವ ಸಮಯದ ನಡುವೆ 2-3 ಗಂಟೆಗಳ ಅಂತರವನ್ನು ಇರಿಸಿಕೊಳ್ಳಿ. ಮಲಗುವ 60 ನಿಮಿಷಗಳ ಮೊದಲು ಮೊಬೈಲ್, ಕಂಪ್ಯೂಟರ್, ಟಿವಿಯಂತಹ ಯಾವುದೇ ಗ್ಯಾಜೆಟ್‌ಗಳನ್ನು ಬಳಸಬೇಡಿ. ರಾತ್ರಿ ಅರಿಶಿನ ಅಥವಾ ಕೇಸರಿ ಹಾಕಿದ ಹಾಲು ಸೇವಿಸಿ. ಚೆನ್ನಾಗಿ ಗಾಳಿ, ತಂಪಾದ ಮತ್ತು ಕತ್ತಲೆಯ ಕೋಣೆಯಲ್ಲಿ ಮಲಗಿಕೊಳ್ಳಿ. ಮಲಗುವ ಮುನ್ನ ಪ್ರಾರ್ಥನೆಯನ್ನು ಹೇಳಿ.