Small Cell Lung Cancer: ಕೊರೊನಾ ಬಳಿಕ ಧೂಮಪಾನಿಗಳನ್ನು ಕಾಡುತ್ತಿದೆ ಶ್ವಾಸಕೋಶದ ಕ್ಯಾನ್ಸರ್

ಅತಿ ಚಿಕ್ಕ ವಯಸ್ಸಿನವರಲ್ಲಿಯೇ ಅಂದರೆ 25 ರಿಂದ 30 ವಯಸ್ಸಿನವರಲ್ಲಿಯೇ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ ಎಂದು ಕಿದ್ವಾಯಿ ಆಸ್ಪತ್ರೆಯ ತಜ್ಞ ವೈದ್ಯ ಡಾ ಎಂ ಸಿ ಸುರೇಶ್ ಬಾಬು ಮಾಹಿತಿ ನೀಡಿದ್ದಾರೆ.

Small Cell Lung Cancer: ಕೊರೊನಾ ಬಳಿಕ ಧೂಮಪಾನಿಗಳನ್ನು ಕಾಡುತ್ತಿದೆ ಶ್ವಾಸಕೋಶದ ಕ್ಯಾನ್ಸರ್
Small cell lung cancer is increasing in smokers escpecially youths after Corona Image Credit source: Lung Cancer Center
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Nov 29, 2022 | 12:32 PM

ಕೊರೊನಾ (Corona) ಸಾಕಷ್ಟು ಜನರನ್ನು ಬಲಿ ಪಡೆದುಕೊಂಡಿದೆ. ಆದರೂ ಕೂಡ ಅದರ ಪ್ರಭಾವವಿನ್ನೂ ಕಡಿಮೆಯಾಗಿಲ್ಲ. ಇಂದು ಮಾರಕ ಕಾಯಿಲೆಗಳು ವಯಸ್ಕರಿಂದ ಹೆಚ್ಚಾಗಿ ಯುವಕರನ್ನೇ ಬಲಿ ಪಡೆಯುತ್ತಿದೆ.ಕೊರೊನಾದ ನಂತರದ ದಿನಗಳಲ್ಲಿ ಶೇಕಡಾ 60% ಧೂಮಪಾನಿಯರಲ್ಲಿ ಸ್ಮಾಲ್ ಸೆಲ್ ಲಂಗ್ಸ್ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ ಎಂದು ವೈದ್ಯರ ಅಧ್ಯಯನದಿಂದ ತಿಳಿದು ಬಂದಿದೆ.

ಅತಿ ಚಿಕ್ಕ ವಯಸ್ಸಿನವರಲ್ಲಿಯೇ ಅಂದರೆ 25 ರಿಂದ 30 ವಯಸ್ಸಿನ ವಯಸ್ಕರಲ್ಲಿಯೇ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ ಎಂದು ಕಿದ್ವಾಯಿ ಆಸ್ಪತ್ರೆಯ ತಜ್ಞ ವೈದ್ಯ ಡಾ ಎಂ ಸಿ ಸುರೇಶ್ ಬಾಬು ಮಾಹಿತಿ ನೀಡಿದ್ದಾರೆ.

ಸ್ಮಾಲ್ ಸೆಲ್ ಲಂಗ್ಸ್ ಕ್ಯಾನ್ಸರ್ ಹೊಂದಿರುವ ಜನರು ಸಾಮಾನ್ಯ 5-ವರ್ಷಗಳ ಬದುಕುಳಿಯುವಿಕೆಯ ಪ್ರಮಾಣವು ಶೇಕಡಾ 7ರಷ್ಟು ಮಾತ್ರ ಇದೆ. ಹಾಗೂ ಈ ಕಾಯಿಲೆಯ ಮೊದಲ ಹಂತದಲ್ಲಿರುವ ಅಂದರೆ ಅಂದರೆ ಕ್ಯಾನ್ಸರ್ ಶ್ವಾಸಕೋಶದ ಹೊರಗೆ ಹರಡಿಲ್ಲದ ರೋಗಿಗಳಲ್ಲಿ ಬದುಕುಳಿಯುವ ಪ್ರಮಾಣ ಶೇಕಡಾ 27ರಷ್ಟು ಇದೆ ಎಂದು ಸಂಶೋಧನೆಗಳು ತಿಳಿಸಿದೆ.

ಕೊರೊನಾದ ನಂತರದ ದಿನಗಳಲ್ಲಿ ಇದು, ಅತಿ ತೀವ್ರ ಸ್ವರೂಪದಲ್ಲಿ ಮನುಷ್ಯನ ದೇಹಕ್ಕೆ ಅಟ್ಯಾಕ್ ಮಾಡುತ್ತಿದ್ದು, ಇತರೆ ಕ್ಯಾನ್ಸರ್ ಗಳಿಗಿಂದ ಸ್ಮಾಲ್ ಸೆಲ್ ಲಂಗ್ಸ್ ಕ್ಯಾನ್ಸರ್ ಅಪಾಯಕಾರಿಯಾಗಿದೆ. ಪ್ರಾರಂಭಿಕ ಹಂತದಲ್ಲಿ ಈ ಕಾಯಿಲೆ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಅವಶ್ಯಕವಾಗಿದೆ. ಸೂಕ್ತ ಸಮಯದಲ್ಲಿ ಈ ಕ್ಯಾನ್ಸರ್ ಗೆ ಚಿಕಿತ್ಸೆ ಸಿಗದೇ ಹೋದರೆ ದೇಹದ ಇತರೆ ಅಂಗಾಂಗಳಿಗೆ ಕ್ಯಾನ್ಸರ್ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ಡಾ ಸುರೇಶ್ ಬಾಬು ಸಲಹೆ ನೀಡಿದ್ದಾರೆ.

ಇದನ್ನು ಓದಿ: ನೀವು ಪ್ರತಿ ದಿನ ಸೇವಿಸುವ ಆಹಾರವು ನಿಧಾನವಾಗಿ ವಿಷಕಾರಿಯಾಗಬಹುದು

ಬೆಂಗಳೂರಿನಂತಹ ಅಧಿಕ ಜನದಟ್ಟನೆ ಇರುವಂತಹ ಪ್ರದೇಶಗಳಲ್ಲಿ ವಾಯುಮಾಲಿನ್ಯದ ಜೊತೆಗೆ ಈ ಧೂಮವ್ಯಸನ, ಶ್ವಾಸಕೋಸದ ಕ್ಯಾನ್ಸರ್ ಗೆ ಪ್ರಮುಖ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಶೇಕಡಾ 25 ರಿಂದ 30ರಷ್ಟು ಈ ಕ್ಯಾನ್ಸರ್ ಧೂಮಪಾನಿಯ ವ್ಯಸನಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂಬಂತೆ ನಿಮ್ಮ ಆರೋಗ್ಯದ ಕುರಿತು ನೀವೇ ಜವಬ್ದಾರಿ ತಗೆದುಕೊಂಡು ಧೂಮಪಾನದಿಂದ ದೂರವಿರಬೇಕಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 12:27 pm, Tue, 29 November 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ