Health Tips: ನೀವು ಪ್ರತಿ ದಿನ ಸೇವಿಸುವ ಆಹಾರವು ನಿಧಾನವಾಗಿ ವಿಷಕಾರಿಯಾಗಬಹುದು

ನೀವು ನಿಮ್ಮ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಪ್ರತಿ ದಿನ ಸೇವಿಸುವ ಆಹಾರದ ಕಡೆ ಹೆಚ್ಚು ಗಮನಹರಿಸುವುದು ಅಗತ್ಯ. ನಿಮ್ಮ ದೇಹದ ಮೇಲೆ ನಿಧಾನವಾಗಿ ವಿಷಕಾರಿಯಾಗುವ ಕೆಲವು ಆಹಾರಗಳ ಕುರಿತ ಮಾಹಿತಿ ಇಲ್ಲಿದೆ.

Health Tips: ನೀವು ಪ್ರತಿ ದಿನ ಸೇವಿಸುವ ಆಹಾರವು ನಿಧಾನವಾಗಿ ವಿಷಕಾರಿಯಾಗಬಹುದು
Be carefull that the food you eat every day can slowly kills you Image Credit source: healthsupportmag.com
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Nov 29, 2022 | 12:05 PM

ಇಂದಿನ ಬದಲಾದ ಜೀವನಶೈಲಿ(Lifestyle) ಯಿಂದಾಗಿ ಜನರು ಅತ್ಯಂತ ತ್ವರಿತವಾಗಿ ಹಾಗೂ ಸುಲಭವಾಗಿ ಲಭ್ಯವಿರುವ ಆಹಾರಗಳನ್ನು ರೂಢಿಸಿಕೊಳ್ಳುತ್ತಿದ್ದಾರೆ. ಒತ್ತಡದ ಜೀವನ(Stressful life) ದ ನಡುವೆ ಸರಿಯಾದ ಆಹಾರ ಕ್ರಮಗಳ ಕಡೆ ಗಮನಹರಿಸಲು ಸಾಧ್ಯವಾಗದ್ದಿದ್ದಾಗ, ನೀವು ಸೇವಿಸುವ ಆಹಾರಗಳು ನಿಧಾನವಾಗಿ ನಿಮ್ಮ ದೇಹಕ್ಕೆ ವಿಷಕಾರಿಯಾಗಬಹುದು. ಆದ್ದರಿಂದ ನೀವು ನಿಮ್ಮ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಪ್ರತಿ ದಿನ ಸೇವಿಸುವ ಆಹಾರದ ಕಡೆ ಹೆಚ್ಚು ಗಮನಹರಿಸುವುದು ಅಗತ್ಯ. ನಿಮ್ಮ ದೇಹದ ಮೇಲೆ ನಿಧಾನವಾಗಿ ವಿಷಕಾರಿಯಾಗುವ ಕೆಲವು ಆಹಾರಗಳ ಕುರಿತ ಮಾಹಿತಿ ಇಲ್ಲಿದೆ.

1.ಸೋಡಾ:

ನೀವು ಸೋಡಾವನ್ನು ಕುಡಿಯುವುದರಿಂದ ದೊಡ್ಡ ಪ್ರಮಾಣದಲ್ಲಿ ನಿಮ್ಮ ದೇಹದಲ್ಲಿ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ನೀವು ಅಂದುಕೊಂಡಿದ್ದರೆ, ಇದು ನಿಮ್ಮನ್ನು ನಿಧಾನವಾಗಿ ಹಾನಿಗೊಳಗಾಗಿಸಬಹುದು. ನಿಮ್ಮ ಹಲ್ಲುಗಳನ್ನು ಕೆಟ್ಟದಾಗಿ ಅವ್ಯವಸ್ಥೆಗೊಳಿಸಬಹುದು ಎಂಬ ಅಂಶದಿಂದ ಪ್ರಾರಂಭಿಸಿ, ಜೊತೆಗೆ ನಿಮ್ಮ ತೂಕವನ್ನು ಹೆಚ್ಚಿಸುತ್ತವೆ, ಆದ್ದರಿಂದ ನೀವು ಎಷ್ಟು ಕುಡಿಯುತ್ತೀರಿ ಅಥವಾ ನಿಮ್ಮ ಆರೋಗ್ಯವು ಹಾನಿಗೊಳಗಾಗಬಹುದು ಎಂಬುದನ್ನು ಮಿತಿಗೊಳಿಸುವುದು ಅತ್ಯಗತ್ಯ.

2.ಟೊಮೆಟೊ ಸಾಸ್:

ನೀವು ಖರೀದಿಸುವ ಟೊಮೆಟೊ ಸಾಸ್ ತುಂಬಾ ದಿನಗಳ ವರೆಗೆ ಹಾಳಾಗದಂತೆ ತಯಾರಿಸಲಾಗುತ್ತದೆ. ಸಾಸ್‌ನಲ್ಲಿ ನೀವು ಸಾಮಾನ್ಯವಾಗಿ ಕಾರ್ನ್ ಸಿರಪ್ ಸೇರಿಸಲಾಗಿರುತ್ತದೆ. ಇದು ನಿಮ್ಮ ದೇಹದಲ್ಲಿ ಬೊಜ್ಜು ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು.

3.ಆಲೂಗೆಡ್ಡೆ ಚಿಪ್ಸ್ :

ಆಲೂಗೆಡ್ಡೆ ಚಿಪ್ಸ್ ಡೀಪ್ ಫ್ರೈ ಮಾಡಿ ತಯಾರಿಸಲಾಗಿರುವುದ್ದರಿಂದ ನಿಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಆಲೂಗೆಡ್ಡೆ ಚಿಪ್ಸ್ ನಲ್ಲಿ ಅಕ್ರಿಲಾಮೈಡ್ ಅಂಶವಿರುವುದ್ದರಿಂದ, ಅಂದರೆ ಇದು ಒಂದು ಒಂದು ರಾಸಾಯನಿಕ ಸಂಯುಕ್ತವಾಗಿದ್ದು, ಕೆಲವು ಆಹಾರಗಳು ಹುರಿಯುವುದು, ಮತ್ತು ಬೇಯಿಸುವುದು ಮುಂತಾದ ಹೆಚ್ಚಿನ-ತಾಪಮಾನದ ಅಡುಗೆ ಪ್ರಕ್ರಿಯೆಗಳಿಗೆ ಬಳಸಲಾಗುತ್ತದೆ. ಇದು ಕರುಳಿನ ಕ್ಯಾನ್ಸರ್, ಗುದನಾಳದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮುಂತಾದ ರೋಗಗಳಿಗೆ ಕಾರಣವಾಗಬಹುದು.

4. ಸಲಾಡ್:

ನೀವು ಅತ್ಯಂತ ಸುಲಭವಾಗಿ ಹಾಗೂ ತ್ವರಿತವಾಗಿ ಸಲಾಡ್ ತಯಾರಿಸಲು ಮಾರುಕಟ್ಟೆಯಲ್ಲಿ ಅನೇಕ ಸಲಾಡ್ ತಯಾರಿಕೆಯ ಮಿಶ್ರಣಗಳು ಲಭ್ಯವಿದೆ. ಇದು ನಿಮಗೆ ರುಚಿಯನ್ನು ನೀಡಬಹುದು ಆದರೆ ಕೃತಕ ಬಣ್ಣಗಳು ಮತ್ತು ಫ್ರಕ್ಟೋಸ್ ಕಾರ್ನ್ ಸಿರಪ್ ಒಳಗೊಂಡಿರುತ್ತವೆ. ಇದು ನಿಮ್ಮ ದೇಹದ ಮೇಲೆ ಕಾಲ ಕ್ರಮೇಣ ನಿಧಾನವಾಗಿ ವಿಷವಾಗುವ ಸಾಧ್ಯತೆ ಹೆಚ್ಚಿದೆ.

5.ಹಾಟ್ ಡಾಗ್‌:

ಇಂದು ಸಾಕಷ್ಟು ಜನರಿಗೆ ಹಾಟ್ ಡಾಗ್‌ ಒಂದು ಫೇವರೇಟ್ ಫುಡ್. ಇದು ರುಚಿಯ ಜೊತೆಗೆ ದೀರ್ಘಕಾಲದ ವರೆಗೆ ಹಸಿವಾಗದಂತೆ ಇರಿಸುತ್ತದೆ. ಆದರೆ ಹಾಟ್ ಡಾಗ್‌ಗಳು ನೇರವಾಗಿ ಕ್ಯಾನ್ಸರ್‌ಗೆ ಕಾರಣವಾಗುವ ಟಾಕ್ಸಿನ್‌ಗಳು ಮತ್ತು ಸೋಡಿಯಂ ಅಂಶವನ್ನು ಹೊಂದಿದ್ದು, ನಿಮ್ಮ ನಾಲಿಗೆಗೆ ರುಚಿ ನೀಡಿದರೂ ಕೂಡ ನಿಮ್ಮ ಪ್ರಾಣಕ್ಕೆ ಹಾನಿಯಾಗುವ ಎಲ್ಲ ಸಾಧ್ಯತೆಗಳಿವೆ.

ಇದನ್ನು ಓದಿ: ನಿಂಬೆ ಎಲೆ ನೀರನ್ನು ಸೇವಿಸಿ ಈ ಆರೋಗ್ಯ ಸಮಸ್ಯೆಗಳಿಂದ ದೂರವಿರಿ

6.ಉಪಾಹಾರ ಧಾನ್ಯಗಳು:

ಇಂದು ಮಾರುಕಟ್ಟೆಯಲ್ಲಿ ನಿಮ್ಮ ಬೆಳಗಿನ ಉಪಹಾರಕ್ಕೆ ಸಹಾಯವಾಗುವಂತೆ ಸಾಕಷ್ಟು ಉಪಹಾರ ಧಾನ್ಯಗಳು ಲಭ್ಯವಿದೆ. ಆದರೆ ಇವುಗಳು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ ಎಂದು ಭಾವಿಸಿದ್ದೀರಿ. ಆದರೆ ಇದರಲ್ಲಿ ಸಾಕಷ್ಟು ಸಕ್ಕರೆ, ಸಂರಕ್ಷಕಗಳು ಮತ್ತು ಕೃತಕ ಬಣ್ಣಗಳನ್ನು ಬಳಸಲಾಗುತ್ತದೆ. ಆದ್ದರಿಂದ ನೀವು ಪ್ರತಿ ದಿನ ಸೇವಿಸುವ ಆಹಾರ ಕ್ರಮಗಳ ಬಗ್ಗೆ ಎಚ್ಚರದಿಂದಿರುವುದು ಅಗತ್ಯ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 11:25 am, Tue, 29 November 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ