ನಿಯಮಿತ ವ್ಯಾಯಾಮ ನಮ್ಮ ದೇಹವನ್ನು ಸದೃಢವಾಗಿರಿಸುವುದರ ಜತೆಗೆ ಆರೋಗ್ಯವನ್ನು ಸುಧಾರಿಸುತ್ತದೆ ಎಂಬುದು ಗೊತ್ತಿರುವ ವಿಚಾರ. ಇದು ದೈಹಿಕ ಆರೋಗ್ಯ ಜತೆ ಜತೆಗೆ ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ದೇಹದ ಒತ್ತಡ ಮತ್ತು ಆತಂಕವನ್ನು ದೂರ ಮಾಡಲು ವ್ಯಾಯಾಮ ಒಳ್ಳೆಯದು. ಆದರೆ ಮುಖ್ಯವಾಗಿ ಗಮನಿಸಬೇಕೆಂದರೆ, ಜೀವನ ಶೈಲಿಯಲ್ಲಿನ ಒತ್ತಡ, ಬಿಡುವಿಲ್ಲ ದಿನಗಳಲ್ಲಿ ತಮಗೆ ಬೇಕಾದ ಸಮಯದಲ್ಲಿ ವ್ಯಾಯಾಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ ಜನರು. ಆದರೆ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬದು ಗಮನದಲ್ಲಿರಲಿ.
ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಉತ್ತಮ ನಿದ್ರೆ, ಫಿಟ್ನೆಸ್ ಜತೆಗೆ ಆರೋಗ್ಯ ಸುಧಾರಣೆಗೆ ಅನೇಕ ಪ್ರಯೋಜನಗಳಿವೆ. ಆತಂಕವನ್ನು ಕಡಿಮೆ ಮಾಡುವ ಜತೆಗೆ ದೇಹವನ್ನು ಸದೃಢವಾಗಿರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ ವ್ಯಾಯಾಮ ಮಾಡುವುದಕ್ಕೆ ನಿರ್ದಿಷ್ಟ ಸಮಯವಿದೆ. ಅದರಲ್ಲಿಯೂ ಕೆಲವರು ತಡರಾತ್ರಿ ವ್ಯಾಯಾಮ ಮಾಡಿ ಮಲಗುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದರಿಂದ ನಿಮ್ಮ ಆರೋಗ್ಯಕ್ಕೆ ಕೆಲವು ಸಮಸ್ಯೆಗಳು ಎದುರಾಗಬಹುದು ಎಂಬುದು ಗಮನದಲ್ಲಿರಲಿ.
ತಡವಾಗಿ ವ್ಯಾಯಾಮ ಮಾಡುವುದು ನೀವು ಫಿಟ್ ಆಗಿರಲು ಸಹಾಯ ಮಾಡಿದ್ದರೂ ಸಹ ಇದು ನಿಮ್ಮ ಹೃದಯ ಬಡಿತಕ್ಕೆ ಅಡ್ಡಿಪಡಿಸಬಹುದು. ಜತೆಗೆ ನಿಮ್ಮ ನಿದ್ರೆಯ ಮೇಲೆ ಇದು ಪರಿಣಾಮವನ್ನು ಬೀರುತ್ತದೆ. ವ್ಯಾಯಾಮ ನಿಮ್ಮನ್ನು ಹೆಚ್ಚು ಚುರುಕುಗೊಳಿಸುತ್ತದೆ. ವರ್ಕೌಟ್ ಮಾಡುವುದರಿಂದ ದೇಹದಲ್ಲಿ ಒತ್ತಡದ ಮೂಲಕ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ಇದು ನಿಮ್ಮ ದೇಹ ಎಚ್ಚರವಾಗಿರಿಸುವಂತೆ ಮಾಡುತ್ತದೆ. ಹಾಗಿರುವಾಗ ರಾತ್ರಿಯಲ್ಲಿನ ಒಳ್ಳೆಯ ನಿದ್ರೆಗೆ ಇದು ಅಡ್ಡಿಪಡಿಯಾಗಬಹುದು.
ರಾತ್ರಿಯ ಹೊತ್ತಿನಲ್ಲಿ ಈಜುವುದು, ಸೈಕ್ಲಿಂಗ್, ಓಟ ಮತ್ತು ಹೆಚ್ಚು ಭಾರವನ್ನು ಎತ್ತುವುದು ಈ ರೀತಿ ವ್ಯಾಯಾಮವು ನಿಮ್ಮ ಒಳ್ಳೆಯ ನಿದ್ರೆಗೆ ಭಂಗ ತರಬಹುದು. ಈ ಕುರಿತಂತೆ ತಜ್ಞರು ಹಲವಾರು ಮಾರ್ಗಗಳನ್ನು ಸೂಚಿಸುತ್ತಾರೆ. ಮಲಗುವ ಮುನ್ನ ಕನಿಷ್ಠ ಮೂರು ಗಂಟೆಗಳ ಮೊದಲು ನೀವು ಯಾವುದೇ ವ್ಯಾಯಾಮ ಮಾಡಬಾರದು. ಇದರಿಂದ ನೀವು ರಾತ್ರಿಯಲ್ಲಿ ಒಳ್ಳೆಯ ನಿದ್ರೆ ಪಡೆಯುತ್ತೀರಿ, ರಾತ್ರಿಯಲ್ಲಿನ ಉತ್ತಮ ನಿದ್ರೆ ನಿಮ್ಮನ್ನು ದಿನಪೂರ್ತಿ ಚಟುವಟಿಕೆಯಿಂದ ಕೂಡಿರುವಂತೆ ಮಾಡುತ್ತದೆ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗಿದೆ.
ಇದನ್ನೂ ಓದಿ:
Health Tips: ತಲೆ ಕೂದಲು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ; ನಿರ್ಲಕ್ಷ್ಯ ವಹಿಸದಿರುವುದು ಒಳಿತು
Health Tips: ಸಾತ್ವಿಕ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು