Yoga for Alzheimer’s: ಅಲ್ಜೈಮರ್ ಖಾಯಿಲೆಯಿಂದ ಉಂಟಾಗುವ ಅಸ್ವಸ್ಥತೆಗಳನ್ನು ತಡೆಗಟ್ಟಲು ಪರಿಣಾಮಕಾರಿ ಯೋಗ ಆಸನಗಳು

| Updated By: shruti hegde

Updated on: Sep 21, 2021 | 12:28 PM

ಮೆದುಳಿಗೆ ಸಂಬಂಧಿಸಿದಂತೆ ನೆನಪಿನ ಶಕ್ತಿ ಕುಂಠಿತಗೊಳ್ಳುವುದು, ದೈಹಿಕವಾಗಿ ದುರ್ಬಲರಾಗುವ ಸಮಸ್ಯೆ ನಿವಾರಣೆಯ ಜತೆಗೆ ಮಾನಸಿಕವಾಗಿ ಸದೃಢರಾಗಲು ಯೋಗ ಭಂಗಿಗಳು ಸಹಾಯಕವಾಗಿದೆ.

Yoga for Alzheimers: ಅಲ್ಜೈಮರ್ ಖಾಯಿಲೆಯಿಂದ ಉಂಟಾಗುವ ಅಸ್ವಸ್ಥತೆಗಳನ್ನು ತಡೆಗಟ್ಟಲು ಪರಿಣಾಮಕಾರಿ ಯೋಗ ಆಸನಗಳು
Follow us on

ಅಲ್ಜೈಮರ್ ಖಾಯಿಲೆಯ ಲಕ್ಷಣಗಳಿಂದ ಹೊರಬರಲು ಯಾವುದಾದರೂ ಸಲಹೆಗಳನ್ನು ಹುಡುಕುತ್ತಿದ್ದೀರಾ? ಸಂಶೋಧನೆಗಳ ಪ್ರಕಾರ ಕೆಲವು ಯೋಗ ಆಸನಗಳಿಂದ ಈ ಖಾಯಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಜತೆಗೆ ನರಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಶುದ್ಧ ಗಾಳಿಯ ಉಸಿರಾಟ, ಯೋಗ ಆಸನಗಳು, ಧ್ಯಾನ ಇವು ನಿಮ್ಮ ಆರೋಗ್ಯ ಸುಧಾರಣೆಗೆ ಹೆಚ್ಚು ಪ್ರಯೋಜನಕಾರಿ.

ಯುಎಸ್ ಅಧ್ಯಯನದ ಪ್ರಕಾರ, ವ್ಯಕ್ತಿಯ ದೈಹಿಕ ಮತ್ತು ಮಾನಸಿಕವಾಗಿ ಸುಧಾರಣೆಯಾಗಬೇಕಾದರೆ ಯೋಗ ಆಸನಗಳು ಸಹಾಯಕವಾಗಿದೆ. ಮೆದುಳಿಗೆ ಸಂಬಂಧಿಸಿದಂತೆ ನೆನಪಿನ ಶಕ್ತಿ ಕುಂಠಿತಗೊಳ್ಳುವುದು, ದೈಹಿಕವಾಗಿ ದುರ್ಬಲರಾಗುವ ಸಮಸ್ಯೆ ನಿವಾರಣೆಯ ಜತೆಗೆ ಮಾನಸಿಕವಾಗಿ ಸದೃಢರಾಗಲು ಯೋಗ ಭಂಗಿಗಳು ಸಹಾಯಕವಾಗಿದೆ.

ಅಲ್ಜೈಮರ್ ಸಾಮಾನ್ಯವಾಗಿ 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿವನರಲ್ಲಿ ಹೆಚ್ಚು ಕಂಡು ಬರುವುದಿದ್ದರೂ 40 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ರೋಗ ಲಕ್ಷಣಗಳು ಕಾಣಿಸತೊಡಗಬಹುದು. ಒತ್ತಡ ಮತ್ತು ಜೀವನ ಶೈಲಿಯ ಬದಲಾವಣೆಗಳು ಮಾನಸಿಕ ಸ್ಥಿತಿಯನ್ನು ಬದಲಾಯಿಸುತ್ತವೆ. ವಜ್ರಾಸನ, ಪಶ್ಚಿಮೋತ್ತಾನಾಸನ, ವೃಕ್ಷಾಸನ ಮತ್ತು ಶೀರ್ಷಾಸನಗಳನ್ನು ಮಾಡುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ವಜ್ರಾಸನ
ಮನಸ್ಸನ್ನು ಶಾಂತವಾಗಿ ಮತ್ತು ಸ್ಥಿರವಾಗಿಡಲು ಮಾತ್ರವಲ್ಲದೇ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಆಮ್ಲೀಯತೆ, ಗ್ಯಾಸ್ ನಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ಸಹಾಯಕವಾಗಿದೆ. ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ನೇರವಾದ ಉಸಿರಾಟ ಕ್ರಿಯೆಯಿಂದ ಮಾನಸಿಕ ಸದೃಢತೆ ಸಾಧ್ಯ. ಜತೆಗೆ ನರ ದೌರ್ಬಲ್ಯಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಪಶ್ಚಿಮೋತ್ತಾನಾಸನ
ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿ. ದೇಹವನ್ನು ಸಮತೋಲನದಲ್ಲಿರಿಸಲು ಮತ್ತು ಮಾನಸಿಕವಾಗಿ ನೆಮ್ಮದಿ ಪಡೆಯಲು ಈ ಯೋಗ ಭಂಗಿ ಸಹಾಯಕವಾಗಿದೆ. ಈ ಯೋಗ ಆಸನದಿಂದ ಮನಸ್ಸು ವಿಶ್ರಾಂತಿ ಪಡೆಯುತ್ತದೆ. ನಿದ್ರಾಹೀನತೆ, ಖಿನ್ನತೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ವೃಕ್ಷಾಸನ
ನಿಮ್ಮ ಮನಸ್ಸು ಮತ್ತು ದೇಹವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತವೆ. ಇದು ನಿಮ್ಮ ಕಾಲುಗಳ ಅಸ್ವಸ್ಥೆತೆಗಳ ನಿವಾರಣೆಗೆ ಸಹಾಯಕವಾಗಿದೆ. ಜತೆಗೆ ಸ್ನಾಯುಗಳನ್ನು ಬಲಪಡಿಸುವ ಯೋಗ ಭಂಗಿಯಾಗಿದೆ. ಇಡೀ ದೇಹದ ನಿಯಂತ್ರಣ ಮತ್ತು ಮಾನಸಿಕವಾಗಿ ಸದೃಢರನ್ನಾಗಿ ಮಾಡಲು ಈ ಯೋಗ ಭಂಗಿ ಸಹಾಯಕವಾಗಿದೆ.

ಗಮನ ಕೊಡಲೇ ಬೇಕಾದ ವಿಷಯವೆಂದರೆ, ಮಹಿಳೆಯರು ಮುಟ್ಟಿನ ಸಮಯದಲ್ಲಿ ಆಥವಾ ಅಧಿಕ ರಕ್ತದೊತ್ತಡದಂತಹ ಆರೋಗ್ಯ ಸಮಸ್ಯೆಗಳಿರುವಾಗ ಯೋಗ ಆಸನಗಳನ್ನು ಮಾಡುವುದು ಒಳ್ಳೆಯದಲ್ಲ. ವೈದ್ಯರಲ್ಲಿ  ಅಥವಾ ತಜ್ಞರಲ್ಲಿ ಸಲಹೆ ಪಡೆದು ಯೋಗ ಅಭ್ಯಾಸಗಳಲ್ಲಿ ತೊಡಗಿಕೊಳ್ಳಿ.

ಇದನ್ನೂ ಓದಿ:

World Alzheimer’s Day: ಅಲ್ಜೈಮರ್​ ಖಾಯಿಲೆಯ ಆರಂಭಿಕ ಲಕ್ಷಣಗಳ ಬಗ್ಗೆ ಗಮನಕೊಡಿ

(World alzheimers day 5 effective yoga for neurologic disorder )

Published On - 12:17 pm, Tue, 21 September 21